ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್ ಮತ್ತು ಅಮೆರಿಕ: ಏನದು ಎಪ್‌ಸ್ಟೀನ್ ಫೈಲ್ಸ್?

Date:

ಪ್ರಪಂಚದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕ, ಟ್ರಂಪ್ ಮತ್ತು ಮಸ್ಕ್ ಎಂಬ ಚಿಲ್ಲರೆ ವ್ಯಾಪಾರಸ್ಥರಿಂದ ಭಾರೀ ಮುಜುಗರಕ್ಕೀಡಾಗುತ್ತಿದೆ. ರಾಜಕಾರಣದೊಂದಿಗೆ ವಾಣಿಜ್ಯ ವ್ಯವಹಾರ ಬೆರೆಸಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದ್ದಷ್ಟೇ ಅಲ್ಲ, ಈಗ ಅನೈತಿಕತೆಯ ಮಸಿ ಮೆತ್ತಿಕೊಂಡು ನಿಂತಿದೆ.

ಜೆಫ್ರಿ ಎಪ್‌ಸ್ಟೀನ್– ಒಬ್ಬ ಕುಖ್ಯಾತ ಅಮೆರಿಕನ್ ಫೈನಾನ್ಸಿಯರ್ ಮತ್ತು ಸಾಮಾಜಿಕ ವ್ಯಕ್ತಿ. ಈತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಮಾನವ ಕಳ್ಳಸಾಗಾಣಿಕೆ ಆರೋಪಗಳಿಗೆ ಸಂಬಂಧಿಸಿದಂತೆ 2019ರಲ್ಲಿ ಬಂಧನಕ್ಕೊಳಗಾಗಿದ್ದ. ಈತನ ಮೇಲೆ, ಅಪ್ರಾಪ್ತ ಮಕ್ಕಳನ್ನು ಉನ್ನತ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳ ಬಳಿ ಕಳುಹಿಸಿದ್ದ ಗಂಭೀರ ಆರೋಪವಿದೆ. ಈತ ಖಾಸಗಿ ಕೆರೀಬಿಯನ್ ದ್ವೀಪಗಳಲ್ಲಿ ಹಾಗೂ ನ್ಯೂಯಾರ್ಕ್, ಫ್ಲೋರಿಡಾ, ನ್ಯೂ ಮೆಕ್ಸಿಕೊದಲ್ಲಿರುವ ಭವ್ಯ ಬಂಗಲೆಗಳಂತಹ ಅಡಗುತಾಣಗಳಲ್ಲಿ ‘ಎಲೀಟ್ ಬ್ರಾಥಲ್ ದಂಧೆ’ ನಡೆಸುತ್ತಿದ್ದ ಎಂಬ ಮಾಹಿತಿಯೂ ಇದೆ.

ಇಂತಹ ‘ಖ್ಯಾತ’ ವ್ಯಕ್ತಿಯ ಮೇಲೆ ಒಂದು ಫೈಲ್ ರಚಿಸಲಾಗಿದೆ. ಅದಕ್ಕೆ ‘ಎಪ್‌ಸ್ಟೀನ್ ಫೈಲ್ಸ್’ ಎಂದು ಕರೆಯುತ್ತಾರೆ. ‘ಎಪ್‌ಸ್ಟೀನ್ ಫೈಲ್ಸ್’ ಎಂಬುದು ಎಪ್‌ಸ್ಟೀನ್‌ಗೆ ಸಂಬಂಧಿಸಿದ ಕಾನೂನು ದಾಖಲೆಗಳು, ನ್ಯಾಯಾಲಯದ ದಾಖಲೆಗಳು, ಸಾಕ್ಷ್ಯಗಳು ಮತ್ತು ಇತರ ಸಂಬಂಧಿತ ಮಾಹಿತಿಗಳ ಸಂಗ್ರಹ. ಈ ಫೈಲ್‌ಗಳು ಎಪ್‌ಸ್ಟೀನ್ ವಿರುದ್ಧದ ಕೇಸ್‌ಗಳು, ಸಾಕ್ಷಿಗಳ ಹೇಳಿಕೆಗಳು, ಗುಪ್ತಚರ ಮಾಹಿತಿ ಮತ್ತು ಅವನ ಸಾಮಾಜಿಕ ಸಂಪರ್ಕಗಳ ಬಗೆಗಿನ ಮಾಹಿತಿಯನ್ನು ಒಳಗೊಂಡಿದೆ.

ಈ ದಾಖಲೆಗಳು, ಉನ್ನತ ಮಟ್ಟದ ವ್ಯಕ್ತಿಗಳಾದ ರಾಜಕಾರಣಿಗಳು, ಉದ್ಯಮಿಗಳು, ಗಣ್ಯವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು, ಎಪ್‌ಸ್ಟೀನ್‌ ಜೊತೆಗಿನ ಸಂಬಂಧಗಳನ್ನು ಬಹಿರಂಗಪಡಿಸುವ ಸಾಧ್ಯತೆಯಿಂದಾಗಿ ವಿವಾದಾತ್ಮಕವಾಗಿವೆ. ಎಪ್‌ಸ್ಟೀನ್‌ನ ಚಟುವಟಿಕೆಗಳು, ವಿಶೇಷವಾಗಿ ಅವನ ಖಾಸಗಿ ದ್ವೀಪವಾದ ಲಿಟಲ್ ಸೇಂಟ್ ಜೇಮ್ಸ್‌ನಲ್ಲಿ ನಡೆದ ಆರೋಪಿತ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದಂತೆ, ಈ ದಾಖಲೆಗಳು ಅಂತಾರಾಷ್ಟ್ರೀಯವಾಗಿ ಭಾರೀ ಗಮನ ಸೆಳೆದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2019ರಲ್ಲಿ ಎಪ್‌ಸ್ಟೀನ್‌ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಆತ ಆತ್ಮಹತ್ಯೆ ಮಾಡಿಕೊಂಡನೋ, ಯಾರಾದರೋ ಕೊಂದರೋ ಎನ್ನುವುದು ಇವತ್ತಿಗೂ ನಿಗೂಢವಾಗಿಯೇ ಉಳಿದಿದೆ. ಆತ ಸತ್ತರೂ ಆತನ ಫೈಲ್ಸ್ ಜೀವಂತವಾಗಿದೆ. ಆ ಫೈಲ್‌ಗಳಲ್ಲಿ ಏನಿದೆ, ಯಾಕೆ ಬಿಡುಗಡೆ ಮಾಡುತ್ತಿಲ್ಲ ಎಂಬ ಚರ್ಚೆಗಳು ಈಗ ಮುನ್ನೆಲೆಗೆ ಬಂದಿವೆ. ಅವು, ವಿಶೇಷವಾಗಿ ಸಾಮಾಜಿಕ ಮಾಧ್ಯಮ ಮತ್ತು ಸುದ್ದಿ ವಾಹಿನಿಗಳ ಮೂಲಕ, ಸದ್ಯ ಅಮೆರಿಕದಲ್ಲಿ ಜೋರಾಗಿ ಸದ್ದು ಮಾಡುತ್ತಿವೆ. ಆ ಸದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರತ್ತ ಗುರಿ ಮಾಡಿವೆ.

ಫೈಲ್ 1
ಜೆಫ್ರಿ ಎಪ್‌ಸ್ಟೀನ್ ಮತ್ತು ಫೈಲ್ಸ್

ಇದನ್ನು ಓದಿದ್ದೀರಾ?: ಔಷಧ ಆಮದಿನ ಮೇಲೆ ಶೇ. 200 ಸುಂಕ: ಭಾರತಕ್ಕೆ ಟ್ರಂಪ್ ಎಚ್ಚರಿಕೆ

ಸೋಜಿಗದ ಸಂಗತಿ ಎಂದರೆ, ಟ್ರಂಪ್ ವಿರುದ್ಧ ಸದ್ದು ಮಾಡುತ್ತಿರುವವರಲ್ಲಿ, ಒಂದು ಕಾಲದ ಗೆಳೆಯ ಎಲಾನ್ ಮಸ್ಕ್ ಮುಂಚೂಣಿಯಲ್ಲಿದ್ದಾರೆ. ಮಸ್ಕ್ ಒಡೆತನದ ‘ಎಕ್ಸ್’ ಪ್ಲಾಟ್‌ಫಾರ್ಮ್‌ನಲ್ಲಿ, ಎಪ್‌ಸ್ಟೀನ್ ಫೈಲ್‌ಗಳ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿವೆ. ಹಲವರು ಈ ಫೈಲ್‌ಗಳ ಬಿಡುಗಡೆಯಿಂದ ಉನ್ನತ ಮಟ್ಟದ ವ್ಯಕ್ತಿಗಳ ಭಾಗವಹಿಸುವಿಕೆ ಬಯಲಾಗಬಹುದು ಎಂದು ವಾದಿಸುತ್ತಿದ್ದಾರೆ. ಕೆಲವು ಪೋಸ್ಟ್‌ಗಳು ಡೊನಾಲ್ಡ್ ಟ್ರಂಪ್‌ರಂತಹ ರಾಜಕೀಯ ವ್ಯಕ್ತಿಗಳ ಜೊತೆ ಎಪ್‌ಸ್ಟೀನ್‌ನ ಸಂಬಂಧವನ್ನು ಫೋಟೋಸಹಿತ ಪೋಸ್ಟ್ ಮಾಡಿ ಚರ್ಚಿಸುತ್ತಿವೆ. ಇನ್ನು ಕೆಲವರು ಇದು ರಾಜಕೀಯ ದುರುಪಯೋಗ ಎಂದು ಅಲ್ಲಗಳೆದಿದ್ದಾರೆ.

ಈ ತೀವ್ರ ಬೆಳವಣಿಗೆಯಿಂದಾಗಿ, ಎಪ್‌ಸ್ಟೀನ್ ಫೈಲ್‌ಗಳನ್ನು ಸಾರ್ವಜನಿಕಗೊಳಿಸುವ ಕುರಿತಾಗಿ ಅಮೆರಿಕದ ನ್ಯಾಯಾಂಗ ವ್ಯವಸ್ಥೆ ಒಳಗೂ ಕೋಲಾಹಲವೆದ್ದಿದೆ. ಇತ್ತೀಚಿನ ವರದಿಗಳ ಪ್ರಕಾರ, ಅಮೆರಿಕದ ನ್ಯಾಯಾಂಗ ವ್ಯವಸ್ಥೆ ಈ ಫೈಲ್‌ಗಳ ಬಿಡುಗಡೆಯ ಕುರಿತು ತನ್ನ ನಿಲುವನ್ನು ಹೊರಹಾಕದಿರಲು ನಿರ್ಧರಿಸಿದೆ. ಏಕೆಂದರೆ, ನ್ಯಾಯಾಂಗ ವ್ಯವಸ್ಥೆಯ ಉನ್ನತ ಸ್ಥಾನಗಳಲ್ಲಿ ಕೂತಿರುವವರು ಟ್ರಂಪ್‌ನಿಂದ ನೇಮಕಗೊಂಡವರೇ ಆಗಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್- ಇಬ್ಬರೂ ಅಪ್ಪಟ ವ್ಯಾಪಾರಸ್ಥರು. ಅಸಾಧ್ಯ ಅಹಂಕಾರದ ಆಸಾಮಿಗಳು. ಅವರು ಒಟ್ಟುಗೂಡುವುದು ಸಾಧ್ಯವೇ ಇಲ್ಲ ಎನ್ನುವುದು ಅಮೆರಿಕದ ರಾಜಕಾರಣವನ್ನು ಹತ್ತಿರದಿಂದ ಬಲ್ಲವರ ಭವಿಷ್ಯವಾಗಿತ್ತು. ಅದು ಈಗ ನಿಜವಾಗಿದೆ.

ಎಲಾನ್ ಮಸ್ಕ್, ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸರ್ಕಾರಿ ದಕ್ಷತೆ ವಿಭಾಗದ ಮುಖ್ಯಸ್ಥರಾಗಿ ತಾವಿನ್ನು ಮುಂದುವರೆಯುವುದಿಲ್ಲ ಎಂದು ಘೋಷಿಸಿ, ರಾಜೀನಾಮೆ ಕೊಟ್ಟು ಟ್ರಂಪ್ ಸರ್ಕಾರದಿಂದ ಹೊರಬಂದಿದ್ದಾರೆ. ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.

ಅವರು ರಾಜೀನಾಮೆ ಕೊಟ್ಟರು, ಇವರು ಸ್ವೀಕರಿಸಿದರು ಎಂಬುದಕ್ಕಷ್ಟೇ ಇದು ನಿಲ್ಲುವುದಿಲ್ಲ. ನಿಲ್ಲುವಂಥದ್ದೂ ಅಲ್ಲ. ಏಕೆಂದರೆ, ಅವರಿಬ್ಬರು ಒಂದಾಗಿದ್ದು ಅಮೆರಿಕದ ಅಭಿವೃದ್ಧಿಗಲ್ಲ. ರಾಜಕಾರಣದ ಮೌಲ್ಯವೃದ್ಧಿಗೂ ಅಲ್ಲ. ಅಪ್ಪಟ ವ್ಯಾಪಾರಕ್ಕೆ, ಸಂಪತ್ತು ವೃದ್ಧಿಗೆ, ಸ್ವಾರ್ಥಕ್ಕೆ, ಪ್ರತಿಷ್ಠೆಗೆ. ಹೀಗಾಗಿ ಈ ದೋಸ್ತಿಯಲ್ಲಿ ಬಿರುಕುಂಟಾಗಿದೆ. ಆ ಬಿರುಕು ಸಾರ್ವಜನಿಕ ಹೇಳಿಕೆಗಳ ಮೂಲಕ ಕೆಸರೆರಚಾಟಕ್ಕೆ ತಿರುಗಿದೆ. ಆ ಆಟ ‘ಎಪ್‌ಸ್ಟೀನ್‌ ಫೈಲ್’ಗಳ ಸತ್ಯಗಳನ್ನು ಬಿಚ್ಚಿಡುತ್ತಿದೆ. ಅದು ಅಮೆರಿಕರನ್ನಷ್ಟೇ ಅಲ್ಲ, ಜಗತ್ತಿನ ಜನರನ್ನು ಬೆಚ್ಚಿ ಬೀಳಿಸುತ್ತಿದೆ.

ಹಾಗಾದರೆ ಆ ಫೈಲ್‌ಗಳಲ್ಲಿ ಇರುವುದೇನು? ಟ್ರಂಪ್‌ಗೂ ಎಪ್‌ಸ್ಟೀನ್‌ಗೂ ಸಂಬಂಧವೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ.

1980 ಮತ್ತು 1990ರ ದಶಕದಲ್ಲಿ ಟ್ರಂಪ್ ಮತ್ತು ಎಪ್‌ಸ್ಟೀನ್ ಇಬ್ಬರೂ ನ್ಯೂಯಾರ್ಕ್ ಮತ್ತು ಪಾಮ್ ಬೀಚ್‌ನಲ್ಲಿ ಸಾಮಾಜಿಕವಾಗಿ ಒಡನಾಡಿದ್ದರು. 1992ರ NBC ವಿಡಿಯೋದಲ್ಲಿ ಟ್ರಂಪ್ ಮತ್ತು ಎಪ್‌ಸ್ಟೀನ್ ಮಾರ್-ಎ-ಲಾಗೊದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಎಪ್‌ಸ್ಟೀನ್‌ನ ಫ್ಲೈಟ್ ಲಾಗ್‌ಗಳಲ್ಲಿ ಟ್ರಂಪ್‌ನ ಹೆಸರು ಏಳು ಬಾರಿ- ವಿಶೇಷವಾಗಿ ಅಕ್ಟೋಬರ್ 1993 ಮತ್ತು ಮೇ 1994ರಲ್ಲಿ ಕಾಣಿಸಿಕೊಂಡಿದೆ. ಈ ಫ್ಲೈಟ್‌ಗಳಲ್ಲಿ ಟ್ರಂಪ್, ಕೆಲವೊಮ್ಮೆ ತಮ್ಮ ಆಗಿನ ಪತ್ನಿ ಮಾರ್ಲಾ ಮ್ಯಾಪಲ್ಸ್ ಮತ್ತು ಮಗಳು ಟಿಫನಿ ಟ್ರಂಪ್ ಜೊತೆಗಿದ್ದರು ಎಂದು ದಾಖಲೆಗಳು ತೋರಿಸುತ್ತವೆ. ಜೆಫ್ರಿ ಎಪ್‌ಸ್ಟೀನ್ ಮತ್ತು ಘಿಸ್ಲೇನ್ ಮ್ಯಾಕ್ಸ್‌ವೆಲ್ ಕೂಡ ಈ ಫ್ಲೈಟ್‌ಗಳಲ್ಲಿ ಪ್ರಯಾಣಿಕರಾಗಿದ್ದರು ಎಂದು ದಾಖಲಾಗಿದೆ.

trump epstein 640x400 1
ಟ್ರಂಪ್ ಮತ್ತು ಎಪ್‌ಸ್ಟೀನ್

ಇದಲ್ಲದೆ ಎಪ್‌ಸ್ಟೀನ್‌ನ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಟ್ರಂಪ್‌ ಹೆಸರು ಇದೆ. ಆದರೆ ಇದು ಕೇವಲ ಸಾಮಾಜಿಕ ಸಂಪರ್ಕವನ್ನು ಸೂಚಿಸುತ್ತದೆ, ಅಪರಾಧದ ಒಡನಾಟವನ್ನಲ್ಲ ಎನ್ನಲಾಗುತ್ತಿದೆ. ಆದರೆ, 2016ರಲ್ಲಿ ವರ್ಜಿನಿಯಾ ಗಿಫ್ರೆ, ಗಿಫ್ರೆ-ಮ್ಯಾಕ್ಸ್‌ವೆಲ್ ಡಿಫಮೇಷನ್ ಕೇಸ್‌ನಲ್ಲಿ ಒಬ್ಬ ಸಾಕ್ಷಿಯಾಗಿ, ಟ್ರಂಪ್ ಯಾವುದೇ ಲೈಂಗಿಕ ಕಿರುಕುಳದಲ್ಲಿ ಭಾಗಿಯಾಗಿರಲಿಲ್ಲ ಎಂದು ಹೇಳಿದ್ದಾರೆ. ಆದರೆ, ಟ್ರಂಪ್ ಎಪ್‌ಸ್ಟೀನ್‌ನ ಮನೆಗೆ ಭೇಟಿ ನೀಡಿದ್ದರು, ಅಲ್ಲಿ ಅವರು ಅಶ್ಲೀಲ ಚಿತ್ರಗಳನ್ನು ನೋಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

2016ರಲ್ಲಿ ಜೇನ್ ಡೋ (ಕೇಟೀ ಜಾನ್ಸನ್ ಎಂದೂ ಕರೆಯಲಾಗುತ್ತದೆ) ಎಂಬಾಕೆ, ಎಪ್‌ಸ್ಟೀನ್ ಆಯೋಜಿಸಿದ್ದ ಪಾರ್ಟಿಗಳಲ್ಲಿ 13ನೇ ವಯಸ್ಸಿನಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಲಾಯಿತು ಎಂದು ಆರೋಪಿಸಿದ್ದರು. ಆ ದೂರು ದಾಖಲಾಗಿತ್ತು. 2024ರಲ್ಲಿ, ಮಾಜಿ ಮಾಡೆಲ್ ಸ್ಟೇಸಿ ವಿಲಿಯಮ್ಸ್ ಎಂಬಾಕೆ, 1993ರಲ್ಲಿ ಟ್ರಂಪ್ ತನ್ನನ್ನು ಎಪ್‌ಸ್ಟೀನ್‌ನ ಸಮ್ಮುಖದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು.

ಹಾಗೆಯೇ 2002ರಲ್ಲಿ ಟ್ರಂಪ್, ಎಪ್‌ಸ್ಟೀನ್‌ನನ್ನು ‘ಟೆರಿಫಿಕ್ ಗೈ’ ಎಂದು ಕರೆದಿದ್ದರು ಮತ್ತು ಯುವತಿಯರ ಬಗ್ಗೆ ಅವರಿಗೆ ಇರುವ ಆಸಕ್ತಿಯನ್ನು ಉಲ್ಲೇಖಿಸಿದ್ದರು. ಆದರೆ, 2004ರಲ್ಲಿ ಟ್ರಂಪ್ ಮತ್ತು ಎಪ್‌ಸ್ಟೀನ್ ಒಂದು ಆಸ್ತಿ ಖರೀದಿಯ ತಕರಾರಿನಿಂದಾಗಿ ಬೇರೆಯಾದರು ಎಂದು ವರದಿಗಳು ತಿಳಿಸಿವೆ. ಇದಾದ ನಂತರ ಟ್ರಂಪ್ ಎಪ್‌ಸ್ಟೀನ್‌ನೊಂದಿಗೆ ಸಂಪರ್ಕ ಕಡಿತಗೊಳಿಸಿದ್ದರು ಎಂದು ಹೇಳಲಾಗಿದೆ.

ಇ.ಜೀನ್ ಕ್ಯಾರೊಲ್‌ನ 2023ರ ಪ್ರಕರಣದಲ್ಲಿ ಟ್ರಂಪ್ ಲೈಂಗಿಕ ಕಿರುಕುಳ ಮತ್ತು ಗೌರವಹಾನಿಗೆ ಜವಾಬ್ದಾರರೆಂದು ಪರಿಗಣಿಸಲಾಗಿದ್ದು, 5 ಮಿಲಿಯನ್ ಡಾಲರ್ ಪರಿಹಾರವನ್ನು ನೀಡಲಾಗಿತ್ತು ಎಂಬ ಮಾಹಿತಿಯೂ ಇದೆ. ಹಾಗೆಯೇ ‘ದಿ ವಾಷಿಂಗ್ಟನ್ ಪೋಸ್ಟ್‌’ನಲ್ಲಿ 17 ಮಹಿಳೆಯರ ಮೇಲಿನ ಟ್ರಂಪ್ ಅನುಚಿತ ವರ್ತನೆಯ ಆರೋಪಗಳನ್ನು ದಾಖಲಿಸಲಾಗಿದೆ. ಆದರೆ ಯಾವುದೇ ನಿರ್ದಿಷ್ಟ ನ್ಯಾಯಾಲಯದ ಪ್ರಕರಣಗಳಾಗಿ ದೃಢೀಕರಣಗೊಂಡಿಲ್ಲ.

ಎಲಾನ್ ಮಸ್ಕ್‌ನ ಗಂಭೀರ ಆರೋಪವೇನೆಂದರೆ, ಫೆಬ್ರವರಿ 2025ರಲ್ಲಿ, ಯುಎಸ್ ನ್ಯಾಯ ಇಲಾಖೆಯ ದಾಖಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಪ್ ಐಕಾನ್ ಮೈಕೆಲ್ ಜಾಕ್ಸನ್, ನಟ ಅಲೆಕ್ ಬಾಲ್ಡ್‌ವಿನ್ ಮತ್ತು ಚಲನಚಿತ್ರ ನಿರ್ಮಾಪಕ ಹಾರ್ವೆ ವೈನ್‌ಸ್ಟೈನ್, ಎಪ್‌ಸ್ಟೀನ್ ಸಂಪರ್ಕ ಪಟ್ಟಿಯಲ್ಲಿದ್ದ ಪ್ರಭಾವಿ ವ್ಯಕ್ತಿಗಳು ಎಂಬುದು ಬಹಿರಂಗಗೊಂಡಿತ್ತು. ಆದರೆ ತನಿಖೆಯಲ್ಲಿ ಸಿಕ್ಕಿರುವ ಮಾಹಿತಿಯನ್ನು ಸಾರ್ವಜನಿಕವಾಗಿ ಎಲ್ಲಿಯೂ ಹಂಚಿಕೊಂಡಿಲ್ಲ ಎಂದು ದೂರಿದ್ದರು.

ಆನಂತರ, ಜೂನ್ 2025ರಲ್ಲಿ, ಎಲಾನ್ ಮಸ್ಕ್ ‘ಎಕ್ಸ್’ನಲ್ಲಿ ಟ್ರಂಪ್ ಎಪ್‌ಸ್ಟೀನ್ ಫೈಲ್‌ಗಳಲ್ಲಿ ಇದ್ದಾರೆ ಎಂದು ಆರೋಪಿಸಿದ್ದರು. ಆದರೆ ಯಾವುದೇ ಸಾಕ್ಷ್ಯವನ್ನು ಒದಗಿಸಿರಲಿಲ್ಲ. ಈ ಪೋಸ್ಟ್‌ನ್ನು ನಂತರ ಡಿಲೀಟ್ ಮಾಡಲಾಗಿತ್ತು. ಟ್ರಂಪ್ ಈ ಆರೋಪವನ್ನು ‘ಓಲ್ಡ್ ನ್ಯೂಸ್’ ಎಂದು ಕರೆದು ಗೇಲಿ ಮಾಡಿದ್ದರು.

ಇದನ್ನು ಓದಿದ್ದೀರಾ?: ನೀವು ನೊಬೆಲ್‌ ಶಾಂತಿ ಪ್ರಶಸ್ತಿಗೆ ಅರ್ಹರಿದ್ದೀರಿ; ಟ್ರಂಪ್‌ ಹೆಸರು ನಾಮ ನಿರ್ದೇಶನ ಮಾಡಿದ ಇಸ್ರೇಲ್‌ ಪ್ರಧಾನಿ

mask trump
ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್

ಈ ಎಲ್ಲ ಬೆಳವಣಿಗೆಗಳ ನಡುವೆ, ಈಗ ಅಮೆರಿಕದಲ್ಲಿ, ಅದರಲ್ಲೂ ಸೋಷಿಯಲ್ ಮೀಡಿಯಾಗಳಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಎಪ್‌ಸ್ಟೀನ್ ಜೊತೆಗಿರುವ ಹಳೆಯ ಫೋಟೋಗಳು ಹರಿದಾಡುತ್ತಿವೆ. ಅದಕ್ಕೆ ಪೂರಕವಾಗಿ, ಅಮೆರಿಕ ಚುನಾವಣೆಗೂ ಮುಂಚೆ, ಟ್ರಂಪ್ ಹೇಳಿದ್ದ ”ನಾವು ಅಧಿಕಾರಕ್ಕೆ ಬಂದರೆ, ಎಪ್‌ಸ್ಟೀನ್ ಫೈಲ್‌ಗಳನ್ನು ಬಿಡುಗಡೆ ಮಾಡುತ್ತೇವೆ. ಇದರಲ್ಲಿ ಡೆಮಾಕ್ರಟಿಕ್ ಪಕ್ಷದ ನಾಯಕರಿದ್ದಾರೆ” ಎಂದು ಹೇಳಿದ್ದ ಚಿತ್ರಗಳು ಮತ್ತು ವಿಡಿಯೋ ತುಣುಕುಗಳನ್ನು ಮರುಪ್ರಸಾರ ಮಾಡುತ್ತ ನೆನಪಿಸುತ್ತಿದ್ದಾರೆ. ಹಾಗೆಯೇ, ”ಇದೇ ಕಾರಣಕ್ಕಾಗಿ ಎಪ್‌ಸ್ಟೀನ್ ಫೈಲ್‌ ಬಿಡುಗಡೆ ಮಾಡುತ್ತಿಲ್ಲ” ಎಂದು ಟ್ರಂಪ್‌ರನ್ನು ಆರೋಪಿ ಸ್ಥಾನದಲ್ಲಿಟ್ಟು ದೂರುತ್ತಿದ್ದಾರೆ.

ಒಟ್ಟಿನಲ್ಲಿ ಪ್ರಪಂಚದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕ, ಟ್ರಂಪ್ ಮತ್ತು ಮಸ್ಕ್ ಎಂಬ ಚಿಲ್ಲರೆ ವ್ಯಾಪಾರಸ್ಥರಿಂದ ಭಾರೀ ಮುಜುಗರಕ್ಕೀಡಾಗುತ್ತಿದೆ. ರಾಜಕಾರಣದೊಂದಿಗೆ ವಾಣಿಜ್ಯ ವ್ಯವಹಾರ ಬೆರೆಸಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದ್ದಷ್ಟೇ ಅಲ್ಲ, ಈಗ ಅನೈತಿಕತೆಯ ಮಸಿ ಮೆತ್ತಿಕೊಂಡು ನಿಂತಿದೆ. ಬೇರೆ ದೇಶಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡುತ್ತಿದ್ದ, ಸಲಹೆ-ಸೂಚನೆಗಳನ್ನು ನೀಡುತ್ತಿದ್ದ ಅಮೆರಿಕ, ಈಗ ಪ್ರಪಂಚದೆದುರು ತಲೆತಗ್ಗಿಸುವಂತಾಗಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...