ಹಿಂದುತ್ವ | ಭಾರತೀಯ ಸಮಾಜವನ್ನು ಒಳಗಿನಿಂದಲೇ ವಂಚಿಸುವ ‘ಗೋಮುಖ ವ್ಯಾಘ್ರ’

Date:

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಭಾರತದ ಅತಿದೊಡ್ಡ ರಾಜಕೀಯ ಶಕ್ತಿಯಾಗಿದೆ. ಆದರೆ, ದೇಶದ ಜನರಿಗೆ ಅದರ ಸಿದ್ಧಾಂತ ಸರಿಯಾಗಿ ಅರ್ಥವಾಗಿಲ್ಲ. ಜನರೂ ಅರ್ಥ ಮಾಡಿಕೊಂಡಿಲ್ಲ. ಬಿಜೆಪಿ ವಂಶಾಡಳಿತ ಮತ್ತು ರಾಜವಂಶದ ವಿರೋಧ ಹಾಗೂ ಆರ್ಥಿಕ ಅಭಿವೃದ್ಧಿಯ ಭರವಸೆಯನ್ನು ಅನುಸರಿಸದಿದ್ದರೂ, ಇದನ್ನೇ ತನ್ನ ಬಂಡವಾಳವಾಗಿಸಿಕೊಂಡು ರಾಜಕೀಯ ಮಾಡುತ್ತಿದೆ. ಆದರೆ, ಅದರ ಹಿಂದುತ್ವ ಅಥವಾ ಹಿಂದು ರಾಷ್ಟ್ರೀಯತೆ ಎಂದು ಕರೆಯಲ್ಪಡುವ ಕೋಮುವಾದಿ ಸಿದ್ಧಾಂತದ ಬಹುಮುಖ್ಯ ಅಂಶವು ಸಾಕಷ್ಟು ಅಸ್ಪಷ್ಟವಾಗಿದೆ. ಜನರೂ ಕೂಡ ಅರೆಬರೆ ಅರ್ಥೈಸಿಕೊಂಡು, ಬಿಜೆಪಿಯಿಂದಲೇ ದೇಶದ ಉಳಿವು ಎಂಬಂತೆ ಭಾವಿಸಿದ್ದಾರೆ. ಜನರೆದುರು ಅಸ್ಪಷ್ಟ ಸಿದ್ದಾಂತವನ್ನು ಮುಂದಿಡುತ್ತಿರುವ ಬಿಜೆಪಿ ಏನನ್ನು ಸಾಧಿಸಲು ಹೊರಟಿದೆ ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ. ಅದೇ ನಮ್ಮ ಮುಂದಿರುವ ಸಮಸ್ಯೆ.

ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ‘ಆರ್‌ಎಸ್‌ಎಸ್‌ | ಆಳ-ಅಗಲ’ ಪುಸ್ತಕದಲ್ಲಿ ಬಿಜೆಪಿಯ ಮಾತೃಸಂಸ್ಥೆ ಆರ್‌ಎಸ್‌ಎಸ್‌ನ ಹಿಡನ್ ಅಜೆಂಡಾಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಿದ್ದಾರೆ. ಆರ್‌ಎಸ್‌ಎಸ್‌ ಎಂದರೇನು ಮತ್ತು ಅದು ಏನನ್ನು ಬಯಸುತ್ತದೆ ಎಂಬುದನ್ನು ಅರ್ಥಮಾಡಿಸಲು ದೇವನೂರ ಪ್ರಯತ್ನಿಸಿದ್ದಾರೆ. ಅವರು ಆರ್‌ಎಸ್‌ಎಸ್‌ಅನ್ನು ಹುಟ್ಟುಹಾಕಿದ ವಿ.ಡಿ ಸಾವರ್ಕರ್, ಎಂ.ಎಸ್‌ ಗೋಳ್ವಾಲ್ಕರ್ ಅವರ ವಿಚಾರಗಳೇನಿದ್ದವು ಎಂಬುದನ್ನು ವಿವರಿಸಿದ್ದಾರೆ.

ಗೋಳ್ವಾಲ್ಕರ್ ತನ್ನ, ‘ಮುಖಾಮುಖಿ’ ಪುಸ್ತಕದಲ್ಲಿ ಆರೆಸ್ಸೆಸ್ ಮುಖ್ಯಸ್ಥರು ಅನುಸರಿಸುತ್ತಿರುವ ಜಾತಿಯನ್ನು ಉಳಿದವರು ಪೂಜಿಸಬೇಕು ಎಂದು ಹೇಳಿದ್ದಾರೆ, ಮತ್ತೊಂದು ಪುಸ್ತಕ ‘ಬಂಚ್ ಆಫ್‌ ಥಾಟ್ಸ್‌’ನಲ್ಲಿ ಹಿಂದು ಧರ್ಮದಲ್ಲಿ ದೇವರು ಜಾತಿಯ ಮೂಲಕ ಸ್ವತಃ ಅಸ್ತಿತ್ವದಲ್ಲಿದ್ದಾನೆ. ಹಿಂದು ಸಮಾಜದಲ್ಲಿ ಬ್ರಾಹ್ಮಣ ಸಮುದಾಯ ಆರಾಧನೆಗೆ ಅರ್ಹವಾಗಿದೆ. ಬ್ರಾಹ್ಮಣರು ದೇವರ ತಲೆಯಿಂದ ಜನಿಸಿದವರು ಎಂಬುದನ್ನು ಮತ್ತಷ್ಟು ಪ್ರತಿಪಾದಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

1960ರಲ್ಲಿ, ಗೋಳ್ವಾಲ್ಕರ್ ಜಾತಿಯನ್ನು ಪ್ರಾಣಿಗಳಲ್ಲಿ ಕ್ರಾಸ್‌ ಬ್ರೀಡಿಂಗ್ ಮಾಡುವಂತೆ ಮನುಷ್ಯರಲ್ಲಿಯೂ ಮೇಲ್ಜಾತಿಯ ಪುರುಷರನ್ನು ಬಳಸಬಹುದು ಎಂಬುದನ್ನು ಹೇಳಿದ್ದರು. ಇಂತದೊಂದು ಅನಿಷ್ಟ ಪದ್ದತಿ, ತಳ ವರ್ಗದ ಮಹಿಳೆ ವಿವಾಹವಾದರೆ, ಆಕೆಯ ಮೊದಲ ರಾತ್ರಿ ಪ್ರಬಲ ಜಾತಿಯ ಪುರುಷನೊಂದಿಗೆ ನಡೆಯಬೇಕೆಂದು ಹೇಳುತ್ತದೆ. ಊಳಿಗಮಾನ್ಯ ಕಾಲದಲ್ಲಿ ಇಂತಹ ಪದ್ದತಿಯನ್ನು ಯುರೋಪ್‌ನಲ್ಲಿ ‘ಡ್ರೊಯಿಟ್ ಡು ಸೀಗ್ನೂರ್’ (ಅಧಿಪತಿಯ ಹಕ್ಕು) ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಅಲ್ಲಿ ಈ ಪದ್ದತಿಯು, ಪ್ರದೇಶವನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡಿದ್ದ ಅಧಿಪತಿಗಳು ಮಹಿಳೆಯರ ಮದುವೆಯ ಮೊದಲ ರಾತ್ರಿಗಳಲ್ಲಿ ಆ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಲು ಅನುವು ಮಾಡಿಕೊಡುತ್ತಿತ್ತು. ಇದು ದುರ್ಬಲ ವರ್ಗದ ಮೇಲಿನ ನೇರ ಶೋಷಣೆಯೇ ಹೊರತು, ಬೇರಾವುದೇ ಉದಾತ್ತ ಉದ್ದೇಶವಿರಲಿಲ್ಲ ಎಂಬುದು ಗೋಳ್ವಾಲ್ಕರ್‌ ಅರಿವಿಗೆ ಇದ್ದಂತೆ ಕಾಣುವುದಿಲ್ಲ. ಇದ್ದರೂ, ಬ್ರಾಹ್ಮಣ್ಯವನ್ನು ಪ್ರತಿಪಾದಿಸುತ್ತಿದ್ದ ಅವರಿಗೆ, ಇಂತಹ ಸಂಸ್ಕೃತಿ ಮೇಲೆ ಲಾಲಸೆ ಇದ್ದಿರಬಹುದು.

ಇಂತಹ ವಿಷಯಗಳನ್ನು ಆರ್‌ಎಸ್‌ಎಸ್‌ ಕಾರ್ಯಕರ್ತರು ಅಥವಾ ಬಿಜೆಪಿಯವರು ಈಗ ಮಾತನಾಡುತ್ತಿಲ್ಲ ಅಥವಾ ಮುನ್ನೆಲೆಗೆ ತರುತ್ತಿಲ್ಲ ಎಂದರೆ, ಈ ಹೇಳಿಕೆಗಳನ್ನು ಆರ್‌ಎಸ್‌ಎಸ್‌ ಹಿಂತೆಗೆದುಕೊಂಡಿದೆ ಎಂದಲ್ಲ. ಅದನ್ನು ಆರ್‌ಎಸ್‌ಎಸ್‌ ಪ್ರಸ್ತುತ ರಾಜಕೀಯದಲ್ಲಿ ಮೌನವಾಗಿರಿಸಿದೆ ಎಂದರ್ಥ.

ದೇವನೂರ ಮಹಾದೇವ ಅವರು ಹಲವಾರು ಅವಲೋಕನಗಳನ್ನು ಮಾಡಿದ್ದಾರೆ. ”ಭಾರತದಲ್ಲಿಯೇ ಹುಟ್ಟಿದ ಹಲವಾರು ಧರ್ಮಗಳನ್ನು ಆರ್‌ಎಸ್‌ಎಸ್‌ ಅವಮಾನಿಸಿದೆ. ಅವರು ಪೂಜಿಸಲು ಬಯಸಿದ ಮಾರ್ಗವನ್ನು ತಿರಸ್ಕರಿಸಿದೆ. ಭಾರತದಲ್ಲಿ ಹುಟ್ಟಿ ಚಾತುರ್ವರ್ಣ ಕ್ರಮವನ್ನು ತಿರಸ್ಕರಿಸಿದ ಜೈನ, ಬೌದ್ಧ, ಸಿಖ್, ಲಿಂಗಾಯತ ಮತ್ತು ಇತರ ಧರ್ಮಗಳ ಹಲ್ಲು ಮತ್ತು ಉಗುರುಗಳನ್ನು ಕಿತ್ತುಹಾಕಲು ಆರ್‌ಎಸ್‌ಎಸ್‌ ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ. ಯಾಕೆಂದರೆ, ಆರ್‌ಎಸ್‌ಎಸ್‌ ವಾಸ್ತವವಾಗಿ ಚಿಂತನೆಗಳನ್ನು ಪ್ರೋತ್ಸಾಹಿಸುವುದಿಲ್ಲ. ಅದು, ಧರ್ಮದ ಕಟ್ಟಲೆಗಳಲ್ಲಿಯೇ ಜನರು ಸಿಲುಕಿಕೊಂಡು, ನಲುಗಬೇಕೆಂದು ಬಯಸುತ್ತದೆ.

ಆರ್‌ಎಸ್‌ಎಸ್‌ ತನ್ನ ಕಾರ್ಯಕರ್ತರಿಗೆ ಸಂವಿಧಾನವೇ ದೋಷಪೂರಿತವಾಗಿದೆ. ಸಂವಿಧಾನವು ಹಿಂದು ಧರ್ಮದ ಪ್ರತಿಪಾದನೆಗೆ ಅಡ್ಡಿಯಾಗಿದೆ ಎಂಬುದನ್ನು ಕಲಿಸುತ್ತಿದೆ. ಈ ಆರ್‌ಎಸ್‌ಎಸ್‌ಗೆ ರಾಜ್ಯಗಳ ಪರಿಕಲ್ಪನೆಯೂ ಅಗತ್ಯವಿಲ್ಲ. ಅದು, ಹಿಂದು ರಾಷ್ಟ್ರ – ಹಿಂದು ಪ್ರದೇಶ ಒಂದೇ ಆಗಿರಬೇಕೆಂದು ಬಯಸುತ್ತದೆ. ಕರ್ನಾಟಕ, ಗುಜರಾತ್ ಅಥವಾ ಬಂಗಾಳದ ರೀತಿಯಲ್ಲಿ ಬಹುತ್ವದ ಅಸ್ತಿತ್ವವೇ ಸರಿಯಲ್ಲ ಎಂದು ಹೇಳುತ್ತದೆ. ವೈವಿಧ್ಯತೆಯ ಮೇಲಿನ ಏಕರೂಪತೆಯನ್ನು ಸಂಘವು ವಿರೋಧಿಸುತ್ತದೆ. ಅದು, ಆದಿವಾಸಿಗಳನ್ನು ‘ವನವಾಸಿಗಳು’ ಎಂದು ಕರೆಯುತ್ತದೆ. ಅವರ ಸ್ಥಳೀಯ ಅಸ್ಮಿತೆ ಮತ್ತು ಗುರುತನ್ನು ನಾಶಮಾಡುವ ಕುತಂತ್ರ ಹೊಂದಿದೆ.

ದೇವನೂರ ಮಹಾದೇವ ಹಿಂದುತ್ವವನ್ನು ‘ಗೋಮುಖ ವ್ಯಾಘ್ರ’ ಎಂದು ಕರೆದಿದ್ದಾರೆ. ಈ ವ್ಯಾಘ್ರ ಭಾರತೀಯ ಸಮಾಜವನ್ನು ಒಳಗಿನಿಂದ ತಿನ್ನುತ್ತಿದೆ. ಪ್ರಧಾನಮಂತ್ರಿಯವರು ಜನಪ್ರಿಯರಾಗಿದ್ದಾರೆ. ಆದರೆ, ಅವರು ಕೇವಲ ‘ಉತ್ಸವ ಮೂರ್ತಿ’ಯಾಗಿದ್ದಾರೆ. ಮೆರವಣಿಗೆಯಲ್ಲಿ ಕರೆದೊಯ್ಯುವ ವಿಗ್ರಹದ ಪ್ರತಿರೂಪವಾಗಿದ್ದಾರೆ. ಮೋದಿ ಉತ್ಸವ ಮೂರ್ತಿಯಾಗಿದ್ದರೆ, ಅವರ ಹಿಂದಿರುವ ನಿಜವಾದ ದೇವರು ನಾಗಪುರದ ಆರ್‌ಎಸ್‌ಎಸ್ ದೇಗುಲದೊಳಗೆ ಕುಳಿತಿದ್ದಾನೆ. ‘ಉತ್ಸವ ಮೂರ್ತಿ’ಗೆ ಅಗತ್ಯವಿರುವ ಏಕೈಕ ಅರ್ಹತೆ, ತನ್ನನ್ನು ಪ್ರದರ್ಶಿಸಿಕೊಳ್ಳುವುದು ಮತ್ತು ಜನರಿಗೆ ಮಂಕುಬೂದಿ ಎರಚಿ, ಮಂತ್ರಮುಗ್ಧಗೊಳಿಸುವುದು. ಇಂದು ನಾವು ನೋಡುತ್ತಿರುವುದು ಇದನ್ನೇ” ಎಂದು ಮಹಾದೇವ ಹೇಳುತ್ತಾರೆ.

ಈ ಗೋಮುಖ ವ್ಯಾಘ್ರನಿಂದ ಭಾರತವನ್ನು ರಕ್ಷಿಸಲು ದೇಶದ ಪ್ರತಿ ಹಳ್ಳಿ ಎಚ್ಚೆತ್ತುಕೊಳ್ಳಬೇಕು. ಯುವಜನರು ಸರದಿಯಲ್ಲಿ ಗಸ್ತು ತಿರುಗಬೇಕು. ಎಲ್ಲರೂ ಜಾಗೃತಗೊಳ್ಳಬೇಕು. ಏಕೆಂದರೆ, ಉತ್ಸವ ಮೂರ್ತಿಯನ್ನು ಮುಂದಿಟ್ಟಿರುವ ಕಳ್ಳರು ಬೇರೆ ಬೇರೆ ವೇಷಗಳಲ್ಲಿ ಬರಬಹುದು; ಅವರು ದೇವಸ್ಥಾನದ ನಿರ್ವಹಣೆ ಹೆಸರಿನಲ್ಲಿ ಬರಬಹುದು. ಸುಳ್ಳು ಸುದ್ದಿಗಳ ಹೊತ್ತು ತರಬಹುದು. ಸ್ತೋತ್ರ ಗಾಯನವನ್ನು ಆಯೋಜಿಸಬಹುದು. ಅವರ ಅಜೆಂಡಾಗಳನ್ನು ಬಹಿರಂಗ ಪಡಿಸಲು ನಮಗಿರುವ ಏಕೈಕ ಮಾರ್ಗ – ಜಾಗೃತಿ. ನಾವು ವಿವೇಕಯುತ ಧ್ವನಿಯೊಂದಿಗೆ ಸರಿ-ತಪ್ಪುಗಳ ಬಗ್ಗೆ ಮಾತನಾಡಬೇಕು. ಪ್ರೀತಿ, ಸಹಿಷ್ಣುತೆ, ನ್ಯಾಯದಂತಹ ಮಾತುಗಳು ನಮ್ಮ ಸಮಾಜದೊಳಗಿಂದ ಕೇಳಿಬರಬೇಕು.

ಇದು ದೇವನೂರ ಮಹಾದೇವರ ಆಶಯ. ಇದು ನಮ್ಮೆಲ್ಲರ ಆಶಯವೂ ಆಗಬೇಕು. ಭಾರತದ ಎಚ್ಚರಗೊಳ್ಳಬೇಕು. ಹಸುವಿನ ಮುಖವಾಡ ಧರಿಸಿರುವ ವ್ಯಾಘ್ರದ ಅಸಲಿಯತ್ತನ್ನು ಹೊರತಂದು, ಹೊರದಬ್ಬಬೇಕು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...