ಬಿಹಾರವು ಚಂಡೀಗಢದಂತೆ ಅಲ್ಲ; ಎಕ್ಸಿಟ್ ಪೋಲ್‌ ತಿರಸ್ಕರಿಸಿದ ದೀಪಾಂಕರ್ ಭಟ್ಟಾಚಾರ್ಯ

Date:

ಬಿಹಾರದಲ್ಲಿ ಎನ್‌ಡಿಎ ಬಹುಮತ ಪಡೆಯುತ್ತದೆ ಎಂದು ಎಲ್ಲ ‘ಎಕ್ಸಿಟ್‌ ಪೋಲ್‌’ಗಳು (ಮತದಾನೋತ್ತರ ಸಮೀಕ್ಷೆ) ಹೇಳುತ್ತಿವೆ. ಆದರೆ, ಈ ಸಮೀಕ್ಷಾ ವರದಿಗಳನ್ನು ವಿಶ್ಲೇಷಿಸಿದರೆ ಅಥವಾ ಕೆದಕಿ ನೋಡಿದರೆ, ಗ್ರೌಂಡ್‌ ರಿಯಾಲಿಟಿ ಬೇರೆಯೇ ಇದೆ. ನಮ್ಮ ಆತಂರಿಕ ವರದಿಗಳು ಬಿಹಾರವು ಬದಲಾವಣೆಯನ್ನು ಬಯಸಿದೆ. ಬಿಹಾರಿಗರು ಬದಲಾವಣೆಗಾಗಿ ಮತ ಚಲಾಯಿಸಿದ್ದಾರೆ ಎಂದು ಸಿಪಿಐ-ಎಂಎಲ್‌ನ ನಾಯಕ ದೀಪಾಂಕರ್ ಭಟ್ಟಾಚಾರ್ಯ ಹೇಳಿದ್ದಾರೆ. ಎರಡನೇ ಹಂತದ ಮತದಾನ ಮುಗಿದ ಬಳಿಕ, ಮಂಗಳವಾರ ಬಿಡುಗಡೆಯಾದ ಎಕ್ಸಿಟ್‌ ಪೋಲ್‌ ವರದಿಗಳನ್ನು ಅವರು ಸಾರಸಗಟಾಗಿ ತಿರಸ್ಕರಿದ್ದಾರೆ.

ಮಂಗಳವಾರ ಹೊರಬಂದ, ಮತದಾನೋತ್ತರ ಸಮೀಕ್ಷಾ ವರದಿಗಳು ಬಿಹಾರದಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಬಹುಮತ ಪಡೆಯುತ್ತದೆ. ಸುಮಾರು 130ರಿಂದ 142 ಸ್ಥಾನಗಳನ್ನು ಎನ್‌ಡಿಎ ಗೆಲ್ಲಲಿದೆ ಎಂದು ಹೇಳುತ್ತಿವೆ. ಆದರೆ, ಈ ಸಮೀಕ್ಷೆಯನ್ನು ರಾಜಕೀಯ ವಿಶ್ಲೇಷಕರು, ಬಿಹಾರದ ಮಹಾಘಟಬಂಧನ್ ಮೈತ್ರಿ ಪಕ್ಷಗಳು ಹಾಗೂ ರಾಜಕೀಯ ಚಿಂತಕರು ಅಲ್ಲಗಳೆದಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಗಮನಾರ್ಹ ಪಾತ್ರ ವಹಿಸಿರುವ ಸಿಪಿಐ-ಎಂಎಲ್‌ ಕೂಡ ‘ಎಕ್ಸಿಟ್‌ ಪೋಲ್‌’ಅನ್ನು ತಿರಸ್ಕರಿಸಿದೆ. “ನಾನು ದೃಢವಾಗಿ ಹೇಳುತ್ತೇನೆ. ಭಾರತದಲ್ಲಿ ಚುನಾವಣೆಗಳು ಸರಣಿ ಅಡಚಣೆಗಳ ಓಟವಾಗಿದೆ. ಎಸ್‌ಐಆರ್ ಎಂಬ ಬೃಹತ್ ಅಡಚಣೆಯನ್ನು ಯಶಸ್ವಿಯಾಗಿ ಬಿಹಾರಿಗರು ದಾಟಿದ್ದಾರೆ. ತಮ್ಮ ಮತಗಳನ್ನು ರಕ್ಷಿಸಿಕೊಳ್ಳುವ ಭಾಗವಾಗಿ ಮತ ಚಲಾಯಿಸಿದ್ದಾರೆ. ಈಗ, ಅವರು ಮೂರನೇ ಅಡಚನೆಯನ್ನು ಎದುರಿಸಿ, ಯಶಸ್ಸು ಕಾಣಬೇಕಿದೆ. ಅದು, ನಿಖರವಾದ ಮತ ಎಣಿಕೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ” ಎಂದು ಭಟ್ಟಾಚಾರ್ಯ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಎಕ್ಸಿಟ್‌ ಪೋಲ್‌ ವರದಿಗಳು ಎಣಿಕೆ ಪ್ರಕ್ರಿಯೆಯ ಸಮಯದಲ್ಲಿ ಮಹಾಘಟಬಂಧನ್ ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡುವ ಸಾಧ್ಯತೆಗಳಿವೆ. ಆದರೆ, ಹಾಗೆ ಆಗಬಾರದು, ಈ ವರದಿಗಳಿಂದ ಯಾರೂ ಗೊಂದಲಕ್ಕೀಡಾಗಬಾರದು, ನಿರಾಶೆಗೊಳ್ಳಬಾರದು. ಮತ ಎಣಿಕೆಯೂ ನಮ್ಮ ಮುಂದಿರುವ ಪ್ರಮುಖ ಅಡಚಣೆಯಾಗಿದೆ. ಮತ ಎಣಿಕೆ ವೇಳೆ, ಎಲ್ಲರೂ ಜಾಗರೂಕರಾಗಿರಬೇಕು, ಎಚ್ಚರ ವಹಿಸಬೇಕು. ಚಂಡೀಗಢ ಮಾದರಿಯಲ್ಲಿ ಎಣಿಕೆ ನಡೆಸಿ, ಬಿಹಾರ ಫಲಿತಾಂಶವನ್ನು ತಿರುಚಲು ಸಾಧ್ಯವಿಲ್ಲ. ಪ್ರತಿ ಮತವನ್ನು ಎಣಿಕೆ ಮಾಡಲಾಗಿದೆಯೆ ಎಂಬುದನ್ನು ಮಹಾಘಟಬಂಧನ್‌ನ ಸ್ಥಳೀಯ ಕಾರ್ಯಕರ್ತರು ಖಚಿತ ಪಡಿಸಿಕೊಳ್ಳಬೇಕು. ಪ್ರತಿ ಮತಗಳ ಎಣಿಕೆಯು ಪಾರದರ್ಶಕವಾಗಿ ನಡೆದರೆ, ಅಂತಿಮ ಗೆಲುವು ಮಹಾಘಟಬಂಧನ್‌ದೇ ಆಗಿರುತ್ತದೆ” ಎಂದು ಭಟ್ಟಾಚಾರ್ಯ ಖಚಿತವಾಗಿ ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಮತದಾನೋತ್ತರ ಸಮೀಕ್ಷೆಗಳು ವಿಫಲವಾಗುತ್ತಿರುವುದೇ ಹೆಚ್ಚು. ಸಮೀಕ್ಷಾ ವರದಿಗಳು ಏನು ಹೇಳುತ್ತವೆಯೋ, ಅದಕ್ಕೆ ತದ್ವಿರುದ್ಧವಾಗಿ ಫಲಿತಾಂಶಗಳು ಬರುತ್ತವೆ. ಇದು ಕಳೆದ ಐದಾರು ಚುನಾವಣೆಗಳಲ್ಲಿ ಸ್ಪಷ್ಟವಾಗಿದೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಒಟ್ಟು 288 ಸ್ಥಾನಗಳ ಪೈಕಿ, ಬಿಜೆಪಿ ನೇತೃತ್ವದ ಮಹಾಯುತಿ 150ರಿಂದ 170 ಸ್ಥಾನಗಳನ್ನು ಗೆಲ್ಲುತ್ತವೆ ಎಂದು ‘ಎಕ್ಸಿಟ್‌ ಪೋಲ್‌’ಗಳು ಹೇಳಿದ್ದವು. ಆದರೆ, ಮಹಾಯುತಿಯು 235 ಸ್ಥಾನಗಳನ್ನು ಗೆದ್ದಿತು.

ದೆಹಲಿಯ 70 ಕ್ಷೇತ್ರಗಳಲ್ಲಿ ಬಿಜೆಪಿ 60ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ‘ಎಕ್ಸಿಟ್ ಪೋಲ್‌’ಗಳು ಹೇಳಿದ್ದವು. ಆದರೆ, ಬಿಜೆಪಿ 48 ಸ್ಥಾನಗಳನ್ನಷ್ಟೇ ಗೆದ್ದಿತು.

ಹರಿಯಾಣದಲ್ಲಿ ಕಾಂಗ್ರೆಸ್‌ ಸರ್ಕಾರ ರಚಿಸುತ್ತದೆ. ಕಾಂಗ್ರೆಸ್‌ ಸುಮಾರು 64 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ, ಬಿಜೆಪಿಯೇ 48 ಸ್ಥಾನಗಳನ್ನು ಗೆದ್ದು, ಬಹುಮತ ಗಳಿಸಿ ಸರ್ಕಾರ ರಚಿಸಿದರೆ, ಕಾಂಗ್ರೆಸ್‌ ಕೇವಲ 37 ಸ್ಥಾನಗಳಲ್ಲಿ ಮಾತ್ರವೇ ಗೆಲುವು ಸಾಧಿಸಿತು.

ಜಾರ್ಖಂಡ್‌ನ ಒಟ್ಟು 81 ಸ್ಥಾನಗಳಲ್ಲಿ ಎನ್‌ಡಿಎ 40 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ, ಇಂಡಿಯಾ ಕೂಡ 50 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿತು.

ಇನ್ನು, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೇಳುತ್ತಿದ್ದಂತೆ ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆಗಳು ಏಕಪಕ್ಷೀಯವಾಗಿ ತೀರ್ಪು ನೀಡಿದ್ದವು. ಆರೆ, ಎನ್‌ಡಿಎ ಗೆಲ್ಲಲು ಸಾಧ್ಯವಾಗಿದ್ದು, ಕೇವಲ 293 ಸ್ಥಾನಗಳನ್ನು ಮಾತ್ರ. ಅಂದರೆ, ಬರೋಬ್ಬರಿ 110ಕ್ಕೂ ಹೆಚ್ಚು ಸ್ಥಾನಗಳ ವ್ಯತ್ಯಾಸವಿತ್ತು.

ಕಳೆದ ಐದು ಚುನಾವಣೆಗಳಲ್ಲಿಯೂ ಯಾವೊಂದು ಚುನಾವಣೋತ್ತರ ಸಮೀಕ್ಷೆಗಳು ನಿಖರವಾದ ಫಲಿತಾಂಶವನ್ನು ಅಂದಾಜಿಸಲು ಸಾಧ್ಯವಾಗಿಲ್ಲ. ಎಲ್ಲವೂ ವಿಫಲವಾಗಿವೆ. ಹೀಗಾಗಿ, ಜನರು ‘ಎಕ್ಸಿಟ್‌ ಪೋಲ್‌’ಗಳ ಮೇಲಿನ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಮುಖ್ಯವಾಗಿ, ಎಕ್ಸಿಟ್‌ ಪೋಲ್‌ಗಳನ್ನು ವಿಪಕ್ಷಗಳು ಅಲ್ಲಗಳೆಯುತ್ತಲೇ ಬಂದಿವೆ.

ಈಗ, ಬಿಹಾರ ಚುನಾವಣೆಯಲ್ಲಿ ಬಂದಿರುವ ಸಮೀಕ್ಷಾ ವರದಿಯು ಅಕ್ಷರಶಃ ಗ್ರೌಂಡ್‌ ರಿಯಾಲಿಟಿಗೆ ದೂರವಾಗಿವೆ ಎಂದು ಎಲ್ಲರೂ ವಾದಿಸುತ್ತಿದ್ದಾರೆ. ಹಾಗಾಗಿಯೇ, ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ‘ಎಕ್ಸಿಟ್‌ ಪೋಲ್‌’ಅನ್ನು ಅಪಹಾಸ್ಯ ಮಾಡಿದ್ದಾರೆ. ‘ಇವುಗಳನ್ನು ಅಮಿತ್ ಶಾ ಬರೆದಿದ್ದಾರೆ, ಪ್ರಧಾನಿ ಕಚೇರಿಯಿಂದ ಕಳಿಸಲಾಗಿದೆ, ಮಾಧ್ಯಮಗಳು ಪ್ರಕಟಿಸಿವೆ’ ಎಂದು ವ್ಯಂಗ್ಯವಾಡಿದ್ದಾರೆ.

ಈ ಲೇಖನ ಓದಿದ್ದೀರಾ?: ರಾಷ್ಟ್ರಗೀತೆ, ರಾಷ್ಟ್ರಧ್ವಜ ಒಪ್ಪದವರು ದೇಶದ್ರೋಹಿಗಳಲ್ಲವೇ?

ಈ ಬಾರಿ ಬಿಹಾರದಲ್ಲಿ ಮಹಾಘಟಬಂಧನ್‌ ಸರ್ಕಾರ ರಚಿಸುವುದು ಖಚಿತವೆಂದು ರಾಜಕೀಯ ವಿಶ್ಲೇಷಕರು ಸೇರಿದಂತೆ ಹಲವರು ನಂಬಿಸಿದ್ದಾರೆ. ಇದನ್ನೇ, ಸಿಪಿಐ-ಎಂಎಲ್‌ನ ನಾಯಕ ದೀಪಾಂಕರ್ ಭಟ್ಟಾಚಾರ್ಯ ಅವರು ಎಳೆಎಳೆಯಾಗಿ ವಿವರಿಸಿದ್ದಾರೆ.

“ಬಿಜೆಪಿ ಚಂಡೀಗಢ ಮತ್ತು ಮಹಾರಾಷ್ಟ್ರದಲ್ಲಿ ಮಾಡಿದಂತೆ ಬಿಹಾರದಲ್ಲಿಯೂ ಮಾಡಲು ನೋಡುತ್ತಿದ್ದಾರೆ. ಆದರೆ, ಬಿಹಾರದ ಜನರು ಜಾರ್ಖಂಡ್‌ ಮಾದರಿಯನ್ನು ಅನುಸರಿಸಿದ್ದಾರೆ. ಜಾರ್ಖಂಡ್‌ ಜನರು ಬಿಜೆಪಿಯ ವಿಭಜಕ ಧೋರಣೆ-ನಿರೂಪಣೆಯನ್ನು ತಿರಸ್ಕರಿಸಿದರು. ಅಂತೆಯೇ, ಬಿಹಾರಿಗರೂ ಕೂಡ ಬಿಜೆಪಿ-ಜೆಡಿಯು ಜನವಿರೋಧಿ ಧೋರಣೆಯನ್ನು ತಿರಸ್ಕರಿಸಿದ್ದಾರೆ” ಎಂದು ಭಟ್ಟಾಚಾರ್ಯ ಹೇಳಿದ್ದಾರೆ.

“ಆಸ್ತಿಯಿಂದ ಶಿಕ್ಷಣದವರೆಗೆ ಸುಧಾರಣೆಗಳನ್ನು ಜಾರಿಗೊಳಿಸಲು ಬಿಜೆಪಿ ತಡೆಯಾಗಿದೆ. ನಿತೀಶ್‌ ಅವರ ಜೆಡಿಯು ಕಾರ್ಯಸೂಚಿಗಳನ್ನು ಜಾರಿಗೊಳಿಸಲು ಬಿಜೆಪಿ ಬಿಡುತ್ತಿಲ್ಲ. ತನ್ನ ನೀತಿಗಳನ್ನು ಮಾತ್ರವೇ ಜಾರಿಗೆ ತಂದಿದೆ. ಬಿಜೆಪಿ-ಜೆಡಿಯು ಆಡಳಿತದಿಂದ ಒಬಿಸಿಗಳು, ಇಬಿಸಿಗಳು ಮತ್ತು ದಲಿತರು ಭ್ರಮನಿರಸನಗೊಂಡಿದ್ದಾರೆ. ಬಿಜೆಪಿಯ ಕಾರ್ಪೊರೇಟ್ ಕಾರ್ಯಸೂಚಿ – ‘ಎಲ್ಲವೂ ಅದಾನಿಗಾಗಿ’ – ಎಂಬುದನ್ನು ಬಿಹಾರಿಗರು ಅರಿತಿದ್ದಾರೆ. ಬಿಹಾರ ಜನರ ತೀರ್ಪು ಬಿಜೆಪಿ ವಿರುದ್ಧ ಸ್ಪಷ್ಟವಾಗಿದೆ” ಎಂದು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...