ಬಿಹಾರ ಚುನಾವಣೆ | ನ.6ಕ್ಕೆ ಮೊದಲ ಹಂತದ ಮತದಾನ; ಕಣದಲ್ಲಿರುವ ಘಟಾನುಘಟಿಗಳು ಇವರು!

Date:

ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ನವೆಂಬರ್ 6ರಂದು ನಡೆಯಲಿದೆ. ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಹಲವು ಘಟಾನುಘಟಿ ನಾಯಕರ ಭವಿಷ್ಯವನ್ನು ಮತದಾರರು ಅಂದು ನಿರ್ಧರಿಸಲಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ ಮತ್ತು ಮಹಾಘಟಬಂಧನ್‌ ನಡುವೆ ಭಾರೀ ಪೈಪೋಟಿ ಇದೆ. ಜೊತೆಗೆ, ಪ್ರಶಾಂತ್ ಕಿಶೋರ್ ಅವರ ʼಜನ ಸುರಾಜ್ʼ ಪಕ್ಷವೂ ಕೆಲವೆಡೆ ಪೈಪೋಟಿ ನೀಡುವ ಸಾಧ್ಯತೆ ಇದೆ.

ಎನ್‌ಡಿಎಎಯಲ್ಲಿ; ಬಿಜೆಪಿ, ಜೆಡಿಯು, ಎಲ್‌ಜೆಪಿ, ಎಚ್‌ಎಎಂ ಹಾಗೂ ಆರ್‌ಎಲ್‌ಎಂ ಪಕ್ಷಗಳಿವೆ. ಮಹಾಘಟಬಂಧನ್‌ನಲ್ಲಿ; ಆರ್‌ಜೆಡಿ, ಕಾಂಗ್ರೆಸ್‌, ಸಿಪಿಐ, ಸಿಪಿಐ(ಎಂಎಲ್‌), ಸಿಪಿಐ(ಎಂ) ಹಾಗೂ ವಿಐಪಿ ಪಕ್ಷಗಳಿವೆ. ಉಳಿದಂತೆ ಜೆಎಸ್‌ಪಿ ಮತ್ತು ಎಐಎಂಐಎಂ ಪಕ್ಷಗಳು ಸ್ವತಂತ್ರ ಸ್ಪರ್ಧೆ ನಡೆಸಿವೆ. 25 ಕ್ಷೇತ್ರಗಳಲ್ಲಿ ಎಐಎಂಐಎಂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೆಎಸ್‌ಪಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನವೆಂಬರ್ 6ರಂದು 121 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಅಂದು ಮತದಾರರ ತೀರ್ಪಿಗೆ ಒಳಪಡುವ ಪ್ರಭಾವಿ/ಪ್ರಮುಖ ಅಭ್ಯರ್ಥಿಗಳು ಮತ್ತು ಕ್ಷೇತ್ರಗಳ ಸಣ್ಣ ವಿಶ್ಲೇಷಣೆ ಇಲ್ಲಿದೆ;

ತೇಜಸ್ವಿ ಯಾದವ್ – ರಾಘೋಪುರ್ ಕ್ಷೇತ್ರ

ಆರ್‌ಜೆಡಿ ನಾಯಕ, ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರು ರಾಘೋಪುರ್‌ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಈ ಹಿಂದೆ, ಎರಡು ಬಾರಿ ಇದೇ ಕ್ಷೇತ್ರದಿಂದ ಗೆದ್ದಿದ್ದ ತೇಜಸ್ವಿ ಮೂರನೇ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದಾರೆ.

ತೇಜಸ್ವಿ ಯಾದವ್ ಅವರು ಈ ಕ್ಷೇತ್ರದಿಂದ ಗೆದ್ದು, ವಿಧಾನಸಭೆಯಲ್ಲಿ ಉಪ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕನ ಹುದ್ದೆಯನ್ನು ನಿರ್ವಹಿಸಿದ್ದಾರೆ. ಇದೀಗ, ಇದೇ ಕ್ಷೇತ್ರದಿಂದ ಗೆದ್ದು, ಬಿಹಾರದಲ್ಲಿ ಮಹಾಘಟಬಂಧನ್ ಬಹುಮತ ಗಳಿಸಿದರೆ, ಮುಖ್ಯಮಂತ್ರಿಯಾಗಲು ಸಿದ್ದರಾಗಿದ್ದಾರೆ.

ರಾಘೋಪುರ್ ಕ್ಷೇತ್ರವು ತೇಜಸ್ವಿ ಕುಟುಂಬದ ಭದ್ರಕೋಟೆಯಾಗಿದೆ. ಕಳೆದ, 35 ವರ್ಷಗಳಲ್ಲಿ 25 ವರ್ಷಗಳ ಕಾಲ ತೇಜಸ್ವಿ ಯಾದವ್ ಅವರ ಕುಟುಂಬವೇ ಕ್ಷೇತ್ರವನ್ನು ಪ್ರತಿನಿಧಿಸಿದೆ.

ಕ್ಷೇತ್ರದಲ್ಲಿ ಯಾದವ್, ಎಸ್‌ಸಿ, ಮುಸ್ಲಿಂ, ಒಬಿಸಿ ಸಮುದಾಯಗಳ ಮತಗಳು ನಿರ್ಣಾಯಕವಾಗಿವೆ. ಆದಾಗ್ಯೂ, ಈ ಎಲ್ಲ ಸಮುದಾಯಗಳ ಮತದಾರರು ಭಾಗಶಃ ಆರ್‌ಜೆಡಿ ಜೊತೆಗಿದ್ದಾರೆ. ಒಬಿಸಿ ಮತಗಳು ಆರ್‌ಜೆಡಿ ಮತ್ತು ಬಿಜೆಪಿ ನಡುವೆ ವಿಭಜನೆಯಾಗಿದ್ದರೆ, ಪ್ರಬಲ ಜಾತಿಯಾದ ರಜಪೂತ್ ಮತ್ತು ಭೂಮಿಹಾರ್‌ ಸಮುದಾಯಗಳ ಮತದಾರರು ಬಿಜೆಪಿ ಪರವಾಗಿದ್ದಾರೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಜಾತಿ ಸಮೀಕರಣ, ಮತ ವಿಭಜನೆ ಸವಾಲು; ಹ್ಯಾಟ್ರಿಕ್ ಗೆಲುವಿನತ್ತ ತೇಜಸ್ವಿ ಚಿತ್ತ

2015ರ ಚುನಾವಣೆಯಲ್ಲಿ ತೇಜಸ್ವಿ ಯಾದವ್ ಮೊದಲ ಬಾರಿಗೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 91,236 ಮತಗಳನ್ನು ಪಡೆದು, 22,733 ಮತಗಳ ಅಂತರದಿಂದ ಬಿಜೆಪಿಯ ಸತೀಶ್‌ ಕುಮಾರ್ ವಿರುದ್ಧ ಗೆಲುವು ಸಾಧಿಸಿದ್ದರು.

2020ರ ಚುನಾವಣೆಯಲ್ಲಿ ತೇಜಸ್ವಿ ಯಾದವ್ (ಆರ್‌ಜೆಡಿ) 97,404 ಮತಗಳನ್ನು ಪಡೆದು 38,174 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸತೀಶ್ ಕುಮಾರ್ (59,230) ಅವರ ವಿರುದ್ಧ ಗೆದಿದ್ದರು.

2015ರ ಚುನಾವಣೆಗೆ ಹೋಲಿಸಿದರೆ, 2020ರ ಚುನಾವಣೆಯಲ್ಲಿ ತೇಜಸ್ವಿ ಪಡೆದ ಮತಗಳು ಮತ್ತು ಗೆಲುವಿನ ಅಂತರ –ಎರಡೂ ಹೆಚ್ಚಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ತೇಜಸ್ವಿ ಮತ್ತು ಸತೀಶ್‌ ನಡುವೆ ನೇರ ಹಣಾಹಣಿ ಇದ್ದರೆ, ಜೆಎಸ್‌ಪಿ ಅಭ್ಯರ್ಥಿ ಚಂಚಲ್ ಕುಮಾರ್ ಮತ್ತು ‘ಜನಶಕ್ತಿ ಜನತಾದಳ’ದ ಪ್ರೇಮ್ ಕುಮಾರ್ ಅವರ ಸ್ಪರ್ಧೆಯು ಮತ ವಿಭಜನೆ ಮಾಡುವ ಸಾಧ್ಯತೆಗಳಿವೆ.

ಸಾಮ್ರಾಟ್ ಚೌಧರಿ ತಾರಾಪುರ ಕ್ಷೇತ್ರ

ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಹಾಲಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ತಾರಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದಾರೆ. ಅವರು ಈ ಹಿಂದೆ, 2020ರ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿರಲಿಲ್ಲ. ಬದಲಾಗಿ, ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಮೂಲಕ ಉಪಮುಖ್ಯಮಂತ್ರಿ ಹುದ್ದೆ ಗಿಟ್ಟಿಸಿಕೊಂಡಿದ್ದರು.

ಚೌಧರಿ ಅವರು 1990ರಲ್ಲಿ ಆರ್‌ಜೆಡಿ ಸೇರುವ ಮೂಲಕ ರಾಜಕೀಯ ಆರಂಭಿಸಿದವರು. 1999ರಲ್ಲಿ ರಬ್ರಿ ದೇವಿ ಸರ್ಕಾರದಲ್ಲಿ ಕೃಷಿ ಸಚಿವರೂ ಆಗಿದ್ದರು. 2000 ಮತ್ತು 2010ರಲ್ಲಿ ಪರ್ಭಟ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಆರ್‌ಜೆಡಿಯಿಂದ ಸ್ಪರ್ಧಿಸಿ, ಗೆದ್ದಿದ್ದರು. ಆದರೆ, 2014ರಲ್ಲಿ ಜೆಡಿಯುಗೆ ಪಕ್ಷಾಂತರಗೊಂಡು, ಜೀತನ್ ರಾಮ್ ಮಂಝಿ ಸರ್ಕಾರದಲ್ಲಿ ನಗರ ಅಭಿವೃದ್ಧಿ, ಆರೋಗ್ಯ ಸಚಿವರಾಗಿದ್ದರು.2017ರಲ್ಲಿ ಜೆಡಿಯುಗೂ ಗುಡ್‌ಬೈ ಹೇಳಿದ್ದ ಚೌಧರಿ, ಆ ವಷ್ BJPಗೆ ಸೇರಿದರು. 2018ರಲ್ಲಿ ಬಿಹಾರ ಬಿಜೆಪಿಯ ಉಪಾಧ್ಯಕ್ಷರಾದರು. 2020ರಲ್ಲಿ ಬಿಹಾರ ವಿಧಾನಸಭೆಗೆ ಆಯ್ಕೆಯಾದ ಅವರು, 2022ರಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದರು. 2023ರಲ್ಲಿ ಬಿಹಾರ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಬಡ್ತಿ ಪಡೆದುಕೊಂಡಿದ್ದು ಮಾತ್ರವಲ್ಲದೆ, ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನೂ ಗಿಟ್ಟಿಸಿಕೊಂಡರು. 2024ರ ಲೋಕಸಭಾ ಚುನಾವಣೆಯ ಬಳಿಕ, ರಾಜ್ಯಾಧ್ಯಕ್ಷ ಹುದ್ದೆ ಕಳೆದುಕೊಂಡರು.

ಇದೀಗ, ಅವರು ತಾರಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರವನ್ನು ಈವರೆಗೆ ಜೆಡಿಯು ಶಾಸಕ ರಾಜೀವ್ ಕುಮಾರ್ ಸಿಂಗ್ ಪ್ರತಿನಿಧಿಸುತ್ತಿದ್ದರು. ಆದರೆ, ಎನ್‌ಡಿಎ ಮೈತ್ರಿಯಲ್ಲಿ ಕ್ಷೇತ್ರವನ್ನು ಬಿಜೆಪಿ ತನ್ನ ಪಾಲಿಗೆ ಪಡೆದಿದ್ದು, ಸಾಮ್ರಾಟ್ ಚೌಧರಿ ಅವರನ್ನು ಕಣಕ್ಕಿಳಿಸಿದೆ. ಚೌಧರಿ ಅವರಿಗೆ ಆರ್‌ಜೆಡಿ ಅಭ್ಯರ್ಥಿ ಅರುಣ್‌ ಕುಮಾರ್ ಪೈಪೋಟಿ ನೀಡುತ್ತಿದ್ದಾರೆ.

2015ರ ಚುನಾವಣೆಯಲ್ಲಿ, ಜೆಡಿಯು ಅಭ್ಯರ್ಥಿ ಮೇವಾಲಾಲ್ ಚೌಧರಿ ಅವರು 66,411 ಮತಗಳನ್ನು ಪಡೆದು, ಆರ್‌ಜೆಡಿಯ ಶಕುನಿ ಚೌಧರಿ ವಿರುದ್ಧ 11,947 ಮತಗಳ ಅಂತರದಿಂದ ಗೆದ್ದಿದ್ದರು.

2020ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿ ಮೇವಾಲಾಲ್ ಚೌಧರಿ ಅವರು 64,468 ಮತಗಳನ್ನು ಪಡೆದು 7,225 ಮತಗಳ ಅಂತರದಲ್ಲಿ ಆರ್‌ಜೆಡಿಯ ದಿವ್ಯಾ ಪ್ರಕಾಶ್ ಅವರ ವಿರುದ್ಧ ಗೆಲುವು ಸಾಧಿಸಿದ್ದರು.

ಆದಾಗ್ಯೂ, 2021ರಲ್ಲಿ ಕೋವಿಡ್‌-19 ಸೋಂಕು ತಗುಲಿ ಮೇವಾಲಾಲ್ ಚೌಧರಿ ಸಾವನ್ನಪ್ಪಿದ್ದರು. ಕ್ಷೇತ್ರಕ್ಕೆ ನೆಡೆದ ಉಪಚುನಾವಣೆಯಲ್ಲಿ ರಾಜೀವ್ ಕುಮಾರ್ ಸಿಂಗ್ ಗೆಲುವು ಸಾಧಿಸಿ, ಕ್ಷೇತ್ರದಿಂದ ಶಾಸಕರಾಗಿದ್ದರು. ಆದರೆ, ಈಗ ಎನ್‌ಡಿಎ ಅವರಿಗೆ ಟಿಕೆಟ್‌ ನಿರಾಕರಿಸಿದೆ.

ವಿಜಯ್ ಕುಮಾರ್ ಸಿಂಹಾ – ಲಖಿಸರೈ ಕ್ಷೇತ್ರ

ಬಿಜೆಪಿಯ ಮೂರು ಬಾರಿಯ ಶಾಸಕ, ಹಾಲಿ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿಂಹಾ ಅವರು ಲಖಿಸರೈ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಬಿಹಾರದ ಮುಂಗೇರ್ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಲಖಿಸರೈ ಬಿಜೆಪಿ ಭದ್ರಕೋಟೆಯೂ ಆಗಿದೆ. ವಿಜಯ್ ಕುಮಾರ್ ಸಿಂಹ ಅವರು 2010, 2015 ಹಾಗೂ 2020ರ ಚುನಾವಣೆಗಲ್ಲಿ ಸತತ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ವಿಧಾನಸಭೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಸಾಮಾನ್ಯ (General) ಕ್ಷೇತ್ರವಾಗಿರುವ ಲಖಿಸರೈನಲ್ಲಿ ಒಬಿಸಿ, ಇಬಿಸಿ, ಮುಸ್ಲಿಮ್ ಹಾಗೂ ಪ್ರಬಲ ಜಾತಿಗಳ (ರಜಪೂತ್) ಮತಗಳು ನಿರ್ಣಾಯಕವಾಗಿವೆ.

2015ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯ್‌ ಕುಮಾರ್ 75,901 ಮತಗಳನ್ನು ಪಡೆದು, ಎದುರಾಳಿ ಜೆಡಿಯುನ ರಾಮಾನಂದ್ ಮಂಡಲ್ ಅವರನ್ನು 6,556 ಮತಗಳ ಅಂತರದಲ್ಲಿ ಸೋಲಿಸಿದ್ದರು.

2020ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ 3ನೇ ಸ್ಪರ್ಧಿಸಿದ್ದ ವಿಜಯ್ ಕುಮಾರ್ ಸಿನ್ಹಾ 74,212 ಮತಗಳನ್ನು ಪಡೆದಿದ್ದರು. ಪ್ರತಿಸ್ಪರ್ಧಿ ಕಾಂಗ್ರೆಸ್‌ ಅಭ್ಯರ್ಥಿ ಅಮರೇಶ್ ಕುಮಾರ್ ವಿರುದ್ಧ 10,483 ಮತಗಳ ಅಂತರದಿಂದ ಗೆದ್ದದ್ದರು.

ಪ್ರಸ್ತುತ ಚುನಾವಣೆಯಲ್ಲಿ, 4ನೇ ಅವಧಿಗಾಗಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಿಂದ ಅಮರೇಶ್‌ ಕುಮಾರ್ ಕೂಡ ಸ್ಪರ್ಧೆಯಲ್ಲಿದ್ದಾರೆ. ಜೊತೆಗೆ, ಜೆಎಸ್‌ಪಿ ಅಭ್ಯರ್ಥಿ ಸುರಜ್ ಕುಮಾರ್ ಮತ್ತು ಜನಶಕ್ತಿ ಜನತಾ ದಳದ ಸುಖದೇವ್ ಯಾದವ್ ಕೂಡ ಸ್ಪರ್ಧೆಯಲ್ಲಿದ್ದಾರೆ.

ರೇಣು ದೇವಿ – ಬೆಟ್ಟಿಯಾ ಕ್ಷೇತ್ರ

ಮಾಜಿ ಉಪಮುಖ್ಯಮಂತ್ರಿ ರೇಣು ದೇವಿ ಅವರು ಬಿಹಾರ ಬಿಜೆಪಿಯ ಪ್ರಭಾವಿ ನಾಯಕಿ. ಅವರು 2020ರ ನವೆಂಬರ್‌ನಿಂದ 2022ರ ಆಗಸ್ಟ್ ವರೆಗೆ ಎನ್‌ಡಿಎ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು. ಬಿಹಾರ ರಾಜಕೀಯದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನಡೆದ ಏಕೈಕ ಮತ್ತು ಮೊದಲ ಮಹಿಳೆ ರೇಣು ದೇವಿ ಅವರು. ರಾಜಕೀಯದಲ್ಲಿ ಏಳು-ಬೀಳು ಕಂಡಿರುವ ರೇಣು ದೇವಿ ಈವರೆಗೆ 5 ಬಾರಿ ಶಾಸಕರಾಗಿದ್ದಾರೆ. 6ನೇ ಬಾರಿಯ ಆಯ್ಕೆಗಾಗಿ ಬೆಟ್ಟಿಯಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಬೆಟ್ಟಿಯಾ ಕ್ಷೇತ್ರವು ಪಶ್ಚಿಮ ಚಂಪಾರಣ ಜಿಲ್ಲೆಯ ಭಾಗವಾಗಿದೆ. ಕ್ಷೇತ್ರದಲ್ಲಿ, ಪ್ರಬಲ ಜಾತಿಗಳಾದ ಭೂಮಿಹಾರ್ ಮತ್ತು ರಜಪೂತ್ ಸಮುದಾಯಗಳ ಮತಗಳು ನಿರ್ಣಾಯಕವಾಗಿವೆ. ಜೊತೆಗೆ, ಯಾದವ, ಎಸ್‌ಸಿ, ಒಬಿಸಿ ಹಾಗೂ ಮುಸ್ಲಿಂ ಮತಗಳು ಗಮನಾರ್ಹ ಸಂಖ್ಯೆಯಲ್ಲಿವೆ.

ಕ್ಷೇತ್ರವು ಸಾಮಾನ್ಯ (ಜನರಲ್) ಕ್ಷೇತ್ರವಾಗಿದ್ದು, ಒಬಿಸಿ ಸಮುದಾಯದ ಹಿನ್ನೆಲೆಯ ರೇಣು ದೇವಿ ತಮ್ಮದೇ ಪ್ರಭಾವ ಹೊಂದಿದ್ದಾರೆ.

2010ರ ವರೆಗೆ ಸತತ ನಾಲ್ಕು ಬಾರಿ ಕ್ಷೇತ್ರದಲ್ಲಿ ಗೆದ್ದಿದ್ದ ರೇಣು ದೇವಿ, 2015ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮದನ್ ಮೋಹನ್ ತಿವಾರಿ ವಿರುದ್ಧ ಸೋತಿದ್ದರು. ಆ ಚುನಾವಣೆಯಲ್ಲಿ, ಮದನ್ ಮೋಹನ್ ತಿವಾರಿ ಅವರು 66,786 ಮತಗಳನ್ನು ಪಡೆದರೆ, ರೇಣು ದೇವಿ 64,466 ಮತಗಳನ್ನು ಪಡೆದು, 2,320 ಮತಗಳ ಅಂತರದಲ್ಲಿ ಸೋಲುಂಡಿದ್ದರು.

ಆದಾಗ್ಯೂ, 2020 ಚುನಾವಣೆಯಲ್ಲಿ ಕ್ಷೇತ್ರವನ್ನು ರೇಣುದೇವಿ ತಮ್ಮ ತೆಕ್ಕೆಗೆ ತೆಗೆದುಕೊಂಡರು. 84,496 ಮತಗಳನ್ನು ಪಡೆದು, 18,079 ಮತಗಳ ಅಂತರದಲ್ಲಿ ಮದನ್ ಮೋಹನ್ ತಿವಾರಿ ಅವರನ್ನು ಸೋಲಿಸಿದರು.

ಹಾಲಿ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ನ ವಾಶಿ ಅಹ್ಮದ್ ಅವರು ರೇಣು ದೇವಿ ಅವರಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಅಲ್ಲದೆ, ಜೆಎಸ್‌ಪಿ ಮತ್ತು ಎಐಎಂಐಎಂನ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.

ರಾಮ್ ಕೃಪಾಲ್ ಯಾದವ್ – ದನಾಪುರ್ ಕ್ಷೇತ್ರ

ಕೇಂದ್ರ ಸರ್ಕಾರದ ಮಾಜಿ ಸಚಿವ, ಬಿಜೆಪಿ ನಾಯಕ ರಾಮ್‌ ಕೃಪಾಲ್ ಯಾದವ್ ಅವರು ರಾಜ್ಯ ರಾಜಕಾರಣಕ್ಕೆ ಮರಳಿದ್ದಾರೆ. ಇದೇ ಮೊದಲ ಬಾರಿಗೆ ದನಾಪುರ್ ಕ್ಷೇತ್ರದಿಂದ ಸ್ಪರ್ಧೆಸಿದ್ದಾರೆ. ಯಾದವ ಸಮುದಾಯದ ಪ್ರಬಲ ನಾಯಕರಾಗಿರುವ ರಾಮ್ ಕೃಪಾಲ್ ಅವರು ಆರ್‌ಜೆಡಿ ಸಂಸ್ಥಾಪಕ ಲೂಲೂ ಪ್ರಸಾದ್ ಯಾದವ್ ಜೊತೆಗೆ ರಾಜಕೀಯ ಜೀವನ ಕಟ್ಟಿಕೊಂಡವರು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೊದಲ ಅವಧಿಯಲ್ಲಿ ಕೇಂದ್ರ ರಾಜ್ಯ ಸಚಿವರಾಗಿದ್ದವರು.

1980ರ ದಶಕದಲ್ಲಿ ರಾಜಕೀಯಕ್ಕೆ ಬಂದ ರಾಮ್‌ ಕೃಪಾಲ್, 1985ರಲ್ಲಿ ಪಟ್ನಾ ಮುನ್ಸಿಪಲ್ ಕಾರ್ಪೊರೇಷನ್‌ನ ಡೆಪ್ಯೂಟಿ ಮೇಯರ್  ಆಗಿದ್ದರು. 1990ರ ಲೂಲೂ ನೇತೃತ್ವದ ಸರ್ಕಾರದಲ್ಲಿ ಸಚಿವರೂ ಆಗಿದ್ದವರು. ಆ ನಂತರ, 1991, 1996, 2004ರಲ್ಲಿ ಆರ್‌ಜೆಡಿಯಿಂದ ಪಟ್ನಾ ಲೋಕಸಭಾ ಕ್ಷೇತ್ರ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು.

2014ರಲ್ಲಿ ಆರ್‌ಜೆಡಿ ಟಿಕೆಟ್‌ ನಿರಾಕರಿಸಿದ್ದರಿಂದ ನಿರಾಶೆಗೊಂಡು ಬಿಜೆಪಿ ಸೇರಿ, 2014 ಮತ್ತು 2019ರಲ್ಲಿ ಪಾಟಲೀಪುತ್ರ ಲೋಕಸಭಾ ಕ್ಷೇತ್ರದಿಂದ ಗೆದ್ದರು. 2014ರ ಮೋದಿ ಸರ್ಕಾರದಲ್ಲಿ ಗ್ರಾಮೀಣ ಅಭಿವೃದ್ಧಿ ಇಲಾಖೆಯ ರಾಜ್ಯ ಸಚಿವರಾಗಿದ್ದರು.

2024ರ ಲೋಕಸಭಾ ಚುನಾವಣೆಯಲ್ಲಿ ಆರ್‌ಜೆಪಿಯ ಮೀಸಾ ಭಾರತಿ ಅವರ ವಿರುದ್ಧ ಸೋಲುಂಡಿರುವ ರಾಮ್‌ ಕೃಪಾಲ್, ಈಗ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ದನಾಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಬಿಜೆಪಿ 1 ಕೋಟಿ ಉದ್ಯೋಗದ ಭರವಸೆ; 20 ವರ್ಷದಲ್ಲಿ ಆಗದ್ದು ಈಗ ಸಾಧ್ಯವೇ?

ಕ್ಷೇತ್ರವು ಸಾಮಾನ್ಯ ಕ್ಷೇತ್ರವಾಗಿದ್ದು, ಯಾದವ್, ಕುಶ್ವಹಾ ಸೇರಿದಂತೆ ಒಬಿಸಿ ಸಮುದಾಯಗಳು ಪ್ರಬಲವಾಗಿವೆ. ಜೊತೆಗೆ ಇಬಿಸಿ ಮತ್ತು ದಲಿತ ಮತಗಳ ಪ್ರಮಾಣವು ಗಮನಾರ್ಹವಾಗಿದೆ. ಅಭ್ಯರ್ಥಿಗಳ ಗೆಲುವಿನಲ್ಲಿ ಒಬಿಸಿ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಕ್ಷೇತ್ರದಲ್ಲಿ ಒಬಿಸಿ ಬಲದಿಂದಾಗಿ ಆರ್‌ಜೆಡಿ ನೆಲೆ ಭದ್ರವಾಗಿದೆ.

ಕ್ಷೇತ್ರದಲ್ಲಿ 2015ರ ಚುನಾವಣೆಯಲ್ಲಿ  ಬಿಜೆಪಿಯ ಆಶಾ ದೇವಿ ಸಿಂಹ ಅವರು ಆರ್‌ಜೆಡಿಯ ರಾಜ್‌ ಕಿಶೋರ್ ಯಾದವ್ ಅವರ ವಿರುದ್ಧ 5,209 ಮತಗಳ ಅಂತರದಲ್ಲಿ ಗೆದ್ದಿದ್ದರು. ಆದರೆ, 2020ರ ಚುನಾವಣೆಯಲ್ಲಿ ಕ್ಷೇತ್ರವನ್ನು ಆರ್‌ಜೆಡಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಆರ್‌ಜೆಡಿ ಅಭ್ಯರ್ಥಿ ರಿತ್ ಲಾಲ್ ರೇ ಅವರು ಆಶಾದೇವಿ ಅವರನ್ನು 15,924 ಮತಗಳ ಅಂತರದಿಂದ ಸೋಲಿಸಿದ್ದರು.

ಈಗ, ಆಶಾ ದೇವಿ ಅವರಿಗೆ ಟಿಕೆಟ್ ನಿರಾಕರಿಸಿರುವ ಬಿಜೆಪಿ, ರಾಮ್ ಕೃಪಾಲ್ ಅವರನ್ನು ಕಣಕ್ಕಿಳಿಸಿದೆ. ಆರ್‌ಜೆಡಿಯಿಂದ ಹಾಲಿ ಶಾಸಕ ರಿತ್‌ ಲಾಲ್ ಅವರೇ ಕಣದಲ್ಲಿದ್ದಾರೆ. ಈ ಇಬ್ಬರ ನಡುವಿನ ಹೋರಾಟದಲ್ಲಿ ಜೆಎಸ್‌ಪಿ ಅಭ್ಯರ್ಥಿಯೂ ಸ್ಪರ್ಧೆಯಲ್ಲಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...