ʼಈ ದಿನʼ ಸಮೀಕ್ಷೆ | ‘ಗ್ಯಾರಂಟಿ ಯೋಜನೆ’ಗಳಿಗೆ ಜೈ; ವಿಪಕ್ಷವಾಗಿ ಬಿಜೆಪಿ ವಿಫಲ ಎಂದ ಜನ!

Date:

ಸಮೀಕ್ಷೆಗೆ ಒಳಪಟ್ಟ 70% ರಷ್ಟು ಜನರು ಗ್ಯಾರಂಟಿ ಯೋಜನೆಗಳು ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 21% ಜನರು ‘ಬೇಡ’ ಎಂದು ಹೇಳಿದ್ದರೆ, 9% ಜನರು ‘ತಮಗೆ ತಿಳಿದಿಲ್ಲ’ ಎಂದಿದ್ದಾರೆ. ವಿಶೇಷವಾಗಿ, ಮಹಿಳೆಯರು ಈ ವಿಚಾರದಲ್ಲಿ ಒಮ್ಮತದ ಅಭಿಪ್ರಾಯ ಹೊಂದಿದ್ದಾರೆ; 82% ಮಹಿಳೆಯರು ಯೋಜನೆಗಳು ಮುಂದುವರಿಯಬೇಕು ಎಂದು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ‘ಗ್ಯಾರಂಟಿ ಯೋಜನೆ’ಗಳನ್ನು 96% ಜನರು ಒಪ್ಪಿದ್ದಾರೆ. ಇಂತಹ ಯೋಜನೆಗಳು ಬೇಕೆಂದು ಈಗಲೂ ಹೇಳುತ್ತಿದ್ದಾರೆ ಎಂಬುದು ಈದಿನ.ಕಾಮ್ (Eedina.com) ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ. ಗ್ಯಾರಂಟಿ ಯೋಜನೆಗಳಿಗೆ 53% ಜನರು 100 ಅಂಕಗಳನ್ನು ನೀಡಿ, ಯೋಜನೆಗಳ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಅಂತೆಯೇ, ಸಿದ್ದರಾಮಯ್ಯನವರ ಆಡಳಿತವನ್ನು ಹೆಚ್ಚಿನವರು ಒಪ್ಪಿಕೊಂಡಿದ್ದು, ವಿಪಕ್ಷವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದೂ ಹೇಳಿದ್ದಾರೆ. ಈ ಸಮೀಕ್ಷೆಯನ್ನು ನಡೆಸುವಾಗ, ಕರಾವಳಿ ಮತ್ತು ಬೆಂಗಳೂರು ನಗರದ ಸ್ಯಾಂಪಲ್‌ ಬಹಳ ಕಡಿಮೆ ಇದ್ದು, 2023ರ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯ ಇದ್ದ ಭಾಗವನ್ನು ಹೊರತುಪಡಿಸಿದ ಭಾಗದ ಸಮೀಕ್ಷೆ ಇದು ಎಂಬುದನ್ನು ಗಮನಿಸಬೇಕಿದೆ.

ಈದಿನ.ಕಾಮ್ ಸಾರ್ವಜನಿಕರ ನಾಡಿಮಿಡಿತವನ್ನು ಅರಿಯಲು ಮತ್ತು ಬದಲಾಗುತ್ತಿರುವ ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ದಾಖಲಿಸಲು ಕಾಲಕಾಲಕ್ಕೆ ನಿಯಮಿತವಾಗಿ ಸಮೀಕ್ಷೆಗಳನ್ನು ನಡೆಸುತ್ತಾ ಬಂದಿದೆ. ಅಂತೆಯೇ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರಸ್‌ ಸರ್ಕಾರವು 2.5 ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿಯೇ, ಸರ್ಕಾರ ಜಾರಿಗೆ ತಂದ ಯೋಜನೆಗಳು, ನೀತಿ-ನಿರ್ಧಾರಗಳು, ಆಡಳಿತ ಹಾಗೂ ಮುಖ್ಯಮಂತ್ರಿ ಹುದ್ದೆಯ ಕುರಿತಾದ ಹೇಳಿಕೆ-ಪ್ರತಿಹೇಳಿಕೆಗಳು, ವಿಪಕ್ಷಗಳ ನಾನಾ ಆರೋಪಗಳು ಚರ್ಚೆಯಲ್ಲಿವೆ. ಇದೆಲ್ಲದರ ನಡುವೆ, ಸರ್ಕಾರದ ಆಡಳಿತ ಮತ್ತು ನೀತಿ-ನಿರ್ಧಾರಗಳ ಕುರಿತು ಜನಾಭಿಪ್ರಾಯವನ್ನು ತಿಳಿಯಲು ಈದಿನ.ಕಾಮ್ ರಾಜ್ಯಾದ್ಯಂತ ಸಮೀಕ್ಷೆ ನಡೆಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2025ರ ನವೆಂಬರ್ 20ರಿಂದ ಡಿಸೆಂಬರ್ 05ರವರೆಗೆ ನಡೆದ ಸಮೀಕ್ಷೆಯು ‘ವೈಜ್ಞಾನಿಕ ರಾಂಡಮ್ ಮಾದರಿ’ (Scientific Random Sampling) ವಿಧಾನದಲ್ಲಿ, ಮುಖಾಮುಖಿ ಸಂದರ್ಶನದ ಮೂಲಕ ನಡೆದಿದೆ. ರಾಜ್ಯದ 25 ವಿಧಾನಸಭಾ ಕ್ಷೇತ್ರಗಳಲ್ಲಿ, ಒಟ್ಟು 1,521 ಜನರನ್ನು ಸಮೀಕ್ಷೆ ಒಳಗೊಂಡಿದೆ. 45% ಮಹಿಳೆಯರು ಮತ್ತು 55% ಪುರುಷರು ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿದ್ದಾರೆ. 0 ಯಿಂದ 100 ಅಂಕಗಳಲ್ಲಿ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿದ್ದಾರೆ.

ಸಮೀಕ್ಷೆಯಲ್ಲಿ; ಕಾಂಗ್ರೆಸ್‌ ಸರ್ಕಾರದ 2.5 ವರ್ಷಗಳ ಆಡಳಿತಕ್ಕೆ ಎಷ್ಟು ಅಂಕಗಳನ್ನು ನೀಡುತ್ತೀರಿ ಎಂದು ಕೇಳಲಾಗಿತ್ತು. ಪ್ರತಿಕ್ರಿಯಿಸಿದವರಲ್ಲಿ, 41% ಮಂದಿ 100 ಅಂಕಗಳನ್ನು ನೀಡಿದ್ದಾರೆ. ಆಡಳಿತವು ಅತ್ಯುತ್ತಮ ಎಂದಿದ್ದಾರೆ. 30% ಮಂದಿ 75 ಅಂಕಗಳನ್ನು ನೀಡಿದರೆ, 23% ಜನರು 50 ಅಂಕಗಳನ್ನು ನೀಡಿದ್ದಾರೆ. 6% ಜನರು ಮಾತ್ರ 25 ಅಂಕಗಳನ್ನು ನೀಡಿದ್ದಾರೆ. ಒಟ್ಟಾರೆಯಾಗಿ, 50ಕ್ಕಿಂತ ಹೆಚ್ಚು ಅಂಕಗಳನ್ನು ನೀಡಿದ 94% ಜನರು ಸರ್ಕಾರದ ಆಡಳಿತವನ್ನು ಒಪ್ಪಿದ್ದಾರೆ.

image 89

ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದ ಕುರಿತು ಪ್ರತಿಕ್ರಿಯೆ ನೀಡಿದವರಲ್ಲಿ; 43.03% ಜನರು 100 ಅಂಕಗಳನ್ನು ನೀಡಿದ್ದಾರೆ. ಇದು, ಕಾಂಗ್ರೆಸ್‌ ಆಡಳಿತವನ್ನು ಅತ್ಯುತ್ತಮ ಎಂದಿದ್ದ 41% ಜನರಿಂತ 2% ಹೆಚ್ಚೇ ಇದೆ. ಅಲ್ಲದೆ, ಸಮೀಕ್ಷೆಗೆ ಒಳಪಟ್ಟ ಮಹಿಳೆಯರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ, 50.63% ಮಹಿಳೆಯರು ಸಿದ್ದರಾಮಯ್ಯನವರ ಆಡಳಿತಕ್ಕೆ 100 ಅಂಕಗಳನ್ನು ನೀಡಿದ್ದಾರೆ.

ಪ್ರತಿಕ್ರಿಯಿಸಿದ ಒಟ್ಟು ಜನರಲ್ಲಿ, 29.88% ಮಂದಿ 75 ಅಂಕ ನೀಡಿದರೆ, 21.35% ಮಂದಿ 50 ಅಂಕಗಳನ್ನೂ, 5.74% ಮಂದಿ 25 ಅಂಕಗಳನ್ನೂ ನೀಡಿದ್ದಾರೆ. ಯಾರೊಬ್ಬರೂ 0 ಅಂಕಗಳನ್ನು ನೀಡಿಲ್ಲ.

ಒಟ್ಟಾರೆಯಾಗಿ, 94.26% ಮಂದಿ 50ಕ್ಕಿಂತ ಹೆಚ್ಚು ಅಂಕಗಳನ್ನು ನೀಡಿದ್ದು, ಸಿದ್ದರಾಮಯ್ಯ ಅವರ ಆಡಳಿತವನ್ನು ಒಪ್ಪಿಕೊಂಡಿದ್ದಾರೆ.

image 90

ಸಮೀಕ್ಷೆಯ ಪ್ರಮುಖ ಪ್ರಶ್ನೆಗಳಲ್ಲಿ ‘ವಿರೋಧ ಪಕ್ಷವಾಗಿ ಬಿಜೆಪಿಯ ಕಾರ್ಯವೈಖರಿ’ ಕುರಿತ ಪ್ರಶ್ನೆಯೂ ಒಂದಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದವರಲ್ಲಿ ಹೆಚ್ಚಿನವರು 25 ಮತ್ತು ಅದಕ್ಕಿಂತ ಕಡಿಮೆ ಅಂಕಗಳನ್ನು ನೀಡಿದ್ದಾರೆ. ವಿಪಕ್ಷವಾಗಿ ಬಿಜೆಪಿ ತನ್ನ ಕಾರ್ಯನಿರ್ವಹಣೆಯಲ್ಲಿ ವಿಫಲವಾಗಿದೆ ಎಂದಿದ್ದಾರೆ. 25ಕ್ಕಿಂತ ಕಡಿಮೆ ಅಂಕಗಳನ್ನು ನೀಡಿದವರ ಶೇಕಡಾವಾರು ಪ್ರಮಾಣವು 27.47% ಇದೆ. ಅವರಲ್ಲಿಯೂ, 15.83% ಮಂದಿ ಸೊನ್ನೆ ಅಂಕ ನೀಡಿದ್ದರೆ, 11.64% ಜನರು 25 ಅಂಕಗಳನ್ನು ನೀಡಿದ್ದಾರೆ.

ಆದಾಗ್ಯೂ, 27% ಜನರು 75 ಅಂಕಗಳನ್ನು ನೀಡಿದ್ದರೆ, 23.23% ಮಂದಿ 100 ಅಂಕಗಳನ್ನು ನೀಡಿದ್ದಾರೆ. 22.29% ಜನರು 50 ಅಂಕಗಳನ್ನು ನೀಡಿದ್ದಾರೆ. 50ಕ್ಕಿಂತ ಹೆಚ್ಚು ಅಂಕ ನೀಡಿದವರ ಸಂಖ್ಯೆ 72.52% ಇದೆ.

image 91

ರಾಜ್ಯ ಸರ್ಕಾರವು ನಡೆಸಿದ ‘ಸಾಮಾಜಿಕ-ಆರ್ಥಿಕ ಸಮೀಕ್ಷೆ (ಜಾತಿ ಗಣತಿ)’ ಅಗತ್ಯಗಳ ಕುರಿತೂ ಪ್ರಶ್ನೆಯನ್ನು ಕೇಳಲಾಗಿತ್ತು. ಪ್ರತಿಕ್ರಿಯಿಸಿದವರಲ್ಲಿ 63% ಜನರು ಸಮೀಕ್ಷೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಅವರಲ್ಲಿ, 47% ಜನರು ಅಗತ್ಯವಿದೆ ಎಂದರೆ, 16% ಮಂದಿ ಅಗತ್ಯವಾಗಿ ಮಾಡಲೇಬೇಕಿತ್ತು ಎಂದು ಹೇಳಿದ್ದಾರೆ. ಆದಾಗ್ಯೂ, 22% ಜನರು ಗೊತ್ತಿಲ್ಲ ಎಂದಿದ್ದರೆ, ಉಳಿದ 16% ಜನರು ಗಣತಿಯು ಅನಿವಾರ್ಯವಲ್ಲ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ, ಸುಮಾರು ಮೂರನೇ ಎರಡರಷ್ಟು ಜನರು ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು ಸಕಾರಾತ್ಮಕ ದೃಷ್ಟಿಕೋನದಿಂದ ನೋಡಿದ್ದಾರೆ.

2 4

ಕಾಂಗ್ರೆಸ್‌ ಸರ್ಕಾರದ ಪ್ರಮುಖ ಯೋಜನೆಗಳಾದ ‘ಗ್ಯಾರಂಟಿ ಯೋಜನೆ’ಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗಿತ್ತು. ಪ್ರತಿಕ್ರಿಯೆ ನೀಡಿದವರಲ್ಲಿ 52.77% ಜನರು ಯೋಜನೆಗಳಿಗೆ 100 ಅಂಕಗಳನ್ನು ನೀಡಿದ್ದಾರೆ. ಅದರಲ್ಲೂ ಮಹಿಳೆಯರ ಪೈಕಿ 60.87% ಮಹಿಳೆಯರು ಗ್ಯಾರಂಟಿ ಯೋಜನೆಗಳಿಗೆ 100 ಅಂಕ ನೀಡಿದ್ದಾರೆ.

ಪ್ರತಿಕ್ರಿಯಿಸಿದ ಒಟ್ಟು ಮಂದಿಯಲ್ಲಿ 29.4% ಜನರು 75 ಅಂಕಗಳನ್ನೂ, 13.92% ಮಂದಿ 50 ಅಂಕಗಳನ್ನೂ 3.92% ಜನರು 25 ಅಂಕಗಳನ್ನೂ ನೀಡಿದ್ದಾರೆ. ಇವರಲ್ಲಿ ಹಲವರು ಗೃಹಲಕ್ಷ್ಮಿ ಯೋಜನೆಯಡಿ ನಗದು ಪಾವತಿಯಲ್ಲಿನ ಅವ್ಯವಸ್ಥೆ, ವಿಳಂಬವನ್ನು ಬೊಟ್ಟು ಮಾಡಿ ತೋರಿಸಿದ್ದಾರೆ.

ಒಟ್ಟಾರೆಯಾಗಿ, 96.08% ಜನರು ಗ್ಯಾರಂಟಿ ಯೋಜನೆಗಳಿಗೆ 50ಕ್ಕಿಂತ ಹೆಚ್ಚು ಅಂಕಗಳನ್ನು ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳು ಅಗತ್ಯವೆಂದು ಒತ್ತಿ ಹೇಳಿದ್ದಾರೆ.

image 92

‘ಗ್ಯಾರಂಟಿ ಯೋಜನೆಗಳು ಮುಂದುವರಿಯಬೇಕೇ’ ಎಂಬ ಪ್ರಶ್ನೆಗೆ ಉತ್ತರಿಸಿರುವ ಜನರಲ್ಲಿ 70% ರಷ್ಟು ಜನರು ಗ್ಯಾರಂಟಿ ಯೋಜನೆಗಳು ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 21% ಜನರು ‘ಬೇಡ’ ಎಂದು ಹೇಳಿದ್ದರೆ, 9% ಜನರು ‘ತಮಗೆ ತಿಳಿದಿಲ್ಲ’ ಎಂದಿದ್ದಾರೆ. ವಿಶೇಷವಾಗಿ, ಮಹಿಳೆಯರು ಈ ವಿಚಾರದಲ್ಲಿ ಒಮ್ಮತದ ಅಭಿಪ್ರಾಯ ಹೊಂದಿದ್ದಾರೆ; 82% ಮಹಿಳೆಯರು ಯೋಜನೆಗಳು ಮುಂದುವರಿಯಬೇಕು ಎಂದು ಒತ್ತಾಯಿಸಿದ್ದಾರೆ.

image 93

ಗ್ಯಾರಂಟಿ ಯೋಜನೆಗಳ ಕುರಿತಾದ ಯಾವ ಹೇಳಿಕೆ ಸತ್ಯ’ ಎಂದು ನೀವು ಭಾವಿಸುತ್ತೀರಿ ಎಂಬ ಪ್ರಶ್ನೆಯಲ್ಲಿ ನಾಲ್ಕು ಆಯ್ಕೆಗಳನ್ನು ನೀಡಲಾಗಿತ್ತು.

  1. ಕಾಂಗ್ರೆಸ್ ಸರ್ಕಾರವಿದ್ದರೆ ಮಾತ್ರ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ.
  2. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ.
  3. ಕಾಂಗ್ರೆಸ್ ಸರ್ಕಾರ ಮುಂದುವರಿದರೂ ಯೋಜನೆಗಳ ಮುಂದುವರಿಕೆ ಬಗ್ಗೆ ಅನುಮಾನವಿದೆ.
  4. ಈ ಬಗ್ಗೆ ನಮಗೆ ತಿಳಿದಿಲ್ಲ.

ಈ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದವರಲ್ಲಿ, 49% ಜನರು ಕಾಂಗ್ರೆಸ್ ಸರ್ಕಾರವಿದ್ದರೆ ಮಾತ್ರ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ ಎಂದಿದ್ದಾರೆ. 24% ಮಂದಿ ಈ ಬಗ್ಗೆ ‘ನಮಗೆ ತಿಳಿದಿಲ್ಲ’ ಎಂದಿದ್ದರೆ, 15% ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ ಎಂದಿದ್ದಾರೆ. 12% ಜನರು ಕಾಂಗ್ರೆಸ್ ಸರ್ಕಾರ ಮುಂದುವರಿದರೂ ಯೋಜನೆಗಳ ಮುಂದುವರಿಕೆ ಬಗ್ಗೆ ಅನುಮಾನವಿದೆ ಎಂದಿದ್ದಾರೆ.

3 3

ಇನ್ನು, ಮಾಧ್ಯಮಗಳು ಹೆಚ್ಚಾಗಿ ಬಡಬಡಾಯಿಸುತ್ತಿರುವ ‘ಗ್ಯಾರಂಟಿ ಯೋಜನೆಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಬೇರೆ ಯಾವುದೇ ಅಭಿವೃದ್ಧಿ ನಡೆಯುತ್ತಿಲ್ಲ’ ಎಂಬ ಹೇಳಿಕೆಗಳ ಕುರಿತು ಸಮೀಕ್ಷೆಗೆ ಒಳಪಟ್ಟಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರಲ್ಲಿ, 36% ಜನರು ರಾಜ್ಯದಲ್ಲಿ ಬೇರೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎನ್ನುವುದನ್ನು ಒಪ್ಪಿದ್ದಾರೆ. 27% ಜನರು ಗ್ಯಾರಂಟಿಗಳ ಜೊತೆಗೆ ಇತರ ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿವೆ ಎಂದಿದ್ದಾರೆ. 20% ಈ ಬಗ್ಗೆ ನಮಗೆ ಮಾಹಿತಿಯಿಲ್ಲ/ಗೊತ್ತಿಲ್ಲ ಎಂದಿದ್ದರೆ, 17% ಗ್ಯಾರಂಟಿ ಯೋಜನೆಗಳೇ ನಿಜವಾದ ಅಭಿವೃದ್ಧಿ ಎಂದಿದ್ದಾರೆ.

4 4

ಅಂತಿಮವಾಗಿ, ‘ಹಿಂದಿನ ಬಿಜೆಪಿ ಸರ್ಕಾರಕ್ಕೆ ಹೋಲಿಸಿದರೆ, ಪ್ರಸ್ತುತ ಆಡಳಿತಾರೂಢ ಸರ್ಕಾರದಲ್ಲಿ ಭ್ರಷ್ಟಾಚಾರದ ಮಟ್ಟ ಹೇಗಿದೆ’ ಎಂಬ ಪ್ರಶ್ನೆಗೆ ಉತ್ತರಿಸಿದವರಲ್ಲಿ ಹೆಚ್ಚಿನವರು ಭ್ರಷ್ಟಾಚಾರ ಹೆಚ್ಚಾಗಿದೆ ಎಂದಿದ್ದಾರೆ.  28% ಜನರು ಕಾಂಗ್ರೆಸ್‌ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಹೇಳಿದ್ದಾರೆ. 25% ಮಂದಿ ಭ್ರಷ್ಟಾಚಾರ ಕಡಿಮೆಯಾಗಿದೆ ಎಂದಿದ್ದಾರೆ. 24% ಮಂದಿ ತಮಗೆ ಯಾವುದೇ ಅಭಿಪ್ರಾಯವಿಲ್ಲ ಎಂದಿದ್ದರೆ, 22% ಜನರು ಭ್ರಷ್ಟಾಚಾರದ ಮಟ್ಟ ಮೊದಲಿನಂತೆಯೇ ಇದೆ ಎಂದು ಹೇಳಿದ್ದಾರೆ.

5 3

ಸಮೀಕ್ಷೆಯ ಒಟ್ಟಾರೆ ಅಂಶವು – 2023ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಪ್ರಾಬಲ್ಯ ಹೊಂದಿದ್ದ ಜಿಲ್ಲೆಗಳಲ್ಲಿ – ಭ್ರಷ್ಟಾಚಾರ ವಿಚಾರವನ್ನು ಹೊರತುಪಡಿಸಿ ಉಳಿದೆಲ್ಲ ವಿಚಾರಗಳಲ್ಲಿ ಹೆಚ್ಚಿನ ಜನರು ಕಾಂಗ್ರೆಸ್‌ ಆಡಳಿತದ ಪರವಾಗಿ ಒಲವು ಹೊಂದಿದ್ದಾರೆ ಎಂಬುದು ಕಂಡುಬಂದಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...