ಬಿಹಾರ ಚುನಾವಣೆ | ಮೊದಲ ಹಂತದಲ್ಲಿ ದಾಖಲೆ ಮತದಾನ- ಸೂಚನೆಯೇನು? ಅನುಕೂಲ ಯಾರಿಗೆ?

Date:

ಬಿಹಾರ ಚುನಾವಣೆಯ ಮೊದಲ ಹಂತದ ಮತದಾನವು ನವೆಂಬರ್ 6ರಂದು ಮುಗಿದಿದೆ. ಬಿಹಾರದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಗುರುವಾರ ಮತದಾನ ನಡೆದ 121 ವಿಧಾನಸಭಾ ಕ್ಷೇತ್ರಗಳ 3.75 ಕೋಟಿ ಮತದಾರರಲ್ಲಿ 64.66% ಮಂದಿ ಮತ ಚಲಾಯಿಸಿದ್ದಾರೆ. ಮತದಾನವು ಶಾಂತಿಯುತವಾಗಿ ಮುಗಿದಿದೆ. ಉಳಿದ, 122 ಸ್ಥಾನಗಳಿಗೆ ಎರಡನೇ ಹಂತದ ಮತದಾನವು ನವೆಂಬರ್ 11 ರಂದು ನಡೆಯಲಿದೆ. ಬಿಹಾರ ಚುನಾವಣೆಯ ಫಲಿತಾಂಶಗಳು ನವೆಂಬರ್ 14 ರಂದು ಪ್ರಕಟವಾಗಲಿದೆ.

ಚುನಾವಣೆಯು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಜನಪ್ರಿಯತೆಯ ಅಗ್ನಿಪರೀಕ್ಷೆ ಎಂದೂ ಪರಿಗಣಿಸಲಾಗಿದೆ. ಗುರುವಾರದ ಮತದಾನವು ಹೆಚ್ಚಿನ ಪೈಪೋಟಿ, ನಿಕಟ ಸ್ಪರ್ಧೆಯನ್ನು ಗುರುತಿಸಿದೆ. ಮೊದಲ ಹಂತದಲ್ಲಿನ ದಾಖಲೆಯ ಮತದಾನವು ಎನ್‌ಡಿಎ ಪರವಾದ ಒಲವನ್ನು ಪ್ರತಿಬಿಂಬಿಸುತ್ತದೆಯೇ ಅಥವಾ ಆಡಳಿತ ವಿರೋಧಿ ಅಲೆಯ ಪರಿಣಾಮವೇ? ಇದರಿಂದ ಮಹಾಘಟಬಂಧನ್‌ಗೆ ಅಧಿಕಾರ ದೊರೆಯಲಿದೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.

ರಾಜ್ಯದಲ್ಲಿ ನಿತೀಶ್ ಕುಮಾರ್ ಅವರ 20 ವರ್ಷಗಳ ಆಡಳಿತ ಮತ್ತು ಕೇಂದ್ರದಲ್ಲಿ ಪ್ರಧಾನಿ ಮೋದಿ ಸರ್ಕಾರದ 11 ವರ್ಷಗಳ ಆಡಳಿತದ ಕುರಿತು ಬಿಹಾರದ ಮತದಾರರಲ್ಲಿ ಒಲವಿದೆ. ಆಡಳಿತಾರೂಢ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಮರಳುತ್ತದೆ ಎಂದು ಎನ್‌ಡಿಎ ಭಾವಿಸಿದೆ. ವಿರೋಧ ಪಕ್ಷವಾದ ಮಹಾಘಟಬಂಧನ್ ಮೈತ್ರಿಯು ಆಡಳಿತ ವಿರೋಧಿ ಅಲೆ, ದುರಾಡಳಿತ ಹಾಗೂ ನಿರುದ್ಯೋಗವನ್ನು ಆಧರಿಸಿ ಮತದಾರರು ಮತಚಲಾಯಿಸಿದ್ದಾರೆ ಎಂದು ಹೇಳುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದಾಖಲೆಯ ಮತದಾನದ ಕುರಿತು ಬಿಜೆಪಿ, ಆರ್‌ಜೆಡಿ, ಕಾಂಗ್ರೆಸ್‌ ಹಾಗೂ ಜೆಎಸ್‌ಪಿ ಪಕ್ಷಗಳು ತ್ವರಿತವಾಗಿ ಪ್ರತಿಕ್ರಿಯಿಸಿವೆ. ತಮ್ಮ ಗೆಲುವಿನ ಸಂಕೇತವೆಂದು ಹೇಳಿಕೊಂಡಿವೆ.

“ಅಧಿಕ ಪ್ರಮಾಣದಲ್ಲಿ ಮತದಾನ ಮಾಡಿದ್ದಕ್ಕಾಗಿ ಬಿಹಾರದ ಜನರಿಗೆ ನಾನು ವಂದಿಸುತ್ತೇನೆ. ‘ಮಹಾಘಟಬಂಧನ್’ ವಿಜಯವನ್ನು ನೀವು ದೃಢಪಡಿಸಿದ್ದೀರಿ ಎಂಬ ವಿಶ್ವಾಸ ಈಗ ಇಮ್ಮಡಿಗೊಂಡಿದೆ:” ಎಂದು ಆರ್‌ಜೆಡಿ ನಾಯಕ, ಮಹಾಘಟಬಂಧನ್ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.

ಬಿಜೆಪಿ ನಾಯಕ, ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, “ಮತದಾನ ನಡೆದಿರುವ ಕ್ಷೇತ್ರಗಳ ಪೈಕಿ ಸುಮಾರು 100 ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ. ಎನ್‌ಡಿಎಯ ಒಟ್ಟಾರೆ ಸಂಖ್ಯೆ 2010ರ ದಾಖಲೆಯನ್ನು (206) ಮುರಿಯುತ್ತದೆ” ಎಂದಿದ್ದಾರೆ.

ಜೆಎಸ್‌ಪಿ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಅತ್ಯಧಿಕ ಮತದಾನವು ಜನರು ಬದಲಾವಣೆಗಾಗಿ ಹಾತೊರೆಯುತ್ತಿರುವುದರ ಸಂಕೇತವಾಗಿದೆ ಎಂದು ಹೇಳಿದ್ದಾರೆ. “ಸ್ವಾತಂತ್ರ್ಯದ ನಂತರ ಬಿಹಾರದಲ್ಲಿ ಇದುವರೆಗಿನ ಅತ್ಯಧಿಕ ಮತದಾನವಾಗಿದೆ. ಇದು ಎರಡು ವಿಷಯಗಳನ್ನು ಸೂಚಿಸುತ್ತದೆ – ಒಂದು ನಾವು ಮೊದಲೇ ಹೇಳಿದಂತೆ, ಬಿಹಾರದ 60%ಗೂ ಹೆಚ್ಚು ಜನರು ಬದಲಾವಣೆ ಬಯಸುತ್ತಾರೆ. ಇನ್ನೊಂದು, ಛಠ್ ಪೂಜೆಗೆ ಬಂದಿದ್ದ ವಲಸೆ ಕಾರ್ಮಿಕರು ಮತ ಚಲಾಯಿಸುವುದಾಗಿ ಇಲ್ಲಿಯೇ ಉಳಿದು, ಮತದಾನ ಮಾಡಿದ್ದಾರೆ. ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬಗಳನ್ನು ಮತ ಚಲಾಯಿಸುವಂತೆ ಮಾಡಿದರು” ಎಂದು ಹೇಳಿದ್ದಾರೆ.

“ಹೆಚ್ಚಿನ ಮತದಾರರ ಮತದಾನವು ನಾವು ಸ್ಪಷ್ಟ ಬಹುಮತವನ್ನು ಪಡೆಯಲಿದ್ದೇವೆ ಎಂಬುದನ್ನು ಸೂಚಿಸಿದೆ ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದಾರೆ.

ಅಧಿಕ ಮತದಾನ ಸೂಚಿಸುವುದೇನು?

ಸಾಮಾನ್ಯವಾಗಿ, ಹೆಚ್ಚಿನ ಮತದಾನವು ಬದಲಾವಣೆಗಾಗಿನ ಸಾರ್ವಜನಿಕ ಉತ್ಸಾಹದ ಸಂಕೇತವೆಂದು ಹೇಳಲಾಗುತ್ತದೆ. ಬಿಹಾರದ ಸಂದರ್ಭದಲ್ಲಿ, ಅದು ನಿತೀಶ್ ಕುಮಾರ್ ಅವರ ಎರಡು ದಶಕಗಳ ಆಳ್ವಿಕೆಯ ಅಂತ್ಯವೆಂದು ಅರ್ಥೈಸಬಹುದು. ಆದರೆ, ರಾಜಕೀಯ ವಿಶ್ಲೇಷಕರು ಇಂತಹ ಸಂದರ್ಭದಲ್ಲಿ ಎಚ್ಚರಿಕೆಯಿಂದ ಗಮನಿಸಬೇಕು ಎಂದು ಹೇಳುತ್ತಾರೆ. ಅಧಿಕ ಮತದಾನವು ಆಡಳಿತ ವಿರೋಧಿ ಅಲೆಯನ್ನು ಮಾತ್ರವೇ ಸೂಚಿಸುವುದಿಲ್ಲ. ಮತದಾನವನ್ನು ಲಿಂಗ ಆಧಾರಿತವಾಗಿ ಅರ್ಥಮಾಡಿಕೊಳ್ಳಬೇಕು. ಪುರುಷರು ಅಥವಾ ಮಹಿಳೆಯರು ಯಾರು ಹೆಚ್ಚು ಮತದಾನ ಮಾಡಿದ್ದಾರೆ ಎಂಬುದರ ಮೇಲೆ ಯಾರ ಪರವಾಗಿ ಮತ ಚಲಾವಣೆಯಾಗಿದೆ ಎಂಬುದನ್ನು ನೋಡಬೇಕಾಗುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ.

“ಮಹಿಳೆಯರು ಪುರುಷರಿಗಿಂತ ಹೆಚ್ಚು ಮತ ಚಲಾಯಿಸಿದ್ದರೆ, ಅದು NDAಗೆ ಪ್ರಯೋಜನವಾಗಬಹುದು” ಎಂದು ರಾಜಕೀಯ ವಿಶ್ಲೇಷಕ ಅಮಿತಾಭ್ ತಿವಾರಿ ಹೇಳಿರುವುದಾಗಿ ‘ಮಿಂಟ್‌’ ವರದಿ ಮಾಡಿದೆ.

“ಪುರುಷರಿಗಿಂತ ಮಹಿಳೆಯರು ಹೆಚ್ಚು ಮತ ಚಲಾಯಿಸಿದ ಸ್ಥಾನಗಳಲ್ಲಿ NDA ಗೆದ್ದಿರುವುದನ್ನು ಹಿಂದಿನ ಚುನಾವಣೆಗಳು ಸೂಚಿಸುತ್ತವೆ. 2020ರ ಚುನಾವಣೆಯಲ್ಲಿ ಬಿಹಾರದ 43 ಸ್ಥಾನಗಳಲ್ಲಿ ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದರು. ಆ ಸ್ಥಾನಗಳಲ್ಲಿ 27 ಸ್ಥಾನಗಳನ್ನು ಎನ್‌ಡಿಎ ಗೆದ್ದಿತ್ತು. ಅಂತೆಯೇ, 2015ರಲ್ಲಿ, ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿದ್ದ NDA 71 ಸ್ಥಾನಗಳ ಪೈಕಿ 61 ಸ್ಥಾನಗಳನ್ನು ಗೆದ್ದಿತು.  ಅದೇ ರೀತಿ, 2010ರಲ್ಲಿಯೂ ಮಹಿಳಾ ಮತದಾರರು ಹೆಚ್ಚು ಮತದಾನ ಮಾಡಿದ್ದ  115 ಕ್ಷೇತ್ರಗಳಲ್ಲಿ 79 ಸ್ಥಾನಗಳನ್ನು ಎನ್‌ಡಿಎ ಗೆಲುವು ಸಾಧಿಸಿತ್ತು” ಎಂದು ತಿವಾರಿ ವಿವರಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಸಾಧನೆಗಳೇ ಇಲ್ಲ; ವಿಪಕ್ಷ ನಾಯಕರ ವೈಯಕ್ತಿಕ ಟೀಕೆಗೆ ಜೋತು ಬಿದ್ದ ಬಿಜೆಪಿ

ಆದಾಗ್ಯೂ, ಪುರುಷರು ಮಹಿಳೆಯರಿಗಿಂತ ಹೆಚ್ಚು ಮತ ಚಲಾಯಿಸಿದ್ದರೆ, ಅದು ಮಹಾಘಟಬಂಧನ್‌ಗೆ ಅನುಕೂಲವಾಗುತ್ತದೆ ಎಂದು ತಿವಾರಿ ಹೇಳಿದ್ದಾರೆ. “2020ರಲ್ಲಿ ಪುರುಷರು ಮಹಿಳೆಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ಮತ್ತು ಹೆಚ್ಚು ಮತದಾನ ಮಾಡಿದ್ದ 76 ಸ್ಥಾನಗಳಲ್ಲಿ ಎನ್‌ಡಿಎ ಕೇವಲ 26 ಸ್ಥಾನಗಳನ್ನು ಮಾತ್ರವೇ ಗೆದ್ದಿತ್ತು” ಎಂದು ಅವರು ಹೇಳುತ್ತಾರೆ.

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಮತದಾನದ ಮೇಲೆ ಪರಿಣಾಮ ಬೀರಿದೆಯೇ?

ಬಿಹಾರದಲ್ಲಿ ಒಟ್ಟು 243 ವಿಧಾನಸಭಾ ಕ್ಷೇತ್ರಗಳಿವೆ. ಈ ಬಾರಿ ಚುನಾವಣೆಯು ಸ್ಥಳೀಯ ಪರಿಣಾಮಗಳ ಮೇಲೆ ನಡೆಯುತ್ತಿದೆ ಎಂಬುದು ಮಾತ್ರವಲ್ಲದೆ, 2029ರ ಭವಿಷ್ಯದ ರಾಜಕೀಯ ಮನಸ್ಥಿತಿಯ ಆರಂಭಿಕ ಸೂಚಕವಾಗಿಯೂ ನೋಡಲಾಗುತ್ತದೆ. ಇದೇ ಸಮದಯಲ್ಲಿ, ಮತದಾರರ ಪಟ್ಟಿಯ ಮೇಲೆ ಚುನಾವಣಾ ಆಯೋಗವು ನಡೆಸಿದ ಭಾರೀ ವಿವಾದಾತ್ಮಕ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್)ಅನ್ನು  ವಿಪಕ್ಷಗಳು ಟೀಕಿಸಿವೆ. ಇದು ವಿಪಕ್ಷಗಳ ಮತದಾರರನ್ನು ಮತದಾನದಿಂದ ಹೊರಗಿಡುವ ತಂತ್ರ, ಮತಗಳ್ಳತನದ ಮುಂದುವರೆದ ಭಾಗವೆಂದು ಆರೋಪಿಸಿವೆ.

ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗ ನಡೆಸಿದ SIR ಪ್ರಕ್ರಿಯೆಯಿಂದಾಗಿ ಬಿಹಾರದಲ್ಲಿ ಮತದಾರರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಆದ್ದರಿಂದಲೇ ದಾಖಲೆಯ ಮತದಾನವೂ ದಾಖಲಾಗಿದೆ ಎಂದು ಹೇಳಲಾಗುತ್ತಿದೆ. ವಿಪಕ್ಷಗಳು ಹೇಳುವಂತೆ; ಬಿಹಾರದಲ್ಲಿ ಸುಮಾರು 80 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಹೊರಗಿಡಲಾಗಿದೆ.

ಸೆಪ್ಟೆಂಬರ್ 30ರಂದು, ಚುನಾವಣಾ ಆಯೋಗವು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿತು. 2025ರ ಜೂನ್ 24ರಂದು ದೊರೆತಿದ್ದ ಮತಪಟ್ಟಿಯಲ್ಲಿ ಬಿಹಾರದಲ್ಲಿ 7.89 ಕೋಟಿ ಮತದಾರರಿದ್ದರು. ಆದರೆ, ಎಸ್‌ಐಆರ್‌ ಬಳಿಕ, ಆಗಸ್ಟ್‌ನಲ್ಲಿ ಪ್ರಕಟವಾದ ಕರಡು ಮತಪಟ್ಟಿಯಲ್ಲಿ 7.24 ಮತದಾರರ ಹೆಸರುಗಳಿದ್ದವು. ಆ ನಂತರದ ಅರ್ಜಿ ಸಲ್ಲಿಕೆ, ಪರಿಶೀಲನೆ ಬಳಿಕ ಅಂತಿಮ ಮತಪಟ್ಟಿಯಲ್ಲಿ 7.42 ಕೋಟಿ ಮತದಾರರಿದ್ದಾರೆ. ಇದು, 65 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂಬುದನ್ನು ಸೂಚಿಸಿದೆ.

ಕೊರೊನಾ ಸೋಂಕಿನ ಆಕ್ರಮಣದ ನಡುವೆ ನಡೆದಿದ್ದ 2020ರ ಚುನಾವಣೆಯಲ್ಲಿ, ಬಿಹಾರದಲ್ಲಿ 57.29% ರಷ್ಟು ಮತದಾನ ದಾಖಲಾಗಿತ್ತು. ಅದಕ್ಕೂ ಹಿಂದೆ, 2015ರಲ್ಲಿ 56.91% ಮತ್ತು 2010ರಲ್ಲಿ 52.73% ಮತದಾನ ನಡೆದಿತ್ತು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...