ಚುನಾವಣೆ | 155 ರ್‍ಯಾಲಿಗಳು: 2942 ಬಾರಿ ಕಾಂಗ್ರೆಸ್‌ ಜಪಿಸಿದ ಮೋದಿ; ಕಾಣೆಯಾದ ಉದ್ಯೋಗ/ಅಮೃತಕಾಲ

Date:

2024ರ ಲೋಕಸಭಾ ಚುನಾವಣೆ ಬಗಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆಬಿದ್ದಿದೆ. ಕೊನೆಯ ಹಂತದ ಮತದಾನ ನಡೆಯಲಿದೆ. ಚುನಾವಣೆಯಲ್ಲಿ ಗೆದ್ದು ಬಿಜೆಪಿ ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಅದಕ್ಕಾಗಿ, ದೇಶಾದ್ಯಂತ ಪ್ರಧಾನಿ ಮೋದಿ 155 ರ್‍ಯಾಲಿಗಳನ್ನು ನಡೆಸಿದ್ದಾರೆ. ಅಷ್ಟೇ ಭಾಷಣಗಳನ್ನು ಮಾಡಿದ್ದಾರೆ. ತಮ್ಮ ಭಾಷಣಗಳಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ವಿಪಕ್ಷಗಳನ್ನು ದೂರಿದ್ದಾರೆ. ಅವರು ತಮ್ಮ 155 ಭಾಷಣಗಳಲ್ಲಿ ಬರೋಬ್ಬರಿ 2,942 ಬಾರಿ ಕಾಂಗ್ರೆಸ್‌ ಹೆಸರನ್ನು ಉಲ್ಲೇಖಿಸಿದ್ದಾರೆ. ಆದರೆ, ಜನರ ಸಮಸ್ಯೆ, ಬಡತನ, ಉದ್ಯೋಗದ ಬಗ್ಗೆ ಅವರು ಉಲ್ಲೇಖಿಸಿರುವುದು ತೀರಾ ಕಡಿಮೆ. ಅದರಲ್ಲೂ ಅವರೇ ಹೇಳುವ ‘ಅಮೃತಕಾಲ’ವಂತೂ ಅವರ ಭಾಷಣದಲ್ಲಿ ಕಾಣೆಯಾಗಿದೆ.

ಇಂಗ್ಲಿಷ್‌ ಸುದ್ದಿ ತಾಣ ‘ದಿ ಕ್ವಿಂಟ್’ ಮೋದಿ ಅವರು ತಮ್ಮ ಭಾಷಣದಲ್ಲಿ ಹೆಚ್ಚಾಗಿ ಉಲ್ಲೇಖಿಸಿದ ಅಂಶಗಳು ಅಥವಾ ಪದಗಳ ಬಗ್ಗೆ ವಿಶ್ಲೇಷಣೆ ನಡೆಸಿದೆ. ಅವರು ಯಾವ ಪದಗಳನ್ನು ಹೆಚ್ಚಾಗಿ ಬಳಸಿದ್ದಾರೆ. ಯಾವ ಅಂಶಗಳ ಬಗ್ಗೆ ಹೆಚ್ಚಾಗಿ ಗಮನ ಹರಿಸಿದ್ದಾರೆ ಎಂಬುದನ್ನು ಅಂಕಿಗಳಲ್ಲಿ ನೀಡಿದೆ.

ಉದಾಹರಣೆಗೆ, ಮೋದಿ ಅವರು ಮೊದಲ ಮತ್ತು ಎರಡನೇ ಹಂತದ ಮತದಾನದ ಪ್ರಚಾರಗಳಲ್ಲಿ ‘ಮುಸ್ಲಿಮರು’ ಎಂಬ ಪದವನ್ನು ಪ್ರತಿ ಭಾಷಣದಲ್ಲಿ ಸರಾಸರಿ ಒಂದಕ್ಕಿಂತ ಕಡಿಮೆ ಬಾರಿ ಬಳಸಿದ್ದಾರೆ. ಆದರೆ, 3ನೇ ಮತ್ತು ನಂತರದ ಮತದಾನಗಳ ಪ್ರಚಾರದಲ್ಲಿ ಮುಸ್ಲಿಮರು ಪದದ ಬಳಕೆ ದುಪ್ಪಟ್ಟುಗೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ ಪದವನ್ನು ಮೋದಿ ಅವರು ಅತ್ಯಂತ ಹೆಚ್ಚು ಬಾರಿ ಬಳಸಿದ್ದಾರೆ. ಆದರೆ, ಯುವಜನರಿಗೆ ಸಂಬಂಧಿಸಿದ ಉದ್ಯೋಗದ ಬಗ್ಗೆ ಕೇವಲ 53 ಬಾರಿ ಮಾತ್ರವೇ ಮಾತನಾಡಿದ್ದಾರೆ. ಹಿಂದೆ, ಮಹಿಳೆಯರ ರಕ್ಷಣೆಯ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದ ಮೋದಿ ಅವರು ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣ, ಮಣಿಪುರ ಹಿಂಸಾಚಾರ, ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ ನಡೆದಿರುವ ಇಂತಹ ಸಮಯದಲ್ಲಿ ಮಹಿಳೆಯರ ಬಗೆಗಿನ ಉಲ್ಲೇಖಗಳೂ ತೀರಾ ಕಡಿಮೆ ಇವೆ. ಅವರು ಮಹಿಳೆ ಪದವನ್ನು 244 ಬಾರಿ ಮಾತ್ರವೇ ಉಲ್ಲೇಖಿಸಿದ್ದಾರೆ.

ಭಾರತದ ರಾಜಕಾರಣದಲ್ಲಿ ಪ್ರಮುಖವಾಗಿರುವ ಪದಗಳನ್ನು ಮೋದಿ ಎಷ್ಟು ಬಾರಿ ಬಳಸಿದ್ದಾರೆ ಎಂಬುದರ ಸಂಖ್ಯೆಗಳು ಇಲ್ಲಿವೆ;

ಕಾಂಗ್ರೆಸ್: 2942
ಮೋದಿ*: 2862
ಬಡವರು: 949
SC/ST/OBC: 780
ಅಭಿವೃದ್ಧಿ: 633
ಇಂಡಿಯಾ ಮೈತ್ರಿಕೂಟ: 518
ಮೋದಿ ಕಿ ಗ್ಯಾರಂಟಿ: 342
ಭ್ರಷ್ಟಾಚಾರ: 341
ಮುಸ್ಲಿಮರು: 286
ಮಹಿಳೆಯರು: 244
ರಾಮಮಂದಿರ: 244
ವಿಕ್ಷಿತ್ ಭಾರತ್: 119
ಪಾಕಿಸ್ತಾನ: 104
ಪರಿವಾರವಾದ: 91
ಉದ್ಯೋಗ: 53
ವಿರೋಧ ಪಕ್ಷಗಳು: 35
ಆತ್ಮನಿರ್ಭರ ಭಾರತ: 23
ಅಮೃತಕಾಲ: 4

ವಿಶೇಷವೆಂದರೆ, ಮೋದಿ ಅವರು ತಮ್ಮ ಹೆಸರನ್ನೇ 2862 ಬಾರಿ ಬಳಸಿದ್ದಾರೆ. ಈ ಸಂಖ್ಯೆಯಲ್ಲಿ ‘ಮೋದಿ ಕಿ ಗ್ಯಾರಂಟಿ’ (342) ಪದಗುಚ್ಛದ ಅಂಕಿಅಂಶವೂ ಒಳಗೊಂಡಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...