ಬಿಜೆಪಿ ಹೊಸ ನಾಯಕರನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಬದಲಾಯಿಸಬೇಕು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಸಾಗರಿಕಾ ಘೋಸ್ ಹೇಳಿದ್ದಾರೆ.
“ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪೂರ್ಣವಾಗಿ ಕೇಂದ್ರಿಕರಿಸಿ ಪ್ರಚಾರವನ್ನು ಮಾಡಿದೆ. ಆದರೂ ಕೂಡಾ ಮೋದಿ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆಯಲು ಸಾಧ್ಯವಾಗಿಲ್ಲ. ಈ ಕಾರಣದಿಂದಾಗಿ ಅವರ ಸ್ಥಾನವನ್ನು ಬದಲಾಯಿಸಬೇಕು” ಎಂದು ಅಭಿಪ್ರಾಯಿಸಿದ್ದಾರೆ.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಸಾಗರಿಕಾ ಘೋಸ್, “ನರೇಂದ್ರ ಮೋದಿ ಅವರ ‘ಪ್ರಮಾಣ ವಚನ’ ವನ್ನು ಆಚರಿಸುತ್ತಿರುವ ಎಲ್ಲರಿಗೂ, ಭಾರತದ ಏಕೈಕ ಮಹಿಳಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ ಸಂದೇಶ” ಎಂದು ಟಿಎಂಸಿ ನಾಯಕಿ ಬರೆದುಕೊಂಡಿದ್ದಾರೆ.
To all those celebrating the “swearing in” of @narendramodi, a message from
India’s only woman chief minister @MamataOfficial . She switched off all her lights and sat in darkness during the entire so called “ceremony” for a “prime minister” who has resoundingly lost the mandate…— Sagarika Ghose (@sagarikaghose) June 10, 2024
“ಜನಾದೇಶವನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ಮತ್ತು ಜನರಿಂದ ತಿರಸ್ಕರಿಸಲ್ಪಟ್ಟ ಪ್ರಧಾನಿಗಾಗಿ ಸಮಾರಂಭ ನಡೆದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ತನ್ನ ಎಲ್ಲಾ ದೀಪಗಳನ್ನು ಆಫ್ ಮಾಡಿ ಕತ್ತಲೆಯಲ್ಲಿ ಕುಳಿತರು” ಎಂದು ಟಿಎಂಸಿ ನಾಯಕಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರನೇ ಬಾರಿಗೆ ಪ್ರಧಾನಿಯಾದ ಮೋದಿ, ಹೊಸ ಮನುಷ್ಯರಾಗುವರೇ?
“ವಾರಣಾಸಿಯಲ್ಲಿ ಬಹುತೇಕ ಸೋತ, ಅಯೋಧ್ಯೆಯಲ್ಲಿ ಸೋತ, ಸಂಪೂರ್ಣವಾಗಿ ತನ್ನ ಮೇಲೆಯೇ ಕೇಂದ್ರೀಕೃತವಾದ ಪ್ರಚಾರದ ಹೊರತಾಗಿಯೂ ಬಹುಮತವನ್ನು ಪಡೆಯಲು ಸಾಧ್ಯವಾಗದ ಮೋದಿಯನ್ನು ಬದಲಾಯಿಸಬೇಕು. ಬಿಜೆಪಿ ಹೊಸ ನಾಯಕರನ್ನು ಆಯ್ಕೆ ಮಾಡಲಿ” ಎಂದು ಸಾಗರಿಕಾ ಘೋಸ್ ಅಭಿಪ್ರಾಯಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಮೂರನೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿ ಮೋದಿ 2019ರಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಅಂತರದಲ್ಲಿ ಗೆಲುವು ಕಂಡಿದ್ದರು. ಆದರೆ ಈ ಬಾರಿ ಬರೀ 1,52,513 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.





