ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರದ ನೂತನ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆಯನ್ನು ಅರೋಗ್ಯ ಸಚಿವ ಗುಂಡೂರಾವ್ ಅದ್ದೂರಿಯಾಗಿ ನಡೆಸಿ, ಬಸ್ ನಿಲ್ದಾಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ನೆರವೇರಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅವಶ್ಯಕತೆಗೆ ತಕ್ಕಂತೆ ವಿದ್ಯುತ್ ಸಮಸ್ಯೆ ಬಗೆಹರಿಸಲು ಸುಮಾರು ೨೫೦ ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಜಿಲ್ಲೆಯ ವಿದ್ಯುತ್ ಮಾರ್ಗದ ಬದಲಾವಣೆ, ಹೊಸ ಕಂಬಗಳ ಅಳವಡಿಕೆ ಮತ್ತಿತರ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ರೈತರಿಗೆ ಸಮರ್ಪಕವಾಗಿ ನೀರು ಒದಗಿಸಬೇಕೆಂಬ ಉದ್ದೇಶ ನಮ್ಮದಾಗಿದ್ದು, ರೈತರು ಚೆನ್ನಾಗಿದ್ದರೆ ಹಗಲು, ರಾತ್ರಿ ದುಡಿಯುವ ರೈತರು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಪಾವಗಡದಲ್ಲಿ ರೈತರಿಂದ ಗುತ್ತಿಗೆಗೆ ಪಡೆದ ಜಮೀನಿನಲ್ಲಿ ಸೋಲಾರ್ ಪಾರ್ಕ್‌ನಲ್ಲಿ 2150 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ವಿದ್ಯುತ್ 1159 ಬ್ಯಾಟರಿ ಸ್ಟೋರೇಜ್ ಮಾಡುವ ಕಾರ್ಯ ಕೊನೆಯ ಹಂತದಲ್ಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ವಿದ್ಯುತ್ ಬೇಡಿಕೆ 8-9ಸಾವಿರದಿಂದ ಒಂದೇ ತಿಂಗಳಲ್ಲಿ 14 ಸಾವಿರ, 19ಸಾವಿರ ಯೂನಿಟ್‌ಗೆ ಏರಿತು. ಈ ನಡುವೆ ಮುಖ್ಯಮಂತ್ರಿಗಳು 9ಸಾವಿರದಿಂದ ಒಂದೇ ತಿಂಗಳಲ್ಲಿ 14 ಸಾವಿರ, 19ಸಾವಿರ ಯೂನಿಟ್‌ಗೆ ಏರಿತು. ಈ ನಡುವೆ ಮುಖ್ಯಮಂತ್ರಿಗಳು ಕೆಲವೆಡೆ ಭೇಟಿ ನೀಡಿದ ಸಂದರ್ಭ ರೈತರು ನಮಗೆ ಏಳು ಗಂಟೆ ಅಥವಾ ಕನಿಷ್ಠ ಐದು ಗಂಟೆಯಾದರೂ ವಿದ್ಯುತ್ ಪೂರೈಕೆ ಮಾಡುವಂತೆ ಬೇಡಿಕೆ ಇಟ್ಟರು. ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆಯಲ್ಲಿ ಸಮಾಲೋಚಿಸಿದ ಬಳಿಕ ಐದು ಗಂಟೆ ಮಾತ್ರ ವಿದ್ಯುತ್ ಮಾಡಬಹುದು ಎಂದು ತಿಳಿಸಿದರು.
ಇದನ್ನು ಓದಿದ್ದೀರಾ?ಚಿಕ್ಕಮಗಳೂರು l ಕ್ರೇನ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ; ಮಹಿಳೆ ಸಾವು
ರೈತರ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರದಿಂದ ಎಸ್ಕಾಂಗೆ ಹಣ ಭರಿಸಲಾಗುತ್ತಿದೆ. ಈ ಮೊದಲು 18 ಸಾವಿರ ಕೋಟಿ ರೂ. ನೀಡಲಾಗುತ್ತಿತ್ತು. ಆ ಮೊತ್ತ ಈ ವರ್ಷ 23 ಸಾವಿರ ಕೋಟಿಗೆ ಏರಿಕೆಯಾಗಿದೆ. ಈ ಮೊತ್ತವನ್ನು ರಾಜ್ಯ ಸರ್ಕಾರ ಪ್ರತೀ ತಿಂಗಳು, ಎರಡು ತಿಂಗಳಿಗೊಮ್ಮೆ ಸರ್ಕಾರಕ್ಕೆ ನೀಡುತ್ತಲೇ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.





