ಅಬಕಾರಿ ನೀತಿ ಪ್ರಕರಣದ ಸಾಕ್ಷಿಗಳ ಪೈಕಿ ಓರ್ವ ಸಾಕ್ಷಿ ಮತ್ತು ಬಿಜೆಪಿ ನಡುವೆ ಸಂಬಂಧವಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಶನಿವಾರ ಆರೋಪಿಸಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಎಎಪಿ ಸವಾಲು ಹಾಕಿದೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಎಎಪಿ ನಾಯಕ, ಸಚಿವರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್, “ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ಮಾಗುಂಟ ಶ್ರೀನಿವಾಸುಲು ರೆಡ್ಡಿ ಅವರ ಪುತ್ರ ರಾಘವ ಮಾಗುಂಟ ರೆಡ್ಡಿ ಅವರನ್ನು ಬಿಜೆಪಿಯ ಮಿತ್ರ ಪಕ್ಷ ಟಿಡಿಪಿ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿದೆ” ಎಂದು ಆರೋಪಿಸಿದ್ದಾರೆ.
“ಸಾಕ್ಷಿ ಮತ್ತು ಬಿಜೆಪಿ ನಡುವಿನ ಸಂಬಂಧವನ್ನು ದಾಖಲಿಸಲು ಮತ್ತು ತನಿಖೆ ನಡೆಸಲು ಇಡಿ ಸ್ವತಂತ್ರವಾಗಿದೆಯೇ ಎಂದು ಇಡಿ ಸವಾಲು ಹಾಕುತ್ತೇನೆ. ಮದ್ಯ ವ್ಯಾಪಾರಿಗಳ ‘ಸೌತ್ ಲಾಬಿ’ ಎಂದು ಕರೆಯಲ್ಪಡುವವರೊಂದಿಗೆ ಬಿಜೆಪಿ ಸಂಪರ್ಕವಿದೆ” ಎಂದು ಆರೋಪಿಸಿದರು.
ಅಬಕಾರಿ ನೀತಿ ಪ್ರಕರಣ: ದೆಹಲಿ ಸಚಿವ ಕೈಲಾಶ್ ಗಹ್ಲೋಟ್‌ಗೆ ಇಡಿ ಸಮನ್ಸ್
ಎಎಪಿಯ ಆರೋಪಕ್ಕೆ ಬಿಜೆಪಿಯಿಂದ ಯಾವುದೇ ರೀತಿಯ ತಕ್ಷಣದ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ.




