ರಾಹುಲ್ ಆರೋಪಕ್ಕೆ ಚು. ಆಯುಕ್ತರ ಉತ್ತರ: ಆಯೋಗವನ್ನು ಮತ್ತೊಮ್ಮೆ ಬಟಾಬಯಲು ಮಾಡಿದ ಕಾಂಗ್ರೆಸ್‌

Date:

ಕಳೆದ ಎರಡು/ಮೂರು ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ‘ಮತಗಳ್ಳತನ’ ನಡೆದಿದೆ ಎಂದು ಲೋಕಸಭೆ ವಿಪಕ್ಷ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ನಿರಂತರವಾಗಿ ಆರೋಪಿಸುತ್ತಿದ್ದಾರೆ. ತಮ್ಮ ಆರೋಪಗಳಿಗೆ ಪೂರಕವಾಗಿ ಹಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಗುರುವಾರ (ಸೆ.18) ಕೂಡ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಕರ್ನಾಟಕದ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ‘ವೋಟ್‌ ಚೋರಿ’ ಬಗ್ಗೆ ದಾಖಲೆಗಳ ಸಮೇತ ವಿವರಿಸಿದ್ದಾರೆ. ಅವರ ಆರೋಪಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, ಮತ್ತೊಮ್ಮೆ ಕಾಂಗ್ರೆಸ್‌ನ ಚಕ್ರವ್ಯೂಹಕ್ಕೆ ಸಿಕ್ಕಿಕೊಂಡಿದೆ. ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೀಡಿದ ಉತ್ತರವನ್ನೇ ಇಟ್ಟುಕೊಂಡು ಆಯೋಗವನ್ನು ಕಾಂಗ್ರೆಸ್‌ ಬಟಾಬಯಲುಗೊಳಿಸಿದೆ.

ಚುನಾವಣಾ ಆಯೋಗ ನೀಡಿದ ಪ್ರತಿಕ್ರಿಯೆ ಮತ್ತು ಕಾಂಗ್ರೆಸ್‌ ಕೌಂಟರ್‌ ಹೀಗಿವೆ:

ಆಯೋಗದ ಪ್ರತಿಕ್ರಿಯೆ: ರಾಹುಲ್ ಗಾಂಧಿ ತಪ್ಪಾಗಿ ಭಾವಿಸಿದ್ದಾರೆ. ಅವರು ಹೇಳುವಂತೆ ಯಾವುದೇ ಸಾರ್ವಜನಿಕರು ಆನ್‌ಲೈನ್‌ನಲ್ಲಿ ಯಾವುದೇ ಮತವನ್ನು ಅಳಿಸಲು ಸಾಧ್ಯವಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾಂಗ್ರೆಸ್‌ ಕೌಂಟರ್: ರಾಹುಲ್ ಗಾಂಧಿ ಅವರು ಮತಗಳನ್ನು ಆನ್‌ಲೈನ್‌ನಲ್ಲಿ ಸಾರ್ವಜನಿಕರು ಅಳಿಸಬಹುದು ಎಂದು ಹೇಳಿಲ್ಲ. ಆದರೆ, ಮತಗಳನ್ನು ಅಳಿಸುವಂತೆ ಆಯೋಗಕ್ಕೆ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು ಮತ್ತು ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ. ಈ ಫಾರ್ಮ್ 7 ಗಳನ್ನು ಆನ್‌ಲೈನ್‌ ಮೂಲಕ ನಕಲಿ ಮಾಡಲಾಗಿದೆ. ಈ ನಕಲಿ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂಬುದಾಗಿ ಚುನಾವಣಾಧಿಕಾರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಎಂದು ರಾಹುಲ್ ವಿವರಿಸಿದ್ದಾರೆ.

ಆಯೋಗದ ಪ್ರತಿಕ್ರಿಯೆ: ದಾಖಲೆಗಳ ಪ್ರಕಾರ, 2018ರಲ್ಲಿ ಸುಭಾಷ್ ಗುತ್ತೇದಾರ್ (ಬಿಜೆಪಿ) ಮತ್ತು 2023ರಲ್ಲಿ ಬಿಆರ್ ಪಾಟೀಲ್ (ಐಎನ್‌ಸಿ) ಆಳಂದ್ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದರು.

ಕಾಂಗ್ರೆಸ್‌ ಕೌಂಟರ್: 5,994 ಮತದಾರರ ಹೆಸರುಗಳನ್ನು ಅಳಿಸುವಂತೆ ಸಲ್ಲಿಸಲಾಗಿದ್ದ ನಕಲಿ ಅರ್ಜಿ (ಫಾರ್ಮ್ 7) ಸ್ಥಳೀಯ ಚುನಾವಣಾ ಅಧಿಕಾರಿಗಳು ತಿರಸ್ಕರಿಸಿದರು. ಆದ್ದರಿಂದ, ಆ ಮತಗಳನ್ನು ಉಳಿದುಕೊಂಡವು. ಬಿ.ಆರ್. ಪಾಟೀಲ್ ಚುನಾವಣೆಯಲ್ಲಿ ಗೆದ್ದರು ಎಂಬ ಕಾರಣಕ್ಕೆ, ಈ ಮತಗಳನ್ನು ಅಳಿಸಲು ಮಾಡಿದ ಕ್ರಿಮಿನಲ್ ಪ್ರಯತ್ನವನ್ನು ತನಿಖೆ ಮಾಡಬಾರದು ಎಂದಲ್ಲ.

ಆಯೋಗದ ಪ್ರತಿಕ್ರಿಯೆ: 2022ರ ಡಿಸೆಂಬರ್‌ನಲ್ಲಿ NVSP, VHA, GARUDA ಅಪ್ಲಿಕೇಶನ್‌ಗಳಂತಹ ವಿವಿಧ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಸಲ್ಲಿಸಲಾದ ‘ಫಾರ್ಮ್ 7’ ಅರ್ಜಿಯಲ್ಲಿ 6,018 ಅರ್ಜಿಗಳನ್ನು ERO 46-Aland ಸ್ವೀಕರಿಸಿದೆ. ಕರ್ನಾಟಕದ 46-ಆಳಂದದಲ್ಲಿ ಮತದಾರರ ಹೆಸರುಗಳನ್ನು ಅಳಿಸಲು ಆನ್‌ಲೈನ್‌ನಲ್ಲಿ ಸಲ್ಲಿಸಲಾದ ಇಷ್ಟೊಂದು ದೊಡ್ಡ ಸಂಖ್ಯೆಯ ಅರ್ಜಿಗಳ ನೈಜತೆಯನ್ನು ಅನುಮಾನಿಸಿ, ಪ್ರತಿ ಅರ್ಜಿಯ ಪರಿಶೀಲನೆಯನ್ನು EROVAERO/BLOS ನಡೆಸಿದೆ.

ಕಾಂಗ್ರೆಸ್‌ ಕೌಂಟರ್: ಇದು ಚುನಾವಣಾ ಆಯೋಗವು ಸ್ವತಃ ವಿಚಾರಣೆಯನ್ನು ಪ್ರಾರಂಭಿಸಿತು ಎಂಬುದಾಗಿ ಬಿಂಬಿಸಿಕೊಳ್ಳುತ್ತಿದೆ. ಆದರೆ, ಬಿ.ಆರ್. ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಅವರು 2023ರ ಫೆಬ್ರವರಿಯಲ್ಲಿ ಚುನಾವಣಾ ಆಯೋಗದ ಸಿಇಒಗೆ ದೂರು ನೀಡಿದರು. ನಂತರವೇ ಈ ದೂರಿನ ಆಧಾರದ ಮೇಲೆ ವಿಚಾರಣೆ ಪ್ರಾರಂಭವಾಯಿತು.

ಕಲಬುರಗಿ ಸಹಾಯಕ ಆಯುಕ್ತೆ ಮಮತಾ ದೇವಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾರೆ. “ಆಳಂದ ವಿಧಾನಸಭಾ ಕ್ಷೇತ್ರದ 256 ಬೂತ್‌ಗಳಲ್ಲಿ 6,670 ಮತಗಳನ್ನು ಅಕ್ರಮವಾಗಿ ಅಳಿಸಲಾಗಿದೆ ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ್ ಅವರು ಇಸಿಐಗೆ ದೂರು ನೀಡಿದ್ದಾರೆ. ಅದರ ಆಧಾರದ ಮೇಲೆ ಕಲಬುರಗಿ ಜಿಲ್ಲೆಯ ಉಪ ಆಯುಕ್ತರು ದೂರನ್ನು ಪರಿಶೀಲಿಸುವಂತೆ ಇಸಿಐ ನಿರ್ದೇಶಿಸಿದೆ ಮತ್ತು ಮೌಖಿಕ ಆದೇಶಗಳನ್ನು ನೀಡಿದೆ” ಎಂದು ಎಫ್‌ಐಆರ್ ಸ್ಪಷ್ಟವಾಗಿ ಹೇಳುತ್ತದೆ.

ಆಯೋಗದ ಪ್ರತಿಕ್ರಿಯೆ: ಇಸಿಐ ನೀಡಿದ ಸೂಚನೆಗಳ ಆಧಾರದ ಮೇಲೆ, ಆಯೋಗದ ಕಲಬುರಗಿ ಸಿಇಒ ಕಮಟಕ ಅವರು ತನಿಖೆಗೆ ಅಗತ್ಯವಾಗಿದ್ದ ಇಸಿಐನಲ್ಲಿ ಲಭ್ಯವಿರುವ ಎಲ್ಲ ಮಾಹಿತಿಯನ್ನು 06.09.2023 ರಂದು ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಸ್ತಾಂತರಿಸಿದ್ದಾರೆ. ಹಂಚಿಕೆಯಾದ ಮಾಹಿತಿಯಲ್ಲಿ ಫಾರ್ಮ್ ಉಲ್ಲೇಖ ಸಂಖ್ಯೆ, ಆಕ್ಷೇಪಣೆ ಅರ್ಜಿ ಸಲ್ಲಿಸಿದವರ ಹೆಸರು, ಅವರ ಇಪಿಐಸಿ ಸಂಖ್ಯೆ, ಲಾಗಿನ್ ಮಾಡಲು ಬಳಸಿದ ಮೊಬೈಲ್ ಸಂಖ್ಯೆ ಹಾಗೂ ಪ್ರಕ್ರಿಯೆಗಾಗಿ ಆಕ್ಷೇಪಣೆ ಸಲ್ಲಿಸಿದವರು ಒದಗಿಸಿದ ಮೊಬೈಲ್ ಸಂಖ್ಯೆ, ಸಾಫ್ಟ್‌ವೇರ್ ಅಪ್ಲಿಕೇಶನ್ ವೇದಿಕೆ, ಐಪಿ ವಿಳಾಸ, ಅರ್ಜಿದಾರರ ಸ್ಥಳ, ಫಾರ್ಮ್ ಸಲ್ಲಿಕೆ ದಿನಾಂಕ ಮತ್ತು ಸಮಯ ಹಾಗೂ ಬಳಕೆದಾರರು ತಮ್ಮ ಐಡಿಯನ್ನು ರಚಿಸಿದ ದಿನಾಂಕ ಸೇರಿದಂತೆ ಆಕ್ಷೇಪಣೆ ಸಲ್ಲಿಸಿದವರ ವಿವರಗಳಿವೆ.

ಕಾಂಗ್ರೆಸ್‌ ಕೌಂಟರ್: ಆಯೋಗವು 2023ರ ಸೆಪ್ಟೆಂಬರ್ 6ರಂದು ವಿವರಗಳನ್ನು ನಿಜವಾಗಿಯೂ ಒದಗಿಸಿರುವುದಾಗಿ ಕರ್ನಾಟಕ ಸಿಇಒ ಹೇಳಿಕೊಂಡಿದ್ದಾರೆ. ಆದರೆ ಒದಗಿಸಲಾದ ಐಪಿಗಳು ಡೈನಾಮಿಕ್ ಐಪಿಗಳಾಗಿದ್ದು, ಈ ನಕಲಿ ‘ಫಾರ್ಮ್ 7’ ಅರ್ಜಿಗಳನ್ನು ಸೃಷ್ಟಿಸಲು ಬಳಿಸುವ ಸಾಧನಗಳ ಜಿಯೋಲೋಕಲೈಸೇಶನ್ ಪಡೆಯುವುದು ಕಷ್ಟಕರವಾಗಿದೆ.

ಆದ್ದರಿಂದ, ತನಿಖೆ ನಡೆಸುತ್ತಿರುವ ಸಿಐಡಿ 2024ರ ಜನವರಿಯಿಂದ ಇಲ್ಲಿಯವರೆಗೆ ಈ ನಕಲಿ ‘ಫಾರ್ಮ್ 7’ಗಳನ್ನು ರೂಪಿಸಿದ ಅವಧಿಗಳ ಡೆಸ್ಟಿನೇಷನ್ ಐಪಿಗಳು ಮತ್ತು ಡೆಸ್ಟಿನೇಷನ್ ಪೋರ್ಟ್‌ಗಳನ್ನು ಒದಗಿಸುವಂತೆ ಆಯೋಗಕ್ಕೆ 18 ಪತ್ರಗಳನ್ನು ಬರೆದಿದೆ.

ಈ ಪತ್ರಗಳಲ್ಲಿ ಸಿಐಡಿ, “ತನಿಖೆಗಾಗಿ ಐಪಿ ಲಾಗ್‌ಗಳನ್ನು ಮಾತ್ರ ಒದಗಿಸಲಾಗಿದೆ. ಅವುಗಳನ್ನು ಪರಿಶೀಲಿಸಿದಾಗ ಡೆಸ್ಟಿನೇಷನ್ ಐಪಿ ಮತ್ತು ಡೆಸ್ಟಿನೇಷನ್ ಪೋರ್ಟ್‌ಗಳು ದೊರೆತಿಲ್ಲ. ಆದ್ದರಿಂದ, ಡೆಸ್ಟಿನೇಷನ್ ಐಪಿ ಮತ್ತು ಡೆಸ್ಟಿನೇಷನ್ ಪೋರ್ಟ್‌ಗಳನ್ನು ಸಂಬಂಧಪಟ್ಟವರಿಗೆ ಒದಗಿಸಲು ನಿರ್ದೇಶಿಸಲು ವಿನಂತಿಸಲಾಗಿದೆ” ಎಂದು ಬರೆದಿತ್ತು. ಆದರೆ, ಈ ಪತ್ರಗಳಿಗೆ ಇಲ್ಲಿಯವರೆಗೆ ಚುನಾವಣಾ ಆಯೋಗ ಉತ್ತರಿಸಿಲ್ಲ.

ಈ ಲೇಖನ ಓದಿದ್ದೀರಾ?: ಮತಗಳವು | ಪ್ರತಿಕ್ರಿಯಿಸುವ ಭರದಲ್ಲಿ ಬೆತ್ತಲಾದ ಚುನಾವಣಾ ಆಯುಕ್ತ

ಕರ್ನಾಟಕ ಸಿಇಒ ಅನುಕೂಲಕರವಾಗಿ ಅರ್ಧ ಸತ್ಯವನ್ನು ಹೇಳುತ್ತಾರೆ. ಎಲ್ಲ ಮಾಹಿತಿಯನ್ನು 2023ರ ಸೆಪ್ಟೆಂಬರ್‌ನಲ್ಲಿ ನೀಡಲಾಗಿದೆ ಎಂದಿರುವ ಅವರು, ಆ ನಂತರ ಸಿಐಡಿ ಬರೆದಿರುವ 18 ಪತ್ರಗಳ ಬಗ್ಗೆ ವಿವರಿಸಿಲ್ಲ.

ಆಯೋಗದ ಪ್ರತಿಕ್ರಿಯೆ: ಕರ್ನಾಟಕ ಸಿಇಒ ಈಗಾಗಲೇ ತನಿಖಾ ಸಂಸ್ಥೆಗೆ ಯಾವುದೇ ಇತರ ಸಹಾಯ/ಮಾಹಿತಿ/ದಾಖಲೆಗಳನ್ನು ಒದಗಿಸಿದ್ದಾರೆ.

ಕಾಂಗ್ರೆಸ್‌ ಕೌಂಟರ್: ಡೆಸ್ಟಿನೇಷನ್ ಐಪಿಗಳು ಮತ್ತು ಡೆಸ್ಟಿನೇಷನ್ ಪೋರ್ಟ್‌ಗಳನ್ನು ಕೋರಿ 18 ಪತ್ರಗಳು ಮತ್ತು ಇಸಿಐ ಅಪ್ಲಿಕೇಶನ್‌ಗಳು ಅದರ ದೃಢೀಕರಣದ ಮೇಲೆ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಮೂರು ಡೆಮೊವನ್ನು ನೀಡಿದ್ದರೂ, ಆಯೋಗದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕರ್ನಾಟಕದ ಸಿಇಒ ತನಿಖಾ ಸಂಸ್ಥೆಗೆ ಯಾವುದೇ ಇತರ ನೆರವು/ಮಾಹಿತಿ/ದಾಖಲೆಗಳನ್ನು ಒದಗಿಸಿದ್ದಾರೆ ಅಥವಾ ಒದಗಿಸುತ್ತಿದ್ದಾರೆ ಎಂಬುದು ಸುಳ್ಳು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...