ಬಂಗಾಳ ಚುನಾವಣೆ | ಡಿಜಿಟಲ್ ಯುದ್ಧದಲ್ಲಿ BJPಗಿಂತ ಮುಂದಿದೆ TMC

Date:

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಆರಂಭಿಸಿವೆ, ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಪಕ್ಷಗಳ ಪ್ರಚಾರ ಮತ್ತು ಯುದ್ಧಗಳೇ ನಡೆಯುತ್ತಿವೆ. ಮೆಟಾ ಮತ್ತು ಗೂಗಲ್‌ನ ರಾಜಕೀಯ ಜಾಹೀರಾತುಗಳ ದತ್ತಾಂಶದ ಪ್ರಕಾರ, ಕೇವಲ ಒಂದು ತಿಂಗಳ ಅವಧಿಯಲ್ಲಿ ಪಕ್ಷಗಳು ಸುಮಾರು 6 ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡಿವೆ ಎಂಬುದು ಕಂಡುಬಂದಿದೆ. ಜಾಹೀರಾತು ವೆಚ್ಚದಲ್ಲಿ ಬಿಜೆಪಿಗಿಂತ ಆಡಳಿತಾರೂಢ ಟಿಎಂಸಿ ಮುಂದಿದೆ ಎಂದು ಹೇಳಿದೆ.

ಚುನಾವಣಾ ಆಯೋಗವು ಇನ್ನೂ ಚುನಾವಣೆಯ ಅಧಿಕೃತ ವೇಳಾಪಟ್ಟಿಯನ್ನು ಘೋಷಿಸಿಲ್ಲ. ಆದರೆ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2026ರ ಮಾರ್ಚ್-ಏಪ್ರಿಲ್‌ನಲ್ಲಿ ನಡೆಯುವ ನಿರೀಕ್ಷೆಯಿದೆ. ಈಗಾಗಲೇ, ಪಕ್ಷಗಳು ಪ್ರಚಾರವನ್ನು ಆರಂಭಿಸಿವೆ. ಮೆಟಾ ಮತ್ತು ಗೂಗಲ್‌ನಿಂದ ಬಂಗಾಳ ರಾಜಕೀಯ ಜಾಹೀರಾತುಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು ಪಡೆದು ಇಂಡಿಯಾ ಟುಡೇ ಸುದ್ದಿಸಂಸ್ಥೆ ವಿಶ್ಲೇಷಿಸಿ, ವರದಿ ಬಿಡುಗಡೆ ಮಾಡಿದೆ.

ವರದಿ ಪ್ರಕಾರ, ಡಿಸೆಂಬರ್ 18ರಿಂದ ಜನವರಿ 16ರವರೆಗೆ ಬಂಗಾಳದ ರಾಜಕೀಯ ಜಾಹೀರಾತುದಾರರು ಸಾವಿರಾರು ಜಾಹೀರಾತುಗಳನ್ನು ನೀಡಿದ್ದಾರೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಗೂಗಲ್ ಹಾಗೂ ಯೂಟ್ಯೂಬ್‌ನಲ್ಲಿ ಜಾಹೀರಾತು ಪ್ರಕಟಣೆಗೆ ಒಟ್ಟು 6.38 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಒಟ್ಟು ಖರ್ಚಿನಲ್ಲಿ ಸುಮಾರು 2.4 ಕೋಟಿ ರೂ.ಗಳನ್ನು ಮೆಟಾ ಪ್ಲಾಟ್‌ಫಾರ್ಮ್‌ಗಳಿಗೆ ಖರ್ಚು ಮಾಡಲಾಗಿದೆ.ಸುಮಾರು 3.9 ಕೋಟಿ ರೂ.ಗಳನ್ನು ಗೂಗಲ್ ಮತ್ತು ಯೂಟ್ಯೂಬ್ ಜಾಹೀರಾತುಗಳಿಗೆ ಖರ್ಚು ಮಾಡಲಾಗಿದೆ ಎಂದು ವರದಿ ವಿವರಿಸಿದೆ.

ಮೆಟಾ ಮತ್ತು ಗೂಗಲ್‌ನಲ್ಲಿ, ಟಿಎಂಸಿ ಮತ್ತು ಅದರ ರಾಜಕೀಯ ಸಲಹೆಗಾರ ಸಂಸ್ಥೆ ಐ-ಪ್ಯಾಕ್ ಒಟ್ಟು ಸುಮಾರು 2.4 ಕೋಟಿ ರೂ.ಗಳನ್ನು ಖರ್ಚು ಮಾಡಿವೆ. ಅಂತೆಯೇ, ಅಬರ್ ಜಿತ್ಬೆ ಬಾಂಗ್ಲಾ, ತೃಣಮೂಲೆ ನಬೋ ಜೋವರ್, ಅಮಿ ಬಾಂಗ್ಲಾರ್ ಡಿಜಿಟಲ್ ಜೋಧಾ, ಎಬಿ ಕನೆಕ್ಟ್ಸ್‌ ಹಾಗೂ ಮನುಶೇರ್ ಮಮತಾ ಮುಂತಾದ ಪರ್ಯಾಯ ಪುಟಗಳ (ಪೇಜ್‌) ಜಾಲಗಳಿಗಾಗಿ 32 ಲಕ್ಷ ರೂ.ಗಳನ್ನು ಖರ್ಚು ಮಾಡಿದೆ. ಈ ಪುಟಗಳು ಔಪಚಾರಿಕ ಪಕ್ಷದ ಬ್ರ್ಯಾಂಡಿಂಗ್ ಅನ್ನು ಹೊಂದಿಲ್ಲದಿದ್ದರೂ, ಟಿಎಂಸಿ ಪರ ನಿರೂಪಣೆಯನ್ನು ಪ್ರಚಾರ ಮಾಡಿವೆ.

ಕಳೆದ ವರ್ಷ ನವೆಂಬರ್‌ನಲ್ಲಿ ರಚಿಸಲಾದ ‘ಬೋಲ್ಚೆ ಬಾಂಗ್ಲಾ’ ಪೇಜ್‌ ಕೂಡ ಟಿಎಂಸಿ ಪರವಾಗಿ ನಿರೂಪಣೆಗಳನ್ನು ಪ್ರಸಾರ ಮಾಡಿದೆ. ಜೊತೆಗೆ, ಬಿಜೆಪಿ ವಿರುದ್ಧ ನಿರಂತರ ದಾಳಿಯನ್ನೂ ಮಾಡಿದೆ. ಅದು, ಬಿಜೆಪಿಯನ್ನು ‘ಹಿಂದು ವಿರೋಧಿ’ ಪಕ್ಷವೆಂದು ಬಿಂಬಿಸಲು, ಪ್ರಯಾಗರಾಜ್ ಮಾಘ ಮೇಳದಲ್ಲಿ ಪೊಲೀಸರು ಸಂತ ಅವಿಮುಕ್ತೇಶ್ವರಾನಂದರನ್ನು ತಡೆದ ವಿಡಿಯೋದ ತುಣುಕುಗಳನ್ನು ಬಳಸಿಕೊಂಡಿದೆ. ಇತರ ಕೆಲವು ವೀಡಿಯೊಗಳು ಮಮತಾ ಬ್ಯಾನರ್ಜಿ ಸರ್ಕಾರವನ್ನು ನಾಗಾ ಸಾಧುಗಳು ಹೊಗಳುತ್ತಿರುವುದನ್ನು ಹೈಲೈಟ್ ಮಾಡಿವೆ.

ಈ ಲೇಖನ ಓದಿದ್ದೀರಾ?: ಪ್ರಾದೇಶಿಕ ಪಕ್ಷಗಳನ್ನು ನುಂಗುವ ಬಿಜೆಪಿ ತಂತ್ರ ಅರಿಯಲು ಜೆಡಿಎಸ್‌ಗೆ ಸಕಾಲ!

ಇನ್ನೊಂದು ಕಡೆ, ಬಂಗಾಳ ಬಿಜೆಪಿ ಘಟಕವು ಮೆಟಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಮಾರು 72 ಲಕ್ಷ ರೂ.ಗಳನ್ನು ಮತ್ತು ಗೂಗಲ್‌ನಲ್ಲಿ 63 ಲಕ್ಷ ರೂ.ಗಳನ್ನು ಖರ್ಚು ಮಾಡಿದೆ. ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿ, ಬಿಜೆಪಿ ಇಲ್ಲಿಯವರೆಗೆ ರಾಜ್ಯದಲ್ಲಿ ತನ್ನ ಡಿಜಿಟಲ್ ಪ್ರಚಾರಕ್ಕಾಗಿ ಈವರೆಗೆ ಯಾವುದೇ ಪರ್ಯಾಯ ಪೇಜ್‌ಗಳನ್ನು ಬಳಸಿಕೊಂಡಿಲ್ಲ.

ಇನ್ನು, ಸರ್ಕಾರಿ ಸಾರ್ವಜನಿಕ ಸಂಪರ್ಕ ಇಲಾಖೆಗಳೂ ಕೂಡ ಜಾಹೀರಾತಿಗಾಗಿ ರಾಜಕೀಯ ಪಕ್ಷಗಳಷ್ಟೇ ಸಮಾನ ಖರ್ಚು ಮಾಡಿವೆ. ಬಂಗಾಳ ಸರ್ಕಾರದ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ರಾಜ್ಯ ಕಲ್ಯಾಣ ಯೋಜನೆಗಳನ್ನು ಪ್ರಚಾರ ಮಾಡಲು ಒಂದೇ ತಿಂಗಳಲ್ಲಿ ಸುಮಾರು 2.1 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ದತ್ತಾಂಶ ತೋರಿಸುತ್ತದೆ.

ಏತನ್ಮಧ್ಯೆ, ಇದೇ ಅವಧಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರಚಾರ ಮಾಡಲು ಕೇಂದ್ರ ಸಂವಹನ ಬ್ಯೂರೋ ಕೂಡ ಬಂಗಾಳದಲ್ಲಿ ಸುಮಾರು 19 ಲಕ್ಷ ರೂ.ಗಳನ್ನು ಖರ್ಚು ಮಾಡಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...