ದಾವಣಗೆರೆ ಜಿಲ್ಲೆ ವಿವಿಧ ಮಾದಿಗ ಸಂಘಟನೆಗಳ ಒಕ್ಕೂಟದಿಂದ, ಒಳ ಮೀಸಲಾತಿ ಇಲ್ಲದೆ ಹಳೆ ಮೀಸಲಾತಿಯ ಆಧಾರಿತವಾಗಿ ನೇಮಕಾತಿ ಪ್ರಕ್ರಿಯೆ ಮಾದಿಗ ಸಮಾಜಕ್ಕೆ ಮಾಡುವ ದೊಡ್ಡ ಮೋಸವಾಗಿದೆ. ಇದನ್ನು ವಿರೋಧಿಸಿ ದಾವಣಗೆರೆ ಬಂದ್ ವಿಚಾರವಾಗಿ ತುರ್ತು ಸಭೆಯನ್ನು ಕರೆಯಲಾಗಿದ್ದು, ಈ ಸಭೆಗೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ವಿವಿಧ ದಲಿತ ಮತ್ತು ಮಾದಿಗ ಪರ ಸಂಘಟನೆಗಳ ಮುಖಂಡರು ಭಾಗವಹಿಸಿ, ಮಾದಿಗರ 35 ವರ್ಷಗಳ ಹೋರಾಟದ ಪ್ರತಿಫಲವಾಗಿ ರಾಜ್ಯಪಾಲರಿಂದ ಅಂಕಿತಗೊಂಡು ಕಾಯ್ದೆಯಾಗಿ ರೂಪಗೊಂಡ ಒಳ ಮೀಸಲಾತಿ ವರ್ಗೀಕರಣವನ್ನು ಕಾಂಗ್ರೆಸ್ ಸರ್ಕಾರದ ಕೆಲವು ಸಚಿವರುಗಳು ವಿರೋಧಿಸಿದ್ದು, ಒಳ ಮೀಸಲಾತಿಯನ್ನೇ ನಾಶ ಮಾಡಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ, ದಾವಣಗೆರೆ ಬಂದ್ ಗೆ ನಿರ್ಧಾರ ಕೈಗೊಳ್ಳಲಾಯಿತು.

56 ಸಾವಿರ ಉದ್ಯೋಗಗಳನ್ನು, ಒಳ ಮೀಸಲಾತಿ ಇಲ್ಲದೆ ಹಳೆ ಮೀಸಲಾತಿಯ ಆಧಾರಿತ ನೇಮಕಾತಿ ಪ್ರಕ್ರಿಯೆ ಮಾದಿಗ ಸಮಾಜಕ್ಕೆ ಮಾಡುವ ದೊಡ್ಡ ಮೋಸವಾಗಿದೆ, ಇದರ ವಿರುದ್ಧ ಎಲ್ಲಾ ದಾವಣಗೆರೆ ಜಿಲ್ಲೆಯ ಸಮಸ್ತ ಮಾದಿಗರ ಸಮಾಜದಿಂದ ಒಕ್ಕೂರಲಿನಿಂದ ಮಾರ್ಚ್ 06 ರಂದು ದಾವಣಗೆರೆ ಬಂದ್ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು,
ಸಭೆಯ ನಂತರ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಕೆ ಬಸವಂತಪ್ಪನವರನ್ನು ಸಮಾಜದವರು ಮುತ್ತಿಗೆ ಹಾಕಿ ಮಾದಿಗ ಸಮಾಜದ ಪರವಾಗಿ ಒಳ ಮೀಸಲಾತಿ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು, ಸರ್ಕಾರ ಮತ್ತು ಸಚಿವರು ಹಾಗೂ ಶಾಸಕರುಗಳ ವಿರುದ್ಧ ದಿಕ್ಕಾರವನ್ನು ಕೂಗಿದ ಮಾದಿಗ ಪ್ರತಿಭಟನಾಕಾರರು ಶಾಸಕರನ್ನು ಪಟ್ಟು ಹಿಡಿದು ಒಳ ಮೀಸಲಾತಿಯನ್ನು ಜಾರಿ ಮಾಡಿಸಬೇಕೆಂದು ಆಗ್ರಹಿಸಿದರು,
ಸಮಾಜದ ಮುಖಂಡರಾದ ಆಲೂರು ನಿಂಗರಾಜ ಮಾತನಾಡಿ “ನಮ್ಮ ಸಮಾಜದ ಪ್ರತಿನಿಧಿಯಾಗಿ ನೀವುಗಳು ಸದನದಲ್ಲಿ ಮಾತನಾಡದೆ ಇರುವುದನ್ನು ನಾವು ಖಂಡಿಸುತ್ತೇವೆ, ಸಮಾಜದ ಋಣವನ್ನು ತೀರಿಸುವ ನೀವುಗಳು ಸರ್ಕಾರದ ಕಿವಿ ಹಿಂಡಿ, ನಮ್ಮ ಸಮಾಜಕ್ಕೆ ಒಳಮೀಸಲಾತಿಯನ್ನು ಯಥಾವತ್ತಾಗಿ ಜಾರಿ ಮಾಡಿಸಿ ನ್ಯಾಯವನ್ನು ಕೊಡಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್ | ದಾವಣಗೆರೆ ಜನತೆಯ ನಿರೀಕ್ಷೆಗಳೇನು? ಮುಖಂಡರು ಹೇಳುವುದೇನು?
ಮಾಜಿ ಕಾರ್ಪೊರೇಟ್ ಎಂ ಹಾಲೇಶ್, ಮಾದಿಗ ಸಮಾಜದ ಹಿರಿಯ ಮುಖಂಡರಾದ ಎಚ್ ವಿಶ್ವನಾಥ್, ಮಾದಿಗ ದಂಡೋರ ಅಧ್ಯಕ್ಷ ಎಚ್ ಸಿ ಗುಡ್ಡಪ್ಪ, ಸಾಹಿತಿ ಹುಚ್ಚಂಗಿ ಪ್ರಸಾದ್, ಡಿಎಸ್ಎಸ್ ಸಂಚಾಲಕರಾದ ರಾಘವೇಂದ್ರ ಕಡೆಮನಿ ಹಿರಿಯದಲಿತ ಹೋರಾಟಗಾರರಾದ ಮಲ್ಲೇಶಪ್ಪ ಹರಿಹರ, ಕಡ್ತಿ ಅಂಜಿನಪ್ಪ, ಭೀಮಾರ್ಮಿ ಜಿಲ್ಲಾ ಸಂಚಾಲಕ ನಿಂಗರಾಜ್ ಚಿಕ್ಕನಹಳ್ಳಿ , ಪಿ ಜೆ ಮಹಾಂತೇಶ್ ತಾಲೂಕ ಸಂಚಾಲಕರು ಹರಿಹರ ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಕುಂದುವಾಡ ಮಂಜುನಾಥ್, ರವಿಕುಮಾರ್ ಎಂ ಕೆ ಟಿ ನಗರ, ರವಿಕುಮಾರ್ ಟಿ, ಚೆನ್ನಗಿರಿ ತಾಲೂಕ ಸಂಚಾಲಕರಾದ ಪಾಂಡಮಟ್ಟಿ ಪ್ರಭಾಕರ್, ಚೆನ್ನಗಿರಿ ಮೂರ್ತಿ, ಕೆಂಚಮನಹಳ್ಳಿ ರುದ್ರೇಶ್, ಗುಂಗುರು ಮಂಜುನಾಥ, ಗುನ್ನೂರ್ ಬಸವರಾಜ್, ಮಾಂತೇಶ್ ಹಾಲವರ್ತಿ, ಶಾಮ್ ವಕೀಲರು, ಮಂಜಪ್ಪ ವಕೀಲರು ಮತ್ತು ಇತರರು ಇದ್ದರು.





