ಬಿಹಾರ ಚುನಾವಣೆ | ಮಹಾಘಟಬಂಧನ್ ಭರಪೂರ ಭರವಸೆ; ಕಾರ್ಯಸಾಧುವೇ?

Date:

ಬಿಹಾರ ಚುನಾವಣೆಗೆ ಒಂದು ವಾರವಷ್ಟೇ ಬಾಕಿ ಉಳಿದಿದೆ. ಕಾಂಗ್ರೆಸ್‌-ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟವು ಚುನಾವಣೆಗಾಗಿ ಮಂಗಳವಾರ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಭರಪೂರ ಭರವಸೆಗಳನ್ನು ನೀಡಿದೆ. ಮಹಾಘಟಬಂಧನ್ ನೀಡಿರುವ ಭರವಸೆಗಳನ್ನು ಬಿಹಾರದಂತಹ ರಾಜ್ಯದಲ್ಲಿ ಪೂರೈಸಲು ಸಾಧ್ಯವೇ ಎಂಬ ಚರ್ಚೆಗಳು ನಡೆಯುತ್ತಿವೆ.

ಈ ಚರ್ಚೆಗೆ ಬಿಹಾರದ ಪರಿಸ್ಥಿತಿ ಮತ್ತು ಸ್ಥಿತಿಗತಿ ಪ್ರಮುಖ ಅಂಶ. ಬಿಹಾರ, ಭಾರತದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಒಂದು. ದೇಶದ ಬಡ ರಾಷ್ಟ್ರಗಳಲ್ಲಿ ಅಗ್ರಸ್ಥಾನ ಪಡೆದಿರುವ ರಾಜ್ಯ. ಆರ್ಥಿಕತೆ, ತಲಾ ಆದಾಯ, ಅಭಿವೃದ್ಧಿಯಲ್ಲೂ ಹಿಂದುಳಿದಿರುವ ಪ್ರದೇಶ. ಆದರೂ, ಭ್ರಷ್ಟಾಚಾರ, ಕಳಪೆ ಕಾಮಗಾರಿ, ಅಧಿಕ ಅಪರಾಧ ಪ್ರಕರಣಗಳಲ್ಲೂ ಸದ್ದು-ಸುದ್ದಿಯಾಗಿರುವ ರಾಜ್ಯ.

ತೀರಾ ಹಿಂದುಳಿದಿರುವ ರಾಜ್ಯವನ್ನು ದೇಶದ ನಂ.1 ಮಾಡುವುದು ಮಹಾಘಟಬಂಧನ್ ಮೈತ್ರಿಕೂಟದ ಆದ್ಯತೆಯೆಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿಕೊಂಡಿದ್ದಾರೆ. ಅಲ್ಲದೆ, ಈ ಪ್ರಣಾಳಿಕೆ ಮೈತ್ರಿಕೂಟದ ಪ್ರಣಾಳಿಕೆ ಮಾತ್ರವಲ್ಲ, ತೇಜಸ್ವಿ ಪ್ರಾಣ್ ಪತ್ರ ಎಂದೂ ಅವರು ಹೇಳಿದ್ದಾರೆ. ಪ್ರಣಾಳಿಕೆಯು ಉದ್ಯೋಗ, ಮಹಿಳಾ ಸಬಲೀಕರಣ, ಕೃಷಿ ಹಾಗೂ ಕಲ್ಯಾಣ ಯೋಜನೆಗಳ ಮೇಲೆ ಕೇಂದ್ರೀಕರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜನ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಪ್ರತಿಯೊಬ್ಬ ವ್ಯಕ್ತಿಗೂ 25 ಲಕ್ಷ ರೂ.ಗಳವರೆಗೆ ಉಚಿತ ಆರೋಗ್ಯ ವಿಮೆ, ಮಹಿಳೆಯರಿಗೆ ತಿಂಗಳಿಗೆ 2,500 ರೂ. ಸಹಾಯಧನ, ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್, ಎಲ್ಲ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ಬಿಹಾರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಕಾರ್ಮಿಕರಾಗಿರುವ ‘ಜೀವಿಕಾ ದೀದೀಸ್’ ಖಾಯಮಾತಿ, ಐಟಿ ಪಾರ್ಕ್‌ಗಳು, ವಿಶೇಷ ಆರ್ಥಿಕ ವಲಯಗಳು, ಡೈರಿ, ಕೃಷಿ ಆಧಾರಿತ ಕೈಗಾರಿಕೆಗಳು, ಶಿಕ್ಷಣಕ್ಕೆ ಒತ್ತು, ಬಿಹಾರದಾದ್ಯಂತ ಉದ್ಯೋಗ ಖಾತರಿ ಯೋಜನೆ ಅನುಷ್ಠಾನ ಹಾಗೂ 5 ಹೊಸ ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣ – ಇವು ಮಹಾಘಟಬಂಧನ್ ಘೋಷಿಸಿರುವ ಪ್ರಮುಖ ಭರವಸೆಗಳು.

ಈ ಭರವಸೆಗಳಲ್ಲಿ ಮಹಿಳೆಯರಿಗೆ ಮಾಸಿಕ ಸಹಾಯಧನ ಮತ್ತು ಉಚಿತ ವಿದ್ಯುತ್ ಭರವಸೆಗಳು ಕರ್ನಾಟಕದ ಗ್ಯಾರಂಟಿ ಯೋಜನೆಗಳ ವಿಸ್ತರಣೆಯಾಗಿ ಕಾಣುತ್ತವೆ. ಮಹಾಘಟಬಂಧನ್‌ ಮೈತ್ರಿಯ ಪ್ರಮುಖ ಭಾಗವಾಗಿರುವ ಕಾಂಗ್ರೆಸ್‌, ಕರ್ನಾಟಕದಲ್ಲಿ ‘ಗೃಹ ಲಕ್ಷ್ಮಿ’ ಯೋಜನೆಯಡಿ ಮಹಿಳೆರಿಗೆ 2,000 ರೂ. ಸಹಾಯಧನ ಮತ್ತು ಗೃಹಜ್ಯೋತಿ ಯೋಜನೆಯಡಿ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುತ್ತಿದೆ. ಈ ಯೋಜನೆಗಳು ಯಶಸ್ಸು ಕಂಡಿವೆ. ಆದ್ದರಿಂದ, ಇದು ಬಿಹಾರದಲ್ಲೂ ಸಾಧ್ಯವಾಗುತ್ತದೆ ಎಂದು ಮೈತ್ರಿಕೂಟ ಭಾವಿಸಿದೆ.

ಆದರೆ, ಈ ಯೋಜನೆಗಳೂ ಸೇರಿದಂತೆ ಮೈತ್ರಿಕೂಟ ನೀಡಿರುವ ಭರವಸೆಗಳನ್ನು ಪೂರೈಸುವುದು ಕರ್ನಾಟಕಕ್ಕಿಂತ ಭಿನ್ನ ಆರ್ಥಿಕ ಪರಿಸ್ಥಿತಿ ಇರುವ ಬಿಹಾರದಲ್ಲಿ ಸುಲಭದ ಮಾತಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.

ಬಿಹಾರದ ಆರ್ಥಿಕತೆಯು ಕಳೆದ 10-12 ವರ್ಷಗಳನ್ನು ಗಮನಾರ್ಹವಾಗಿ ಸುಧಾರಿಸಿದೆ. 2024-25ರ ಬಿಹಾರ ಆರ್ಥಿಕ ಸರ್ವೇ ಪ್ರಕಾರ, ರಾಜ್ಯದ ಒಟ್ಟು ಜಿಡಿಪಿ 2023-24ರಲ್ಲಿ 8.54 ಲಕ್ಷ ಕೋಟಿ ರೂ. ಆಗಿದೆ. ಇದು 2011-12ರಲ್ಲಿ 2.47 ಲಕ್ಷ ಕೋಟಿ ರೂ. ಆಗಿತ್ತು. ಅಂದರೆ, ಕಳೆದ 12 ವರ್ಷಗಳಲ್ಲಿ 3.5 ಪಟ್ಟು ಹೆಚ್ಚಾಗಿದೆ. ಆದರೂ, ಇದು ದೇಶದ ಬೆಳವಣಿಗೆಗೆ ಹೋಲಿಕೆ ಮಾಡಿದರೆ, ತೀರಾ ಕಡಿಮೆ. ಬಿಹಾರದ ತಲಾ ಆದಾಯವು ಪ್ರಸ್ತುತ, 66,828 ರೂ. ಇದೆ. ಆದರೆ, ಭಾರತದ ತಲಾ ಆದಾಯವು 2,05,324 ರೂ. ಇದ್ದರೆ, ಕರ್ನಾಟಕದ ತಲಾ ಆದಾಯ 2,04,605 ರೂ. ಆಗಿದೆ. ಗಮನಾರ್ಹವೆಂದರೆ, 2010-11ರಲ್ಲಿಯೇ ಕರ್ನಾಟಕದ ತಲಾ ಆದಾಯವು 63,000 ರೂ. ಇತ್ತು. ಅಂದರೆ, ಬಿಹಾರವು ಕರ್ನಾಟಕಕ್ಕಿಂತ 15 ವರ್ಷಗಳಷ್ಟು ಹಿಂದುಳಿದೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಆಡಳಿತ ವಿರೋಧಿ ಅಲೆ ದಾಟಿ ದಡ ಸೇರುವರೇ ನಿತೀಶ್-ಮೋದಿ?

ಇತ್ತೀಚೆಗೆ ಬಿಡುಗಡೆಯಾದ ನೀತಿ ಆಯೋಗದ 2025ರ ವರದಿ ಪ್ರಕಾರ, ಬಿಹಾರದ ಆದಾಯದಲ್ಲಿ 75% ಕೇಂದ್ರದ ಅನುದಾನಗಳ ಮೇಲೆಯೇ ಅವಲಂಬಿತವಾಗಿವೆ. ರಾಜ್ಯದಲ್ಲಿ ಉತ್ಪತ್ತಿಯಾಗುವ ವರಮಾನ ತೀರಾ ಕಡಿಮೆ ಇದೆ. ರಾಜ್ಯವು ತೆರಿಗೆ ಸಂಗ್ರಹದಿಂದ ವಾರ್ಷಿಕ 59,520 ಕೋಟಿ ರೂ.ಗಳನ್ನು ಮಾತ್ರವೇ ಸಂಗ್ರಹಿಸುತ್ತದೆ. ಆಡಳಿತಾರೂಢ ಎನ್‌ಡಿಎ ಸರ್ಕಾರ ಮಂಡಿಸಿದ ಕಡೆಯ 2025-26 ಬಜೆಟ್‌ ಗಾತ್ರವು 3,16,895 ಕೋಟಿ ರೂ.. ಇದರಲ್ಲಿ ರಾಜ್ಯದ ಪಾಲು 67,741 ಕೋಟಿ ರೂ. ಆಗಿದ್ದರೆ, ಕೇಂದ್ರದ ಅನುದಾನವೇ 1,93,091 ಕೋಟಿ ರೂ., ಉಳಿದ 55,737 ಕೋಟಿ ರೂ. ಸಾಲ. ಅಂದರೆ, ರಾಜ್ಯದ ಪಾಲಿಗಿಂತ ದುಪ್ಪಟ್ಟು ಪಾಲು ಕೇಂದ್ರದ ಅನುದಾನವೇ ಇದೆ.

ಬಿಹಾರದ ಪರಿಸ್ಥಿತಿ ಹೀಗಿರುವಾಗ, ಹಣಕಾಸನ್ನು ಆಶ್ರಯಿಸಿರುವ ಭರವಸೆಗಳನ್ನು ಪೂರೈಸಲು ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟುತ್ತದೆ. ಮುಖ್ಯವಾಗಿ, ಈಗ ಬಿಹಾರಕ್ಕೆ ನಿರಾಯಾಸವಾಗಿ ಹಣದ ಹೊಳೆ ಹರಿಸುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ಮಹಾಘಟಬಂಧನ್ ಸರ್ಕಾರ ರಚಿಸಿದರೆ, ಆಗಲೂ ಇದೇ ರೀತಿ ಹಣಕಾಸಿನ ನೆರವು ನೀಡುವಷ್ಟು ಹೃದಯ ವೈಶಾಲ್ಯತೆ ಹೊಂದಿಲ್ಲ ಎಂಬುದೂ ಈ ಚರ್ಚೆಯ ಹಿಂದಿನ ಮೂಲ.

ಸಧ್ಯಕ್ಕೆ, ಮಹಾಘಟಬಂಧನ್‌ ಮೈತ್ರಿಕೂಟದ ಭರವಸೆಗಳು ಬಿಹಾರದ ಮಟ್ಟಿಗೆ ಆಶಾಕಿರಣದಂತೆ ಕಾಣುತ್ತಿವೆ. ಮೈತ್ರಿಕೂಟದ ಸಂಭಾವ್ಯ ಯೋಜನೆಗಳಿಗೆ ವಾರ್ಷಿಕ 60,000 ಕೋಟಿ ರೂ. ಹೆಚ್ಚುವರಿ ಹಣ ಬೇಕಾಗುತ್ತದೆ ಎಂದು ಮನಿ ಕಂಟ್ರೋಲ್ ವಿಶ್ಲೇಷಣೆ ಹೇಳುತ್ತದೆ. 20 ವರ್ಷಗಳಿಂದ ಬಿಹಾರದಲ್ಲಿ ಆಡಳಿತ ನಡೆಸಿರುವ ನಿತೀಶ್‌ ಕುಮಾರ್‌ ಸರ್ಕಾರವು, ‘ಮಹಾಘಟಬಂಧನ್ ಭರವಸೆಗಳನ್ನು ಪೂರೈಸಲು ರಾಜ್ಯದಲ್ಲಿ ಹಣವಿಲ್ಲ’ ಎಂದು ಖುದ್ದು ಹೇಳುತ್ತಿದೆ. ಕರ್ನಾಟಕದಲ್ಲಿಯೂ 2023ರ ಚುನಾವಣೆಯ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಕೂಡ ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ಇದೇ ರೀತಿ ಟೀಕಿಸಿತ್ತು. ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎಂದು ಹೇಳಿತ್ತು. ಆದರೂ, ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ಮುನ್ನಡೆಯುತ್ತಿದೆ.

ಅಂತೆಯೇ, ಬಿಹಾರದಲ್ಲಿಯೂ ತಮ್ಮ ಭರವಸೆಗಳನ್ನು ಪೂರೈಸುತ್ತೇವೆಂದು ಮಹಾಘಟಬಂಧನ್ ಮೈತ್ರಿಕೂಟದ ನಾಯಕರು ಹೇಳುತ್ತಿದ್ದಾರೆ. ರಾಜ್ಯದಲ್ಲಿಯೇ ಆಂತರಿಕವಾಗಿ ಸರ್ಕಾರದ ಆದಾಯವನ್ನು ಹೆಚ್ಚಿಸಲು ತಮ್ಮಲ್ಲಿ ಯೋಜನೆಗಳಿವೆ. ಜನರ ಕೈಗೆ ಹಣ ಸಿಕ್ಕರೆ, ಜನರು ಹಣಕಾಸು ವ್ಯವಹಾರಗಳಲ್ಲಿ ಹೆಚ್ಚಾಗಿ ಭಾಗಿಯಾದರೆ, ರಾಜ್ಯದ ವರಮಾನವೂ ಹೆಚ್ಚುತ್ತದೆ ಎಂಬ ಮೂಲಸೂತ್ರವನ್ನು ಮಹಾಘಟಬಂಧನ್ ಪ್ರತಿಪಾದಿಸುತ್ತಿದೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ನಿತೀಶ್ ಕುಮಾರ್ ಮತ್ತು ಬಿಜೆಪಿಯ ಸ್ವಯಂ ಸೋಲು

ಮಹಿಳೆಯರಿಗಾಗಿನ ‘ಮಾಯ್-ಬೆಹನ್ ಮಾನ್ ಯೋಜನೆ’ಯಡಿ ಮಾಸಿಕ 2,500 ರೂ. ಸಹಾಯಧನ, ಪ್ರತಿ ಮನೆಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್, 500 ರೂ.ಗೆ ಅಡುಗೆ ಅನಿಲ, ಕೃಷಿ ಪಿಂಚಣಿ 1,500 ರೂ.ಗೆ ಏರಿಕೆಯಂತಹ ಯೋಜನೆಗಳು ಜನರಲ್ಲಿ ಹಣವನ್ನು ಉಳಿತಾಯ ಮಾಡುತ್ತವೆ. ಜೊತೆಗೆ, ಆ ಹಣವನ್ನು ಇತರ ಅಗತ್ಯಗಳಿಗೆ ವ್ಯಯಿಸಲು ಅವಕಾಶ ಮಾಡಿಕೊಡುತ್ತವೆ. ಇಂತಹ ಯೋಜನೆಗಳು ಪ್ರತಿ ಕುಟುಂಬದ ಜೀವನ ಮಟ್ಟ ಸುಧಾರಣೆಗೆ ನೆರವಾಗುತ್ತವೆ.

ಜೀವಿಕಾ ದೀದಿಗಳನ್ನು (ಸ್ವಸಹಾಯ ಗುಂಪುಗಳು) ಖಾಯಂಗೊಳಿಸುವುದು ಕೂಡ ರಾಜ್ಯದ ಪ್ರಮುಖ ವರ್ಗಕ್ಕೆ ಆಶಾಕಿರಣವಾಗಿದೆ.

ಆದಾಗ್ಯೂ, ತೇಜಸ್ವಿ ಯಾದವ್ ಘೋಷಿಸಿರುವಂತೆ ಪ್ರತಿ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಎಂಬ ಭರವಸೆಯು ಪೂರೈಸಲಾಗದ ‘ಪ್ರಾಮಿಸ್‌’ನಂತೆ ಕಾಣುತ್ತಿದೆ. ರಾಜ್ಯದ 1.25 ಕೋಟಿ ಕುಟುಂಬಗಳನ್ನು ಒಳಗೊಳ್ಳುವುದು ಕಷ್ಟಸಾಧ್ಯ. ಜೊತೆಗೆ, ಬಿಹಾರದಲ್ಲಿ ಯುವ ಜನರಲ್ಲಿನ ನಿರುದ್ಯೋಗ ಪ್ರಮಾಣವು 10.8% ಇದ್ದು, ಈ ಬೃಹತ್ ನಿರುದ್ಯೋಗಿ ಯುವಜನರಿಗೆ ಸರ್ಕಾರಿ ಉದ್ಯೋಗ ಒದಗಿಸುವುದು ಸುಲಭದ ವಿಚಾರವಲ್ಲ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ.

ಅದೇನೆ ಇರಲಿ, ಮಹಾಘಟಬಂಧನ್ ಪ್ರಣಾಳಿಕೆಯು ಬಿಹಾರದ ಯುವಜನರ ನಿರುದ್ಯೋಗ ಮತ್ತು ಜನರ ಬಡತನದ ಸಮಸ್ಯೆಗಳಿಗೆ ಉತ್ತರವಾಗಿ ಕಾಣುತ್ತದೆ. ಮೈತ್ರಿಕೂಟವು ಚುನಾವಣೆಯಲ್ಲಿ ಗೆದ್ದು, ಸರ್ಕಾರ ರಚಿಸಿದರೆ, ಸರ್ಕಾರವು ತಮ್ಮ ಭರವಸೆಗಳ ಈಡೇರಿಕೆಗೆ ಅಗತ್ಯವಿರುವ 60,000 ಕೋಟಿ ರೂ. ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅದಕ್ಕಾಗಿ, ತೆರಿಗೆ ಸುಧಾರಣೆ, ಉದ್ಯಮ ಆಕರ್ಷಣೆ ಹಾಗೂ ಕೇಂದ್ರ ಸಹಯೋಗವು ಪ್ರಮುಖ ಪಾತ್ರ ವಹಿಸುತ್ತವೆ.

ಅಂದಹಾಗೆ, ಕಾಂಗ್ರೆಸ್‌ ಅಥವಾ ಮಹಾಘಟಬಂಧನ್‌ ಘೋಷಿಸುವ ಭರವಸೆಗಳು ಮತ್ತು ಯೋಜನೆಗಳನ್ನು ಟೀಕಿಸುವ ಬಿಜೆಪಿ ಮತ್ತು ಎನ್‌ಡಿಎ, ಇದೇ ಕಾಂಗ್ರೆಸ್‌ನ ಯೋಜನೆಗಳನ್ನು ನಕಲು ಮಾಡುತ್ತಿದೆ. ಕರ್ನಾಟಕದಲ್ಲಿ ಯಶಸ್ಸು ಕಂಡ ‘ಗೃಹ ಲಕ್ಷ್ಮಿ’ ಯೋಜನೆಯನ್ನು ಕಾಪಿ ಮಾಡಿರುವ ಬಿಜೆಪಿ – ಮಧ್ಯಪ್ರದೇಶದಲ್ಲಿ ಲಾಡ್ಲಿ ಬೆಹನ್, ಮಹಾರಾಷ್ಟ್ರದಲ್ಲಿ ಲಾಡ್ಕಿ ಬಹಿನ್, ಒಡಿಶಾದಲ್ಲಿ ಸುಭದ್ರಾ ಯೋಜನೆ, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಲಾಡೋ ಲಕ್ಷ್ಮಿ, ಗುಜರಾತ್‌ನಲ್ಲಿ ನಂದ ಗೌರಾ ಯೋಜನೆ ಹಾಗೂ ಉತ್ತರಾಖಂಡದಲ್ಲಿ ಮಹಾಲಕ್ಷ್ಮಿ ಯೋಜನೆ ಹೆಸರಿನಲ್ಲಿ ಮಹಿಳೆಯರಿಗೆ ಸಹಾಯಧನ ನೀಡುವ ಯೋಜನೆಗಳನ್ನು ಜಾರಿಗೆ ತಂದಿದೆ. ಅಷ್ಟೇ ಯಾಕೆ? ಬಿಹಾರದಲ್ಲಿಯೂ ‘ಮಹಿಳಾ ರೋಜ್ಗಾರ್ ಯೋಜನೆ’ ಅಡಿಯಲ್ಲಿ ಮಹಿಳೆಯರ ಖಾತೆಗೆ ವಾರ್ಷಿಕ 10,000 ರೂ. ಸಹಾಯಧನ ಪಾವತಿಸುವ ಯೋಜನೆಯನ್ನು ಎನ್‌ಡಿಎ ಸರ್ಕಾರ ಜಾರಿಗೊಳಿಸಿದೆ. ಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನ ಲಕ್ಷಾಂತರ ಮಹಿಳೆಯರ ಖಾತೆಗೆ ಹಣ ಪಾವತಿ ಮಾಡಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...