ಪೂರ್ವಾರ್ಧ ಬಿಟ್ಟು ಉತ್ತರಾರ್ಧವನ್ನು ತೆಗೆದುಕೊಂಡರೆ ತಪ್ಪು ಅರ್ಥ ಬರುತ್ತದೆ. ಶುದ್ಧ ರಕ್ತದವರು ನಮ್ಮ ಜೊತೆ ಇದ್ದಾರೆ, ಬೆರಕೆಯವರು ಈ ರೀತಿ ಮಾತನಾಡುತ್ತಾರೆ” ಎಂದು ವಿಧಾನ ಸಚಿವ ಪ್ರಿಯಾಂಕ ಖರ್ಗೆ ಅವರ ಮಾತಿಗೆ ಪರಿಷತ್ ಸದಸ್ಯ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.
“ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಕೇಸರಿ ಶಾಲು ಹೊದಿಸಿ ಗೋ ರಕ್ಷಣೆಗೆ, ಧರ್ಮ ರಕ್ಷಣೆಗೆ ಕಳಿಸುತ್ತಾರಾ? ತಲೆ ತೆಗೆಯಿರಿ, ತೊಡೆ ಮುರಿಯಿರಿ ಎನ್ನುತ್ತಿರುವ ಬಿಜೆಪಿ ನಾಯಕರು ತಮ್ಮ ಮಕ್ಕಳ ಕೈಗೆ ದೊಣ್ಣೆ, ಲಾಂಗು ಮಚ್ಚುಗಳನ್ನು ಕೊಟ್ಟು ಬೀದಿಗೆ ಬಿಡುತ್ತಾರೆಯೇ?” ಎಂಬ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆಗೆ ಸಿ. ಟಿ. ರವಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಗಾಂಜಾ ಮಾರಾಟದಿಂದ ಯುವಕರು ಬಲಿ; ಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ ಆಗ್ರಹ
“ನಮ್ಮ ದೇವರ ಮೇಲೆ ಕಲ್ಲು ತೂರಿದರೆ, ಪೆಟ್ರೋಲ್ ಬಾಂಬ್ ಹಾಕಿದರೆ, ನಮ್ಮ ವಿಗ್ರಹದ ಮೇಲೆ ಉಗುಳಿದರೆ, ಅಥವಾ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದರೆ ಸುಮ್ಮನಿರಬೇಕಾ? ಎಂದು ನಾನು ಅವರನ್ನು ಪ್ರಶ್ನಿಸುತ್ತೇನೆ. ಹೇಡಿಗಳು ಮತ್ತು ಬೆರಕೆಯವರು ಸುಮ್ಮನಿರಬಹುದು, ಆದರೆ ಶುದ್ಧ ರಕ್ತದವರು ಹೇಗೆ ಸುಮ್ಮನಿರುತ್ತಾರೆ? ನನ್ನ ಜೊತೆ ಶುದ್ಧ ರಕ್ತದವರು ನಿಂತಿದ್ದಾರೆ. ಆದರೆ ಬೆರಕೆಯವರು ಬೆರಕೆ ತರ ಮಾತನಾಡುತ್ತಿದ್ದಾರೆ ಎಂದು ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.





