ಬಿಹಾರ | ಚುನಾವಣೆಗೂ ಮುನ್ನವೇ ಎನ್‌ಡಿಎಗೆ ಹಿನ್ನಡೆ: ಸೀಮಾ ಸಿಂಗ್ ನಾಮಪತ್ರ ರದ್ದು

Date:

ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನವೇ ಚುನಾವಣಾ ಅಧಿಕಾರಿಗಳು ಮರ್ಹೌರಾ ವಿಧಾನಸಭೆ ಕ್ಷೇತ್ರದ ನಾಲ್ವರು ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕರಿಸಿದೆ. ಅನರ್ಹರಾದವರಲ್ಲಿ ಬಿಜೆಪಿ ನೇತೃತ್ವದ NDA ಮಿತ್ರ ಪಕ್ಷ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಅಭ್ಯರ್ಥಿ ಸೀಮಾ ಸಿಂಗ್ ಕೂಡಾ ಸೇರಿದ್ದಾರೆ.

ಜೆಡಿಯು ಮಾಜಿ ಜಿಲ್ಲಾಧ್ಯಕ್ಷ ಅಲ್ತಾಫ್ ಆಲಂ ರಾಜು (ಸ್ವತಂತ್ರ ಅಭ್ಯರ್ಥಿ), ಬಿಎಸ್‌ಪಿಯ ಆದಿತ್ಯ ಕುಮಾರ್ ಮತ್ತು ಸ್ವತಂತ್ರ ಅಭ್ಯರ್ಥಿ ವಿಶಾಲ್ ಕುಮಾರ್ ನಾಮಪತ್ರ ಕೂಡಾ ರದ್ದಾಗಿದೆ. ನಾಮಪತ್ರದಲ್ಲಿ ನಾಮಿನಿಗಳಲ್ಲಿ ವ್ಯತ್ಯಾಸಗಳು ಮತ್ತು ತಾಂತ್ರಿಕ ದೋಷಿಗಳಿವೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಬಿಹಾರ ಚುನಾವಣೆ | ಚಿರಾಗ್‌ರ ‘ಎಲ್‌ಜೆಪಿ’ – ಪ್ರಶಾಂತ್‌ ಕಿಶೋರ್‌ರ ‘ಜನ ಸುರಾಜ್’ ಮೈತ್ರಿ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇನ್ನು ಜೆಡಿಯು ಟಿಕೆಟ್ ಕಳೆದುಕೊಂಡು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರದ ಸಲ್ಲಿಸಿದ್ದ ಅಲ್ತಾಫ್ ಅಲಂ ರಾಜು ಅವರ ನಾಮಪತ್ರವೂ ತಿರಸ್ಕೃತಗೊಂಡಿದೆ.

ಜನಪ್ರಿಯ ಭೋಜ್‌ಪುರಿ ಚಲನಚಿತ್ರ ನಟಿ ಮತ್ತು ರಾಜಕಾರಣಿ ಸೀಮಾ ಸಿಂಗ್ ಮರ್ಹೌರಾದ ಪ್ರಬಲ ಸ್ಪರ್ಧಿಯಾಗಿದ್ದರು. ಅವರ ನಾಮಪತ್ರ ರದ್ದಾಗಿರುವುದು ಎನ್‌ಡಿಎ ಒಕ್ಕೂಟಕ್ಕೆ ಪ್ರಮುಖ ಹಿನ್ನಡೆಯೆಂದೇ ಪರಿಗಣಿಸಲಾಗುತ್ತಿದೆ. ಸದ್ಯ ಆರ್‌ಜೆಡಿಯ ಜಿತೇಂದ್ರ ರೈ ಮತ್ತು ಜನ ಸುರಾಜ್‌ನ ಅಭಯ್ ಸಿಂಗ್ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆಯಿದೆ.

ಜಿತೇಂದ್ರ ರೈ 2010ರಿಂದ ಮರ್ಹೌರಾವನ್ನು ಪ್ರತಿನಿಧಿಸುತ್ತಿದ್ದಾರೆ. ಸೀಮಾ ಮೂಲಕ ರೈ ಅವರನ್ನು ಸೋಲಿಸುವ ಯೋಜನೆಯನ್ನು ಎನ್‌ಡಿಎ ರೂಪಿಸಿಕೊಂಡಿತ್ತು. ಆದರೆ ನಾಮಪತ್ರವೇ ರದ್ದಾಗಿದೆ.

ಮರ್ಹೌರಾದ ಅಭ್ಯರ್ಥಿಗಳು

ಲಾಲು ಪ್ರಸಾದ್ ಯಾದವ್ – ರಾಷ್ಟ್ರೀಯ ಜನ ಸಮರ್ಥನ್ ಪಾರ್ಟಿ
ಸಂದೇವ್ ಕುಮಾರ್ ರೈ – ಸ್ವತಂತ್ರ
ಜಿತೇಂದ್ರ ಕುಮಾರ್ ರೈ – ರಾಷ್ಟ್ರೀಯ ಜನತಾ ದಳ (RJD)
ಅಂಕಿತ್ ಕುಮಾರ್ – ಸ್ವತಂತ್ರ
ಮನೇಜರ್ ಕುಮಾರ್ – ಸ್ವತಂತ್ರ
ನವೀನ್ ಕುಮಾರ್ ಸಿಂಗ್ ಅಕಾ ಅಭಯ್ ಸಿಂಗ್ – ಜನ್ ಸುರಾಜ್ ಪಕ್ಷ
ಅಭಿಷೇಕ್ ರಂಜನ್ – ಸ್ವತಂತ್ರ
ಮಧುಬಾಲ ಗಿರಿ – ದಿ ಪ್ಲರಲ್ಸ್ ಪಾರ್ಟಿ
ಪುರುಷೋತ್ತಮ್ ಕುಮಾರ್ – ರಾಷ್ಟ್ರೀಯ ಸಬ್ ಜನ ಶಕ್ತಿ ಪಾರ್ಟಿ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...