ಮುಂಬೈ ಹೈಕೋರ್ಟ್‌ನ ಸಂವಿಧಾನ ವಿರೋಧಿ ಟಿಪ್ಪಣಿಗಳು: ಸಿಪಿಐಎಂ ಪೊಲಿಟ್‍ಬ್ಯುರೊ ಖಂಡನೆ

Date:

ಗಾಝಾದಲ್ಲಿ ನಡೆಯುತ್ತಿರುವ ನರಹತ್ಯಾಕಾಂಡದ ವಿರುದ್ಧ ಪ್ರತಿಭಟನೆಗೆ ಅವಕಾಶ ಕೊಡಲು ಮುಂಬೈ ಪೊಲೀಸ್ ನಿರಾಕರಿಸಿರುವುದನ್ನು ಪ್ರಶ್ನಿಸಿ ಮುಂಬೈ ಹೈಕೋರ್ಟ್‌ನಲ್ಲಿ ಹಾಕಿದ್ದ ಅರ್ಜಿಯನ್ನು ತಿರಸ್ಕರಿಸುತ್ತ ಪೀಠವು ಮಾಡಿರುವ ಸಂವಿಧಾನ-ವಿರೋಧಿ ಟಿಪ್ಪಣಿಗಳನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ.

ಅರ್ಜಿಯನ್ನು ತಿರಸ್ಕರಿಸಿದ ಪೀಠ ಬಾಂಬೆ ಹೈಕೋರ್ಟ್, “ನಮ್ಮ ದೇಶದಲ್ಲೇ ಸಾಕಷ್ಟು ಸಮಸ್ಯೆಗಳಿವೆ. ನೀವು ‘ದೂರದೃಷ್ಟಿ ಇಲ್ಲದವರು’ ಎಂದು ಹೇಳಲು ವಿಷಾದಿಸುತ್ತೇವೆ. ನಿಮ್ಮ ದೇಶವನ್ನೇ ಒಮ್ಮೆ ನೋಡಿ. ದೇಶಪ್ರೇಮಿಗಳಾಗಿ. ಇದು ದೇಶಪ್ರೇಮವಲ್ಲ” ಎಂದು ಹೇಳಿದೆ.

ಇದನ್ನು ಓದಿದ್ದೀರಾ? ಬೆಂಗಳೂರು | ಪ್ಯಾಲೆಸ್ತೀನ್ ಪರ ಪ್ರತಿಭಟನೆ; ಪ್ರತಿಭಟನಾಕಾರರ ಬಂಧನ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಖಂಡಿಸಿರುವ ಸಿಪಿಐಎಂ, “ಸಿಪಿಐಎಂ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸುತ್ತ ನ್ಯಾಯಾಲಯ ನಮ್ಮ ದೇಶಪ್ರೇಮವನ್ನು ಪ್ರಶ್ನಿಸುವ ಮಟ್ಟದವರೆಗೆ ಹೋಗಿದೆ. ವ್ಯಂಗ್ಯವೆಂದರೆ, ಈ ಪೀಠಕ್ಕೆ ಒಂದು ರಾಜಕೀಯ ಪಕ್ಷದ ಹಕ್ಕುಗಳನ್ನು ಪ್ರತಿಷ್ಠಾಪಿಸಿರುವ ಸಂವಿಧಾನದ ನಿಬಂಧನೆಗಳ ಬಗೆಗಾಗಲೀ, ಅಥವಾ ನಮ್ಮ ದೇಶದ ಚರಿತ್ರೆಯ ಬಗೆಗಾಗಲೀ ಮತ್ತು ಪ್ಯಾಲೆಸ್ತೇನಿಯನ್ನರೊಂದಿಗೆ ಮತ್ತು ಅವರ ನ್ಯಾಯಬದ್ಧ ತಾಯ್ನಾಡಿನ ಹಕ್ಕಿನೊಂದಿಗೆ ನಮ್ಮ ಜನತೆಯ ಸೌಹಾರ್ದದ ಬಗೆಗಾಗಲೀ ಅರಿವೇ ಇಲ್ಲದಿರುವಂತೆ ಕಾಣುತ್ತದೆ. ಪೀಠದ ಟಿಪ್ಪಣಿಗಳಲ್ಲಿ ಕೇಂದ್ರ ಸರ್ಕಾರದ ನಿಲುವಿನಲ್ಲಿನ ವಿಭಿನ್ನ ರಾಜಕೀಯ ಪಕ್ಷಪಾತದ ವಾಸನೆ ಸೂಸುತ್ತಿವೆ” ಎಂದು ಖೇದ ವ್ಯಕ್ತಪಡಿಸಿದೆ.

“ಇದು ಎಂತಹ ಧೂಳು ಎಬ್ಬಿಸಬಹುದು ಎಂದು ನಿಮಗೆ ತಿಳಿದಿಲ್ಲ- ಪ್ಯಾಲೆಸ್ತೀನ್‍ ಅಥವಾ ಇಸ್ರೇಲ್ ಪಕ್ಷ ವಹಿಸುವುದು. ನೀವು ಯಾಕೆ ಹೀಗೆ ಮಾಡಬಯಸುತ್ತೀರಿ? ನೀವು ಪ್ರತಿನಿಧಿಸುವ ಪಕ್ಷವನ್ನು ನೋಡಿದರೆ, ಇದು ನಮ್ಮ ದೇಶದ ವಿದೇಶಾಂಗ ವ್ಯವಹಾರಗಳಿಗೆ ಏನು ಮಾಡಬಹುದು ಎಂದು ನಿಮಗೆ ತಿಳಿದಿಲ್ಲ ಎಂದು ಕಾಣುತ್ತದೆ” ಎಂದು ಪೀಠ ಹೇಳಿತು.

ಮುಂದುವರೆದು “ನೀವು ಭಾರತದಲ್ಲಿ ನೋಂದಣಿಯಾದ ಒಂದು ಸಂಘಟನೆ. ನೀವು ಕಸ ರಾಶಿ ಹಾಕುವುದು, ಪರಿಸರ ಮಾಲಿನ್ಯ, ಚರಂಡಿ ವ್ಯವಸ್ಥೆ, ನೆರೆ ಮುಂತಾದ ವಿಷಯಗಳನ್ನು ಎತ್ತಿಕೊಳ್ಳಬಹುದಿತ್ತು. ನಾವು ಉದಾಹರಣೆಗಳನ್ನು ಕೊಡುತ್ತಿದ್ದೇವಷ್ಟೇ. ನೀವು ಅವುಗಳ ಬಗ್ಗೆ ಪ್ರತಿಭಟಿಸುತ್ತಿಲ್ಲ, ಬದಲಿಗೆ ನಮ್ಮ ದೇಶದ ಹೊರಗೆ ಸಾವಿರಾರು ಮೈಲಿಗಳಾಚೆ ಏನೋ ನಡೆಯುತ್ತಿದ್ದರೆ ಅದನ್ನು ಪ್ರತಿಭಟಿಸುತ್ತಿದ್ದೀರಿ” ಎಂದು ಟಿಪ್ಪಣಿ ಮಾಡಿತು.

ಇದನ್ನು ಓದಿದ್ದೀರಾ? ಮಂಗಳೂರು | ಪ್ಯಾಲೆಸ್ತೀನ್ ಪರ ಶಾಂತಿಯುತ ಪ್ರತಿಭಟನೆ ನಡೆಸಿದವರ ಮೇಲೆ ಎಫ್‌ಐಆರ್‌ ದಾಖಲಿಸಿದ ಪೊಲೀಸರು!

“ಈ ಟಿಪ್ಪಣಿಗಳು ಕಳೆದ ಶತಮಾನದ 40ರ ದಶಕದಲ್ಲಿ ಮಹಾತ್ಮ ಗಾಂಧಿ, ರಾಷ್ಟ್ರೀಯ ಆಂದೋಲನ ಮತ್ತು ನಂತರ ಸ್ವತಂತ್ರ ಭಾರತದ ವಿದೇಶಾಂಗ ಧೋರಣೆ ಪ್ಯಾಲೆಸ್ತೀನ್‍ ಜನತೆಯ ಸ್ವಾತಂತ್ರ್ಯ ಮತ್ತು ತಾಯ್ನಾಡಿನ ಹಕ್ಕನ್ನು ಬೆಂಬಲಿಸುವಲ್ಲಿ ಎಂದೂ ಹಿಂಜರಿದಿಲ್ಲ ಎಂಬ ಸಂಗತಿಯನ್ನು ನಿರ್ಲಕ್ಷಿಸುತ್ತವೆ” ಎಂದು ಸಿಪಿಐಎಂ ಪೊಲಿಟ್‍ಬ್ಯುರೊ ಹೇಳಿದೆ.

“ಅಲ್ಲದೆ, ಈ ಪೀಠ ಇಸ್ರೇಲಿ ಆಕ್ರಮಣಕ್ಕೆ ಜಾಗತಿಕವಾಗಿ ವ್ಯಕ್ತಗೊಂಡಿರುವ ನಿಸ್ಸಂದಿಗ್ಧ ಖಂಡನೆಯನ್ನು ಮತ್ತು ವಿಶ್ವಸಂಸ್ಥೆಯ ಸಂಘಟನೆಗಳ ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯದ ನಿಲುವುಗಳನ್ನು ಅರಿತಿಲ್ಲ ಎಂಬ ಸಂಗತಿಯನ್ನು ಕೂಡ ಬಟ್ಟಬಯಲಿಗೆ ತಂದಿದೆ” ಎಂದಿದೆ.

ಹಾಗೆಯೇ “ಇಂತಹ ದೂಷಣೀಯ ನಿಲುವನ್ನು ಖಡ ಖಂಡಿತವಾಗಿ ತಿರಸ್ಕರಿಸುವಲ್ಲಿ ನಮ್ಮ ಜತೆಗೂಡಿ” ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ದೇಶದ ಸ್ವಾತಂತ್ರ್ಯ ಪ್ರಿಯ ಮತ್ತು ಪ್ರಜಾಪ್ರಭುತ್ವಪ್ರಿಯ ಜನಗಳಿಗೆ ಮನವಿ ಮಾಡಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...