ಮಲೆನಾಡಿನ ರೈತ ಕಾರ್ಮಿಕರಿಗೆ ಹಕ್ಕು ಪತ್ರ ನೀಡದೆ ಸರ್ವೆ, ಮೀಸಲು ಅರಣ್ಯ ಮಾಡಲು ಹುನ್ನಾರ, ಅರಣ್ಯ ಕಾಯ್ದೆ, ಕಾನೂನನ್ನು ಮಲೆನಾಡಿನ ಜನರಿಗೆ, ರೈತ, ಕಾರ್ಮಿಕರ ಮೇಲೆ ಬಲ ಪ್ರಯೋಗ ನಡೆಸುತ್ತಿರುವ ಅರಣ್ಯ ಇಲಾಖೆಯ ವಿರುದ್ಧ ಕರ್ನಾಟಕ ಜನಶಕ್ತಿ ವತಿಯಿಂದ ಫೆ. 26ರಂದು ಕೊಪ್ಪ ತಾಲೂಕು ಗಡಿಕಲ್ ಸರ್ಕಲ್ ನಿಂದ ಜಯಪುರಕ್ಕೆ ಕಾಲ್ನಡಿಗೆ ಜಾಥಾವನ್ನು ಅಮ್ಮಿಕೊಂಡಿದ್ದೇವೆ. ನಮ್ಮ ಹಕ್ಕೋತ್ತಾಯಕ್ಕೆ ರಾಜ್ಯ ಅರಣ್ಯ ಸಚಿವರು, ಶಾಸಕರು ಸ್ಪಂದಿಸದಿದ್ದರೇ ನಮ್ಮ ಹೋರಾಟ ತೀವ್ರ ಗೊಳಿಸಿ ಚಿಕ್ಕಮಗಳೂರಿನವರೆಗೆ ಜಾಥಾ ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕೆ. ಎಲ್ ಅಶೋಕ್ ಈದಿನ.ಕಾಂ ಜೊತೆ ಮಾತಾಡಿದ್ದಾರೆ.
ಕಾಡು ಪ್ರಾಣಿಗಳು ದಾಳಿ ನಡೆಸಿ. ಆನೆ ತುಳಿದು ಹತ್ತಾರು ಜನ ರೈತ, ಕಾರ್ಮಿಕರನ್ನು ಬಲಿ ತೆಗೆದುಕೊಳ್ಳುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು, ಯಾವ ಸೂಚನೆ ನೀಡದೆ ನಾನಾ ಕಡೆಗಳಲ್ಲಿ ಸರ್ವೆ ಕಾರ್ಯ ಕೈಗೊಂಡಿರುವುದು. ಖಂಡನೀಯ. ರೈತ, ಕಾರ್ಮಿಕರು, ತಮ್ಮ ಭೂಮಿ. ವಸತಿಗಳನ್ನು ಕಳೆದುಕೊಳ್ಳುವ, ಹಾಗೂ ಎಲ್ಲಿ ತಮ್ಮನ್ನೆಲ್ಲಾ ಒಕ್ಕಲೆಬ್ಬಿಸುತ್ತಾರೋ ಎಂಬ ಆತಂಕದಲ್ಲಿ ದಿನ ದೂಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.ಸೆಕ್ಷನ್ 4(1), ಸೆಕ್ಷನ್ 17 ಮೂಲಕ ಮೀಸಲು ಅರಣ್ಯ ಮಾಡುವ ಅರಣ್ಯ ಇಲಾಖೆಯಿಂದ ಡೀಮ್ಸ್ ಫಾರೆಸ್ಟ್ ಸಮಸ್ಯೆ ಇತ್ಯರ್ಥವಾಗಿಲ್ಲ. ಇಲಾಖೆಯವರು ಕಾಡಿನ ನಡುವೆ ಗಿಡ ನೆಡುವ ಕೆಲಸ, ಸರ್ವೆ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಕಳೆದ 8-10 ತಿಂಗಳಲ್ಲಿ ಆನೆ ತುಳಿತಕ್ಕೆ ಬಲಿಯಾಗಿ 8 ಜನ ಪ್ರಾಣ ಕಳೆದುಕೊಂಡಿದ್ದಾರೆ. ಮೊನ್ನೆಯಷ್ಟೆ ಹುಣಸೇಹಳ್ಳಿ ಸಮೀಪದ ಹ್ಯಾರಂಬಿ ವ್ಯಾಪ್ತಿಯ ಪುರ ಎಂಬ ಗ್ರಾಮದಲ್ಲಿ ಒಂದು ಎಸ್ಟೇಟ್ ಕೆಲಸಕ್ಕೆ ಬಂದಿದ್ದ, ಹಾವೇರಿ ಮೂಲದ ಒಬ್ಬ ಕಾರ್ಮಿಕ ಆನೆ ತುಳಿತಕ್ಕೆ ಒಳಗಾಗಿ, ಜೀವ ಕಳೆದುಕೊಂಡಿದ್ದಾರೆ. ಕಾಡಾನೆ ಮಾನವ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿರುವ ಜೀವಗಳಿಗೆ ಬೇಲೇನೆ ಇಲ್ಲದ ರೀತಿಯಲ್ಲಿ ಅರಣ್ಯ ಇಲಾಖೆಯವರು, ಸರ್ಕಾರಗಳು ನಡೆದುಕೊಳ್ಳುತ್ತಿವೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಕಾರ್ಯದರ್ಶಿ ಕೆ.ಎಲ್ ಅಶೋಕ್ ತಿಳಿಸಿದರು.





