ಕಡೆಗೂ ಫಲಿಸಿತು ಬಿಜೆಪಿ ಹುನ್ನಾರ; ಬಿಹಾರ ಸಿಎಂ ಹುದ್ದೆ ಯಾರಿಗೆ?

Date:

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರ 20 ವರ್ಷಗಳ ಆಡಳಿತಕ್ಕೆ ಅವರ ಮಿತ್ರ ಪಕ್ಷ ಬಿಜೆಪಿಯೇ ಅಂತ್ಯ ಹಾಡಿದೆ. ನಿತೀಶ್‌ರನ್ನು ರಾಜ್ಯಸಭೆಗೆ ದಬ್ಬಲು ಬಿಜೆಪಿ ಸಿದ್ದವಾಗಿದೆ. ನಿತೀಶ್‌ ರಾಜ್ಯಸಭೆಗೆ ತೆರಳಿದರೆ, ಬಿಹಾರ ಆಡಳಿತ-ಅಧಿಕಾರವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ತಂತ್ರ ಹೆಣೆದಿದೆ.

ಗುರುವಾರ (ಮಾರ್ಚ್‌ 5), ನಿತೀಶ್‌ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಬಿಹಾರ ರಾಜಧಾನಿ ಪಟ್ನಾಕ್ಕೆ ಬಂದಿದ್ದಾರೆ. ಅಮಿತ್ ಶಾ ಮತ್ತು ನಿತೀಶ್‌ ನಡುವೆ ಮುಖ್ಯಮಂತ್ರಿ ಹುದ್ದೆಯ ಬದಲಾವಣೆ ಕುರಿತು ಚರ್ಚೆಗಳು ನಡೆಯುವ ಸಾಧ್ಯತೆಗಳಿವೆ. ವಿಧಾನಸಭೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಹೊಂದಿರುವ ಬಿಜೆಪಿ, ನಿತೀಶ್ ಅವರ ನಿರ್ಗಮನದ ನಂತರ, ತನ್ನದೇ ಮುಖ್ಯಮಂತ್ರಿಯನ್ನು ನೇಮಿಸುವುದು ಬಹುತೇಕ ಖಚಿತವಾಗಿದೆ. ಇದು ಬಿಜೆಪಿಗೆ ಬಿಹಾರದಲ್ಲಿ ಸಂಪೂರ್ಣ ಅಧಿಕಾರದ ನಿಯಂತ್ರಣ ಸಾಧಿಸುವ ಅವಕಾಶ ನೀಡಬಹುದು ಎಂಬ ಮಾತುಗಳೂ ಇವೆ.

ಅಂದಹಾಗೆ, ಬಿಹಾರ ಚುನಾವಣೆಯ ಸಮಯದಲ್ಲೇ ಮುಖ್ಯಮಂತ್ರಿ ಹುದ್ದೆಯನ್ನು ನಿತೀಶ್‌ರಿಂದ ಕಸಿದುಕೊಳ್ಳಲು ಹಣಿಸಿತ್ತು. ಅದಕ್ಕಾಗಿ, ಚುನಾವಣೆಯ ಉದ್ದಕ್ಕೂ ಎಲ್ಲಿಯೂ ಮೋದಿ-ಶಾ ಆದಿಯಾಗಿ ಬಿಜೆಪಿಯ ಯಾರೊಬ್ಬರೂ ನಿತೀಶ್‌ ಅವರೇ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಹೇಳಿರಲಿಲ್ಲ. ಮಹಾರಾಷ್ಟ್ರದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಏಕನಾಥ್ ಶಿಂಧೆ ಅವರಿಂದ ಮುಖ್ಯಮಂತ್ರಿ ಗಾಧಿ ಕಸಿದುಕೊಂಡಂತೆ ಬಿಹಾರದಲ್ಲಿಯೂ ಮಾಡಬೇಕೆಂದು ಬಿಜೆಪಿ ಭಯಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅದರಂತೆ, ನಿತೀಶ್‌ ಕುಮಾರ್ ಅವರ ಜೆಡಿಯು ಪಕ್ಷವು ಕಡಿಮೆ ಸ್ಥಾನಗಳಲ್ಲಿ ಗೆಲ್ಲುವಂತೆ ಮಾಡುವುದು, ಆ ಮೂಲಕ ಮುಖ್ಯಮಂತ್ರಿ ಹುದ್ದೆಯನ್ನು ನಿತೀಶ್‌ ಅವರಿಂದ ಕಸಿದುಕೊಂಡು, ಬಿಜೆಪಿಯಿಂದ ಹುದ್ದೆಗೆ ಯಾರನ್ನಾದರೂ ಪ್ರತಿಷ್ಠಾಪಿಸುವುದು ಬಿಜೆಪಿಯ ತಂತ್ರವಾಗಿತ್ತು. ಅಂತೆಯೇ, ಬಿಜೆಪಿಯೇ 89 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೂ, ಬಿಜೆಪಿಯ ಮುಖ್ಯಮಂತ್ರಿ ಹುದ್ದೆ ಕಸಿದುಕೊಳ್ಳುವ ತಂತ್ರ ನಿತೀಶ್‌ ಎದುರು ಫಲಿಸಿಲ್ಲ. ಅಂತಿಮವಾಗಿ, ನಿತೀಶ್‌ ಅವರಿಗೇ ಹುದ್ದೆಯನ್ನು ಬಿಟ್ಟುಕೊಟ್ಟಿತ್ತು.

ಆದರೂ, ತನ್ನ ತಂತ್ರವನ್ನು ನಿಲ್ಲಿಸದ ಬಿಜೆಪಿ, ಈಗ ಹೊಸ ತಂತ್ರದೊಂದಿಗೆ ಬಿಹಾರ ಮುಖ್ಯಮಂತ್ರಿ ಹುದ್ದೆಯನ್ನು ನಿತೀಶ್‌ರಿಂದ ಕಿತ್ತುಕೊಳ್ಳುತ್ತಿದೆ. ನಿತೀಶ್‌ರನ್ನು ರಾಜ್ಯಸಭೆಗೆ ದೂಡುತ್ತಿದೆ. ನಿತೀಶ್‌ ರಾಜ್ಯಸಭೆಗೆ ಹೋದರೆ, ಬಿಹಾರದಲ್ಲಿ ಸರ್ಕಾರದ ಸಂಪೂರ್ಣ ನಿಯಂತ್ರಣ ತನ್ನ ತೆಕ್ಕೆಗೆ ಸಿಗುತ್ತದೆ ಎಂಬುದು ಬಿಜೆಪಿ ಒಳಸಂಚು.

ನಿತೀಶ್‌ರನ್ನು ರಾಜ್ಯಸಭೆಗೆ ನೂಕಲು ಅವರ ಆರೋಗ್ಯ ಪರಿಸ್ಥಿತಿಯನ್ನು ಬಿಜೆಪಿ ದಾಳವಾಗಿ ಬಳಸಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಿತೀಶ್‌ ಅವರ ವರ್ತನೆಗಳು ಮುಜುಗರಕ್ಕೀಡು ಮಾಡುವ ರೀತಿಯಲ್ಲಿದ್ದವು. ಅವರು ವಯೋಸಹಜ ಮರೆಗುಳಿತನಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗಿತ್ತು. ಆದ್ದರಿಂದ, ಅವರು ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸಲಾರರು, ಅವರು ಸಂಸತ್ತಿಗೆ ತೆರಳಿದರೆ, ಅವರಿಗೆ ಕೆಲಸದ ಒತ್ತಡ ಕಡಿಮೆಯಾಗುತ್ತದೆ ಎಂಬ ನಿರೂಪಣೆಯನ್ನು ಹಣೆಯಲಾಗಿತ್ತು.

ಜೊತೆಗೆ, ದಶಕಗಳಿಂದ ಬಿಹಾರದ ರಾಜಕೀಯದಲ್ಲಿ ಪ್ರಭಾವ ಬೀರಿರುವ ಮೂವರು – ನಿತೀಶ್ ಕುಮಾರ್, ಲಾಲು ಪ್ರಸಾದ್ ಹಾಗೂ ದಿ. ಸುಶೀಲ್ ಮೋದಿ – ತುರ್ತು ಪರಿಸ್ಥಿತಿ ವಿರೋಧಿ ಆಂದೋಲನದಲ್ಲಿ ಒಟ್ಟಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ದಿ ರಾಮ್ ವಿಲಾಸ್ ಪಾಸ್ವಾನ್ ಮತ್ತು ಶರದ್ ಯಾದವ್ ಕೂಡ ಹಾಗೆಯೇ ಇದ್ದರು. ಈ ಐವರಲ್ಲಿ, ನಿತೀಶ್ ಕುಮಾರ್ ಅವರನ್ನು ಹೊರತುಪಡಿಸಿ, ಉಳಿದ ನಾಲ್ವರೂ ರಾಜ್ಯಸಭೆಯನ್ನು ಪ್ರವೇಶಿಸಿದ್ದರು. ನಿತೀಶ್‌, ವಿಧಾನಸಭೆ, ವಿಧಾನ ಪರಿಷತ್ತು ಹಾಗೂ ಲೋಕಸಭೆಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಆದರೆ, ಎಂದಿಗೂ ರಾಜ್ಯಸಭೆಯಲ್ಲಿ ಇರಲಿಲ್ಲ. ಆದ್ದರಿಂದ, ಅವರೂ ರಾಜ್ಯಸಭೆಯನ್ನು ಪ್ರವೇಶಿಸಲಿ ಎಂಬ ಮತ್ತೊಂದು ದಾಳವನ್ನೂ ಉರುಳಿಸಲಾಗಿದೆ.

ಈ ಲೇಖನ ಓದಿದ್ದೀರಾ? ಇರಾಕ್, ಲಿಬಿಯಾ, ಸಿರಿಯಾ, ಅಫ್ಘಾನ್‌ನಲ್ಲಿ ಅಮೆರಿಕ ಮಾಡಿದ ಅನಾಹುತಗಳೇನು? ಇಲ್ಲಿದೆ ಓದಿ…

ನಿತೀಶ್‌ ಅವರು ರಾಜ್ಯಸಭೆ ಪ್ರವೇಶಿಸುವ ಮೂಲಕ, ಬಿಹಾರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. ಅವರಿಂದ ತೆರವಾಗುವ ಹುದ್ದೆಗೆ ಬಿಜೆಪಿ ತನ್ನ ನಾಯಕರನ್ನು ಪ್ರತಿಷ್ಠಾಪಿಸಲು ಸಜ್ಜಾಗಿದೆ.

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಕೇಂದ್ರ ಸಚಿವ ನಿತ್ಯಾನಂದ ರೈ, ಬಿಹಾರ ಸಚಿವ ದಿಲೀಪ್ ಜೈಸ್ವಾಲ್, ವಿಜಯ್ ಕುಮಾರ್ ಸಿನ್ಹಾ ಹಾಗೂ ಸಂಜೀವ್ ಚೌರಾಸಿಯಾ ಮುಂತಾದ ಹೆಸರುಗಳು ಚರ್ಚೆಯಲ್ಲಿವೆ.  ಗೃಹ ಖಾತೆಯನ್ನು ಹೊಂದಿರುವ ಚೌಧರಿ, ಬಿಹಾರದ ಅತ್ಯಂತ ಪ್ರಭಾವಿ ಬಿಜೆಪಿ ನಾಯಕರಲ್ಲಿ ಒಬ್ಬರು ಮತ್ತು ಸರ್ಕಾರದಲ್ಲಿ ನಂಬರ್ 2 ಆಗಿದ್ದಾರೆ. ನಿತ್ಯಾನಂದ ರೈ ಕೇಂದ್ರ ಸರ್ಕಾರದಲ್ಲಿ ಕಿರಿಯ ಗೃಹ ಸಚಿವರಾಗಿದ್ದಾರೆ. ಅವರು ಬಿಹಾರ ಬಿಜೆಪಿಯ ಮಾಜಿ ಮುಖ್ಯಸ್ಥರೂ ಆಗಿದ್ದಾರೆ. ಇನ್ನು, ಜೈಸ್ವಾಲ್ ಮೂರು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ, ಬಿಹಾರ ಬಿಜೆಪಿ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಆದಾಗ್ಯೂ, ಬಿಜೆಪಿ ಅಚ್ಚರಿನ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು ಎನ್ನಲಾಗಿದೆ.

ನಿತೀಶ್‌ ಅವರು ರಾಜ್ಯಸಭೆಗೆ ತೆರಳಿದ ಬಳಿಕ, ಬಿಹಾರ ಸರ್ಕಾರದಲ್ಲಿ ಜೆಡಿಯು ಪಾತ್ರದ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದೇ ಸಮಯದಲ್ಲಿ, ನಿತೀಶ್ ಅವರ ಪುತ್ರ ನಿಶಾಂತ್ ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರಲಾಗುತ್ತಿದೆ. ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಚರ್ಚೆಗಳು ನಡೆಯುತ್ತಿವೆ.

ನಿತೀಶ್‌ರನ್ನು ರಾಜ್ಯ ರಾಜಕೀಯದಿಂದ ಹೊರಹಾಕಿ, ಮುಖ್ಯಮಂತ್ರಿ ಹುದ್ದೆಯನ್ನು ಕಸಿದುಕೊಳ್ಳುವ ಬಿಜೆಪಿಯ ತಂತ್ರವನ್ನು ವಿಪಕ್ಷಗಳು ‘ಭೀಕರ ಸಂಚು’ ಎಂದು ಕರೆದಿವೆ.

ಈ ಬದಲಾವಣೆಯಿಂದ ಬಿಹಾರದ ರಾಜಕೀಯ ಚಿತ್ರಣ ಸಂಪೂರ್ಣವಾಗಿ ಬದಲಾಗುತ್ತದೆ. ಹಿಂದಿ ಹೃದಯಭೂಮಿಯಲ್ಲಿ ಮುಖ್ಯಮಂತ್ರಿ ಹುದ್ದೆ ಸಿಗುವುದು ರಾಜಕೀಯವಾಗಿ ಬಿಜೆಪಿಗೆ ಮತ್ತೊಂದು ಮೈಲಿಗಲ್ಲಾಗಲಿದೆ. ಆದರೆ, ನಿತೀಶ್ ಇಲ್ಲದೆ ಜೆಡಿಯು ಭವಿಷ್ಯ ಸವಾಲಿನ ಹಾದಿ ಹಿಡಿಯುವ ಸಾಧ್ಯತೆ ದಟ್ಟವಾಗಿದೆ.

    ಪೋಸ್ಟ್ ಹಂಚಿಕೊಳ್ಳಿ:

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಪುದುಚೆರಿ ಚುನಾವಣೆ | ‘ಇಂಡಿಯಾ’ ಗೊಂದಲ ನಿವಾರಣೆ: ಕಾಂಗ್ರೆಸ್ 16, ಡಿಎಂಕೆ 14 ಕ್ಷೇತ್ರಗಳಲ್ಲಿ ಸ್ಪರ್ಧೆ

    ಪುದುಚೆರಿಯ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳ...

    ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

    ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

    ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

    ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

    ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...