ಬಿಹಾರ ಚುನಾವಣೆ | ಕಳೆದ 30 ವರ್ಷಗಳಲ್ಲಿ ವಿಧಾನಸಭೆಯಲ್ಲಿ ಮುಸ್ಲಿಂ ಪ್ರಾತಿನಿಧ್ಯ ತೀವ್ರ ಕುಸಿತ

Date:

1990ರಲ್ಲಿ ಕಾಂಗ್ರೆಸ್‌ ಅಧಿಪತ್ಯ ಅಂತ್ಯಗೊಂಡು, ಲಾಲೂ ಪ್ರಸಾದ್ ಯಾದವ್ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗಿನಿಂದ ಈವರೆಗೆ ಬಿಹಾರವು 8 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದೆ. ಈ 35 ವರ್ಷಗಳಲ್ಲಿ 15 ವರ್ಷ ಲಾಲೂ ಮತ್ತು ಅವರ ಪತ್ನಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರೆ, ಸುಮಾರು 20 ವರ್ಷಗಳ ಕಾಲ ಹಾಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಆಡಳಿತ ನಡೆಸಿದ್ದಾರೆ. (2013-14ರ ನಡುವೆ 9 ತಿಂಗಳು ಜತನ್ ರಾಮ್ ಮಾಂಜಿ ಮುಖ್ಯಮಂತ್ರಿಯಾಗಿದ್ದರು.) ಈ ಲಾಲೂ-ನಿತೀಶ್‌ ಯುಗದಲ್ಲಿ ಬಿಹಾರ ವಿಧಾನಸಭೆಯಲ್ಲಿ ಮುಸ್ಲಿಮರ ಪ್ರಾತಿನಿಧ್ಯ ತೀವ್ರವಾಗಿ ಕುಸಿದಿದೆ.

2022-23ರ ರಾಜ್ಯ ಜಾತಿ ಸಮೀಕ್ಷೆಯ ಪ್ರಕಾರ, ಬಿಹಾರದಲ್ಲಿ ಪ್ರಸ್ತುತ 13.07 ಕೋಟಿ ಮುಸ್ಲಿಮರಿದ್ದಾರೆ. ಅಂದರೆ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ 17.7% ಪಾಲು ಮುಸ್ಲಿಮರದ್ದು. ಆದರೆ, ವಿಧಾನಸಭೆಯಲ್ಲಿ ಅವರ ಪ್ರಾತಿನಿಧ್ಯವು ಕೇವಲ 8% ಮಾತ್ರವೇ ಇದೆ. ಮುಸ್ಲಿಮರ ಜನಸಂಖ್ಯೆಗೂ ಅವರ ಪ್ರಾತಿನಿಧ್ಯಕ್ಕೂ ಸರಾಸರಿ 9.7% ಅಂತರವಿದೆ.

1990ರ ವಿಧಾನಸಭೆಯಲ್ಲಿ ಮುಸ್ಲಿಮರ ಪ್ರಾತಿನಿಧ್ಯ 5.55% ಇತ್ತು. 2010ರಲ್ಲಿ 7.81% ಆಗಿತ್ತು.  2015ರ ವಿಧಾನಸಭೆಯಲ್ಲಿ 9.87%ಗೆ ಏರಿಕೆಯಾಗಿತ್ತು. (ಕಳೆದ 35 ವರ್ಷಗಳಲ್ಲಿ ಮುಸ್ಲಿಂ ಪ್ರಾತಿನಿಧ್ಯ ಇದೇ ಹೆಚ್ಚು). ಹಾಲಿ (2020-25) ವಿಧಾನಸಭೆಯಲ್ಲಿ 7.81%ಗೆ ಇಳಿದಿದೆ. ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಿದ್ದರೂ, ಪಾತಿನಿಧ್ಯ ಮಾತ್ರ ಹೆಚ್ಚಾಗಿಲ್ಲ. ಬದಲಾಗಿ, ಇಳಿಕೆಯಾಗುತ್ತಿದೆ. ಮುಸ್ಲಿಮರನ್ನು ಪ್ರತಿನಿಧಿಸುವವರ ಸಂಖ್ಯೆ ಕುಸಿಯುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2000ದ ಫೆಬ್ರವರಿಯಲ್ಲಿ ನಡೆದಿದ್ದ ಅವಿಭಜಿತ ಬಿಹಾರದ ಕೊನೆಯ ವಿಧಾನಸಭಾ ಚುನಾವಣೆಯು 324 ಸ್ಥಾನಗಳಿಗೆ ನಡೆದಿತ್ತು. ಆ ಚುನಾವಣೆಯಲ್ಲಿ ಒಟ್ಟು 30 ಮುಸ್ಲಿಂ ಶಾಸಕರು ಆಯ್ಕೆಯಾಗಿದ್ದರು. ಆಗ ಮುಸ್ಲಿಂ ಪ್ರಾತಿನಿಧ್ಯವು 9.25% ಆಗಿತ್ತು. ಆ 30 ಶಾಸಕರಲ್ಲಿ ಆರ್‌ಜೆಡಿ 17, ಕಾಂಗ್ರೆಸ್‌ 6, ಸಮತಾ ಪಕ್ಷ 2, ಸಿಪಿಐ, ಬಿಎಸ್‌ಪಿ ಹಾಗೂ ಸಿಪಿಐ(ಎಂಎಲ್‌) ತಲಾ ಒಬ್ಬರು ಶಾಸಕರನ್ನು ಹೊಂದಿದ್ದವು.

2000ದ ನವೆಂಬರ್‌ನಲ್ಲಿ ಬಿಹಾರವು ವಿಭಜನೆಯಾಗಿ ಜಾರ್ಖಂಡ್‌ ರಾಜ್ಯ ರಚನೆಯಾಯಿತು. ಅದರಿಂದ, ಬಿಹಾರದ ವಿಧಾನಸಭೆಯ ಸಂಖ್ಯಾಬಲ 243ಕ್ಕೆ ಇಳಿಯಿತು. ವಿಭಜನೆಗೊಂಡ ಬಳಿಕ, 2005ರ ಫೆಬ್ರವರಿಯಲ್ಲಿ ಮೊದಲ ಚುನಾವಣೆ ನಡೆಯಿತು. ಆಗ, 24 ಮುಸ್ಲಿಮರು ಶಾಸಕರಾಗಿ ಆಯ್ಕೆಯಾಗಿದ್ದರು. ಸದನದ ಬಲದಲ್ಲಿ ಮುಸ್ಲಿಮರದ್ದು 8.87% ಪ್ರಾತಿನಿಧ್ಯವಾಗಿತ್ತು.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಗೆಲುವಿಗೂ ಮುನ್ನವೇ ‘ಎನ್‌ಡಿಎ’ಯಲ್ಲಿ ಸಿಎಂ ಗಾದಿಗೆ ಜಂಗಿಕುಸ್ತಿ

ಈ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣಗೊಂಡು, ಯಾವುದೇ ಪಕ್ಷವು ಸರ್ಕಾರ ರಚಿಸಲು ಸಾಧ್ಯವಾಗದ ಕಾರಣ, ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು. 2005ರ ಅಕ್ಟೋಬರ್-ನವೆಂಬರ್‌ನಲ್ಲಿ ರಾಜ್ಯವು ಹೊಸ ಚುನಾವಣೆಯನ್ನು ಎದುರಿಸಿತು. ಆಗ, ಮುಸ್ಲಿಂ ಶಾಸಕರ ಸಂಖ್ಯೆ 16ಕ್ಕೆ ಕುಸಿಯಿತು. ಅವರ ಪ್ರಾತಿನಿಧ್ಯ 6.58%ಕ್ಕೆ ಇಳಿದಿದೆ. ಈ ಶಾಸಕರಲ್ಲಿ ಆರ್‌ಜೆಡಿ, ಕಾಂಗ್ರೆಸ್, ಜೆಡಿಯುನಿಂದ ತಲಾ ನಾಲ್ವರು, ಎಲ್‌ಜೆಪಿ, ಎನ್‌ಸಿಪಿ ಮತ್ತು ಸಿಪಿಐ(ಎಂಎಲ್) ಲಿಬರೇಷನ್‌ನಿಂದ ತಲಾ ಒಬ್ಬರು ಹಾಗೂ ಒಬ್ಬ ಸ್ವತಂತ್ರ ಅಭ್ಯರ್ಥಿ ಇದ್ದರು.

2020ರ ಚುನಾಣೆಯಲ್ಲಿ 243 ಸದಸ್ಯರಿರುವ ಬಿಹಾರ ವಿಧಾನಸಭೆಗೆ 19 ಮುಸ್ಲಿಂ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದರು. ಅವರಲ್ಲಿ, 8 ಮಂದಿ ಆರ್‌ಜೆಡಿ, 5 ಮಂದಿ ಎಐಎಂಐಎಂ, 4 ಮಂದಿ ಕಾಂಗ್ರೆಸ್‌ ಹಾಗೂ ಬಿಎಸ್‌ಪಿ ಮತ್ತು ಸಿಪಿಐ(ಎಂಎಲ್‌)ನಿಂದ ತಲಾ ಒಬ್ಬರು ಆಯ್ಕೆಯಾಗಿದ್ದರು. ಬಿಜೆಪಿ ಮಿತ್ರ ಜೆಡಿಯುನಿಂದ 11 ಮಂದಿ ಮುಸ್ಲಿಮರು ಕಣಕ್ಕಿಳಿದಿದ್ದರೂ, ಅವರಲ್ಲಿ ಒಬ್ಬರೂ ಗೆಲ್ಲಲಿಲ್ಲ.

ಬಿಜೆಪಿ, ಜೆಡಿಯು ನೇತೃತ್ವದ ಆಡಳಿತಾರೂಢ ಎನ್‌ಡಿಎ ಮತ್ತು ಆರ್‌ಜೆಡಿ, ಕಾಂಗ್ರೆಸ್, ಎಡಪಕ್ಷಗಳು ಹಾಗೂ ವಿಐಪಿ ಪಕ್ಷಗಳ ಮಹಾಘಟಬಂಧನ್ – ಎರಡೂ ಮೈತ್ರಿಕೂಟಗಳು ಈ ಚುನಾವಣೆಯಲ್ಲಿ 2020ರ ಚುನಾವಣೆಗಿಂತಲೂ ಕಡಿಮೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇದು, ಹಿಂದಿ ಭಾಷಿಕರ ಹೃದಯಭಾಗವಾದ ಬಿಹಾರದಲ್ಲಿ ಮುಸ್ಲಿಂ ನಾಯಕತ್ವವನ್ನು ಬೆಳೆಸುವ ಅಗತ್ಯಗಳ ಬಗ್ಗೆ ಹೆಚ್ಚು ಚರ್ಚಿಸುವಂತೆ ಮಾಡಿದೆ. ಮಾತ್ರವಲ್ಲದೆ, ಓವೈಸಿ ಅವರ ಎಐಎಂಐಎಂ ಪಕ್ಷದ ಚುನಾವಣಾ ಪ್ರಚಾರಕ್ಕೆ ಬಹುದೊಡ್ಡ ಅಸ್ತ್ರವಾಗಿದೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಶಿಕ್ಷಣ, ನಿರುದ್ಯೋಗ – ಬಿಹಾರಿ ಯುವಜನರು ಬಯಸುತ್ತಿರುವುದೇನು?

ಈ ಚುನಾವಣೆಯಲ್ಲಿ ಆರ್‌ಜೆಡಿಯ 143 ಅಭ್ಯರ್ಥಿಗಳಲ್ಲಿ 18 ಮಂದಿ ಮುಸ್ಲಿಮರಿದ್ದಾರೆ. ಪಕ್ಷವು 2020ರಲ್ಲಿಯೂ ತನ್ನ 144 ಅಭ್ಯರ್ಥಿಗಳಲ್ಲಿ 18 ಮುಸ್ಲಿಮರನ್ನು ಕಣಕ್ಕಿಳಿಸಿತ್ತು. ಅವರಲ್ಲಿ 8 ಮಂದಿ ಗೆದ್ದಿದ್ದರು. ಕಾಂಗ್ರೆಸ್‌ 2020ರಲ್ಲಿ 12 ಮಂದಿ ಮುಸ್ಲಿಮರನ್ನು ಕಣಕ್ಕಿಳಿಸಿತ್ತು. ಅವರಲ್ಲಿ ನಾಲ್ವರು ಗೆದ್ದಿದ್ದರು. ಈ ಬಾರಿ, 10 ಮಂದಿಗೆ ಟಿಕೆಟ್‌ ಕೊಟ್ಟಿದೆ.

ಅಂತೆಯೇ, ಸಿಪಿಐ (ಎಂಎಲ್) ಲಿಬರೇಶನ್‌ 20 ಅಭ್ಯರ್ಥಿಗಳಲ್ಲಿ ಇಬ್ಬರು ಮುಸ್ಲಿಮರಿದ್ದಾರೆ. ಪಕ್ಷವು 2020ರಲ್ಲಿ ತನ್ನ 19 ಅಭ್ಯರ್ಥಿಗಳಲ್ಲಿ ಮೂವರು ಮುಸ್ಲಿಮರನ್ನು ಗುರುತಿಸಿತ್ತು. ಅವರಲ್ಲಿ, ಒಬ್ಬರು ಗೆದ್ದಿದ್ದರು. ಇನ್ನು, ವಿಐಪಿ ಪಕ್ಷವು 15 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಯಾವೊಬ್ಬ ಮುಸ್ಲಿಮರಿಗೂ ಟಿಕೆಟ್ ಕೊಟ್ಟಿಲ್ಲ. 2020ರಲ್ಲಿ ಇಬ್ಬರು ಮುಸ್ಲಿಮರನ್ನು ಕಣಕ್ಕಿಳಿಸಿತ್ತು. ಇಬ್ಬರೂ ಸೋತಿದ್ದರು.  

ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ನೇತೃತ್ವ ಹೊಂದಿರುವ ಜೆಡಿಯು ತನ್ನ 101 ಅಭ್ಯರ್ಥಿಗಳಲ್ಲಿ ಕೇವಲ 4 ಮುಸ್ಲಿಂ ಮುಖಗಳನ್ನು ಮಾತ್ರ ಕಣಕ್ಕಿಳಿಸಿದೆ. 2020ರಲ್ಲಿ, ಪಕ್ಷವು 11 ಮುಸ್ಲಿಮರನ್ನು ಕಣಕ್ಕಿಳಿಸಿತ್ತು. ಆದರೆ, ಯಾರೊಬ್ಬರೂ ಗೆದ್ದಿರಲಿಲ್ಲ.

ಎನ್‌ಡಿಎ ಭಾಗವಾಗಿರುವ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ 29 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಮಾತ್ರವೇ ಕಣಕ್ಕಿಳಿಸಿದೆ. 2020ರಲ್ಲಿ, ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಅಂದಿನ ತನ್ನ 135 ಅಭ್ಯರ್ಥಿಗಳಲ್ಲಿ 7 ಮಂದಿ ಮುಸ್ಲಿಮರಿದ್ದರು. ಆದರೆ, ಯಾರೂ ಗೆಲ್ಲಲು ಸಾಧ್ಯವಾಗಲಿಲ್ಲ. ಇನ್ನು, ಬಿಜೆಪಿ ಯಾವೊಬ್ಬ ಮುಸ್ಲಿಮರಿಗೂ ಟಿಕೆಟ್‌ ಕೊಟ್ಟಿಲ್ಲ.

ಸ್ವತಂತ್ರವಾಗಿ ಕಣದಲ್ಲಿರುವ ಎಐಎಂಐಎಂ 25 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅವರಲ್ಲಿ, 23 ಮಂದಿ ಮುಸ್ಲಿಮರಿದ್ದಾರೆ. ಈ ಚುನಾವಣೆಯಲ್ಲಿ ಅತಿ ಹೆಚ್ಚು ಮುಸ್ಲಿಮರನ್ನು ಕಣಕ್ಕಿಳಿಸಿದ ಏಕೈಕ ಪಕ್ಷ ಎಐಎಂಐಎಂ ಆಗಿದೆ. 2020ರಲ್ಲಿ, ಪಕ್ಷವು 20 ಮಂದಿಯನ್ನು ಕಣಕ್ಕಿಳಿಸಿತ್ತು. ಅವರಲ್ಲಿ, 15 ಮಂದಿ ಮುಸ್ಲಿಮರಾಗಿದ್ದರು. ಈ ಪೈಕಿ, 5 ಮಂದಿ ಗೆದ್ದಿದ್ದರು.

ಮಾಹಿತಿ ಮೂಲ: ದಿ ಇಂಡಿಯನ್ ಎಕ್ಸ್‌ಪ್ರೆಸ್‌

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...