ಹರಿಯಾಣದ ಮಾಜಿ ಕಾಂಗ್ರೆಸ್ ನಾಯಕಿ ಕಿರಣ್ ಚೌಧರಿ ಮತ್ತು ಅವರ ಪುತ್ರಿ ಶ್ರುತಿ ಚೌಧರಿ ತಮ್ಮ ಬೆಂಬಲಿಗರೊಂದಿಗೆ ಬುಧವಾರ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಕಿರಣ್ ಚೌಧರಿ ಮತ್ತು ಶ್ರುತಿ ಚೌಧರಿ ಮಂಗಳವಾರ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಒಂದು ದಿನದಲ್ಲೇ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್‌ನ ರಾಜ್ಯ ಘಟಕವು ವೈಯಕ್ತಿಕ ದ್ವೇಷ ಮಾಡುತ್ತಿದೆ ಎಂದು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಉದ್ದೇಶಿಸಿ ತಾಯಿ ಮತ್ತು ಮಗಳು ಆರೋಪ ಮಾಡಿದ್ದರು.

ಇದನ್ನು ಓದಿದ್ದೀರಾ? ಚುನಾವಣೆ ಫಲಿತಾಂಶ | ಪಂಜಾಬ್ ಮತ್ತು ಹರಿಯಾಣದಲ್ಲಿ ಬಿಜೆಪಿಗೆ ಹಿನ್ನಡೆ
ಕಿರಣ್ ಚೌಧರಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಬನ್ಸಿ ಲಾಲ್ ಅವರ ಸೊಸೆ ಮತ್ತು ಭಿವಾನಿ ಜಿಲ್ಲೆಯ ತೋಷಮ್‌ನ ಹಾಲಿ ಶಾಸಕರಾಗಿದ್ದಾರೆ. ಶೃತಿ ಚೌಧರಿ ಅವರು ಹರಿಯಾಣ ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷರಾಗಿದ್ದರು.
नई शुरुआत
एक नया प्रभातआज सबका साथ, सबका विकास व सबका विश्वास और एक भारत, श्रेष्ठ भारत की संकल्पना हेतु उन्नत क्षेत्र व प्रदेश के उद्देश्य से अपने कार्यकर्ताओं के साथ भारतीय जनता पार्टी की सदस्यता ग्रहण की।
हमारा वचन है कि चौ.बंसीलाल जी के पदचिन्हों का अनुसरण करते हुए हरियाणा… pic.twitter.com/jLoiu9FLEZ
— Kiran Choudhry (@officekiran) June 19, 2024
ಇಬ್ಬರೂ ಹರಿಯಾಣದ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತ್ತು ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಹರಿಯಾಣದಲ್ಲಿ ಬೆಚ್ಚಿದ ಬಿಜೆಪಿ; ಕಾಂಗ್ರೆಸ್ಗೆ ʼಜಾಟ್ʼಪಾಟ್
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಿರಣ್ ಚೌಧರಿ, “ಹೊಸ ಆರಂಭ, ಒಂದು ಹೊಸ ಪ್ರಾರಂಭ. ಇಂದು ಎಲ್ಲರ ವಿಕಾಸ್, ಎಲ್ಲರ ವಿಶ್ವಾಸ ಮತ್ತು ಏಕ ಭಾರತ ಶ್ರೇಷ್ಟ ಭಾರತ ಸಂಕಲ್ಪದೊಂದಿಗೆ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಬಿಜೆಪಿ ಸದಸ್ಯತ್ವ ಪಡೆದುಕೊಂಡೆ. ಕ್ಷೇತ್ರದ ಜನರಿಗೆ ಸಮರ್ಪಿತರಾಗಿರುತ್ತೇವೆ” ಎಂದು ಹೇಳಿದ್ದಾರೆ.





