ಇತ್ತೀಚೆಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿಯಿಂದಾಗಿಯೇ ಕಾಂಗ್ರೆಸ್ ಕೆಲವು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. ನಮ್ಮ ಬೆಂಬಲದಿದ್ದಾಗಿಯೇ ಕಾಂಗ್ರೆಸ್ ಗೆದ್ದಿದೆ ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ರಾಜ್ಯ ಅಧ್ಯಕ್ಷ ಮಂಗನಿ ಲಾಲ್ ಮಂಡಲ್ ಶನಿವಾರ ಹೇಳಿದ್ದಾರೆ.
ಡಿಸೆಂಬರ್ 1ರಿಂದ ಪ್ರಾರಂಭವಾಗುವ ಬಿಹಾರ ವಿಧಾನಸಭೆಯ ವಿಶೇಷ ಅಧಿವೇಶನಕ್ಕಾಗಿ ಕಾರ್ಯತಂತ್ರವನ್ನು ಚರ್ಚಿಸಲು ಪಟನಾದಲ್ಲಿ ಇಂಡಿಯಾ ಒಕ್ಕೂಟದ ಜಂಟಿ ಸಭೆ ನಡೆಯುವ ಕೆಲವೇ ಗಂಟೆಗಳ ಮುನ್ನ ಆರ್‌ಜೆಡಿ ನಾಯಕರು ಈ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರ ವಿಧಾನಸಭೆ ಚುನಾವಣೆ | ಖರ್ಗೆ, ರಾಹುಲ್ ಗಾಂಧಿಯನ್ನು ಭೇಟಿಯಾದ ತೇಜಸ್ವಿ ಯಾದವ್
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಡಲ್, “ಬಿಹಾರ ಕಾಂಗ್ರೆಸ್ ‘ವಿಭಿನ್ನ’ ಮಾರ್ಗವನ್ನು ಅಳವಡಿಸಿಕೊಳ್ಳಲು ಉದ್ದೇಶ ಹೊಂದಿದ್ದರೆ, ಮುಕ್ತವಾಗಿ ಬೇರೆ ಮಾರ್ಗ ಕಂಡಿಕೊಳ್ಳಬಹುದು. ಏಕಾಂಗಿಯಾಗಿ ಚುನಾವಣೆಗಳಲ್ಲಿ ಸ್ಪರ್ಧಿಸಿದಾಗ ಕಾಂಗ್ರೆಸ್‌ಗೆ ಅದರ ನಿಜವಾದ ಬಲ ತಿಳಿಯುತ್ತದೆ” ಎಂದು ಟೀಕಿಸಿದರು.
“ಆರ್‌ಜೆಡಿ ಬಿಹಾರದಲ್ಲಿ ಬಲವಾದ ಬೆಂಬಲ ನೆಲೆಯನ್ನು ಹೊಂದಿದೆ. ಅದು ಚುನಾವಣಾ ಫಲಿತಾಂಶಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಆರ್‌ಜೆಡಿಯ ಮೈತ್ರಿಕೂಟದವರು ಇದರಿಂದಾಗಿಯೇ ಪ್ರಯೋಜನ ಪಡೆಯುತ್ತಾರೆ. ಹಿಂದಿನ 2020ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 71 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು ಮತ್ತು ಆರ್‌ಜೆಡಿಯ ನಿರಂತರ ಬೆಂಬಲದಿಂದಾಗಿ ಅದು ಕೇವಲ 19 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು” ಎಂದು ಹೇಳಿದರು.
ನವದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕಾಂಗ್ರೆಸ್ 2025ರ ಚುನಾವಣೆಯಲ್ಲಿ ಕಳಪೆ ಪ್ರದರ್ಶನವನ್ನು ಪರಿಶೀಲಿಸಿದೆ. ಅದರಲ್ಲಿ ಕಾಂಗ್ರೆಸ್ ಸೋಲಿಗೆ ಆರ್‌ಜೆಡಿ ಕಾರಣ ಎಂದು ಆರೋಪಿಸಿದೆ ಎಂದೂ ಮಂಡಲ್ ದೂರಿದ್ದಾರೆ.
ಆದರೆ ಆರ್‌ಜೆಡಿ ರಾಜ್ಯ ಅಧ್ಯಕ್ಷರ ಹೇಳಿಕೆಯನ್ನು ತಳ್ಳಿಹಾಕಿದ ಕಾಂಗ್ರೆಸ್ ವಕ್ತಾರ ಅಸಿತ್‌ನಾಥ್ ತಿವಾರಿ, “ಬಿಹಾರದಲ್ಲಿ ಕಾಂಗ್ರೆಸ್ ಒಂದು ವ್ಯರ್ಥ ಶಕ್ತಿಯಾಗಿದ್ದರೆ ಆರ್‌ಜೆಡಿ ನಮ್ಮ ಅತಿ ಹಳೆಯ ಪಕ್ಷ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಏಕೆ” ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರ ವಿಧಾನಸಭೆ ಚುನಾವಣೆ | ಮತ ಎಣಿಕೆ ಆರಂಭ; ಯಾರ ತೆಕ್ಕೆಗೆ ಅಧಿಕಾರ?
ಇನ್ನು ಕಾಂಗ್ರೆಸ್ ನಾಯಕ ಗ್ಯಾನ್ ರಂಜನ್, “ಮಂಡಲ್ ಏನನ್ನಾದರೂ ಹೇಳಬೇಕಾದರೆ ಅದನ್ನು ಮಾಧ್ಯಮಗಳ ಮುಂದೆ ಹೇಳುವುದಲ್ಲ. ಅದಕ್ಕೆ ಸರಿಯಾದ ವೇದಿಕೆಗಳಿವೆ. ಅಲ್ಲಿ ಮಾತನಾಡಬೇಕು. ಮಂಡಲ್ ತಮ್ಮ ಅನಿಸಿಕೆ, ಅಭಿಪ್ರಾಯ, ಭಾವನೆಗಳನ್ನು ಇಂಡಿಯಾ ಒಕ್ಕೂಟದ ಸಮನ್ವಯ ಸಮಿತಿಯ ಅಧ್ಯಕ್ಷ ಅಧ್ಯಕ್ಷ ತೇಜಸ್ವಿ ಪ್ರಸಾದ್ ಯಾದವ್ ಅವರಿಗೆ ತಿಳಿಸಬೇಕು” ಎಂದು ಅಭಿಪ್ರಾಯಿಸಿದರು.
ಇನ್ನು ಕಾಂಗ್ರೆಸ್ ಆರ್‌ಜೆಡಿಯೊಂದಿಗೆ ಬೇರ್ಪಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಕಾಂಗ್ರೆಸ್ ಸಂಸದ ಮತ್ತು ಮಾಜಿ ರಾಜ್ಯ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್ ನಿರ್ಧಾರವು ಸಂಪೂರ್ಣವಾಗಿ ಪಕ್ಷದ ಕೇಂದ್ರ ನಾಯಕತ್ವದ ಮೇಲೆ ಅವಲಂಬಿತವಾಗಿರುತ್ತದೆ” ಎಂದು ಹೇಳಿದರು.
2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ 61 ಸ್ಥಾನಗಳಲ್ಲಿ ಕೇವಲ ಆರು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. ಆರ್‌ಜೆಡಿ 143 ಸ್ಥಾನಗಳಲ್ಲಿ ಸ್ಪರ್ಧಿಸಿ 25 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ.





