ರಾಜ್ಯದಾದ್ಯಂತ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಚರ್ಚೆ ಜೋರಾಗಿದ್ದು, ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಮಾಡಿ ದಲಿತರಿಗೆ ಕೊಡುವುದಿದ್ದರೆ ಮಾದಿಗ ಎಡಗೈ ಸಮುದಾಯಕ್ಕೆ ಸೇರಿದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಪರಿಗಣಿಸಬೇಕೆಂದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಸಂಚಾಲಕ ಪಿ.ಜೆ.ಮಹಾಂತೇಶ್ ಒತ್ತಾಯಿಸಿದ್ದಾರೆ.

“ಸಚಿವ ಮುನಿಯಪ್ಪ ಏಳು ಬಾರಿ ಸಂಸದರಾಗಿ, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ, ರಾಜ್ಯದಲ್ಲಿ ಈಗಲೂ ಸಚಿವರಾಗಿದ್ದಾರೆ, ರಾಜ್ಯದ ಕಾಂಗ್ರೆಸ್ ಪಕ್ಷದ ದಲಿತ ರಾಜಕಾರಣಿಗಳ ಪೈಕಿ ಅತ್ಯಂತ ಹಿರಿಯರು ಹಾಗೂ ಕಳಂಕ ರಹಿತರಾಗಿರುವುದು ಕೆ.ಎಚ್.ಮುನಿಯಪ್ಪನವರ ಹೆಚ್ಚುಗಾರಿಕೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ ? ದಾವಣಗೆರೆ | ಸರ್ಕಾರಿ ಕಾಲೇಜುಗಳಲ್ಲಿ ಉತ್ತಮ ಜೆಇಇ ನೀಟ್ ತರಬೇತಿಗೆ ಕರುನಾಡ ಸಮರಸೇನೆ ಆಗ್ರಹ
“ವಿಶಾಲ ಮೈಸೂರು ರಾಜ್ಯ ರಚನೆಯಿಂದ ಕರ್ನಾಟಕದಲ್ಲಿ 1956ರಿಂದ ಈವರೆಗೆ ಯಾವ ಪಕ್ಷದಿಂದಲೂ ಶೋಷತರಲ್ಲೆ ಶೋಷಿತರೆನಿಸಿರುವ ಮಾದಿಗ ಎಡಗೈ ಸಮುದಾಯಕ್ಕೆ ಮುಖ್ಯಮಂತ್ರಿಯಾಗುವ ಅವಕಾಶ ನೀಡಿಲ್ಲ. ಸಾಮಾಜಿಕ ನ್ಯಾಯದ ಮಾತನಾಡುವ ಕಾಂಗ್ರೆಸ್ ಪಕ್ಷ ಮತ್ತು ಆ ಪಕ್ಷದ ಹೈಕಮಾಂಡ್ ಯಾವುದೆ ಒತ್ತಡಕ್ಕೆ ಮಣಿಯದೆ ಮಾದಿಗ ಎಡಗೈ ಸಮುದಾಯದ ಹಿರಿಯ ರಾಜಕಾರಣಿ ಕೆ.ಎಚ್.ಮುನಿಯಪ್ಪನವರಿಗೆ ಆಧ್ಯತೆ ನೀಡಬೇಕು” ಅವರು ಒತ್ತಾಯಿಸಿದ್ದಾರೆ.





