- ಕರ್ನಾಟಕದ ಹಿತ ಕಾಪಾಡುವಲ್ಲಿ ನಮಗೆ ಬದ್ಧತೆ ಇದೆ ಎಂದ ಕೇಂದ್ರ ಸಚಿವ
- ‘ತಮಿಳುನಾಡಿನ ಸಿಎಂ ಮೈತ್ರಿಕೂಟದ ಸಭೆಗೆ ಬೆಂಗಳೂರಿಗೆ ಬಂದಿದ್ದಾಗ ಯಾಕೆ ಮಾತನಾಡಿಲ್ಲ’
ಕಾವೇರಿ ವಿವಾದದ ಕುರಿತು ದೆಹಲಿಯಲ್ಲಿ ನಡೆದ ರಾಜ್ಯ ಜನಪ್ರತಿನಿಧಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು.
ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, “ಇಂಡಿಯಾ ಮೈತ್ರಿಕೂಟ ಗಟ್ಟಿಗೊಳಿಸಲು ತಮಿಳುನಾಡಿಗೆ ನೀರು ಹರಿಸಲಾಗಿದೆ. ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಆಗಬಾರದು” ಎಂದು ಸಭೆಯಲ್ಲಿ ಹೇಳಿರುವುದಾಗಿ ತಿಳಿಸಿದ್ದಾರೆ.
ಸಿಡಬ್ಲ್ಯೂಎಂಎ ಸಭೆಯಲ್ಲಿ 2,500 ಕ್ಯೂಸೆಕ್ ನೀರು ಬಿಡಲು ಒಪ್ಪಿದ್ದು ಯಾರು? ಎಂದು ದಾಖಲೆ ತೋರಿಸಿದ ಕೇಂದ್ರ ಸಚಿವ ಜೋಶಿ, ಇದರಲ್ಲಿ ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದಾರೆ. ನೀವು ಆಗ ಕೊಡಲಿಕ್ಕೆ ಆಗಲ್ಲ ಎಂದವರು ಈಗ ಯಾಕೆ ಕೇಳಲಿಲ್ಲ. ನಮಗೆ ಕೊಟ್ಟ ಪತ್ರದಲ್ಲಿ ನೀರು ಬಿಡಲಿಕ್ಕೆ ಆಗುವುದಿಲ್ಲ ಎಂದು ಹೇಳಿ, ಸಿಡಬ್ಲ್ಯೂಎಂಎ ಸಭೆಯಲ್ಲಿ 2,500 ಕ್ಯೂಸೆಕ್ ನೀರು ಬಿಡಲು ಒಪ್ಪಿದ್ದಾರೆ ಎಂದು ಹೇಳಿದರು.
ಕರ್ನಾಟಕದ ಎಲ್ಲ ಸಂಸದರು ಕಾವೇರಿ ನೀರು ಹಂಚಿಕೆಯ ವಿಷಯದಲ್ಲಿ ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಕರೆದ ರಾಜ್ಯದ ಸಂಸದರ ಸಭೆಯಲ್ಲಿ ಕೂಡ ಇದೇ ಮಾತನ್ನು ಹೇಳಿದ್ದೇವೆ. ಆದರೆ ಯಾವೊಬ್ಬ ಸಂಸದರೊಂದಿಗೂ ಚರ್ಚೆ ನಡೆಸದೆ, ತಮ್ಮ ಘಟಬಂಧನದ ಮಿತ್ರತ್ವದಲ್ಲಿ ಒಂದೂವರೆ ತಿಂಗಳಿನಿಂದ… pic.twitter.com/91vNuYlbCa
— Pralhad Joshi (@JoshiPralhad) September 20, 2023
“ಕರ್ನಾಟಕದ ಹಿತ ಕಾಪಾಡುವಲ್ಲಿ ನಮ್ಮ ಬದ್ಧತೆ ಇದೆ. ಮೊದಲು ನೀರು ಹರಿಸಿ ಈಗ ಸಭೆ ಮಾಡುವುದು. ಇಂಡಿಯಾ ಮೈತ್ರಿ ಗಟ್ಟಿಗೊಳಿಸಲು ನೀರು ಹರಿಸಲಾಗಿದೆ. ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಆಗಬಾರದು ಎಂದು ಹೇಳಿದ್ದೇನೆ. ನೀವು ಮೊದಲು ನೀರು ಹರಿಸುವಾಗ ಯಾರನ್ನು ಕೇಳಿದ್ದೀರಾ? ಆಗ ನಿಮಗೆ ರಾಜ್ಯದ ಸಂಸದರ ನೆನಪಾಗಲಿಲ್ಲವೇ? ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ ಅಂತ ಸರ್ಕಾರಕ್ಕೆ ಹೇಳಿದ್ದೇನೆ” ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಇಂಡಿಯಾ ಮೈತ್ರಿಕೂಟದ ಡಿಎಂಕೆಯ ನಾಯಕರ ಜೊತೆಗೆ ಈ ಬಗ್ಗೆ ಎಷ್ಟು ಬಾರಿ ಚರ್ಚೆ ನಡೆಸಿದ್ದೀರಾ? ಮೈತ್ರಿಕೂಟದ ಸಭೆಗೆ ಬೆಂಗಳೂರಿಗೆ ತಮಿಳುನಾಡಿನ ಸಿಎಂ ಸ್ಟಾಲಿನ್ ಬೆಂಗಳೂರಿಗೆ ಬಂದಾಗ ಯಾಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕರ್ನಾಟಕ ರಾಜ್ಯದ ಹಿತಕಾಪಾಡುವಲ್ಲಿ ನಮಗೆ ಬದ್ಧತೆ ಇದೆ. ಹಾಗಾಗಿ ಕೇಂದ್ರದ ಮಂತ್ರಿಗಳ ಜೊತೆಗೆ ಮಾತನಾಡುತ್ತೇವೆ. ಸಭೆಯಲ್ಲಿ ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಅಂತ ಸರ್ಕಾರಕ್ಕೆ ಹೇಳಿರುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ.





