ಮಾದಕವಸ್ತು ಮಾರಾಟಗಾರರ ಮನೆಗಳನ್ನು ಕೆಡವುವ ಸಾಧ್ಯತೆಯ ಕುರಿತು ರಾಜ್ಯ ಗೃಹ ಸಚಿವ ಜಿ ಪರಮೇಶ್ವರ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯನ್ನು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಟೀಕಿಸಿದ್ದಾರೆ. ಇಂತಹ ಹೇಳಿಕೆಗಳಿಂದ ಗಾಬರಿಗೊಂಡಿದ್ದೇನೆ ಎಂದು ಚಿದಂಬರಂ ಹೇಳಿದ್ದಾರೆ.
ಇತ್ತೀಚೆಗೆ, ಮಾದಕವಸ್ತು ಅಕ್ರಮ ಮಾರಾಟದ ಬಗ್ಗೆ ಮಾತನಾಡಿದ್ದ ಜಿ ಪರಮೇಶ್ವರ್, “ರಾಜ್ಯ ಸರ್ಕಾರವು ಮಾದಕವಸ್ತು ಮಾರಾಟಗಾರರ ವಿರುದ್ಧ ಪ್ರತಿದಿನ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅಧಿಕಾರಿಗಳು ಅಪರಾಧಿಗಳನ್ನು ಪತ್ತೆಹಚ್ಚುತ್ತಿದ್ದಾರೆ. ಅವರಿಗೆ ಮನೆಗಳನ್ನು ಬಾಡಿಗೆಗೆ ನೀಡುವವರ ವಿರುದ್ಧವೂ ಕ್ರಮ ಕೈಗೊಳ್ಳುತ್ತಿದ್ದಾರೆ. ಮಾತ್ರವಲ್ಲದೆ, ಆರೋಪಿಗಳ ಮನೆಗಳನ್ನು ಕೆಡವಲು ಸಹ ಯೋಜಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚಿದಂಬರಂ, “ವರದಿ ತಪ್ಪಾಗಿದೆ ಎಂದು ನಾನು ಭಾವಿಸುತ್ತೇನೆ. ಆರೋಪಿಗಳ ಮನೆಗಳನ್ನು ಸರಿಯಾದ ಪ್ರಕ್ರಿಯೆಯಿಲ್ಲದೆ ಧ್ವಂಸಗೊಳಿಸುವುದು ಕಾನೂನುಬಾಹಿರ ಮತ್ತು ಆರೋಪಿಗಳ ಕುಟುಂಬ ಇತರ ಸದಸ್ಯರ ಆಶ್ರಯ ತಾಣದ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಉಲ್ಲಂಘಿಸುತ್ತದೆ ಎಂಬುದಾಗಿ ಸುಪ್ರೀಂ ಕೋರ್ಟ್ ಕಾನೂನನ್ನು ಘೋಷಿಸಿದೆ” ಎಂದು ‘ಎಕ್ಸ್‘ನಲ್ಲಿ ಪೋಸ್ಟ್ ಹಾಕಿದ್ದಾರೆ.
I am alarmed by the reported statement of Karnataka's Home Minister that bulldozers may be used to demolish the homes of drug peddlers
— P. Chidambaram (@PChidambaram_IN) December 12, 2025
I hope the report is wrong
The SC has declared the law: demolishing homes without due process of law is illegal and will violate the…
“ಉತ್ತರ ಪ್ರದೇಶದಲ್ಲಿ ಅಲ್ಲಿನ ಸರ್ಕಾರ ಅಳವಡಿಸಿಕೊಂಡಿರುವ ‘ಬುಲ್ಡೋಜರ್ ನ್ಯಾಯ’ವನ್ನು ಕಾಂಗ್ರೆಸ್ ಪಕ್ಷ ನಿರಂತರವಾಗಿ ವಿರೋಧಿಸುತ್ತಿದೆ. ಹೀಗಿರುವಾಗ, ಕರ್ನಾಟಕದಂತಹ ಕಾಂಗ್ರೆಸ್ ಆಡಳಿತವಿರುವ ರಾಜ್ಯವು ಉತ್ತರ ಪ್ರದೇಶದ ಅಕ್ರಮ ಹಾದಿಯಲ್ಲಿ ಸಾಗಬಾರದು” ಎಂದು ಎಚ್ಚರಿಸಿದ್ದಾರೆ.




