ಬಂಗಾಳ ಚುನಾವಣೆ | ಮುಸ್ಲಿಂ ಪ್ರಾಬಲ್ಯವಿರುವ ಟಿಎಂಸಿ ಭದ್ರಕೋಟೆಯನ್ನು ಭೇದಿಸುವುದೇ ಬಿಜೆಪಿ?

Date:

2025ರ ಡಿಸೆಂಬರ್ 6ರಂದು, ಬಾಬರಿ ಮಸೀದಿ ಧ್ವಂಸದ 33ನೇ ವರ್ಷಾಚರಣೆಯ ದಿನ, ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಅವರು ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಾಬರಿ ಮಸೀದಿಯ ಮಾದರಿಯಲ್ಲೇ ಮಸೀದಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ಇದು ಬಂಗಾಳ ಚುನಾವಣೆಯಲ್ಲಿ ಮತ ವಿಭಜನೆಗಾಗಿ ಬಿಜೆಪಿ ಕುಮ್ಮಕ್ಕಿನಿಂದಲೇ ನಡೆದದ್ದು ಎಂಬ ಆರೋಪಗಳೂ ಇವೆ. ಆ ಘಟನೆಯು ಭಾರೀ ರಾಜಕೀಯ ಸಂಚಲನ ಉಂಟುಮಾಡಿತು. ಇದಾದ ಕೆಲವೇ ದಿನಗಳಲ್ಲಿ, ಮಾದಕ ದ್ರವ್ಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಬೀರ್ ಕುಟುಂಬಕ್ಕೆ ಸೇರಿದ 10 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪೊಲೀಸರು ಜಪ್ತಿ ಮಾಡಿದರು. ಅವರನ್ನು ಟಿಎಂಸಿ ಕೂಡ ಪಕ್ಷದಿಂದ ಅಮಾನತು ಮಾಡಿತು. ಈ ಬೆನ್ನಲ್ಲೇ, ಅವರು ‘ಜನತಾ ಉನ್ನಯನ್ ಪಾರ್ಟಿ’ (JUP) ಎಂಬ ಹೊಸ ರಾಜಕೀಯ ಪಕ್ಷ ರಚಿಸಿದರು. 2026ರ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ಪ್ರಬಲವಾಗಿ ಸ್ಪರ್ಧಿಸುತ್ತದೆ ಎಂದೂ ಕಬೀರ್ ಘೋಷಿಸಿದರು.

ಮಸೀದಿ ಸ್ಥಾಪನೆಗೆ ಶಂಕುಸ್ಥಾಪನೆ ಮತ್ತು ಹೊಸ ಪಕ್ಷದ ರಚನೆ ಚುನಾವಣಾ ಹೊಸ್ತಿಲಿನಲ್ಲಿರುವ ಬಂಗಾಳದಲ್ಲಿ ಮಹತ್ವ ಪಡೆದುಕೊಂಡಿವೆ. 2011ರ ಜನಗಣತಿಯ ಪ್ರಕಾರ ಪಶ್ಚಿಮ ಬಂಗಾಳದ ಜನಸಂಖ್ಯೆಯಲ್ಲಿ ಮುಸ್ಲಿಮರು ಸುಮಾರು 27% ರಷ್ಟಿದ್ದಾರೆ. ಆದರೆ, ಬಿಜೆಪಿಗರು ಬಾಂಗ್ಲಾದಿಂದ ಅಕ್ರಮ ವಲಸೆ ಬಂದವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ ಎಂಬ ದಾಖಲೆರಹಿತ ಹೇಳಿಕೆಗಳನ್ನು ಮತ್ತೆ-ಮತ್ತೆ ಹರಿಬಿಡುತ್ತಿದ್ದಾರೆ. ಆದಾಗ್ಯೂ, 2011ರ ಜನಗಣತಿಯನ್ನು ಪರಿಗಣಿಸಿದರೆ, ಮಾಲ್ಡಾ, ಮುರ್ಷಿದಾಬಾದ್ ಹಾಗೂ ಉತ್ತರ ದಿನಾಜ್‌ಪುರ – ಈ ಮೂರು ಜಿಲ್ಲೆಗಳಲ್ಲಿ ಮುಸ್ಲಿಮರ ಜನಸಂಖ್ಯೆ 50% ಅಥವಾ ಅದಕ್ಕಿಂತ ಹೆಚ್ಚಿದೆ. ದಕ್ಷಿಣ 24 ಪರಗಣ ಮತ್ತು ಬೀರ್ಭೂಮ್ ಜಿಲ್ಲೆಗಳಲ್ಲಿ ಈ ಪ್ರಮಾಣ 35%ಕ್ಕಿಂತ ಹೆಚ್ಚಿದೆ. ಒಟ್ಟಾರೆಯಾಗಿ, ರಾಜ್ಯದ 89 ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಜನಸಂಖ್ಯೆ 30%ಕ್ಕಿಂತ ಹೆಚ್ಚಿದ್ದರೆ, 112 ಕ್ಷೇತ್ರಗಳಲ್ಲಿ 25%ಕ್ಕಿಂತ ಹೆಚ್ಚಿದೆ.

2021ರ ವಿಧಾನಸಭಾ ಚುನಾವಣೆಯಲ್ಲಿ, 30%ಗಿಂತ ಹೆಚ್ಚು ಮುಸ್ಲಿಮರಿರುವ 89 ಕ್ಷೇತ್ರಗಳ ಪೈಕಿ 87ರಲ್ಲಿ ಜಯಭೇರಿ ಬಾರಿಸಿತ್ತು. ಅಂತೆಯೇ, 25%ಕ್ಕಿಂತ ಹೆಚ್ಚಿರುವ ಒಟ್ಟು 112 ಸ್ಥಾನಗಳ ಪೈಕಿ 106 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮುಸ್ಲಿಂ ಪ್ರಾಬಲ್ಯ ಅಥವಾ ಪ್ರಭಾವವಿರುವ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಗಿದ್ದು 5 ಸ್ಥಾನಗಳಲ್ಲಿ ಮಾತ್ರ. ಈ ಕ್ಷೇತ್ರಗಳು ಬಿಜೆಪಿಗೆ ಭೇದಿಸಲಾಗದ ಭದ್ರಕೋಟೆಗಳಾಗಿವೆ. ಆದರೂ, 10%ವರೆಗೆ ಮುಸ್ಲಿಂ ಜನಸಂಖ್ಯೆ ಇರುವ 77 ಕ್ಷೇತ್ರಗಳಲ್ಲಿ, ಬಿಜೆಪಿ 33 ಕ್ಷೇತ್ರ ಗೆದ್ದಿದೆ. ಇದು ಬಿಜೆಪಿ ಪ್ರಬಲವಾಗಿರುವ ಏಕೈಕ ವಲಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಂಗಾಳದ ಒಟ್ಟು 294 ವಿಧಾನಸಭಾ ಸ್ಥಾನಗಳಲ್ಲಿ ಸರಳ ಬಹುಮತಕ್ಕೆ 148 ಸ್ಥಾನಗಳು ಬೇಕು. ಮುಸ್ಲಿಂ ಪ್ರಭಾವವಿರುವ 112 ಸ್ಥಾನಗಳಲ್ಲಿ 106 ಸ್ಥಾನಗಳನ್ನು ಗೆದ್ದ ಟಿಎಂಸಿ, ಉಳಿದ 182 ಹಿಂದು ಬಹುಸಂಖ್ಯಾತ ಕ್ಷೇತ್ರಗಳಿಂದ ಕೇವಲ 42 ಸ್ಥಾನಗಳು ಗೆದ್ದರೆ ಸಾಕಿತ್ತು. ಆದಾಗ್ಯು, ಈ 182 ಸ್ಥಾನಗಳ ಪೈಕಿ ಟಿಎಂಸಿ 109 ಸ್ಥಾನಗಳೊಂದಿಗೆ (60% ಯಶಸ್ಸು) ಒಟ್ಟು 215 ಕ್ಷೇತ್ರಗಳಲ್ಲಿ ಗೆದ್ದು, ಸುಭದ್ರ ಸರ್ಕಾರ ರಚಿಸಿತ್ತು. ಇದಕ್ಕೆ ವಿರುದ್ಧವಾಗಿ ಬಿಜೆಪಿ 72 ಸ್ಥಾನಗಳನ್ನಷ್ಟೇ ಗೆದ್ದಿತ್ತು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ (CAA), ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಕುರಿತ ಚರ್ಚೆಗಳು ಮುಸ್ಲಿಮರಲ್ಲಿ ಅಸುರಕ್ಷಿತ ಭಾವನೆಗಳನ್ನು ಹೆಚ್ಚಿಸಿದ್ದು, ಬಂಗಾಳದ ಮುಸ್ಲಿಂ ಮತದಾರರು ಗಣನೀಯವಾಗಿ ಟಿಎಂಸಿಯತ್ತ ವಾಲಿದ್ದಾರೆ ಎಂಬುದನ್ನು ‘ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್’ (CSDS) ದತ್ತಾಂಶ ವಿವರಿಸಿದೆ. ಆದ್ದರಿಂದಲೇ, 2021ರ ವಿಧಾನಸಭಾ ಚುನಾವಣೆ ವೇಳೆ, ‘ಆಕ್ಸಿಸ್ ಮೈ ಇಂಡಿಯಾ’ ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ, ಸುಮಾರು 75% ಮುಸ್ಲಿಂ ಮತದಾರರು ಟಿಎಂಸಿಯನ್ನು ಬೆಂಬಲಿಸಿದ್ದರು. ಜೊತೆಗೆ, 2024ರ ಲೋಕಸಭಾ ಚುನಾವಣೆ ವೇಳೆಗೆ ಈ ಪ್ರಮಾಣವು 83%ಗೆ ಏರಿಕೆಯಾಗಿತ್ತು. ಈಗ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯು (SIR) ಮುಸ್ಲಿಂ ಮತದಾರರನ್ನು ಮತ್ತಷ್ಟು ಟಿಎಂಸಿಯಲ್ಲಿ ಒಂದುಗೂಡಿಸುವ ಸಾಧ್ಯತೆಗಳಿವೆ!

ಆದ್ದರಿಂದ, ಈ ಮತ ಧ್ರುವೀಕರಣವನ್ನು ತಡೆಯುವುದು ಮತ್ತು ಒಡೆಯುವುದು ಬಿಜೆಪಿಗೆ ಸವಾಲಾಗಿದೆ. ಬಂಗಾಳವನ್ನು ಬಿಜೆಪಿ ಗೆಲ್ಲಬೇಕಾದರೆ ಕೇವಲ ಹಿಂದು ಬಹುಸಂಖ್ಯಾತ ಕ್ಷೇತ್ರಗಳಲ್ಲಿ ಮತಗಳನ್ನು ಕ್ರೋಡೀಕರಿಸಿದರೆ ಸಾಲದು. ಅದು ಹಿಂದು ಬಹುಸಂಖ್ಯಾತ ಕ್ಷೇತ್ರಗಳಲ್ಲಿ ತನ್ನ ಗೆಲುವಿನ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಬೇಕು. ಜೊತೆಗೆ, ಟಿಎಂಸಿಯ ಭದ್ರಕೋಟೆಯಾಗಿರುವ ಮುಸ್ಲಿಂ ಮತದಾರರ ಕ್ಷೇತ್ರಗಳನ್ನು ಭೇದಿಸಲು ದಾರಿ ಹುಡುಕಬೇಕು. ಆದರೆ, ಇವೆರಡೂ ಅಷ್ಟು ಸುಲಭವಲ್ಲ.

ಈ ಹಿನ್ನೆಲೆಯಲ್ಲಿ, ಟಿಎಂಸಿಯಿಂದ ಗೆದ್ದು ಶಾಸಕರಾಗಿದ್ದ ಹುಮಾಯೂನ್ ಕಬೀರ್ ಅವರನ್ನು ಬಿಜೆಪಿ ಬಳಸಿಕೊಳ್ಳಲು ಮುಂದಾಗಿದೆ. ಅವರ ಮೂಲಕ ಬಾಬರಿ ಮಸೀದಿ ರೀತಿಯ ಮಸೀದಿ ನಿರ್ಮಾಣದ ಶಂಕುಸ್ಥಾಪನೆ ಎಂಬ ಮೊದಲ ದಾಳವನ್ನು ಉರುಳಿಸಿದೆ. ಭರತ್‌ಪುರದ ಶಾಸಕರಾದ ಕಬೀರ್ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ, ಸೋಲುಂಡು ನಂತರ ಟಿಎಂಸಿಗೆ ಮರಳಿದ್ದರು. ಈಗ ಅವರು ಮುಸ್ಲಿಂ ರಾಜಕೀಯ ಪ್ರಾತಿನಿಧ್ಯಕ್ಕೆ ತಾವು ಪರ್ಯಾಯವೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅವರ ‘ಜನತಾ ಉನ್ನಯನ್ ಪಾರ್ಟಿ’ಯು 2026ರ ಚುನಾವಣೆಯಲ್ಲಿ 182 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತದೆ ಎಂದು ಅವರು ಘೋಷಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಚುನಾವಣಾ ಟ್ರಸ್ಟ್‌ಗಳಿಂದ BJPಗೆ ಭಾರೀ ದೇಣಿಗೆ; ದಾನಿಗಳ ಹೆಸರು-ವಿಳಾಸವೇ ಇಲ್ಲ!

ಅದರೆ, ಕಬೀರ್ ಮಸೀದಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದಾಗ ಟಿಎಂಸಿ ಅವರೊಂದಿಗೆ ಮಾತುಕತೆ ನಡೆಸಿ, ಅವರನ್ನು ಹಿಡಿದಿಟ್ಟುಕೊಳ್ಳುವ ಬದಲು, ಅವರನ್ನು ಅಮಾನತು ಮಾಡಿತು. ಮಸೀದಿ ನಿರ್ಮಾಣ ಯೋಜನೆಯಿಂದ ದೂರ ಸರಿಯಿತು. ಅದರ ಬೆನ್ನಲ್ಲೇ ಅವರ ಕುಟುಂಬದ ಮೇಲೆ ಪೊಲೀಸ್ ಕ್ರಮವೂ ಜರುಗಿತು. ಕಬೀರ್ ಇದನ್ನು ‘ರಾಜಕೀಯ ಸೇಡು’ ಎಂದು ಕರೆದರೆ, ಬಿಜೆಪಿ ಕಬೀರ್ ಅವರನ್ನು ಟಿಎಂಸಿಯ ‘ಬಿ-ಟೀಮ್’ ಎಂದು ಕರೆಯುತ್ತಿದೆ. ಇನ್ನೊಂದೆಡೆ ಟಿಎಂಸಿ ಕೂಡ ಕಬೀರ್ ಮೊದಲಿನಿಂದಲೂ ಬಿಜೆಪಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮುಸ್ಲಿಂ ಮತಗಳನ್ನು ಒಡೆಯಲು ಅವರು ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎಂದು ಆರೋಪಿಸಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ 2025ರ ಡಿಸೆಂಬರ್‌ನಲ್ಲಿ ‘ವೋಟ್ ವೈಬ್’ ನಡೆಸಿದ ಸಮೀಕ್ಷೆಯು, ಬಂಗಾಳದ ಒಟ್ಟು ಮುಸ್ಲಿಮರಲ್ಲಿ 54% ಮುಸ್ಲಿಂ ಮತದಾರರು ಇಂದಿಗೂ ಮಮತಾ ಬ್ಯಾನರ್ಜಿ ಅವರೇ ಮುಖ್ಯಮಂತ್ರಿಯಾಗಲಿ ಎಂದು ಬಯಸುತ್ತಾರೆ. ಆದರೆ, ಕಬೀರ್ ಅವರು ಟಿಎಂಸಿಯ ಮುಸ್ಲಿಂ ಮತಗಳನ್ನು ಕಬಳಿಸುತ್ತಾರೆ ಎಂದು 16% ಜನರು ಭಾವಿಸಿದ್ದಾರೆ. ಜೊತೆಗೆ, 34% ಮುಸ್ಲಿಮರು ಕಬೀರ್ ಬಿಜೆಪಿಯ ಏಜೆಂಟ್‌ ಆಗಿದ್ದಾರೆಂದು ಹೇಳುತ್ತಿದ್ದಾರೆ. 28% ಜನರು ಟಿಎಂಸಿಯೇ ಕಬೀರ್‌ ಅವರನ್ನು ನಿಯೋಜಿಸಿದೆ ಎಂದೂ ಹೇಳುತ್ತಾರೆ.

ಕಬೀರ್ ಮತ್ತು ಅವರ ಹೊಸ ಪಕ್ಷವನ್ನು ಓವೈಸಿ ಅವರ ಎಐಎಂಐಎಂಗೆ ಹೋಲಿಕೆ ಮಾಡಿ ನೋಡಲಾಗುತ್ತಿದೆ. ಐಎಎಂಐಎಂ ಪಕ್ಷವು ಬಿಹಾರದಲ್ಲಿ  2020ರ ಚುನಾವಣೆಯಲ್ಲಿ ಮುಸ್ಲಿಂ ಬಾಹುಳ್ಯದ ಸೀಮಾಂಚಲ ಪ್ರದೇಶದಲ್ಲಿ ಸ್ಪರ್ಧಿಸಿ, ಮಹಾ ಘಟಬಂಧನ್ ಮೈತ್ರಿಕೂಟದ ಮತಗಳನ್ನು ಒಡೆಯಿತು. ಅಲ್ಲದೆ, 5 ಸ್ಥಾನಗಳನ್ನೂ ಗೆದ್ದಿತು. ಅಂತೆಯೇ, ಕಬೀರ್ ಕೂಡ ಬಂಗಾಳದಲ್ಲಿ ಇದೇ ರೀತಿ ಮತ ವಿಭಜನೆ ಮಾಡಬಹುದು, ಬಿಜೆಪಿಗೆ ನೆರವಾಗಬಹುದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಆದರೂ, ಬಂಗಾಳದಲ್ಲಿ ಮುಸ್ಲಿಮರು ಇಡೀ ರಾಜ್ಯದಲ್ಲಿ ಹರಡಿಕೊಂಡಿದ್ದಾರೆ. ಕಬೀರ್ ಅವರಂತಹ ನಾಯಕರು ಯಾವುದೋ ಒಂದು ಸಣ್ಣ ಭಾಗವನ್ನು ಪ್ರಭಾವಿಸಬಹುದು. ಆದರೆ, ರಾಜ್ಯಪೂರ್ತಿ ಪ್ರಭಾವ ಬೀರಲು ಸಾಧ್ಯವಿಲ್ಲ ಎಂಬ ಮಾತುಗಳೂ ಇವೆ.

ಸದ್ಯ, ಇನ್ನೆರಡು ತಿಂಗಳಲ್ಲಿ ಬಂಗಾಳ ಚುನಾವಣೆ ನಡೆಯುವ ಸಾಧ್ಯತೆ ಇವೆ. ಟಿಎಂಸಿ ತನ್ನನ್ನು ಮುಸ್ಲಿಂ ಹಿತಾಸಕ್ತಿಗಳ ಏಕೈಕ ರಕ್ಷಕ ಎಂದು ಬಿಂಬಿಸಿಕೊಳ್ಳಲು ಯತ್ನಿಸಲಿದೆ. 2021 ಮತ್ತು 2024ರಲ್ಲಿ ಈ ತಂತ್ರ ಕೆಲಸ ಮಾಡಿತ್ತು. ಈಗ ಅದರ ಮುಂದಿರುವ ಸವಾಲೆಂದರೆ ಆಂತರಿಕ ಭಿನ್ನಮತವನ್ನು ಶಮನಗೊಳಿಸುವುದು ಮತ್ತು ಕಬೀರ್ ಸೇರಿದಂತೆ ಇತರರಿಂದ ಮತಗಳು ಚದುರದಂತೆ ನೋಡಿಕೊಳ್ಳುವುದು.

ಇನ್ನು, ಬಿಜೆಪಿಗೆ ಇರುವ ಸವಾಲು ಭಿನ್ನವಾಗಿದೆ. ಮುಸ್ಲಿಂ ಪ್ರಭಾವವಿರುವ ಕ್ಷೇತ್ರಗಳಲ್ಲಿ ಬದಲಾವಣೆ ತರದೆ ಅಥವಾ ಕಬೀರ್ ಅವರಂತಹ ನಾಯಕರು ಟಿಎಂಸಿಯ ಮತಗಳನ್ನು ಗಣನೀಯವಾಗಿ ಒಡೆಯದೆ, ಬಿಜೆಪಿಗೆ ಗೆಲುವು ಕಷ್ಟ. ಬಿಜೆಪಿ ಗೆಲ್ಲಬೇಕಾದರೆ ಮುಸ್ಲಿಂ ಜನಸಂಖ್ಯೆ 30%ಕ್ಕಿಂತ ಕಡಿಮೆ ಇರುವ 209 ಸ್ಥಾನಗಳಲ್ಲಿ 148 ಸ್ಥಾನಗಳನ್ನು ಗೆಲ್ಲಲೇಬೇಕು. ಇದು ಅಷ್ಟು ಸುಲಭವಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...