ದೆಹಲಿ ಎಎಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ರಾಜ್ ಕುಮಾರ್ ಆನಂದ್ ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಎಎಪಿ ತೊರೆದಿದ್ದ ರಾಜ್ ಕುಮಾರ್ ಮೇ ತಿಂಗಳಲ್ಲಿ ಮಾಯಾವತಿ ಅವರ ಬಿಎಸ್‌ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಈಗ ಬಿಎಸ್‌ಪಿಯಿಂದ ಬಿಜೆಪಿಗೆ ಜಿಗಿದಿದ್ದಾರೆ.
ರಾಜ್ ಕುಮಾರ್ ಆನಂದ್ ಅವರ ಪತ್ನಿ ಮತ್ತು ಮಾಜಿ ಎಎಪಿ ಶಾಸಕಿ ವೀಣಾ, ಎಎಪಿ ಶಾಸಕ ಕರ್ತಾರ್ ಸಿಂಗ್ ತನ್ವಾರ್, ಎಎಪಿ ಕೌನ್ಸಿಲರ್ ಉಮೇದ್ ಸಿಂಗ್ ಫೋಗಟ್ ಮತ್ತು ಎಎಪಿ ನಾಯಕ ರತ್ನೇಶ್ ಗುಪ್ತಾ ಸೇರಿದಂತೆ ಇತರ ಮೂವರು ರಾಜ್ ಕುಮಾರ್ ಜೊತೆಯಲ್ಲೇ ಬಿಜೆಪಿಗೆ ಸೇರಿದ್ದಾರೆ.
ರಾಜ್ ಕುಮಾರ್ ಆನಂದ್ ಅವರು ಬಿಜೆಪಿ ದೆಹಲಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಮತ್ತು ಬಿಜಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಹರಿಯಾಣ| ಮಾಜಿ ಕಾಂಗ್ರೆಸ್ ನಾಯಕಿ ಕಿರಣ್ ಚೌಧರಿ, ಪುತ್ರಿ ಶ್ರುತಿ ಬಿಜೆಪಿ ಸೇರ್ಪಡೆ
ದಲಿತ ಸಮುದಾಯಕ್ಕೆ ಸೇರಿದ ರಾಜ್ ಕುಮಾರ್ ಆನಂದ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸಮಾಜ ಕಲ್ಯಾಣ ಸಚಿವರಾಗಿದ್ದರು. ಅಬಕಾರಿ ಪ್ರಕರಣದಲ್ಲಿ ಕೇಜ್ರಿವಾಲ್ ಬಂಧನದ ಬಳಿಕ ಎಎಪಿ ತೊರೆದು, ಬಿಎಸ್‌ಪಿ ಸೇರಿದ್ದರು. ಇದೀಗ ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ.
ಬಿಜೆಪಿ ಸೇರ್ಪಡೆಯಾದ ಬಳಿಕ ರಾಜ್ ಕುಮಾರ್ ಆನಂದ್ ಅವರು ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ದೆಹಲಿ ಸಿಎಂ ಕೇಜ್ರಿವಾಲ್ ದಲಿತರಿಗೆ ಮೋಸ ಮಾಡುತ್ತಿದ್ದಾರೆ” ಎಂದು ಆನಂದ್ ಆರೋಪಿಸಿದ್ದಾರೆ.
आज भाजपा केंद्रीय कार्यालय पर यशस्वी प्रधानमंत्री श्री @narendramodi जी की विकास परक कार्यशैली और कुशल व दूरदर्शी नेतृत्व से प्रभावित होकर दिल्ली AAP सरकार के पूर्व मंत्री श्री राजकुमार आनंद जी, विधायक छत्तरपुर श्री करतार सिंह तंवर जी,पूर्व विधायिका श्रीमती वीना आनंद जी, निगम… pic.twitter.com/5neHHb6J3L
— Virendraa Sachdeva (@Virend_Sachdeva) July 10, 2024




