ಪ್ರಧಾನಿ ಮೋದಿ ಅವರ ತಾಯಿಯ ಬಗ್ಗೆ ಕಾಂಗ್ರೆಸ್ ಮುಖಂಡರು ನಿಂದನಾತ್ಮಕ ಹೇಳಿಕೆ ನೀಡಿದ್ದಾರೆಂದು ಬಿಜೆಪಿ ಇಂದು (ಸೆ.4) ಬಿಹಾರ ಬಂದ್‌ಗೆ ಕರೆಕೊಟ್ಟಿದೆ. ಬಿಹಾರದ ಜೆಹಾನಾಬಾದ್‌ನಲ್ಲಿ ಬಿಜೆಪಿಗರು ರಸ್ತೆಯನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಸಂಚಾರ ದಟ್ಟಣೆ ಉಂಟಾಗಿದ್ದರಿಂದ ಶಾಲೆಗೆ ತಡವಾಗುತ್ತಿದೆ, ದಾರಿ ಬಿಡಿ ಎಂದು ಕೇಳಿದ ಶಿಕ್ಷಕಿಯ ಮೇಲೆ ಬಿಜೆಪಿ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯು ಜೆಹಾನಾಬಾದ್‌ನ ಅರ್ವಾಲ್ ತಿರುವಿನ ಬಳಿ ನಡೆದಿದೆ. ಶಾಲೆಗೆ ತಡವಾಗುತ್ತಿದೆ ಎಂದ ಶಿಕ್ಷಕಿಗೆ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಮರಳಿ ಹೋಗುವಂತೆ ಸೂಚಿಸಿದ್ದಾರೆ. ಶಿಕ್ಷಕಿ ವಾಪಸ್ ಹೋಗಲು ನಿರಾಕರಿಸಿದ್ದು, ಶಾಲೆಗೆ ಹೋಗಬೇಕೆಂದು ಹೇಳಿದ್ದಾರೆ. ಈ ಕಾರಣಕ್ಕೆ, ಶಿಕ್ಷಕಿಯನ್ನು ಬಿಜೆಪಿಗರು ಎಳೆದಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿ, ಶಿಕ್ಷಕಿಯನ್ನು ಸ್ಥಳದಿಂದ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.
ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅವರು ನನ್ನನ್ನು ಆರ್‌ಜೆಡಿ ಪಕ್ಷದ ಏಜೆಂಟ್ ಮತ್ತು ಆರ್‌ಜೆಡಿಗಾಗಿ ಕೆಲಸ ಮಾಡುತ್ತಿದ್ದೇನೆಂದು ಭಾವಿಸಿ, ದಾಂಧಲೆ ನಡೆಸಿದರು. ನಾನು ಶಿಕ್ಷಕಿ, ನನಗೂ ಆರ್‌ಜೆಡಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರೂ ಕೇಳಲಿಲ್ಲ ಎಂದು ಶಿಕ್ಷಕಿ ಆರೋಪಿಸಿದ್ದಾರೆ.
Breaking
— Surbhi (@SurrbhiM) September 4, 2025
In Jehanabad, Bihar, a female teacher was getting late for school, so she opposed the BJP's Bihar Bandh .
BJP women workers shoved and pushed her. This is disgusting .pic.twitter.com/raurejc3l9
ಮಹಿಳೆಯರ ಗೌರವದ ರಕ್ಷಣೆಗಾಗಿ ಬಿಹಾರ ಬಂದ್ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಬಿಜೆಪಿಗರು ಹೇಳಿಕೊಂಡಿದ್ದಾರೆ. ಶಿಕ್ಷಕಿ ಮೇಲೆ ಹಲ್ಲೆ, ದಾಂಧಲೆ ನಡೆಸುವುದು ಬಿಜೆಪಿಗರು ತೋರಿಸುವ ಮಹಿಳೆಯರ ಗೌರವದ ರಕ್ಷಣೆಯೇ. ಈ ಪ್ರತಿಭಟನೆಯನ್ನು ಮಹಿಳೆಯರ ಗೌರವಕ್ಕಾಗಿ ಮಾಡಲಾಗುತ್ತಿದೆಯೇ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಮಾಡಲಾಗುತ್ತಿದೆ, ಆದರೆ ಇದು ಬಿಜೆಪಿಯಿಂದ ಯಾವ ರೀತಿಯ ಗೌರವ ಎಂಬ ಪ್ರಶ್ನೆ ಈಗ ಉದ್ಭವಿಸುತ್ತಿದೆ.
ಒಂದೆಡೆ, ಮಹಿಳೆಯರ ಗೌರವಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಅದೇ ಪ್ರತಿಭಟನೆಯಲ್ಲಿ ಶಿಕ್ಷಕಿಯನ್ನು ಹೊಡೆದಿದ್ದಾರೆ. ಇದೇ ಬಿಜೆಪಿಯ ಸಂಸ್ಕೃತಿ ಎಂದು ಆಕ್ರೋಶ ವ್ಯಕ್ತವಾಗಿದೆ.




