ಫಕೀರ್ ಲೇಔಟ್‌ನಲ್ಲಿ ಮನೆ ಕಳೆದುಕೊಂಡ ನಿರಾಶ್ರಿತ ಕುಟುಂಬಗಳಿಗೆ ತಕ್ಷಣ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಸರ್ಕಾರದ ಅಮಾನವೀಯ ಬುಲ್ಡೋಜರ್ ರಾಜಕೀಯವನ್ನು ಖಂಡಿಸಿ ಚಿಕ್ಕಮಗಳೂರು ನಗರದಲ್ಲಿ ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಯಾವುದೇ ಕಾನೂನು ಪ್ರಕ್ರಿಯೆ ಅನುಸರಿಸದೇ ಮನೆಗಳನ್ನು ಧ್ವಂಸಗೊಳಿಸುವುದು ಸಂವಿಧಾನಾತ್ಮಕ ಹಕ್ಕುಗಳ ಮತ್ತು ಮಾನವೀಯ ಮೌಲ್ಯಗಳ ಮೇಲಿನ ಭಾರೀ ದಾಳಿ, ವಿಶೇಷವಾಗಿ ಬಡವರು ಹಾಗೂ ಅಂಚಿನ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಕ್ರಮವನ್ನು ಸರ್ಕಾರದ ವಿರುದ್ಧ ಶ್ರೀ ಸಯ್ಯದ್ ಅಜ್ಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕೇರಳ ಸಂಸದ,ಶಾಸಕರು ಕರ್ನಾಟಕ ರಾಜ್ಯಕ್ಕೆ ಬುದ್ದಿ ಹೇಳುವ ಅವಶ್ಯಕತೆ ಇಲ್ಲ; ಸಿ.ಟಿ ರವಿ
ಈ ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷರಾದ ಶ್ರೀ ಮುಸ್ತಫಾ ಅಲ್ದೂರು, ಎಸ್‌ಡಿಪಿಐ ಕಾರ್ಯಕರ್ತರು, ಮುಖಂಡರಿದ್ದರು.





