ಬಿ.ಎಸ್.ಪಿ. ಜಿಲ್ಲಾ ಸಂಯೋಜಕರಾದ ಕೆ.ಎಂ ಗೋಪಾಲ್ ರವರನ್ನು ಪಕ್ಷದ ಪದಾಧಿಕಾರಿ ಹುದ್ದೆಯಿಂದ ಅಮಾನತು ಗೊಳಿಸಲಾಗಿದೆ ಎಂದು ಚಿಕ್ಕಮಗಳೂರು ನಗರದಲ್ಲಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಸೋಮವಾರ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.
ಬಹುಜನ ಸಮಾಜ ಪಕ್ಷದ ಜಿಲ್ಲಾ ಸಂಯೋಜಕರಾದ ಶೃಂಗೇರಿಯ ಕೆ.ಎಂ.ಗೋಪಾಲರನ್ನು ರಾಷ್ಟ್ರೀಯ ಸ್ವಯಂ ಸೇವಕಾ ಸಂಘದ ಪ್ರಾಯೋಜಿತ ಹಿಂದು ಸಮಾಜೋತ್ಸವ ಕಾರ್ಯಕ್ರಮದ ಶೃಂಗೇರಿ ತಾಲ್ಲೂಕು ಆಚರಣ ಸಮಿತಿ ಸದಸ್ಯರಾಗಿದ್ದು ಹಿಂದು ಸಮಾಜೋತ್ಸವದ ಸಭೆಗಳಲ್ಲಿ ಬಹಿರಂಗವಾಗಿ ಭಾಗವಹಿಸಿರುತ್ತಾರೆ. ಈ ಕುರಿತು ಕೆ.ಎಂ ಗೋಪಾಲ್ ಭಾಗವಹಿಸಿರುವುದು ತಪ್ಪಾಗಿರುವುದೆಂದು ಸಮಜಾಯಿಷಿ ನೀಡಿದ್ದು, ಆನಂತರವೂ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದರಿಂದ ಇಂತಹ ಚಟುವಟಿಕೆಯು ಇದು ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಸಿದ್ಧಾಂತಕ್ಕೆ ವಿರುದ್ಧವಾದ ನಡೆಯಾಗಿರುತ್ತದೆ. ಈ ಸಂಬಂಧ ಜ. 8ರಂದು ಪಕ್ಷದ ರಾಜ್ಯ ಕಛೇರಿಯಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ರಾಜ್ಯಾಧ್ಯಕ್ಷರು ಮತ್ತು ಹಾಸನ ವಲಯ ಉಸ್ತುವಾರಿ ರಾಜ್ಯ ನಾಯಕರು ಸಮಕ್ಷಮದಲ್ಲಿ ನಮ್ಮ ಪಕ್ಷದ ಶೃಂಗೇರಿ ಭಾಗದ ಜಿಲ್ಲಾ ಸಂಯೋಜಕರಾದ ಕೆ. ಎಂ ಗೋಪಾಲ್, ಪಕ್ಷ ವಿರೋಧ ಚಟುವಟಿಕೆ ಎಂದು ಪರಿಗಣಿಸಿ ಪದಾಧಿಕಾರಿ ಹುದ್ದೆಯಿಂದ ಅಮಾನತು ಗೊಳಿಸಲಾಗಿದೆ. ಪಕ್ಷದ ಹೆಸರನ್ನು ಬಳಸಿ ಯಾವುದೇ ಚಟುವಟಿಕೆ, ಹೇಳಿಕೆ ನೀಡದಂತೆ ನಿರ್ಬಂಧಿಸಲಾಗಿದೆ ಎಂದು ಬಿ.ಎಸ್.ಪಿ ಜಿಲ್ಲಾಧ್ಯಕ್ಷ ಪಿ. ಪರಮೇಶ್ ತಿಳಿಸಿದರು.
ಇತಿಹಾಸದಿಂದ ಆರ್ ಎಸ್ ಎಸ್ ಕೋಮುದ್ವೇಷ, ಗಲಭೆ, ಜಾತಿವಾದವನ್ನು ಮುನ್ನೆಡೆಸುತ್ತಿದ್ದಾರೆ. ಶೇ. 85ರಷ್ಟು ಬಹು ಸಂಖ್ಯಾತ ಸನಾತನಾವಾದಿಗಳು, ಮಹಿಳೆಯರು ವಸೂಲು ತುಳಿಯಬಾರದು, ಯಾವ ಜಾತಿಯವರು ಒಂದೇ ಕೆಲಸಕ್ಕೆ ಸೀಮಿತವಾಗಿರಬೇಕು ಎಂಬ ಸಿದ್ದಾಂತ ಹೊಂದಿರುವವರು. ಸಂವಿಧಾನ ಬದಲಾಗಬೇಕು ಬೇರೆ ಸಂವಿಧಾನ ಬರೆದಿದ್ದೇವೆ ಅದನ್ನು ತೆರೆಗೆ ತರುತ್ತೇವೆ ಎಂಬ ಉದ್ದೇಶವೊಂದಿ ಸನಾತನ ಉಳಿವಿಗೆ ಹೊಸ ಕಾಯ್ದೆಗಳನ್ನು ಆರ್ ಎಸ್ ಎಸ್ ತಿದ್ದುತ್ತಿದ್ದಾರೆ. ಆದರೇ, ಬಹುಜನ ಸಮಾಜ ಪಾರ್ಟಿ ಅಧಿಕಾರದಿಂದ ವಂಚಿತರಾದ ಅಧಿಕಾರ ಕೊಡಬೇಕು, ಕನ್ಯಾಕುಮಾರಿ ಇಂದ ಕಾಶ್ಮೀರಕ್ಕೆ ಎದೆ ಗುಂದದೆ ಹೋರಾಟ ಮಾಡಲಾಗಿದೆ. ಬಿಎಸ್ಪಿ ಪಕ್ಷವನ್ನ ಸ್ವತಃ ಜನರು ಹಾಗೂ ಕಾರ್ಯಕರ್ತರೇ ಕಟ್ಟಿ ಬೆಳೆಸುವ ಪಕ್ಷ ಎಂದರೆ ತಪ್ಪಾಗಲಾರದು. ಹಾಗೆಯೇ ಈ ಜಿಲ್ಲೆಯಲ್ಲಿ ಕೋಮುವಾದ ಬೆಳೆದಿರುವುದೇ ಶೃಂಗೇರಿ ಭಾಗದಲ್ಲಿ 31 ವರ್ಷದಿಂದ ಕೆ.ಎಂ ಗೋಪಾಲ್ ಅವರು ವಿಚಾರಗಳನ್ನು ಅಂಬೇಡ್ಕರ್ ತತ್ವ ಸಿದ್ಧಾಂತವನ್ನು ಹೊಂದಿದ್ದವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಯೋಜಿತ ಇಂದು ಸಮಾಜೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಿರುವುದು ನೋವಿನ ಸಂಗತಿಯಾಗಿದೆ. ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ ರಾಧಾಕೃಷ್ಣ ತಿಳಿಸಿದರು.
ಇದನ್ನು ಓದಿದ್ದೀರಾ?ಚಿಕ್ಕಮಗಳೂರು | ಮಹಿಳೆ ಸಾವು ಅನುಮಾನ ; ಪ್ರಕರಣ ದಾಖಲು
ಈ ವೇಳೆ ವಿಜಯ್ ಕುಮಾರ್, ಎಂ. ಬಾಬು, ಕೆ. ಎಂ ಗಂಗಾಧರ್ ಹಾಗೂ ಇನ್ನಿತರರಿದ್ದರು.





