ಕೇರಳದ ವಲಯಾರ್‌ನಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಪಾಲಕ್ಕಾಡ್‌ನ ಪುತ್ತುಶ್ಯೇರಿಯಲ್ಲಿ ಮಕ್ಕಳ ಕ್ರಿಸ್‌ಮಸ್ ಕ್ಯಾರೋಲ್ ಗುಂಪಿನ ಮೇಲೆ ದಾಳಿ ಮಾಡಿದ ಬಿಜೆಪಿ–ಆರ್‌ಎಸ್‌ಎಸ್ ಸದಸ್ಯನನ್ನು ಬಂಧಿಸಲಾಗಿದೆ. ಇದೇ ಪ್ರದೇಶದಲ್ಲಿ ಛತ್ತೀಸ್‌ಗಢದ ದಲಿತ ವಲಸೆ ಕಾರ್ಮಿಕನ ಹತ್ಯೆ ಮಾಡಲಾಗಿತ್ತು.
ಆರೋಪಿ ಪುತ್ತುಶ್ಯೇರಿಯ ಕಲಾದಿತರ ನಿವಾಸಿ ಅಶ್ವಿನ್ ರಾಜ್‌ನನ್ನು ಕಸಬಾ ಪೊಲೀಸರು ವಶಕ್ಕೆ ಪಡೆದಿದ್ದು, ಆತ ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಸಕ್ರಿಯ ಸದಸ್ಯ ಎಂದು ಹೇಳಲಾಗಿದೆ. ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆಯಿದೆ.
ಇದನ್ನು ಓದಿದ್ದೀರಾ? ಕೇರಳ | ಕ್ರಿಸ್‌ಮಸ್ ಆಚರಣೆಗೆ ಸಂಘಪರಿವಾರ ಅಡ್ಡಿ; ಗೋದಲಿ ಧ್ವಂಸ, ಬೆದರಿಕೆ
ಸೋಮವಾರ ತಡರಾತ್ರಿ ಪುತ್ತುಶ್ಯೇರಿಯ ಸುರಭಿ ನಗರದಲ್ಲಿ ಈ ಘಟನೆ ನಡೆದಿದ್ದು, ಅಶ್ವಿನ್ ರಾಜ್ ಮತ್ತು ಇತರ ಇಬ್ಬರು ಸುಮಾರು 10 ಜನರಿದ್ದ ಕ್ರಿಸ್‌ಮಸ್ ಕ್ಯಾರೋಲ್ ಗುಂಪಿನ ಮೇಲೆ ದಾಳಿ ನಡೆಸಿದೆ. ಈ ಪ್ರದೇಶದಲ್ಲಿ ಕ್ಯಾರೋಲ್ ನಡೆಸಲು ಬಿಡಲ್ಲ ಎಂದು ಅಶ್ವಿನ್ ಮತ್ತು ಆತನ ಸ್ನೇಹಿತರು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.
ಗುಂಪು ಕ್ಯಾರೋಲ್ ವೇಳೆ ‘ಸಿಪಿಐ(ಎಂ)’ ಎಂದು ಉಲ್ಲೇಖಿಸಿದೆ. ಇದರಿಂದಾಗಿ ವಾಗ್ವಾದ ಉಂಟಾಗಿದೆ ಎಂದು ವರದಿಯಾಗಿದೆ. ದಾಳಿಕೋರರು ಬ್ಯಾಂಡ್ ಸೆಟ್ ಮತ್ತು ಇತರ ಸಂಗೀತ ಉಪಕರಣಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅದಾದ ಬಳಿಕ ಕ್ಯಾರೋಲ್ ಗುಂಪು ಕಸಬಾ ಪೊಲೀಸರಿಗೆ ದೂರು ನೀಡಿದೆ. ದಾಳಿಯನ್ನು ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರು ನಡೆಸಿದ್ದಾರೆ ಎಂದು ಆರೋಪಿಸಿದೆ.
ಘಟನೆಯ ರಾತ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ದಾಳಿಕೋರರು ಪರಾರಿಯಾಗಿದ್ದರು. ಕಸಬಾ ಇನ್ಸ್‌ಪೆಕ್ಟರ್ ಎಂ. ಸುಜಿತ್ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ದೃಢಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ಜಿನೊಮಿಕ್ ಸೀಕ್ವೆನ್ಸ್ಗೆ 45 ಸ್ಯಾಂಪಲ್ ಕಳಿಸಿದ ಆರೋಗ್ಯ ಇಲಾಖೆ
ಇನ್ನು ಸಿಪಿಐಎಂ ಪುತ್ತುಶ್ಶೇರಿ ಪ್ರದೇಶ ಸಮಿತಿಯ ನಾಯಕರು ದಾಳಿಗೆ ಒಳಗಾದವರು 180-15 ವರ್ಷದ ಮಕ್ಕಳು ಎಂದಿದ್ದಾರೆ. ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರು ಕೋಮು ಸಾಮರಸ್ಯವನ್ನು ಕದಡಲು ಮತ್ತು ಪ್ರದೇಶದ ಶಾಂತಿಯುತ ವಾತಾವರಣವನ್ನು ಭಂಗಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ವರ್ಷವೂ ಸಹ, ಪಾಲಕ್ಕಾಡ್‌ನ ಸರ್ಕಾರಿ ಶಾಲೆಯಲ್ಲಿ ಕ್ರಿಸ್‌ಮಸ್ ಆಚರಣೆಗೆ ಅಡ್ಡಿಪಡಿಸಿದ್ದಕ್ಕಾಗಿ ವಿಶ್ವ ಹಿಂದೂ ಪರಿಷತ್‌ನ ಇಬ್ಬರು ನಾಯಕರು ಮತ್ತು ಬಜರಂಗದಳದ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.





