ಬಿಹಾರದಲ್ಲಿ ಗುರುವಾರ 1ನೇ ಹಂತದ ಮತದಾನ ನಡೆಯುತ್ತಿದೆ. ಮಧ್ಯಾಹ್ನದ ವೇಳೆಗೆ 43% ಮತದಾನವಾಗಿದೆ ಎಂದು ತಿಳಿದುಬಂದಿದೆ. ಈ ನಡುವೆ, ಮತದಾನದ ಸಮಯದಲ್ಲಿ ಪೊಲೀಸ್ ಸಿಬ್ಬಂದಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಮತದಾರರನ್ನು ಬೆದರಿಸುತ್ತಿದ್ದಾರೆ. ಮತಗಟ್ಟೆಗಳಲ್ಲಿ ಮಹಾಘಟಬಂಧನ್ ಮೈತ್ರಿಕೂಟದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಆರೋಪಿಸಿದೆ.
ಪೊಲೀಸರು ಮತ್ತು ಬಿಜೆಪಿಗರು ಮತದಾರರಿಗೆ ಬೆದರಿಕೆ ಹಾಕುತ್ತಿರುವ ಕೆಲವು ದೃಶ್ಯಗಳನ್ನು ಹಂಚಿಕೊಂಡಿರುವ ಆರ್‌ಜೆಡಿ, “ಪೊಲೀಸ್ ಅಧಿಕಾರಿಗಳು ಮೊಹಿಯುದ್ದೀನಗರ್ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 106, 107, 108ರಲ್ಲಿ ಪೊಲೀಸ್ ಸಿಬ್ಬಂದಿ ಹಲವು ಮನೆಗಳಿಗೆ ನುಗ್ಗಿ ಯಾವುದೇ ಕಾರಣವಿಲ್ಲದೆ ಮತದಾರರನ್ನು ಕ್ರೂರವಾಗಿ ಥಳಿಸಿ ಬೆದರಿಕೆ ಹಾಕುತ್ತಿದ್ದಾರೆ” ಎಂದು ಆರೋಪಿಸಿದೆ.
At booth no. 106, 107, 108 of Mohiuddinagar assembly constituency, police personnel have entered different households and are brutally beating and threatening voters without any valid reason.@CEOBihar @ECISVEEP pic.twitter.com/gDRGEItckq
— Rashtriya Janata Dal (@RJDforIndia) November 6, 2025
ಬಿಜೆಪಿ ಕಾರ್ಯಕರ್ತರು ತಮ್ಮ ಸದಸ್ಯರ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿರುವ ಪಕ್ಷ, “ಸೋಲಿನ ಹತಾಶೆಯಿಂದ ಬಿಜೆಪಿ ಗೂಂಡಾಗಳು ನಮ್ಮ ಕಾರ್ಯಕರ್ತರ ಮೇಲೆ ದಾಳಿ ಮಾಡುತ್ತಿದ್ದಾರೆ. ಸರೈನ ಮಾರಿಚಾ ಚೌಕ್‌ನಲ್ಲಿ, ಆರ್‌ಜೆಡಿ ಕಾರ್ಯಕರ್ತನ ಮೇಲೆ ಬಿಜೆಪಿ ಗೂಂಡಾಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ! ಈ ಅಪರಾಧಿಗಳನ್ನು ತ್ವರಿತವಾಗಿ ಬಂಧಿಸುವ ಮೂಲಕ ಚುನಾವಣಾ ಆಯೋಗವು ತನ್ನ ನಿಷ್ಪಕ್ಷಪಾತತೆಯನ್ನು ಸಾಬೀತುಪಡಿಸಲಿ!” ಎಂದು ಆಗ್ರಹಿಸಿದೆ.
हार की हताशा में भाजपाइयों की गुंडागर्दी शुरू!
— Rashtriya Janata Dal (@RJDforIndia) November 6, 2025
मरीचा चौक, सराय में राजद कार्यकर्ता पर भाजपाई गुंडे और उसके भाई ने चाकू से हमला किया!
इन अपराधियों की जल्द गिरफ्तारी कर चुनाव आयोग अपनी निष्पक्षता सिद्ध करे! @CEOBihar @ECISVEEP pic.twitter.com/cLeh3VkNad
ಘಟನೆಯೊಂದನ್ನು ಚಿತ್ರೀಕರಿಸಿರುವ ಸ್ಥಳೀಯ ವ್ಯಕ್ತಿಯೊಬ್ಬರು, “ಪೊಲೀಸರು ಮತದಾರರನ್ನು ಮತಗಟ್ಟೆಗಳಿಂದ ದೂರವಿಡುತ್ತಿದ್ದಾರೆ ಮತ್ತು ಬೆದರಿಸುತ್ತಿದ್ದಾರೆ” ಎಂದು ಆರೋಪಿಸಿರುವುದು ವಿಡಿಯೋದಲ್ಲಿ ಕೇಳಿಬಂದಿದೆ. ಅವರು ಹಿಂದಿಯಲ್ಲಿ ‘ಘರ್ ಸೆ ಕಾಫಿ ದುರ್ ಘರ್ ಸೆ ಘು ಘು ಕೆ ಪ್ರಶಾಸನ್ ಕಿ ಗುಂಡಗರ್ದಿ ಚಾಲು ಹೈ. ಮತದಾರರು ಕೋ ದಾರಯಾ ಧಮ್ಕಾಯಾ ಜಾ ರಾ ಹೈ’ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗವು ಈ ಆರೋಪಗಳ ಕುರಿತು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ,




