ಜೂನ್ 4ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಅದಕ್ಕೂ ಮುನ್ನ ಛತ್ತೀಸ್ಘಡದಲ್ಲಿ ಚುನಾವಣಾ ಆಯೋಗದ ನಡೆಯ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಿಎಂ ಭೂಪೇಶ್ ಭಘೇಲ್, “ಹಲವು ಇವಿಎಂ ಯಂತ್ರಗಳನ್ನು ಬದಲಿಸಲಾಗಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ದಾಖಲೆಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, “ಚುನಾವಣಾ ಆಯೋಗವು ಚುನಾವಣೆಯಲ್ಲಿ ಬಳಸಿದ ಯಂತ್ರಗಳ ಸಂಖ್ಯೆಯನ್ನು ನಮಗೆ ನೀಡಿತ್ತು. ಇದರಲ್ಲಿ ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್ ಮತ್ತು ವಿವಿ ಪ್ಯಾಟ್ಗಳೂ ಸೇರಿವೆ. ನನ್ನ ಕ್ಷೇತ್ರ ರಾಜನಂದಗಾಂವ್ನಲ್ಲಿ ಮತದಾನದ ಬಳಿಕ ನಮೂನೆ 17ಸಿಯಲ್ಲಿ ನೀಡಿರುವ ಮಾಹಿತಿ ಪ್ರಕಾರ ಹಲವು ಯಂತ್ರಗಳ ಸಂಖ್ಯೆ ಬದಲಾಗಿದೆ. ಸಂಖ್ಯೆಗಳನ್ನು ಬದಲಾಯಿಸಿದ ಬೂತ್ಗಳು ಸಾವಿರಾರು ಮತಗಳ ಮೇಲೆ ಪರಿಣಾಮ ಬೀರುತ್ತವೆ. ಇತರ ಹಲವು ಲೋಕಸಭಾ ಕ್ಷೇತ್ರಗಳಿಂದ ಇದೇ ರೀತಿಯ ದೂರುಗಳು ಬಂದಿವೆ. ರಾಜ್ಯ ಚುನಾವಣಾಧಿಕಾರಿಗೆ ದೂರು ನೀಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
चुनाव आयोग ने चुनाव में प्रयुक्त होने वाली मशीनों के नंबर दिए थे। इसमें बैलेट यूनिट, कंट्रोल यूनिट और वीवीपैट शामिल है।
मेरे चुनाव क्षेत्र राजनादगांव मतदान के बाद फ़ॉर्म 17सी में जो जानकारी दी गई है उसके अनुसार बहुत सी मशीनों के नंबर बदल गए हैं। जिन बूथों पर नंबर बदले हैं उससे… pic.twitter.com/HREvbld7By
— Bhupesh Baghel (@bhupeshbaghel) June 3, 2024
“ಯಾವ ಸಂದರ್ಭಗಳಲ್ಲಿ ಯಂತ್ರಗಳನ್ನು ಬದಲಾಯಿಸಲಾಗಿದೆ ಮತ್ತು ಚುನಾವಣಾ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಿದರೆ ಯಾರು ಜವಾಬ್ದಾರರು ಎಂದು ಆಯೋಗವು ಉತ್ತರಿಸಬೇಕು? ಬದಲಾದ ಸಂಖ್ಯೆಗಳ ಪಟ್ಟಿ ತುಂಬಾ ಉದ್ದವಾಗಿದೆ. ಆದರೆ ನಿಮ್ಮ ಪರಿಶೀಲನೆಗಾಗಿ ಕಿರು ಪಟ್ಟಿಯನ್ನು ಲಗತ್ತಿಸಿದ್ದೇನೆ” ಎಂದು ಭೂಪೇಶ್ ಭಘೇಲ್ ತಿಳಿಸಿದ್ದಾರೆ.
The alleged mismatch in EVMs number shared with the INC candidate of Rajnandgaon PC, is not based on facts.
The EVMs used during polls are exactly according to the list of machines shared by Returning Officer after randomization with contesting candidates. @ECISVEEP
1/4 https://t.co/4DWpHRcUOE pic.twitter.com/vE5HJkPAaj— Chief Electoral Officer, Chhattisgarh (@CEOChhattisgarh) June 3, 2024
ಭೂಪೇಶ್ ಭಘೇಲ್ ಅವರ ಈ ಗಂಭೀರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು, “ಇವಿಎಂ ಸಂಖ್ಯೆಯಲ್ಲಿ ಹೊಂದಾಣಿಕೆಯಿಲ್ಲ ಎಂದು ರಾಜನಂದಗಾಂವ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಂಚಿಕೊಂಡಿರುವ ವಿಷಯವು ಸತ್ಯಕ್ಕೆ ದೂರವಾದುದು. ಚುನಾವಣಾ ಸಮಯದಲ್ಲಿ ಬಳಸಲಾಗುವ ಇವಿಎಂಗಳು ಚುನಾವಣಾಧಿಕಾರಿ ಹಂಚಿಕೊಂಡ ಯಂತ್ರಗಳ ಪಟ್ಟಿಗೆ ಅನುಗುಣವಾಗಿರುತ್ತವೆ. ಮತದಾನ ಪ್ರಾರಂಭವಾಗುವ ಮೊದಲು ಇವಿಎಂಗಳನ್ನು ಮುಚ್ಚಲು ಬಳಸುವ ಪೇಪರ್ ಸೀಲ್ಗಳ ಮೇಲೆ ಪೋಲಿಂಗ್ ಏಜೆಂಟರು ಸಹಿ ಹಾಕಿದ್ದಾರೆ. ಸ್ವತಂತ್ರ ವೀಕ್ಷಕರ ಸಮ್ಮುಖದಲ್ಲಿ ಮತದಾನದ ಮರುದಿನದ ಪರಿಶೀಲನೆಯ ಸಮಯದಲ್ಲಿ, ಯಾವುದೇ ಸ್ಪರ್ಧಿಗಳಿಂದ ಅಂತಹ ಯಾವುದೇ ಸಮಸ್ಯೆಯನ್ನು ಬಂದಿಲ್ಲ. ಎಣಿಕೆಯ ಸಮಯದಲ್ಲಿ ನಮೂನೆ 17(ಸಿ) ನಲ್ಲಿ ನಮೂದಿಸಲಾದ ಸಂಖ್ಯೆಯೊಂದಿಗೆ ಪರಿಶೀಲಿಸಬಹುದು” ಎಂದು ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಭೂಪೇಶ್ ಭಘೇಲ್, ಇವಿಎಂಗಳಿಗೆ ಎರಡೆರಡು ಸಂಖ್ಯೆ ಹೇಗಿರಲು ಸಾಧ್ಯ ಎಂದು ಮರುಪ್ರಶ್ನೆ ಹಾಕಿದ್ದಾರೆ.
अफ़सोस है @ECISVEEP कि आप जो कह रहे हैं वह तथ्यात्मक रूप से ग़लत है।
निर्वाचन आयोग की ओर से पोलिंग मशीन के बैलेट यूनिट, कंट्रोल यूनिट और VVPAT के नंबर Randomization Report में दिए गए।
आयोग द्वारा मॉक पोल के दौरान निरस्त की गई / नई मशीनों की जानकारी के नंबर दिये गए।
आयोग… https://t.co/TSUOu09Kyh
— Bhupesh Baghel (@bhupeshbaghel) June 3, 2024





