ಸಂಬಳವನ್ನೇ ಸಮಯಕ್ಕೆ ನೀಡದಿರುವ ಕಾರಣ ಹಲವರು ಡೆತ್ ನೋಟ್ ಬರೆದಿಟ್ಟು ಜೀವನ ಕೊನೆಗೊಳಿಸುತ್ತಿದ್ದಾರೆ. ಇದಕ್ಕೆ ಸರ್ಕಾರವೇ ಹೊಣೆಗಾರ, ಹಾಗೆಯೇ, ಸಿಎಂ ಕಣ್ಣು ಇದ್ದು ಕುರುಡರಂತೆ, ಕಿವಿ ಇದ್ದು ಕಿವುಡರಂತೆ, ಹೃದಯ ಇದ್ದು ಮಾನವೀಯತೆ ಸತ್ತಂತಾಗಿದೆ. ಸರ್ಕಾರಕ್ಕೆ ಹೃದಯ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಮಾನವೀಯತೆ ಸತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಮಾಜಿ ಸಚಿವ ಸಿ.ಟಿ ರವಿ ಆರೋಪಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಮುಂದಿನ 3 ಗಂಟೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ; IMD ಮುನ್ಸೂಚನೆ
ಈ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಮಾತ್ರ ಪ್ರಾಯಶ್ಚಿತ್ತ ಸಾಧ್ಯ. ಸರ್ಕಾರ ಹೃದಯಹೀನವಾಗಿ ವರ್ತಿಸುತ್ತಿದೆ. ಸರ್ಕಾರಿ ನೌಕರರ ಜೀವವನ್ನು ಕಾಳಜಿ ಇಲ್ಲದೆ ಬಲಿಯಾಗಿ ಬಳಸುತ್ತಿದೆ. ಈ ದಪ್ಪ ಚರ್ಮಕ್ಕೆ ಕೆಲವೊಮ್ಮೆ ಬಾರ್ಕೋಲಿನ ಚಡಿ ನಾಟುತ್ತೆ, ಕರೆಂಟ್ ಶಾಕ್ ಹೊಡೆದರೆ ಸಹ ನಾಟುತ್ತೆ. ಆದರೆ ಈ ಸರ್ಕಾರಕ್ಕೆ ಯಾವುದೇ ನೋವು ಆಗುತ್ತಿಲ್ಲ. ಇದು ದಪ್ಪ ಚರ್ಮವೋ ಅಥವಾ ಸತ್ತ ಚರ್ಮವೋ ಎಂಬ ಅನುಮಾನ ಬರುತ್ತಿದೆ. ಮಾನವೀಯತೆಯನ್ನು ಚಿಗುರಿಸುತ್ತಿಲ್ಲ ಎಂದು ತೀರ್ವವಾಗಿ ಸಿ.ಟಿ ರವಿ ಟೀಕಿಸಿದ್ದಾರೆ.





