ಹಾಸನ ನಗರದಲ್ಲಿ ಜೆಡಿಎಸ್ ಜನತಾ ಸಮಾವೇಶ ಹಾಗೂ 25ನೇ ವರ್ಷದ ರಜತಾ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಶನಿವಾರ ಆಯೋಜಿಸಲಾಯಿತು.
ಇಡೀ ಜಿಲ್ಲೆಯ ಪ್ರತಿ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಬೇಕು ಎಂಬ ಪ್ರತಿಜ್ಞೆ ಹಾಕಿಕೊಂಡಿದ್ದೇನೆ. ಹಾಸನ ಜಿಲ್ಲೆಗೆ ಐಐಟಿಯನ್ನು ತರಬೇಕೆಂದು ಹೋರಾಡಿದ್ದೇನೆ ಜಿಲ್ಲೆಗೆ ಪ್ರದಾನಿ ನರೇಂದ್ರ ಮೋದಿ ಹಾಗೂ ದೇಶದ ೧೮ ಸಚಿವರನ್ನು ಕರೆಯಿಸಿ ಏರಪೋರ್ಟ್ ಉದ್ಘಾಟನೆ ಮಾಡುತ್ತೇನೆಂದು ತಿಳಿಸಿದರು. ಕಾಂಗ್ರೆಸ್ ನವರು ಎರಡು ಸಭೆ ಮಾಡಿದ್ದಾರೆ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪ್ರಬಲವಾಗಿದೆ ಎಂಬ ಸಂದೇಶವನ್ನು ಎದುರಾಳಿಗೆ ಹೇಳಬೇಕಿದೆ. ಎರಡು ಸಭೆ ಮಾಡಿ ರೇವಣ್ಣ ನಾಯಕತ್ವ ನಾಶ ಮಾಡಲು ಪ್ರಯತ್ನಿಸಿದರೋ ಆ ಮಹನಿಯರಿಗೆ ರಾಜ್ಯದ ಮೂಲೆ ಮೂಲೆಯಿಂದ ಬಂದಿರುವ ಕಾರ್ಯಕರ್ತರು ಉತ್ತರ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಕಾಡಾನೆ ಸಮಸ್ಯೆ ಪರಿಹಾರಕ್ಕಾಗಿ ಸಮನ್ವಯ ಸಮಿತಿ ರಚನೆ
ಈ ಜಿಲ್ಲೆಗೆ ರೇವಣ್ಣ ಹಗಲು ರಾತ್ರಿ ದುಡಿದು ಜಿಲ್ಲೆಯ ಪ್ರಗತಿಗೆ ಹೋರಾಟ ಮಾಡಿದರು. ಅವರನ್ನು ತುಳಿಯಬೇಕೆಂದು ಕಾಂಗ್ರೆಸ್ ನವರು ಪ್ರಯತ್ನಿಸುತ್ತಿದ್ದಾರೆ. ಎಸ್ ಐಟಿಯವರು ಬಂದು ಅರೆಸ್ಟ್ ಮಾಡ್ತಾರೆ. ಎಸ್ ಐಟಿ ಯವರಿಗೆ ಉಡುಗೊರೆ ಕೊಟ್ಟಿದಾರೆ. ರಾಜ್ಯದ ಆಡಳಿತಕ್ಕೆ ಹಿಡಿದಿರುವ ನಮ್ಮ ಎದುರಾಳಿ ಪಕ್ಷದವರು. ರೇವಣ್ಣ ಕುಟುಂಬ ಮುಗಿಸಲು ಮುಂದಾದವರಿಗೆ ಉಡುಗೊರೆ ಇದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತಿಳಿಸಿದರು.





