ಬಾಬಾ ಬುಡನ್ ವಂಶಸ್ಥರು ಹಾಗೂ ಸಮಾಜದ ಹಲವು ಮುಖಂಡರು ದಾದಾ ಹಯಾತ್ ಮೀರ್ ಖಲಂದರ್ ಬಾಬಾ ಬುಡನ್ ದರ್ಗಾದಲ್ಲಿ ಫೆ. 4 ರಿಂದ 6ರವರೆಗೆ ನಡೆಯಲಿರುವ ಉರುಸ್ ಕಾರ್ಯಕ್ರಮದ ಸಂಬಂಧವಾಗಿ ಜಿಲ್ಲಾಡಳಿತಕ್ಕೆ ಅಧಿಕೃತ ಮನವಿ ಪತ್ರಗಳನ್ನು ಶನಿವಾರ ಸಲ್ಲಿಸಲಾಯಿತು.
ಬಾಬಾ ಬುಡನ್ ವಂಶಸ್ಥರಾದ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ, ಉರುಸ್ ಆಚರಣೆ ಸಂಬಂಧ 1989ರ ಆದೇಶ, 2002ರ ಆದೇಶ, 1947ರ ಮುಂಚಿನ ದಾಖಲೆಗಳು ಹಾಗೂ 1991ರ ಮುಂಚಿನ ನಿಯಮಗಳಂತೆ ಉರುಸ್ ಆಚರಣೆ ಮಾಡಬೇಕು. ಕಳೆದ ವರ್ಷದ ಸೂಚನೆಗಳಂತೆಯೇ ಉರುಸ್ ನಡೆಸಲಾಗುವುದು ಎಂದು ಜಿಲ್ಲಾಡಳಿತ ಹೇಳುತ್ತಿರುವುದು ಸರಿಯಲ್ಲ. ಇದು ಸರ್ಕಾರ ಆದೇಶಗಳಿಗೆ ವಿರುದ್ದವಾಗಿರುವುದಲ್ಲದೇ ನಮ್ಮ ಧಾರ್ಮಿಕ ಭಾವನೆಗೆ ಹಾನಿಕರವಾಗಿದೆ. ಉರುಸ್ ಮೇಲ್ಕಂಡ ಅಧಿಕೃತ ಆದೇಶಗಳಂತೆ ಮಾತ್ರ ನಡೆಯಬೇಕು, ಹಿಂದಿನ ವರ್ಷದ ಪ್ರಕ್ರಿಯೆಯಂತೆ ನಡೆಸಲು ಯಾವುದೇ ಅಧಿಕೃತ ಆದೇಶ ಇದ್ದರೆ, ಜಿಲ್ಲಾಡಳಿತ ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಪವಿತ್ರ ರಂಜಾನ್ ಮಾಸಕ್ಕೆ ಹೊಂದಿರುವುದರಿಂದ, ರಂಜಾನ್ ಹಬ್ಬದ ನಿಯಮಗಳನ್ನು ಉರುಸ್ ವೇಳೆ ಪಾಲಿಸಬೇಕು. ಅಲ್ಲಿನ ಮಸೀದಿಯಲ್ಲಿ ನಮಾಜ್ ವ್ಯವಸ್ಥೆ, ಸಹೆರಿ ಹಾಗೂ ಇಫ್ತಿಯಾರ್ ವ್ಯವಸ್ಥೆ ಇರಬೇಕು, ಚಿಕ್ಕಮಗಳೂರು ನಗರದಿಂದ ಇನಾಮ್ ದತ್ತ ಪೀಠ ಗ್ರಾಮದ ಬಾಬಾ ಬುಡನ್ ದರ್ಗಾಕ್ಕೆ ಬಸ್ ವ್ಯವಸ್ಥೆ ರೂಪಿಸಬೇಕು, ಪ್ರವಾಸಿಗರಿಗೆ ಚೆಕ್ ಪೋಸ್ಟ್ ತೆರೆಯವಿರಬೇಕು. ಉರುಸ್ ಕಾರ್ಯಕ್ರಮ ಐತಿಹಾಸಿಕ ಮತ್ತು ಕಾನೂನು ದಾಖಲೆಗಳಂತೆ ಮಾತ್ರ ನಡೆಯಬೇಕು ಎಂದು ಬಾಬಾ ಬುಡನ್ ವಂಶಸ್ಥರು ಒತ್ತಾಯಿಸಿದ್ದಾರೆ.
ಮಾ. 4, 2026ರಂದು ನಡೆಯುವ ಸಂದಲ್ ಸಮಾರಂಭ ದಾದಾ ಹಯಾತ್ ಹಾಗೂ ಬಾಬಾ ಬುಡನ್ ದರ್ಗಾದ ಬಾಬಾ ಬುಡನ್ ವಂಶಸ್ಥರ ಶಾ ಖಾದ್ರಿಗಳ ಮತ್ತು ಇತರ ಮುಸ್ಲಿಂ ನಾಯಕರುಗಳ ಸಲಹೆ ಹಾಗೂ ವಿಶ್ವಾಸದಿಂದ ಹಾಗೂ ಸಹಕಾರದೊಂದಿಗೆ ಉರುಸ್ ನಡೆಸಬೇಕು. ಹಾಗೆಯೇ, ಗುಹೆಯ ಒಳಗೆ ಇರುವ ದಾದ ಹಯಾತ್ ಅವರ ಚಿಲ್ಲಾ, ಮಮಾ ಜಿಗ್ನಿ ಚಿಲ್ಲಾ, ಹಾಗೂ 4 ಗೋರಿಗಳನ್ನು ಮತ್ತು ಹೊರಗಿನ ಎಲ್ಲ ನಮ್ಮ ಪೂರ್ವಜರ ಮತ್ತು ಸೂಫಿ ಸಂತರ ಸಮಾಧಿಗಳು, ಗೋರಿಗಳನ್ನು ಗೌರವದಿಂದ, ಹಸಿರು ಬಟ್ಟೆಗಳು, ಹೂವುಗಳು, ಸುಗಂಧ, ಫಲೇಕೆ ಮತ್ತು ಅಗರ್ಬತ್ತಿಗಳೊಂದಿಗೆ ಇರಬೇಕು. ಭಕ್ತರು ಝಿಯರಾತ್, ಸಲಾಮ್ ಮತ್ತು ಫತೇಹಾ ಸಲ್ಲಿಸಲು ಖಬರಸ್ತಾನದ ಎಲ್ಲಾ ಗೇಟುಗಳು ತೆರೆಯಿರಬೇಕು. ಧ್ವಜಗಳು, ಬ್ಯಾನರ್‌ಗಳು, ಅಲಂಕಾರಗಳನ್ನು ದರ್ಗಾ ಆವರಣದಲ್ಲಿ ಸ್ಥಾಪಿಸಬೇಕು ಮತ್ತು ೧991ರ ವರ್ಸಿಪ್ ಆಕ್ಟ್ರಂತೆ ರಕ್ಷಿತ ಪವಿತ್ರ ಶಿಲಾಗ್ರಂಗಳು (ಕಲಿಮ ಹಾಗು ತಾವಿವೀಜ್ಜ್ ) ಭಕ್ತರಿಗೆ ಸುಲಭವಾಗಿ ದರ್ಶನ ಮಾಡಲು ಲಭ್ಯವಾಗಿರಬೇಕು. ಅರ್ಕಿಯಾಲಾಜಿಕಲ್ ಡಿಪಾರ್ಟ್ಮೆಂಟ್‌ನಲ್ಲಿ ದಾಖಲೆ ಇದೆ ಎಂದು ಬಾಬಾ ಬುಡನ್ ವಂಶಸ್ಥರು ಈದಿನ. ಕಾಂ ಜೊತೆ ಮಾತಾಡಿದರು.
ಮಾ.6,2026ರಂದು ತೃತೀಯ ದಿನದ ಆಚರಣೆ ಜನ್ನತ್ ನಗರ ದರ್ಗಾ, ನಾಗೇನಹಳ್ಳಿನಲ್ಲಿ ಮುಂದುವರಿಯಬೇಕು. ಎಲ್ಲಾ ಭಕ್ತರಿಗೆ ನೀರಿನ, ಆಹಾರದ ಮತ್ತು ಆಶ್ರಯ ವ್ಯವಸ್ಥೆ ಮಾಡಬೇಕು. ಎಲ್ಲಾ ಧಾರ್ಮಿಕ ಆಚರಣೆಗಳು ಬಾಬಾ ಬುಡನ್ ವಂಶಸ್ಥರ ಶಾ ಖಾದ್ರಿಗಳ ಹಾಗು ಧಾರ್ಮಿಕ ಮುಖಂಡರ ಸಲಹೆ ಮತ್ತು ಮಾರ್ಗದರ್ಶನದಂತೆ, ಮೊಹಮ್ಮದೀಯ ವಿಧಾನದಂತೆ ನಡೆಯಬೇಕು. ಈ ಆಚರಣೆ ಕುರಿತು 1947ರ ಮುಂಚಿನ ಐತಿಹಾಸಿಕ ದಾಖಲೆಗಳನ್ನು ಸಲ್ಲಿಸಲು ಸಿದ್ಧರಾಗಿದ್ದೇವೇ, ಕೆಲವರು ಈ ದಾಖಲೆಗಳ್ಳನು ಮುಚ್ಚಿಹಾಕಲು ಪ್ರಯತ್ನ ಮಾಡಿತ್ತಿರುವ ಬಗ್ಗೆ ಶಂಖೆ ನಮ್ಮಲ್ಲಿದ್ದು, ಈ ಬಗ್ಗೆ ಜಿಲ್ಲಾಡಳಿತ ಹಾಗು ಸರಕಾರ ಗಮನಹರಿಸಬೇಕು. ಜಿಲ್ಲಾ ಆಡಳಿತವು ಈ ಧಾರ್ಮಿಕ ಹಕ್ಕುಗಳು ಭಾರತ ಸಂವಿಧಾನದ ವಿಧಿಗಳು 25ಮತ್ತು 26ಅಡಿ ಸಂರಕ್ಷಿತವಾಗಿವೆ ಎಂದು ಸ್ಮರಿಸಬೇಕು, ಇವು ಧರ್ಮ, ಪೂಜೆ ಮತ್ತು ಧಾರ್ಮಿಕ ವ್ಯವಹಾರಗಳ ನಿರ್ವಹಣೆಯಲ್ಲಿ ಸ್ವಾತಂತ್ರ್ಯವನ್ನು ಖಚಿತಪಡಿಸುತ್ತವೆ ಎಂದು ಬಾಬಾ ಬುಡನ್ ವಂಶಸ್ಥರು ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ ಮಣ್ಣಿನ ಹೆಣ್ಣು ಬೇರುಗಳು | ಹಾಸನದ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು
ಈ ಕುರಿತು ಎಲ್ಲಾ ವ್ಯವಸ್ಥೆಗಳು ಕಾನೂನು, ಐತಿಹಾಸಿಕ ಪದ್ಧತಿಗಳು ಮತ್ತು ಧಾರ್ಮಿಕ ಆಚರಣೆಗಳಿಗೆ ಅನುಗುಣವಾಗಿ, ವ್ಯತ್ಯಯವಿಲ್ಲದೆ, ಸರಿಯಾಗಿ ಉರುಸ್ ನಡೆಸಲು ಜಿಲ್ಲಾಡಳಿತದಿಂದ ಲೇಖನದ ದೃಢೀಕರಣ ನಮಗೆ ಒದಗಿಸಬೇಕು. ಸಕಾಲಿಕ ಭದ್ರತಾ ವ್ಯವಸ್ಥೆ ಕಲ್ಪಿಸಬೇಕೆಂದು ಎಂದು ಬಾಬಾ ಬುಡನ್ ವಂಶಸ್ಥರು ಮನವಿ ಮಾಡಿದ್ದಾರೆ.





