ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯ ವಿರುದ್ಧದ ಪ್ರಹಾರವನ್ನು ಪ್ರ್ರಧಾನಿ ನರೇಂದ್ರ ಮೋದಿ ಮುಂದುವರಿಸಿದ್ದು ಈಗ ಕಾಂಗ್ರೆಸ್ ಪ್ರಣಾಳಿಕೆಯನ್ನು ಮಾವೋವಾದಿ ಪ್ರಣಾಳಿಕೆ ಎಂದು ಕರೆದಿದ್ದಾರೆ. ಹಾಗೆಯೇ ಇದು ದೇಶದ ಆರ್ಥಿಕ ಬೆಳವಣಿಗೆಗೆ ಕಡಿವಾಣ ಹಾಕುತ್ತದೆ ಮತ್ತು ಈ ಪ್ರಣಾಳಿಕೆ ಜಾರಿಗೆ ಬಂದರೆ ದಿವಾಳಿತನಕ್ಕೆ ಕಾರಣವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ 13 ಸ್ಥಾನಗಳನ್ನು ಒಳಗೊಂಡಿರುವ ಐದನೇ ಮತ್ತು ಕೊನೆಯ ಹಂತದ ಲೋಕಸಭೆ ಚುನಾವಣೆಗೆ ಮೂರು ದಿನಗಳ ಮುನ್ನ ಮುಂಬೈನಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ ಮತ್ತೆ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಕಿಡಿಕಾರಿದ್ದಾರೆ.
#WATCH | Maharashtra: PM Modi receives gifts and momentoes during BJP-led NDA rally in Mumbai pic.twitter.com/FBqLjnJZg9
— ANI (@ANI) May 17, 2024
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ಮಹಿಳೆಯರ ಮಂಗಳಸೂತ್ರಕ್ಕೆ ಕೈ ಹಾಕಿದ ಮೋದಿ
“ಮಹಾತ್ಮ ಗಾಂಧೀಜಿಯವರ ಆಶಯದಂತೆ ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಅನ್ನು ವಿಸರ್ಜಿಸಿದ್ದರೆ ಭಾರತ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಇಂದು ಇರುವುದಕ್ಕಿಂತ ಐದು ದಶಕಗಳಷ್ಟು ಮುಂದಿರುತ್ತಿತ್ತು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಕಾಂಗ್ರೆಸ್ ತನ್ನ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದು ತನ್ನ ಉಳಿವಿಗಾಗಿ ಯಾವುದೇ ಹಂತಕ್ಕೂ ಹೋಗಬಹುದು. ಅದರ ಮಾವೋವಾದಿ ಪ್ರಣಾಳಿಕೆಯು ದೇವಾಲಯದ ಚಿನ್ನ ಮತ್ತು ಮಹಿಳೆಯರ ‘ಮಂಗಲಸೂತ್ರ’ದ ಮೇಲೆ ಕಣ್ಣಿಟ್ಟಿದೆ. ಮಾವೋವಾದಿ ಪ್ರಣಾಳಿಕೆಯು ಆರ್ಥಿಕತೆಗೆ ಕಡಿವಾಣ ಹಾಕುತ್ತದೆ. ದೇಶವನ್ನು ದಿವಾಳಿಯತ್ತ ಕೊಂಡೊಯ್ಯುತ್ತದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ನನ್ನ ತಾಯಿಯ ಮಂಗಳಸೂತ್ರ ದೇಶಕ್ಕಾಗಿ ಬಲಿದಾನವಾಗಿದೆ: ಮೋದಿಗೆ ಪ್ರಿಯಾಂಕಾ ಗಾಂಧಿ ತಿರುಗೇಟು
“ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್ ಮುದ್ರೆ ಇದೆ” ಎಂದು ಪುನರುಚ್ಛರಿಸಿದ ಪ್ರಧಾನಿ ಮೋದಿ “1980 ರ ದಶಕದಲ್ಲಿ ರದ್ದುಪಡಿಸಲಾದ ಪಿತ್ರಾರ್ಜಿತ ತೆರಿಗೆಯನ್ನು (ಮೃತ ವ್ಯಕ್ತಿಯಿಂದ ಪಡೆದ ಆಸ್ತಿಗಳ ಮೇಲಿನ ತೆರಿಗೆ) ಮರಳಿ ತರಲು ಕಾಂಗ್ರೆಸ್ ಬಯಸುತ್ತದೆ” ಎಂದು ಆರೋಪಿಸಿದರು.





