ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಚುನಾವಣೆಯಲ್ಲಿ ಮಹಾಯುತಿ ಭಾರಿ ಗೆಲುವು ಸಾಧಿಸುತ್ತದೆ ಎಂದು ಎಕ್ಸಿಟ್ ಪೋಲ್‌ಗಳು ಅಂದಾಜಿಸಿವೆ. ಬಿಜೆಪಿ-ಶಿವಸೇನೆ ಮೈತ್ರಿಕೂಟ 130 ಸ್ಥಾನಗಳನ್ನು ದಾಟಲಿದೆ ಎಂದು ಎಕ್ಸಿಟ್ ಪೋಲ್‌ಗಳು ಹೇಳಿವೆ. ಶಿವಸೇನೆ (UBT)-ಎಂಎನ್‌ಎಸ್ ಮೈತ್ರಿಕೂಟವು ಹಿಂದುಳಿಯಲಿದೆ. 60ಕ್ಕೂ ಹೆಚ್ಚು ಸ್ಥಾನಗಳನ್ನು ಮಾತ್ರ ಗೆಲ್ಲಲಿದೆ. ಕಾಂಗ್ರೆಸ್ 20 ಸ್ಥಾನಗಳನ್ನು ಮಾತ್ರ ಗೆಲ್ಲುವ ಸಾಧ್ಯತೆಯಿದೆ ಎಂದು ಎಕ್ಸಿಟ್ ಪೋಲ್ ತಿಳಿಸಿದೆ.
ಆಕ್ಸಿಸ್ ಮೈ ಇಂಡಿಯಾ ಮಹಾಯುತಿಗೆ 141 ಸ್ಥಾನಗಳು ಬರಲಿದೆ ಎಂದು ಅಂದಾಜಿಸಿದ್ದರೂ, ಜೆವಿಸಿ 138 ವಾರ್ಡ್‌ಗಳಲ್ಲಿ ಮಹಾಯುತಿ ಗೆಲ್ಲಲಿದೆ ಎಂದಿದೆ. ಹಾಗೆಯೇ ಎರಡು ದಶಕಗಳ ನಂತರ ಮತ್ತೆ ಒಂದಾದ ಠಾಕ್ರೆ ಸೋದರಸಂಬಂಧಿಗಳಾದ ಉದ್ಧವ್ ಮತ್ತು ರಾಜ್ ಅವರ ಮೈತ್ರಿಕೂಟಕ್ಕೆ ಅಧಿಕ ಸ್ಥಾನ ಸಿಗದು. ಮೈತ್ರಿಕೂಟಕ್ಕೆ ಕೇವಲ 63 ಸ್ಥಾನಗಳು ಸಿಗಲಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಹೇಳಿದೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆ | ಶಿವಸೇನೆ vs ಶಿವಸೇನೆ: ಮಹಾಯುತಿ, ಮಹಾ ಅಘಾಡಿಗೆ ಪ್ರತಿಷ್ಠೆಯ ಕಣ
ಜೆವಿಸಿ ಸಮೀಕ್ಷೆಯು ಇದೇ ರೀತಿ ಅಂದಾಜು ವ್ಯಕ್ತಪಡಿಸಿದೆ. ಶಿವಸೇನೆ (ಯುಬಿಟಿ)-ಎಂಎನ್‌ಎಸ್ ಒಕ್ಕೂಟ 59 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಜೆವಿಸಿ ಸಮೀಕ್ಷೆ ಹೇಳಿದೆ.
ಕೊನೆಯದಾಗಿ 2017ರಲ್ಲಿ ಬಿಎಂಸಿ ಚುನಾವಣೆಗಳು ನಡೆದಿದೆ. 2022ರ ಮಾರ್ಚ್ 7ರಂದು ಕಾರ್ಪೊರೇಟರ್‌ಗಳ ಅವಧಿ ಕೊನೆಗೊಂಡಿದೆ. ಆದರೆ ಕೋವಿಡ್ ಸಾಂಕ್ರಾಮಿಕ, ಒಬಿಸಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ತೀರ್ಪುಗಳು ಮತ್ತು ವಾರ್ಡ್ ಪುನರ್ವಿಂಗಡಣೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆದಿಲ್ಲ.
ಇಂದು ಮುಂಬೈ ಮತ್ತು ಮಹಾರಾಷ್ಟ್ರದಾದ್ಯಂತ 28 ಇತರ ಪುರಸಭೆಗಳಲ್ಲಿ ಚುನಾವಣೆ ನಡೆದಿದ್ದು, 50% ಮತದಾನವಾಗಿದೆ. ಸಂಜೆ 5.30ಕ್ಕೆ ಮತದಾನ ಮುಗಿದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರಾಜ್ಯ ಚುನಾವಣಾ ಆಯುಕ್ತ ದಿನೇಶ್ ವಾಘ್ಮಾರೆ, 29 ಸ್ಥಳೀಯ ಸಂಸ್ಥೆಗಳಲ್ಲಿ ಮತದಾನದ ಪ್ರಮಾಣ 46% ರಿಂದ 50% ರ ನಡುವೆ ಇದೆ ಎಂದು ಅಂದಾಜಿಸಲಾಗಿದೆ. ಅಂತಿಮ ಅಂಕಿಅಂಶಗಳನ್ನು ನಂತರ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಇದಾದ ಬಳಿಕ ಎಕ್ಸಿಟ್ ಪೋಲ್‌ಗಳನ್ನು ಬಿಡುಗಡೆ ಮಾಡಲಾಗಿದೆ.





