ಚುನಾವಣಾ ಬಾಂಡ್‌ | ತಮ್ಮ ಆದಾಯಕ್ಕಿಂತ ಅತೀ ಹೆಚ್ಚು ಹಣ ಕೊಟ್ಟ ಕಂಪನಿಗಳಿವು!

Date:

ಚುನಾವಣಾ ಆಯೋಗವು ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಕಂಪನಿಗಳು ಮತ್ತು ಬಾಂಡ್‌ಗಳನ್ನು ನಗದೀಕರಿಸಿಕೊಂಡಿರುವ ಪಕ್ಷಗಳ ವಿವರವನ್ನು ಪ್ರಕಟಿಸಿದೆ. ಬಾಂಡ್‌ಗಳ ಮೂಲಕ ಅತೀ ಹೆಚ್ಚು ಹಣ ಪಡೆದ ಪಕ್ಷ ಬಿಜೆಪಿ ಎಂಬುದು ನಿರೀಕ್ಷೆಯಂತೆ ಸಾಬೀತಾಗಿದೆ. ಇದೆಲ್ಲದರ ನಡುವೆ, ಕುತೂಹಲಕಾರಿ ಅಂಶವೊಂದು ಹೊರಬಿದ್ದಿದೆ. ಅತೀ ಕಡಿಮೆ ಆದಾಯ ಹೊಂದಿರುವ ಕಂಪನಿಯೊಂದು ಅತೀ ಹೆಚ್ಚು ಹಣ ನೀಡಿ, ಮೂರನೇ ಸ್ಥಾನದಲ್ಲಿದೆ.

ಬಾಂಡ್‌ ಮೂಲಕ ಪಕ್ಷಗಳಿಗೆ ಹೆಚ್ಚು ಹಣ ನೀಡಿದ ಕಂಪನಿಗಳಲ್ಲಿ ‘ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್’ ಮೂರನೇ ಸ್ಥಾನದಲ್ಲಿದೆ. ಈ ಕಂಪನಿ ಕಡಿಮೆ ಪ್ರಸಿದ್ದಿ ಪಡೆದಿದ್ದರೂ, ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ 410 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ. ಆದರೆ, ಈ ಕಂಪನಿಯ ಆದಾಯ ಬರೋಬ್ಬರಿ 95 ಪಟ್ಟು ಕಡಿಮೆಯಿದೆ.

ಕಂಪನಿಯ ಹಣಕಾಸಿನ ದಾಖಲೆಗಳ, ಈ ಕಂಪನಿ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪ್‌ ಜೊತೆಗೆ ಸಂಬಂಧ ಹೊಂದಿದೆ ಎಂಬುದು ಕೂಡ ತಿಳಿದುಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಂಪನಿಯು 2021-22ರ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ 360 ಕೋಟಿ ರೂಪಾಯಿಗಳನ್ನು ನೀಡಿದೆ. ಅದೇ ವರ್ಷದಲ್ಲಿ ಅದರ ನಿವ್ವಳ ಲಾಭ ಕೇವಲ 21.72 ಕೋಟಿ ರೂ. ಇತ್ತು. 2023-24ರ ಆರ್ಥಿಕ ವರ್ಷದಲ್ಲಿ ಕಂಪನಿಯು ಇನ್ನೂ 50 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಈ ಕಂಪನಿ ಮಾತ್ರವಲ್ಲದೆ, ಫ್ಯೂಚರ್ ಗೇಮಿಂಗ್ ಅಂಡ್ ಹೋಟೆಲ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್‌ ಕಂಪನಿ ಕೂಡ 1,368 ಕೋಟಿ ರೂ.ಗಳನ್ನು ಪಕ್ಷಗಳಿಗೆ ದೇಣಿಗೆ ನೀಡಿದೆ. ಆದರೆ, ಈ ಕಂಪನಿಯ 2019-23ರವರೆಗಿನ ಆದಾಯ ಕೇವಲ 215 ಕೋಟಿ ರೂ. ಮಾತ್ರ ಇದೆ. ಅಂದರೆ, ಈ ಕಂಪನಿಯು ತನ್ನ ಆದಾಯಕ್ಕಿಂತ 635% ಅಧಿಕ ಮೊತ್ತವನ್ನು ದೇಣಿಗೆ ನೀಡಿದೆ.

ಅದೇ ರೀತಿ, ಎಂಕೆಜೆ ಎಂಟರ್‌ಪ್ರೈಸಸ್‌ ಲಿಮಿಟೆಡ್ ಕಂಪನಿಯು 192 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಆದರೆ, ಈ ಕಂಪನಿಯ 2019-23ರವರೆಗಿನ ಆದಾಯ ಕೇವಲ 58 ಕೋಟಿ ರೂ. ಮಾತ್ರವೇ ಇದೆ. ಈ ಕಂಪನಿ ತನ್ನ ಆದಾಯಕ್ಕಿಂತ 329% ಅಧಿಕ ಮೊತ್ತವನ್ನು ದೇಣಿಗೆ ನೀಡಿದೆ.

ಮದನ್‌ಲಾಲ್ ಲಿಮಿಟೆಡ್ ಎಂಬ ಕಂಪನಿಯು 185 ರೂ. ದೇಣಿಗೆ ನೀಡಿದ್ದು, ಈ ಕಂಪನಿಯ ಆದಾಯ 10 ಕೋಟಿ ರೂ. ಮಾತ್ರವೇ ಇದೆ. ಈ ಕಂಪನಿ ಬರೋಬ್ಬರಿ 1,874% ಹೆಚ್ಚು ಹಣವನ್ನು ದೇಣಿಗೆಯಾಗಿ ಪಕ್ಷಗಳಿಗೆ ನೀಡಿದೆ.

ಬಾಂಡ್

ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ ಮೂರು ನಿರ್ದೇಶಕರನ್ನು ಹೊಂದಿದೆ. ವಿಪುಲ್ ಪ್ರಣಲಾಲ್ ಮೆಹ್ತಾ, ಶ್ರೀಧರ್ ಟಿಟ್ಟಿ ಮತ್ತು ತಪಸ್ ಮಿತ್ರಾ. ಮಿತ್ರಾ ಅವರು ಇತರ 26 ಕಂಪನಿಗಳಲ್ಲಿ ನಿರ್ದೇಶಕರಾಗಿದ್ದರೆ, ಮೆಹ್ತಾ ಇತರ ಎಂಟು ಕಂಪನಿಗಳಲ್ಲಿದ್ದಾರೆ.

ಮೆಹ್ತಾ ಅವರು ರೆಲ್ ಐಕಾನ್ಸ್ ಮತ್ತು ಟ್ರೇಡರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ಸೇರಿ 8 ಕಂಪನಿಗಳಲ್ಲಿ ನಿರ್ದೇಶಕರಾಗಿದ್ದಾರೆ.

ಮಿತ್ರಾ ನಿರ್ದೇಶಕರಾಗಿರುವ 26 ಕಂಪನಿಗಳಲ್ಲಿ ರಿಲಯನ್ಸ್ ಎರೋಸ್ ಪ್ರೊಡಕ್ಷನ್ಸ್ ಎಲ್‌ಎಲ್‌ಪಿಯಂತಹ ಪಾಲುದಾರಿಕೆ ಸಂಸ್ಥೆಗಳು ಮತ್ತು ಜಾಮ್‌ನಗರ ಕಾಂಡ್ಲಾ ಪೈಪ್‌ಲೈನ್ ಕಂಪನಿ ಪ್ರೈವೇಟ್ ಲಿಮಿಟೆಡ್‌ನಂತಹ ಕಂಪನಿಗಳನ್ನು ಒಳಗೊಂಡಿವೆ. ಎರಡನೆಯದು ಅಹಮದಾಬಾದ್‌ನಲ್ಲಿ ರಿಲಯನ್ಸ್ ಪೇಜಿಂಗ್ ಪ್ರೈವೇಟ್ ಲಿಮಿಟೆಡ್, ಜಾಮ್‌ನಗರ್ ರತ್ಲಾಮ್ ಪೈಪ್‌ಲೈನ್ ಪ್ರೈವೇಟ್ ಲಿಮಿಟೆಡ್, ರಿಲಯನ್ಸ್ ಟ್ಯಾಂಕೇಜ್ ಪ್ರೈವೇಟ್ ಲಿಮಿಟೆಡ್ ಮತ್ತು ರಿಲಯನ್ಸ್ ಆಯಿಲ್ ಮತ್ತು ಪೆಟ್ರೋಲಿಯಂ ಪ್ರೈವೇಟ್ ಲಿಮಿಟೆಡ್‌ನಂತಹ ಹಲವಾರು ಇತರ ರಿಲಯನ್ಸ್ ಕಂಪನಿಗಳು ಕೂಡ ‘ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್’ ಕಂಪನಿಯೊಂದಿಗೆ ಸಂಬಂಧ ಹೊಂದಿವೆ.

2017ರಲ್ಲಿ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಪರಿಚಯಿಸಿದ್ದ ಕೇಂದ್ರ ಸರ್ಕಾರ, ಯಾವುದೇ ಕಂಪನಿಯು ರಾಜಕೀಯ ಪಕ್ಷಗಳಿಗೆ ಎಷ್ಟು ದೇಣಿಗೆ ನೀಡಬಹುದು ಎಂಬ ಮಿತಿಯನ್ನು ತೆಗೆದುಹಾಕಿತ್ತು. ಅದಕ್ಕೂ ಮುಂಚೆ, ಕಂಪನಿಗಳು ತಮ್ಮ ಹಿಂದಿನ ಮೂರು ಆರ್ಥಿಕ ವರ್ಷಗಳ ಸರಾಸರಿ ಲಾಭದ 7.5% ರಷ್ಟು ಹಣವನ್ನು ಮಾತ್ರ ದಾನ ಮಾಡಬಹುದಾಗಿತ್ತು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...