GBA ಚುನಾವಣೆ | ಸುಪ್ರೀಂ ಕೋರ್ಟ್ ‘ಟ್ರಿಪಲ್ ಟೆಸ್ಟ್’ ಆದೇಶ ಉಲ್ಲಂಘಿಸಿ ಉದ್ಧಟತನ ಮೆರೆಯಿತೇ ಸರ್ಕಾರ?

Date:

ಸರ್ವೋಚ್ಚ ನ್ಯಾಯಾಲಯ ತನ್ನ 2010ರ ತೀರ್ಪಿನಲ್ಲಿ ಮೀಸಲಾತಿಯ ಗರಿಷ್ಠ ಮಿತಿಯನ್ನು ಶೇ. 50ರಷ್ಟಕ್ಕೆ ನಿಗದಿಗೊಳಿಸಬೇಕು. ಮತ್ತು ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಅನುವಾಗುವಂತೆ ಮೂರು ಸ್ತರಗಳ(ಟ್ರಿಪಲ್ ಟೆಸ್ಟ್) ಪರೀಕ್ಷೆ ಹಮ್ಮಿಕೊಳ್ಳಬೇಕು ಎಂದು ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶವನ್ನು ವಿಧಿಸಿದೆ.

ಕಳೆದ ನಾಲ್ಕೈದು ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸದೆ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿರುವ ಸರ್ಕಾರ, ಈಗ ಏಕಾಏಕಿ ಜಿಬಿಎ ವಾರ್ಡ್‌ ಗಳಿಗೆ ಮೀಸಲಾತಿ ಪ್ರಕಟಿಸಿದೆ. ಪ್ರಕಟಣೆಗೂ ಮುನ್ನ, ನ್ಯಾಯಾಲಯಗಳ ಆದೇಶಗಳನ್ನು ಪಾಲಿಸದಿರುವುದು, ಗೌರವಿಸದಿರುವುದು ಸರ್ಕಾರದ ಉದ್ಭಟತನಕ್ಕೆ ಸಾಕ್ಷಿಯಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಹಕ್ಕು ಮತ್ತು ಕರ್ತವ್ಯಗಳಿರುತ್ತವೆ. ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳನ್ನು ಪ್ರಜೆಗಳು ತಮ್ಮ ಅಭಿಮತದಂತೆ ಮತದಾನದ ಮೂಲಕ ಆಯ್ಕೆ ಮಾಡುವ ಹಕ್ಕಿರುತ್ತದೆ. ಮತದಾನ ಜನಪ್ರತಿನಿಧಿಗಳನ್ನು ಜವಾಬ್ದಾರರನ್ನಾಗಿ ಮಾಡಲು, ಸಾಮಾಜಿಕ ನ್ಯಾಯವನ್ನು ಖಚಿತಪಡಿಸಲು ಮತ್ತು ದೇಶದ ಅಭಿವೃದ್ಧಿಯಲ್ಲಿ ಭಾಗವಹಿಸಲು ಮಹತ್ವದ ಸಾಧನವಾಗಿದೆ. ಇದು ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು, ಜನರ ಆಶಯಗಳನ್ನು ಪ್ರತಿಬಿಂಬಿಸುವ ಮತ್ತು ಎಲ್ಲಾ ವರ್ಗಗಳನ್ನು ಒಳಗೊಳ್ಳುವ ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಂತೆಯೇ ಸರ್ಕಾರವು ಕೂಡ ನೀತಿ-ನಿಯಮ, ಆದೇಶಗಳನ್ನು ಪಾಲಿಸಬೇಕಾಗುತ್ತದೆ.

ಇದನ್ನು ಓದಿದ್ದೀರಾ?: ಆರೋಗ್ಯ ಹಕ್ಕಿಗಾಗಿ ʼಆಸ್ಪತ್ರೆ ದರ ನಿಯಂತ್ರಣ ಕಾಯ್ದೆʼ ಅನಿವಾರ್ಯ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದರೆ, ಸರ್ಕಾರ ಜಿಬಿಎ ವಾರ್ಡುಗಳಿಗೆ ಮೀಸಲಾತಿ ಪ್ರಕಟಿಸುವಲ್ಲಿ, ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ ವಿಧಿಸಿರುವ ಆದೇಶವನ್ನು ಪಾಲಿಸಿಲ್ಲ. ಅದುವೇ ‘ಟ್ರಿಪಲ್ ಟೆಸ್ಟ್'(ತ್ರಿಸ್ತರ). ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗೆ ಮೂರು ದಶಕಗಳ ಇತಿಹಾಸವೇ ಇದೆ. 1993ರಲ್ಲಿ ಸಂವಿಧಾನ ತಿದ್ದುಪಡಿ ಮಾಡಿದ ಲಾಗಾಯ್ತಿನಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಅವಕಾಶ ಕಲ್ಪಿಸಿದೆ. ಆದರೆ, ಸರ್ಕಾರ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಯಾವುದೇ ಋಜು ಮಾರ್ಗ ಅನುಸರಿಸಿಲ್ಲ. ಅಲ್ಲದೇ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮೀಸಲಿರಿಸಿದ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳನ್ನೇ ಸ್ಥಳೀಯ ಸಂಸ್ಥೆಗಳ ರಾಜಕೀಯ ಮೀಸಲಾತಿಗೂ ಒಳಪಡಿಸಿದೆ. ಮತ್ತು ಮೀಸಲಾತಿ ಕೋಟಾವನ್ನು ಶೇ. 50ಕ್ಕಿಂತ ಹೆಚ್ಚಿಸಿದೆ. ಇದನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗಿದೆ. ಅದರಲ್ಲೂ ಪ್ರಶ್ನಿತರ ಮುಖ್ಯ ವಾದವೆಂದರೆ ಮೀಸಲಾತಿ ಶೇ. 50ಕ್ಕಿಂತ ಮೀರಿ ಹೋಗಿದೆ ಎಂಬುದಾಗಿದೆ. 

prajavani 2026 01 12 e9ochdw2 GBA
ಸುಪ್ರೀಂ ಕೋರ್ಟ್ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ

ಸರ್ವೋಚ್ಚ ನ್ಯಾಯಾಲಯ ತನ್ನ 2010ರ ತೀರ್ಪಿನಲ್ಲಿ ಮೀಸಲಾತಿಯ ಗರಿಷ್ಠ ಮಿತಿಯನ್ನು ಶೇ. 50ರಷ್ಟಕ್ಕೆ ನಿಗದಿಗೊಳಿಸಬೇಕು. ಮತ್ತು ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಅನುವಾಗುವಂತೆ ಮೂರು ಸ್ತರಗಳ(ಟ್ರಿಪಲ್ ಟೆಸ್ಟ್) ಪರೀಕ್ಷೆ ಹಮ್ಮಿಕೊಳ್ಳಬೇಕು ಎಂದು ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶವನ್ನು ವಿಧಿಸಿದೆ(ಕೆ. ಕೃಷ್ಣಮೂರ್ತಿ vs ಭಾರತ ಒಕ್ಕೂಟ). 2010ರಲ್ಲಿ ಇದ್ದ ಅಂದಿನ ಬಿಜೆಪಿ ಸರ್ಕಾರ ಮೀಸಲಾತಿಯ ಮಿತಿಯನ್ನು ಶೇ. 50ರಷ್ಟಕ್ಕೆ ಇಳಿಸಿತೇ ಹೊರತು, ಟ್ರಿಪಲ್ ಟೆಸ್ಟ್‌ನ ಗೋಜಿಗೆ ಹೋಗಲಿಲ್ಲ. ಆ ಮೂಲಕ ಹಿಂದುಳಿದ ವರ್ಗಗಳ ಬಗ್ಗೆ ಕ್ರೌರ್ಯ ಮೆರೆಯಿತು. 

ಟ್ರಿಪಲ್ ಟೆಸ್ಟ್ ಆದೇಶ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯಿಸುವುದರಿಂದ ಕರ್ನಾಟಕವು ಅವುಗಳನ್ನು ಅನುಷ್ಠಾನ ಮಾಡಬೇಕಾಗುತ್ತದೆ. ಅವುಗಳೆಂದರೆ- 1. ರಾಜ್ಯದೊಳಗೆ ಹಿಂದುಳಿದ ಸಂಸ್ಥೆಗಳ ಸ್ವರೂಪ ಮತ್ತು ಪರಿಣಾಮಗಳ ಬಗ್ಗೆ ಸಮಕಾಲೀನ ಕಟ್ಟುನಿಟ್ಟಿನ ಪ್ರಾಯೋಗಿಕ ವಿಚಾರಣೆ ನಡೆಸಲು ಮೀಸಲಾದ ಆಯೋಗವನ್ನು ಸ್ಥಾಪಿಸುವುದು. 2. ಆಯೋಗದ ಶಿಫಾರಸುಗಳ ಬೆಳಕಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಒದಗಿಸಬೇಕಾದ ಮೀಸಲಾತಿಯ ಕೋಟಾವನ್ನು ನಿರ್ದಿಷ್ಟಪಡಿಸುವುದರಿಂದ ಮಿತಿಮೀರಿದ ಪ್ರಮಾಣದಲ್ಲಿ ತಪ್ಪಾಗುವುದಿಲ್ಲ. 3. ಯಾವುದೇ ಸಂದರ್ಭದಲ್ಲಿ ಅಂತಹ ಮೀಸಲಾತಿಯು ಪರಿಶಿಷ್ಟ ಜಾತಿಗಳು/ ಪರಿಶಿಷ್ಟ ಪಂಗಡಗಳು/ ಇತರ ಹಿಂದುಳಿದ ವರ್ಗಗಳ ಪರವಾಗಿ ಮೀಸಲಾಗಿರುವ ಸ್ಥಾನಗಳು ಶೇ. 50ರಷ್ಟು ಕೋಟಾವನ್ನು ಮೀರಬಾರದು. 

ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿಯೂ ಕೂಡ, 2010ರಲ್ಲಿಯೇ ಪ್ರಶ್ನಿತಗೊಂಡು, ವಿಭಾಗೀಯ ಪೀಠ ಟ್ರಿಪಲ್ ಟೆಸ್ಟ್ ಮಾಡುವಂತೆ ಸರ್ಕಾರಕ್ಕೆ ಆದೇಶ ನೀಡಿತು(ರಾಜ್ಯ ಚುನಾವಣಾ ಆಯೋಗ vs ಕರ್ನಾಟಕ ಸರ್ಕಾರ). ಆದೇಶದಲ್ಲಿ ಪ್ರಬಲ ಜಾತಿಗಳು ಹೊಂದಿರುವ ಜನಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡು ರಾಜಕೀಯವಾಗಿ ಅಧಿಪತ್ಯ ಪಡೆದುಕೊಂಡಿವೆ ಎಂಬ ಅಂಶವನ್ನು ನ್ಯಾಯಾಲಯ ತೀರ್ಪಿನಲ್ಲಿ ದಾಖಲಿಸಿತು. ಅದು “…It would be legetimate for the state government to exclude all the known accepted and aclaimed ‘politically advanced’ castes from the list of backward classes for the purpose of reservation in the ensuing elections” ಎಂದು ಅಭಿಪ್ರಾಯ ಪಟ್ಟಿತು. ಅಷ್ಟರಲ್ಲಾಗಲೇ ಚುನಾವಣೆ ಘೋಷಣೆಯಾಗಿದ್ದರಿಂದ, ಚುನಾವಣೆ ನಡೆಸಲು ಸಹ ಅನುಮತಿ ನೀಡಿತು. ಮತ್ತೆ 2015ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿದ ಸರ್ಕಾರ, ಆಗಲೂ ಟ್ರಿಪಲ್ ಟೆಸ್ಟ್ ಮಾಡುವ ಉಸಾಬರಿಗೆ ಹೋಗಲಿಲ್ಲ.

ಮುಂದೊಂದು ದಿನ, ಮಹಾರಾಷ್ಟ್ರ ರಾಜ್ಯಕ್ಕೆ ಸಂಬಂಧಿಸಿದಂತೆ, ವಿಕಾಸ್ ರಾವ್ ಗೌಳಿ ಎಂಬುವರು ಸಲ್ಲಿಸಿದ ಮನವಿ ಮೇರೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಸರ್ವೋಚ್ಚ ನ್ಯಾಯಾಲಯ ಮಹಾರಾಷ್ಟ್ರ ಸರ್ಕಾರಕ್ಕೆ ಟ್ರಿಪಲ್ ಟೆಸ್ಟ್ ನಡೆಸುವಂತೆ ತಾಕೀತು ಮಾಡಿತು. ಹಾಗೆಯೇ ಮಧ್ಯಪ್ರದೇಶದ ಪ್ರಕರಣ ಒಂದರಲ್ಲಿಯೂ ಸರ್ವೋಚ್ಚ ನ್ಯಾಯಾಲಯ ಟ್ರಿಪಲ್ ಟೆಸ್ಟ್ ನಡೆಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿತು(ಸುರೇಶ್ ಮಹಾಜನ್ vs  ಮಧ್ಯಪ್ರದೇಶ್). 

ಈ ಎರಡು ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ಕಟ್ಟಪ್ಪಣೆಯ ಇಕ್ಕಟ್ಟಿಗೆ ಸಿಲುಕಿದ ಕರ್ನಾಟಕ ಸರ್ಕಾರವು ಅನ್ಯಮಾರ್ಗವಿಲ್ಲದೆ ಆಯೋಗವನ್ನು ರಚಿಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸಲು ಕಾಲಮಿತಿ ಹೇರಿತು. ನಿಗದಿತ ಕಾಲಮಿತಿಯಲ್ಲಿ ಆಯೋಗ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಿ ವರದಿ ಸಲ್ಲಿಸಲು ಸಾಧ್ಯವೇ ಎಂಬ ಅಂಶ ಅಂದು ಜನರ ಮಾತಾಯಿತು. 

2022ರಲ್ಲಿ, ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಅಂದಿನ ಬಿಜೆಪಿ ಸರ್ಕಾರ, ಟ್ರಿಪಲ್ ಟೆಸ್ಟ್ ಪರಿಶೀಲನಾ ಕಾರ್ಯಕ್ಕೆಂದು, ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿಯನ್ನು ರಚಿಸಿತು. ಈ ದಿಸೆಯಲ್ಲಿ ಆಯೋಗ ಯಾವ ಕಾರ್ಯವಿಧಾನ ಅನುಸರಿಸಿತು ಎಂಬುದು ಯಾರಿಗೂ ತಿಳಿಯದಾಯಿತು. ಆಯೋಗ 90 ದಿನಗಳವರೆಗೂ ಕಾಯದೆ ಕೇವಲ 46 ದಿನಗಳಲ್ಲಿಯೇ ವರದಿ ಸಲ್ಲಿಸಿ ಐತಿಹಾಸಿಕ ದಾಖಲೆಯನ್ನೇ ಸೃಷ್ಟಿಸಿಬಿಟ್ಟಿತು! ಮಾಂತ್ರಿಕನೋರ್ವನನ್ನು ಆಯೋಗ ಮೈಮೇಲೆ ಆವಾಹಿಸಿಕೊಂಡು ವರದಿ ಸಿದ್ಧಪಡಿಸಿರಬಹುದೇನೋ ಎಂದು ಯಾರಿಗಾದರೂ ಅನ್ನಿಸದಿರದು. ಉಭಯ ನ್ಯಾಯಾಲಯಗಳು ನಿರ್ಣಯಾತ್ಮಕ ಅಭಿಪ್ರಾಯ ನೀಡಿದ್ದರೂ, ಆಯೋಗ ಇದಾವುದನ್ನು ಗಮನಿಸದಿರುವುದು ವಿಷಾದ ತರುವ ಸಂಗತಿ. ಆಯೋಗ ಯಾರದೋ ಮರ್ಜಿಗೆ ಒಳಗಾಗಿ ಕಾಲಕಾಲಕ್ಕೆ ನ್ಯಾಯಾಲಯಗಳು ನೀಡಿರುವ ತೀರ್ಪಿನ ಅಂಶಗಳನ್ನು ಮನಗಾಣದೆ ವರದಿ ನೀಡಿರುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಅಂದು ಕೇಳಿ ಬಂದವು.

ಆಯೋಗ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವುದಷ್ಟೇ ಸಾರ್ವಜನಿಕರಿಗೆ ತಿಳಿದು ಬಂದ ವಿಷಯ. ಆದರೆ ವರದಿಯಲ್ಲಿ ಏನಿದೆ ಎಂಬುದು ಮಾತ್ರ ಯಾರಿಗೂ ತಿಳಿಯಲಿಲ್ಲ. ಸರ್ಕಾರವು ಅದನ್ನು ಪ್ರಕಟಿಸುವ ತಂಟೆಗೂ ಹೋಗಲಿಲ್ಲ. ಸರ್ಕಾರ ಜನಸಾಮಾನ್ಯರ ಅವಗಾಹನೆಗೆ ತರದೆ ಅದನ್ನು ಜಾರಿಗೊಳಿಸುವ ಜರೂರಾದರು ಏನು ಎಂಬುದು ಪ್ರಶ್ನೆಯಾಗಿತ್ತು. ಇಷ್ಟಾದರೂ ವರದಿ ಪ್ರಕಟಿಸುವಂತೆ ರಾಜಕೀಯ ಪಕ್ಷಗಳಾಗಲಿ ಅಥವಾ ಹಿಂದುಳಿದ ವರ್ಗಗಳ ಅಗ್ರ ನಾಯಕರಾಗಲಿ ಒತ್ತಡ ತರಲಿಲ್ಲ. ಇದು ಸರ್ಕಾರ ಮತ್ತು ರಾಜಕೀಯ ಪಕ್ಷಗಳ ನಡುವಿನ ನೈತಿಕತೆಗೆ ಹೊರತಾದ ಒಡಂಬಡಿಕೆ ಇರಬಹುದು ಎಂಬ ಗುಮಾನಿ ಇದ್ದೇ ಇತ್ತು.

ಸರ್ವೋಚ್ಚ ನ್ಯಾಯಾಲಯ ಪ್ರಾಯೋಗಿಕ ದತ್ತಾಂಶಗಳನ್ನು ಕಟ್ಟುನಿಟ್ಟಿನ ಪರೀಕ್ಷೆಗೊಳಪಡಿಸಿ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಸ್ಪಷ್ಟ ಮಾತಿನಲ್ಲಿ ಹೇಳಿತ್ತು. ನ್ಯಾಯಮೂರ್ತಿ ಭಕ್ತವತ್ಸಲ ಆಯೋಗ ಈ ಅತ್ಯಲ್ಪ ಅವಧಿಯಲ್ಲಿ ಪ್ರಾಯೋಗಿಕ ದತ್ತಾಂಶಗಳನ್ನು ಹೇಗೆ ಸಂಗ್ರಹಿಸಿದೆ ಹಾಗೂ ಯಾವ ಮಾನದಂಡಗಳನ್ನು ಅನುಸರಿಸಿ ಆ ವರ್ಗಗಳನ್ನು ಗುರುತಿಸಿದೆ ಎಂಬುದೇ ಯಾರಿಗೂ ತಿಳಿದಿಲ್ಲ. ಸರ್ಕಾರ ವರದಿಯನ್ನು ಸ್ವೀಕರಿಸಿದ ನಂತರ ಮೊದಲಿಗೆ ವರದಿಯನ್ನು ಅಂಗೀಕರಿಸಬೇಕು ಮತ್ತು ಸಂಪುಟದ ಮುಂದಿಟ್ಟು ಅನುಮೋದಿಸಿದ ನಂತರ ಅದನ್ನು ಕಾರ್ಯನಿರ್ವಾಹಕ ಆದೇಶ ಹೊರಡಿಸುವುದರ ಮೂಲಕ ಜಾಹೀರುಪಡಿಸಬೇಕು. ಅನಂತರ ಅವುಗಳನ್ನು ಮೀಸಲಾತಿಗೆ ಒಳಪಡಿಸಬೇಕು. ಆದರೆ ಸರ್ಕಾರ ಇದಾವ ಪ್ರಕ್ರಿಯೆಗಳನ್ನು ಅನುಸರಿಸದೆ ಜನತೆಯನ್ನು ಕಗ್ಗತ್ತಲಿನಲ್ಲಿಟ್ಟಿತು. 2023ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದು, ಬೊಮ್ಮಾಯಿ ಸರ್ಕಾರ ಪತನಗೊಂಡು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಪದವಿಗೆ ಏರಿದರು.

ಇದನ್ನು ಓದಿದ್ದೀರಾ?: ‘ಅಹಿಂದ’ ಸಂಘಟನೆಯ ಅಸ್ತಿತ್ವ, ಹಿಂದೆಂದಿಗಿಂತಲೂ ಇಂದು ಅತ್ಯಗತ್ಯ!

ಹೊಸದಾಗಿ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯನವರ ಸರ್ಕಾರದ ಸಂಪುಟದಲ್ಲಿ ನ್ಯಾ. ಭಕ್ತವತ್ಸಲ ಆಯೋಗದ ವರದಿಯನ್ನು ಚರ್ಚಿಸಲಾಗಿದೆ. ಆಯೋಗದ ಕೆಲವೊಂದು ಸಲಹೆಗಳನ್ನು ಒಪ್ಪಿ, ಕೆಲವೊಂದನ್ನು ತಿರಸ್ಕರಿಸಿದೆ ಎಂಬ ವಿಷಯ ಅಂದಿನ ದಿನಪತ್ರಿಕೆಗಳಿಂದ ತಿಳಿದು ಬಂದಿತಷ್ಟೇ. ಅಲ್ಲಿಗೆ ಈ ವಿಷಯದ ಮೇಲೆ ಚರ್ಚೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಸರ್ಕಾರವಾದರೂ ನ್ಯಾಯಾಲಯದ ಆದೇಶದ ಪ್ರಕಾರ ಆಯೋಗವು ವರದಿ ಸಿದ್ಧಪಡಿಸಿದೆಯೇ ಎಂಬ ಅಂಶದ ಬಗ್ಗೆ ತಲೆಬಿಸಿ ಮಾಡಿಕೊಳ್ಳದೆ ಮುಂದುವರೆಯಿತು.

1388218 74
ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್

ಸರ್ಕಾರ ಇಷ್ಟೆಲ್ಲಾ ಲೋಪ ದೋಷಗಳನ್ನು ಇಟ್ಟುಕೊಂಡು ಜಿಬಿಎ ಚುನಾವಣೆಗಾಗಿ ವಾರ್ಡ್‌ಗಳ ಮೀಸಲಾತಿಯನ್ನು ಸದ್ಯ ನಿಗದಿಪಡಿಸಿರುವುದು, ಹಿಂದುಳಿದ ವರ್ಗಗಳಿಗೆ ಮರ್ಮಾಘಾತವನ್ನು ನೀಡಿದೆ. ಹಿಂದುಳಿದ ವರ್ಗದ ಪ್ರಾಜ್ಞರು, ತಮಗಾಗಿರುವ ಘೋರ ಅನ್ಯಾಯವನ್ನು ಪ್ರಶ್ನಿಸಬೇಕಲ್ಲವೇ? 

ಈಗಷ್ಟೇ ಸರ್ವೋಚ್ಚ ನ್ಯಾಯಾಲಯ ಜಿಬಿಎ ಚುನಾವಣೆಯನ್ನು ಜೂನ್ ತಿಂಗಳೊಳಗೆ ನಡೆಸಬೇಕೆಂದು ಫರ್ಮಾನು ಹೊರಡಿಸಿದೆ. ಸರ್ಕಾರ ಇಕ್ಕಟ್ಟಿನ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದೆ. ಇಲ್ಲಿ ಒಂದು ಮಾತು- ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದು ಎಲ್ಲಾ ವರ್ಗದವರನ್ನು ಒಳಗೊಂಡಿರಬೇಕು, ಕೆಲವರಿಗಷ್ಟೇ ಸೀಮಿತವಾದುದಲ್ಲ. ರಾಜಕೀಯ ಬೆಳಕನ್ನೇ ಕಾಣದ ಹಿಂದುಳಿದ ವರ್ಗ, ಅದರಲ್ಲೂ ದಮನಿತ ಹಿಂದುಳಿದ ವರ್ಗದವರನ್ನು ಕತ್ತಲಲ್ಲಿಟ್ಟು ಚುನಾವಣೆ ನಡೆಸುವುದು ಆ ವರ್ಗದವರಿಗೆ ಎಸಗುವ ಮಹಾ ದ್ರೋಹವಲ್ಲವೇ?

KN Lingappa
ಕೆ.ಎನ್. ಲಿಂಗಪ್ಪ
+ posts

ಲೇಖಕರು ನಿವೃತ್ತ ಕೆ.ಎ.ಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು. ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲವರು. 'ಮೀಸಲಾತಿಯ ಒಳನೋಟ', 'ಮೀಸಲಾತಿಯ ಅಂತರಂಗ', 'ಮೀಸಲಾತಿಯ ಒಳ ಮುಖ' ಮತ್ತು 'ಮೀಸಲಾತಿಯ ಅಂತರಾಳ' ಅವರ ಕೃತಿಗಳು.

ಪೋಸ್ಟ್ ಹಂಚಿಕೊಳ್ಳಿ:

ಕೆ.ಎನ್. ಲಿಂಗಪ್ಪ
ಕೆ.ಎನ್. ಲಿಂಗಪ್ಪ
ಲೇಖಕರು ನಿವೃತ್ತ ಕೆ.ಎ.ಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು. ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲವರು. 'ಮೀಸಲಾತಿಯ ಒಳನೋಟ', 'ಮೀಸಲಾತಿಯ ಅಂತರಂಗ', 'ಮೀಸಲಾತಿಯ ಒಳ ಮುಖ' ಮತ್ತು 'ಮೀಸಲಾತಿಯ ಅಂತರಾಳ' ಅವರ ಕೃತಿಗಳು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...