ಕಾನೂನಿನ ಮುಂದೆ ಕೆಲವರು ಹೆಚ್ಚು ಸಮಾನರು | ಯಂಕ ನಾಣಿ ಸೀನ ನೀವು ಶಿಕ್ಷೆಗೆ ಸದಾ ಅರ್ಹರು..!!

Date:

ಪೋಕ್ಸೋ ಪ್ರಕರಣಗಳಲ್ಲೂ ನ್ಯಾಯಪೀಠ ಎಂದಾದರು ಹೀಗೆ ವರ್ತಿಸಿದೆಯೇ? ಒಬ್ಬ ಪ್ರಭಾವಿ ‘ಜಗದ್ಗುರು’ ಇಂತಹ ಪ್ರಕರಣದಲ್ಲಿ ಆಪಾದಿತರಾದಾಗಲೂ ನ್ಯಾಯಪೀಠ ಈ ರೀತಿ ‘ಕರುಣೆ’ ತೋರಿದ್ದನ್ನು ಈ ನಾಡು ಕಂಡಿಲ್ಲ. ಹಾಗಿರುವಾಗ ಒಬ್ಬ ರಾಜಕಾರಣಿಗೆ ಇಷ್ಟೆಲ್ಲಾ ಕರುಣೆ ತೋರಬೇಕಾದ ಕಾರಣವಾದರೂ ಏನು..?

“ಬಿ.ಎಸ್.ಯಡಿಯೂರಪ್ಪ ಯಾರೋ ಒಬ್ಬ ಯಂಕ, ನಾಣಿ, ಸೀನನಂತಹ ಸಾಮಾನ್ಯ ವ್ಯಕ್ತಿಯಲ್ಲ. ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ತಮ್ಮ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಸ್ವಾಭಾವಿಕವಾಗಿಯೇ ಅವರಿಗೆ ತನುವಿನ ಆಚರಣೆಗಳಿರುತ್ತವೆ. ಅಷ್ಟಕ್ಕೂ ನೀವು ಯಾರನ್ನು ಸಂತುಷ್ಟಿಗೊಳಿಸುವ ಸಲುವಾಗಿ ಬಂಧಿಸಲು ತವಕಿಸುತಿದ್ದೀರಿ…”

ಈ ವಾಕ್ಯಗಳನ್ನು ಇಂದಿನ ‘ಪ್ರಜಾವಾಣಿ’ಯಲ್ಲಿ ಓದಿ ಈ ಮಾತುಗಳನ್ನು ಯಾರೋ ಬಿಜೆಪಿಯ ನಾಯಕರೋ, ಯಡಿಯೂರಪ್ಪನವರ ವಂದಿಮಾಗಧರೋ ಹೇಳಿರಬೇಕು ಎಂದುಕೊಂಡೆ. ಅಂತೆಯೇ ‘ಕಾನೂನಿನ ಮುಂದೆ ಎಲ್ಲರೂ ಸಮಾನರು’ ಎಂಬ ಕನಿಷ್ಠ ಅರಿವಿಲ್ಲದವರು ಹೀಗೆ ಮಾತಾಡಿರಬೇಕು ಅಂದುಕೊಂಡೆ. ಈ ನಾಡಿನ ಯಂಕ, ನಾಣಿ, ಸೀನನಂತವರಿಗೇ ಬೇರೆ ಕಾನೂನು, ಯಡಿಯೂರಪ್ಪನಂತವರಿಗೇ ಬೇರೆ ಕಾನೂನು ಇದೆ ಎಂಬ ಅರಿವುಗೆಟ್ಟವರು ಈ ರೀತಿ ಮಾತಾಡಿರಬೇಕು ಅಂದುಕೊಂಡೆ. ಕಡೆಗೆ ಈ ಮಾತುಗಳನ್ನಾಡಿದ್ದು ಒಬ್ಬ ಹೈಕೋರ್ಟ್ ನ್ಯಾಯಮೂರ್ತಿ ಅದರಲ್ಲೂ ನ್ಯಾಯಪೀಠದಲ್ಲಿ ಕುಳಿತೇ ಇಂತಹ ಅಣಿಮುತ್ತುಗಳನ್ನು ಉದುರಿಸಿದ್ದಾರೆ ಎಂದು ತಿಳಿದು ದಿಗ್ಭ್ರಮೆಯಾಯಿತು!

ಅವಸರ ಅವಸರವಾಗಿ ಸಂವಿಧಾನದ ಅನುಚ್ಛೇದ 14ಅನ್ನು ತಿರುವು ಹಾಕಿದೆ… Under Article 14 of the Indian Constitution, all citizens are considered equal before the law. The laws are equally applicable to all without any discrimination on the basis of caste, religion, gender, and birth ಎಂದಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸರಿ, ಇದನ್ನೇನಾದರೂ ತಿದ್ದುಪಡಿ ಮಾಡಿ ‘ಕಾನೂನಿನ ಮುಂದೆ ಕೆಲವರು ಹೆಚ್ಚು ಸಮಾನರು’ ಎಂಬುದನ್ನು ಸೇರಿಸಿರಬಹುದೇ ಎಂದು ಹುಡುಕಾಡಿದೆ. ಆ ರೀತಿ ತಿದ್ದುಪಡಿ ಆದಂತೆ ಕಾಣಲಿಲ್ಲ. ಹಾಗಾದರೆ, learned lord ಅವರು ಯಾಕೆ ಹೀಗೆ ಮಾತಾಡಿದರು ಎಂಬುದು ಅರ್ಥವಾಗಲಿಲ್ಲ.

ಯಡಿಯೂರಪ್ಪನವರು ಮಾಜಿ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಅವರನ್ನು ನ್ಯಾಯಪೀಠ ವಿಶೇಷವಾಗಿ ಪರಿಗಣಿಸುವುದಾದರೆ, ಪ್ರಜ್ವಲ್ ರೇವಣ್ಣ ಕೂಡಾ ಲೋಕಸಭಾ ಸದಸ್ಯರಾಗಿದ್ದವರು, ಮಾಜಿ ಪ್ರದಾನ ಮಂತ್ರಿಗಳ ಮೊಮ್ಮಕ್ಕಳು, ಮಾಜಿ ಮುಖ್ಯಮಂತ್ರಿ, ಮಂತ್ರಿಗಳ ಅಣ್ಣನ ಮಗ ಮತ್ತು ಮಾಜಿ ಮಂತ್ರಿಗಳ ಮಗ. ಅಂತೆಯೇ ದರ್ಶನ್ ಕೂಡ ಖ್ಯಾತ ನಟ, ಲಕ್ಷಾಂತರ ಅಭಿಮಾನಿಗಳನ್ನು ಉಳ್ಳವರು. ಇವರಾರೂ ಯಂಕ, ಸೀನ, ನಾಣಿಯರಲ್ಲ. ಈ ಕಾರಣಕ್ಕೆ ಯಡಿಯೂರಪ್ಪನವರಿಗೆ ಕೊಟ್ಟಂತೆಯೇ ಈ ಪ್ರಭಾವಿಗಳಿಗೂ ನ್ಯಾಯಪೀಠ ಗೌರವಾದರಗಳನ್ನು ಕೊಡಬೇಕು.

ವಿಚಾರಣೆಯ ವೇಳೆಯಲ್ಲಿ ವಾದ ಪ್ರತಿವಾದದ ನಡುವೆ ನ್ಯಾಯಮೂರ್ತಿಗಳು ಇಂತಹ ಮಾತುಗಳನ್ನು ಹೇಳುವುದಕ್ಕೆ ನಾವು ಕಾನೂನಿನ ಬಾಷೆಯಲ್ಲಿ obiter dicta ಅನ್ನುತ್ತೇವೆ. ಇದರ ಅರ್ಥ ‘a judge’s expression of opinion uttered in court or in a written judgement, but not essential to the decision and therefore not legally binding as a precedent’ ಎಂದು. ಆದರೆ, ನ್ಯಾಯಮೂರ್ತಿಗಳ ಈ ಮಾತುಗಳನ್ನು ನಿರ್ಲಕ್ಷಿಸುವಂತಿಲ್ಲ.‌ ಯಡಿಯೂರಪ್ಪನವರಿಗೆ ಅವರ ಪ್ರಕರಣದ merits ಮತ್ತು circumstances ಆಧಾರದ ಮೇಲೆ ಜಾಮೀನು ನೀಡಿದ್ದನ್ನು ನಾವು ಪ್ರಶ್ನಿಸುತ್ತಿಲ್ಲ. ಆ ಆದೇಶದ ಬಗ್ಗೆ ನಮಗೆ ಗೌರವವಿದೆ.

ಆದರೆ, ‘ಈ ನ್ಯಾಯಾಲಯಗಳು ನಮ್ಮ ಪರವಾಗಿವೆ’ ಎಂದು ನಂಬಿರುವ ಯಂಕ, ನಾಣಿ, ಸೀನನಂತಹ ನಿರ್ಗತಿಕರಿಗೆ, ತೆರೆದ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯೊಬ್ಬರು‌ ಆಡಿದ ಮಾತುಗಳು ಕೇಳಿಸಿದರೆ, ಈ ದೇಶದ ನ್ಯಾಯಾಲಯಗಳ ಬಗ್ಗೆ ಏನು ಸಂದೇಶ ಹೋಗುತ್ತದೆ ಎನ್ನುವುದನ್ನು ನ್ಯಾಯಮೂರ್ತಿಗಳ ಸ್ಥಾನದಲ್ಲಿರುವವರು ಯೋಚಿಸಬೇಕಲ್ಲವೆ?

ಯಾವುದೋ ಸಿದ್ಧಾಂತಕ್ಕೆ, ಪಕ್ಷಕ್ಕೆ ಕಟ್ಟುಬಿದ್ದ ವಕೀಲರು ನ್ಯಾಯಮೂರ್ತಿಗಳಾಗಿ ಆಯ್ಕೆಯಾಗಿ ಪೀಠಕ್ಕೆ ಹೋದ ಮೇಲೆ ಅವರನ್ನು ಆ ಸಿದ್ದಾಂತ ಮತ್ತು ಪಕ್ಷದ ಹಿನ್ನೆಲೆಯನ್ನು ಹೊರತುಪಡಿಸಿ ಮುಕ್ತವಾಗಿ ಒಬ್ಬ ಅಪ್ಪಟ ನ್ಯಾಯಮೂರ್ತಿಯಾಗಿಯೇ ನೋಡಬೇಕಾಗುತ್ತದೆ. ಹಾಗೆಯೇ ನೋಡುತ್ತೇವೆ ಕೂಡ.‌ ಆದರೆ, ನ್ಯಾಯಮೂರ್ತಿಗಳು ನ್ಯಾಯಪೀಠಕ್ಕೆ ಹೋದ ಮೇಲೂ ಅವರು ಪೂರ್ವಗ್ರಹಿಗಳಾಗಿಯೇ ವರ್ತಿಸಿದರೆ, ಆ ನ್ಯಾಯಪೀಠ ಜನಸಾಮಾನ್ಯರ ಕಣ್ಣಲ್ಲಿ ತನ್ನ ಪಾವಿತ್ರ್ಯತೆ ಮತ್ತು ನಂಬಿಕೆಯನ್ನು ಕಳೆದುಕೊಳ್ಳುತ್ತದೆ.

ಈ ವರದಿ ಓದಿದ್ದೀರಾ?: ಬಿಎಸ್‌ವೈ ಪೋಕ್ಸೊ | ಕಾನೂನು ರಕ್ಷಕರಿಂದಲೇ ಕಾನೂನು ಉಲ್ಲಂಘನೆ: ವಕೀಲ ಎಸ್‌ ಬಾಲನ್ ಆರೋಪ

ಪೋಕ್ಸೋ ಅಂತಹ ಗಂಭೀರ ಪ್ರಕರಣವೊಂದರಲ್ಲಿ ಆಪಾದಿತರು ಯಾರೇ ಆಗಿರಲಿ, ಅವರ ಮೇಲೆ ‘ಕರುಣೆ’ (sympathy) ತೋರಿಸುವಂತೆ ನ್ಯಾಯಪೀಠ ವರ್ತಿಸಬಾರದು. ಇತರೆ ಪೋಕ್ಸೋ ಪ್ರಕರಣಗಳಲ್ಲೂ ನ್ಯಾಯಪೀಠ ಎಂದಾದರು ಹೀಗೆ ವರ್ತಿಸಿದೆಯೇ? ಒಬ್ಬ ಪ್ರಭಾವಿ ‘ಜಗದ್ಗುರು’ ಇಂತಹ ಪ್ರಕರಣದಲ್ಲಿ ಆಪಾದಿತರಾದಾಗಲೂ ನ್ಯಾಯಪೀಠ ಈ ರೀತಿ ‘ಕರುಣೆ’ ತೋರಿದ್ದನ್ನು ಈ ನಾಡು ಕಂಡಿಲ್ಲ. ಹಾಗಿರುವಾಗ ಒಬ್ಬ ರಾಜಕಾರಣಿಗೆ ಇಷ್ಟೆಲ್ಲಾ ಕರುಣೆ ತೋರಬೇಕಾದ ಕಾರಣವಾದರೂ ಏನು..?

ಕಡೆಗೆ ಈ ಸಂದರ್ಭದಲ್ಲಿ ಲಾರ್ಡ್ ಡೆನಿಂಗ್‌ ಅವರ ಹೇಳಿಕೆಯೊಂದು ನೆನಪಾಗುತ್ತಿದೆ. ‘A judge’s job is to do justice according to law for which he must keep his eye on the justice of the case and also on the text of the law…’

ಪೋಸ್ಟ್ ಹಂಚಿಕೊಳ್ಳಿ:

ಡಾ. ಸಿ.ಎಸ್. ದ್ವಾರಕಾನಾಥ್
ಡಾ. ಸಿ.ಎಸ್. ದ್ವಾರಕಾನಾಥ್
ಹಿರಿಯ ವಕೀಲರು, ಪತ್ರಕರ್ತರು, ಲೇಖಕರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...