ಬಿಹಾರದಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಮತ್ತೊಮ್ಮೆ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಾಗಿದೆ. ಎನ್‌ಡಿಎ ಮುನ್ನಡೆಯ ಬಗ್ಗೆ ಪ್ರತಿಕ್ರಿಯಿಸಿರುವ ರಾಜಸ್ಥಾನ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್, ‘ಇದು ಮಹಿಳಾ ಮತದಾರರಿಗೆ ಹಣ ಕೊಟ್ಟು ಪಡೆದ ಗೆಲುವು’ ಎಂದು ಟೀಕಿಸಿದ್ದಾರೆ.
“ಚುನಾವಣೆಗೂ ಮುನ್ನ ಬಿಹಾರದ ಮಹಿಳಾ ಮತದಾರರಿಗೆ ತಲಾ 10,000 ರೂ.ಗಳನ್ನು ನೀಡಲಾಗಿದೆ. ಮಹಿಳೆಯರಿಗೆ ಹಣದ ಆಮಿಷವೊಡ್ಡಿದೆ. ಚುನಾವಣಾ ಪ್ರಚಾರದ ಸಮಯದಲ್ಲೂ ಇದು ನಡೆದಿದೆ. ಆದರೆ, ಚುನಾವಣಾ ಆಯೋಗವು ಮೂಕ ಪ್ರೇಕ್ಷಕನಾಗಿತ್ತು” ಎಂದು ಆರೋಪಿಸಿದ್ದಾರೆ.
“ಬಿಹಾರ ಫಲಿತಾಂಶಗಳು ನಿರಾಶಾದಾಯಕವಾಗಿವೆ. ಬಿಹಾರದಲ್ಲಿ ನಾನು ಕಂಡಂತೆ, ಹಣ ಹಂಚಿಕೆ ನಡೆಯುತ್ತಲೇ ಇತ್ತು. ಆದರೆ, ಚುನಾವಣಾ ಆಯೋಗ ಅದನ್ನು ನಿಲ್ಲಿಸಲಿಲ್ಲ” ಎಂದು ಎನ್‌ಐಎಗೆ ನೀಡಿದ ಪ್ರತಿಕ್ರಿಯೆಯಲ್ಲಿ ದೂರಿದ್ದಾರೆ.




