ಬಿಹಾರ ಚುನಾವಣೆ | ಎನ್‌ಡಿಎ – ಮಹಾಘಟಬಂಧನ್ ಸೋಲು/ಗೆಲುವನ್ನು ನಿರ್ಧರಿಸಲಿವೆ ಈ ಅಂಶಗಳು!

Date:

ಬಿಹಾರ ಚುನಾವಣಾ ಫಲಿತಾಂಶ ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ. ಮತ ಎಣಿಕೆಯ ಆರಂಭಿಕ ಸುತ್ತು ಮುಗಿದಿದ್ದು, ಆಡಳಿತಾರೂಢ ಎನ್‌ಡಿಎ ಮುನ್ನಡೆ ಸಾಧಿಸಿದೆ. ಎನ್‌ಡಿಎ 157 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದಿದ್ದಾರೆ, ವಿಪಕ್ಷಗಳ ಮಹಾಘಟಬಂಧನ್‌ 74 ಸ್ಥಾನಗಳಲ್ಲಿ ಮುಂದಿದೆ. ಆರಂಭಿಕ ಸುತ್ತುಗಳು ಎನ್‌ಡಿಎ ಪರವಾಗಿದ್ದರೂ, ಇನ್ನೂ ಸಮಯವಿದೆ. ಚಿತ್ರಣ ಬದಲಾಗಲಿದೆ ಎಂದು ಮಹಾಘಟಬಂಧನ್‌ ಮೈತ್ರಿಕೂಟವನ್ನು ಮುನ್ನಡೆಸುತ್ತಿರುವ ಆರ್‌ಜೆಡಿ ಹೇಳುತ್ತಿದೆ.

ಆರಂಭಿಕ ಮುನ್ನಡೆಯು ಎನ್‌ಡಿಎ ನಾಯಕರಲ್ಲಿ ಉತ್ಸಾಹ ಹೆಚ್ಚಿಸಿದೆ. ಮತ್ತೊಮ್ಮೆ ಎನ್‌ಡಿಎ ಸರ್ಕಾರ ರಚನೆಯಾಗಬಹುದು ಎಂಬ ವಿಶ್ವಾಸ ಹೆಚ್ಚಾಗಿದೆ. ಆದಾಗ್ಯೂ, ಎನ್‌ಡಿಎ ಮತ್ತು ಮಘಾಘಟಬಂಧನ್‌ನ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಕೆಲವು ಅಂಶಗಳು ಗಮನ ಸೆಳೆಯುತ್ತದೆ.

ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಗೆಲುವು ಮುಖ್ಯವಾಗಿ ಮೂರು ಅಂಶಗಳ ಮೇಲೆ ಅವಲಂಬಿತವಾಗಿದೆ. 1) ನಿತೀಶ್ ಕುಮಾರ್ ಅವರ ದೀರ್ಘಕಾಲದ ರಾಜಕೀಯ ಬಂಡವಾಳ. ಆದರೂ, ಈ ಚುನಾವಣೆಯಲ್ಲಿ ನಿತೀಶ್‌ ಅವರು ಎನ್‌ಡಿಎಯನ್ನು ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆ ಮುನ್ನಲೆಯಲ್ಲಿದೆ. 2) ಚುನಾವಣೆಗೂ ಮುನ್ನ ಮಹಿಳೆಯ ಬ್ಯಾಂಕ್‌ ಖಾತೆಗಳಿಗೆ 10,000 ರೂ. ಜಮಾ ಮಾಡಿದ ಮಹಿಳಾ ರೋಜ್‌ಗಾರ್ ಯೋಜನೆಯು ಮಹಿಳೆಯರ ಚಿತ್ತವನ್ನು ಎನ್‌ಡಿಎಯತ್ತ ತಿರುಗಿಸುವುದು. 3) ಜಾತಿ ಲೆಕ್ಕ: ಚಿರಾಗ್ ಪಾಸ್ವಾನ್ ಅವರ LJP (ರಾಮ್ ವಿಲಾಸ್) ಮತ್ತು ಉಪೇಂದ್ರ ಕುಶ್ವಾಹ ಅವರ RLM ಪಕ್ಷಗಳು ಎನ್‌ಡಿಎ ಮರಳಿರುವುದು ಚುನಾವಣಾ ಕಣದಲ್ಲಿ ಮತಗಳನ್ನು ಒಗ್ಗೂಡಿಸಿದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಮೂರು ಅಂಶಗಳು ಮತದಾರರಲ್ಲಿ ಎನ್‌ಡಿಎ ಪರವಾದ ಒಲವನ್ನು ಹೆಚ್ಚಿಸಿದ್ದರೆ, ಎನ್‌ಡಿಎಗೆ ಮತಗಳು ಬರುವಂತೆ ಮಾಡಿದ್ದಾರೆ, ಎನ್‌ಡಿಎ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು.

ಅಂತೆಯೇ, ಮಹಾಘಟಬಂಧನ್‌ನಲ್ಲಿಯೂ ಜಾತಿ ಲೆಕ್ಕಾಚಾರ ಮುನ್ನೆಲೆಯಲ್ಲಿದೆ. ಆರ್‌ಜೆಡಿ-ಕಾಂಗ್ರೆಸ್‌-ಎಡಪಕ್ಷಗಳು-ವಿಐಪಿ-ಐಐಪಿ ಕಾರ್ಯತಂತ್ರವು ಮುಸ್ಲಿಂ-ಯಾದವ ಮತಬ್ಯಾಂಕ್‌ನ ಆಚೆಗೆ ತಮ್ಮ ಪ್ರಾಬಲ್ಯವನ್ನು ವಿಸ್ತರಿಸುವುದರ ಮೇಲೆ ಅವಲಂಬಿತವಾಗಿತ್ತು.  ಒಬಿಸಿ, ಇಬಿಸಿ ಹಾಗೂ ಎಸ್‌ಸಿ ಸಮುದಾಯದ ಮತಗಳನ್ನು ಮಘಾಟಬಂಧನ್‌ಗೆ ತರಲು ಮೈತ್ರಿಕೂಟವು ವಿಐಪಿ ಮತ್ತು ಐಐಪಿಯನ್ನು ಹೆಚ್ಚು ಅವಲಂಬಿಸಿದೆ. ಈ ಸಮುದಾಯಗಳ ಮತಗಳನ್ನು ಕ್ರೋಢೀಕರಿಸುವಲ್ಲಿ ಮೈತ್ರಿಕೂಟ ಯಶಸ್ವಿಯಾಗಿದ್ದರೆ, ಫಲಿತಾಂಶ ಮಹಾಘಟಬಂಧನ್‌ ಪರವಾಗಿ ಬರಬಹುದು.

ಈ ಲೇಖನ ಓದಿದ್ದೀರಾ?: ಅವಕಾಶವನ್ನು ಕೈ ಚೆಲ್ಲುವ ಕಾಂಗ್ರೆಸ್ – ಚೆಲ್ಲಿದ್ದನ್ನು ಗಬಕ್ಕನೆ ಕಬಳಿಸುವ ಬಿಜೆಪಿ

ತೇಜಸ್ವಿ ಯಾದವ್ ಅವರ ಯುವ ಉತ್ಸಾಹ, ಪ್ರಚಾರ ಶಕ್ತಿಯು ನಿತೀಶ್ ಅವರ ದೀರ್ಘ ಅಧಿಕಾರಾವಧಿಯ ವಿರುದ್ಧದ ಅಲೆಯನ್ನು ರೂಪಿಸಿದೆ. ಅಭಿವೃದ್ಧಿ, ಮೂಲಸೌಕರ್ಯ, ಉದ್ಯೋಗ ಹಾಗೂ ವಲಸೆ ಮೇಲಿನ ತೇಜಸ್ವಿ ಅವರ ಪ್ರಚಾರವು ಜನರಲ್ಲಿ ಆಡಳಿತ ವಿರೋಧಿ ಅಲೆ ಎಬ್ಬಿಸಿದೆ. ಆದಾಗ್ಯೂ, ರಾಹುಲ್‌ ಗಾಂಧಿ ಅವರು ಭಾರತ್ ಜೋಡೋ ಮತ್ತು ಮತದಾರರ ಅಧಿಕಾರ ಯಾತ್ರಗಳ ಹೊರತಾಗಿಯೂ ಕಾಂಗ್ರೆಸ್‌ ಇನ್ನೂ ತೆವಳುತ್ತಲೇ ಇದೆ.

ಈ ಅಂಶಗಳ ಜೊತೆಗೆ ಎನ್‌ಡಿಎ ಮತ್ತು ಮಹಾಘಟಬಂಧನ್‌ – ಎರಡೂ ಮೈತ್ರಿಕೂಟಗಳಿಗೆ ಸಾಮಾನ್ಯವಾದ ಸವಾಲು ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ (ಜೆಎಸ್‌ಪಿ). ಈ ಪಕ್ಷಗಳು ಮತ ವಿಭಜನೆಯಲ್ಲಿ ಪರಿಣಾಮಕಾರಿ ಪಾತ್ರವಹಿಸಬಹುದು. ಮತ ವಿಭಿಜನೆಯಿಂದ ಹೆಚ್ಚಿನ ಕ್ಷೇತ್ರಗಳಲ್ಲಿ ಎನ್‌ಡಿಎಗೆ ಅನುಕೂಲವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಈಗಾಗಲೇ, ಎಕ್ಸಿಟ್‌ ಪೋಲ್‌ಗಳು ಎನ್‌ಡಿಎ ಮತ್ತೊಮ್ಮೆ ಅಧಿಕಾರ ದೊರೆಯಲಿದೆ ಎಂದು ಹೇಳಿವೆ. ಆರಂಭಿಕ ಮತ ಎಣಿಕೆಯಲ್ಲಿಯೂ ಎನ್‌ಡಿಎ ಮುನ್ನಡೆಯಲ್ಲಿದೆ. ಪರಿಣಾಮ, ಎನ್‌ಡಿಎ ಗೆದ್ದು, ನಿತೀಶ್‌ ಅವರು ದಾಖಲೆಯ 10ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬಹುದು ಎಂದೂ ಹೇಳಲಾಗುತ್ತಿದೆ. ಆದರೆ, ಆಡಳಿತ ವಿರೋಧ ಅಲೆಯನ್ನು ಮಹಾಘಟಬಂಧನ್‌ ಒಗ್ಗೂಡಿಸಿದ್ದರೆ, ಫಲಿತಾಂಶ ಬದಲಾಗಲಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...