ರಜತ ಮಹೋತ್ಸವ ಅದ್ದೂರಿಯಾಗಿ ಜೆಡಿಎಸ್ ಪಕ್ಷದಿಂದ ಕಾರ್ಯಕ್ರಮವನ್ನು ಹಾಸನ ಜಿಲ್ಲಾ ಮಟ್ಟದಲ್ಲಿ ಶನಿವಾರ ಆಯೋಜಿಸಲಾಗಿತ್ತು. ಹೆತ್ತ ತಾಯಿ, ಉಂಡ ಮನೆಗೆ ದ್ರೋಹ ಬಗೆದವರು ಇಂದು ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರಾಗಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಶಿವಲಿಂಗೇಗೌಡ ಅವರ ವಿರುದ್ಧ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ
ಕಾಂಗ್ರೆಸ್ ಪಕ್ಷದ ಸಾಧನೆ ಬಗ್ಗೆ ಹೇಳಿಕೊಳ್ಳುವುದಕ್ಕಿಂತ ಹೆಚ್ಚಾಗಿ ದೇವೇಗೌಡರು ಕುಟುಂಬವನ್ನು ಟೀಕಿಸಿದ್ದೇ ಹೆಚ್ಚು ಜಿಲ್ಲೆಯಲ್ಲಿ ಎಷ್ಟು ಜನ ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ. ನಮ್ಮ ಜೊತೆಯಲ್ಲಿ ಇದ್ದವನ್ನು ನಮ್ಮ ಬೆನ್ನಿಗೆ ಚೂರಿ ಹಾಕಿ ಮಂತ್ರಿಗಿರಿ ಆಸೆಗಾಗಿ ಕಾಂಗ್ರೆಸ್ ಗೆ ಹೋದವರು ಇಂದು ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರಾಗಿದ್ದಾರೆ. ಆದರೂ ಅವರಿಗೆ ಮಂತ್ರಿಗಿರಿ ಸಿಕ್ಕಿಲ್ಲ. ಹಾಸನದಲ್ಲಿ ಮಂತ್ರಿಯಾಗುವರು ಯಾರು ಇಲ್ಲವೇ? ಬೆಂಗಳೂರಿನವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಶಿವಲಿಂಗೇಗೌಡರ ವಿರುದ್ಧ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.
ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಹಾಸನ ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಏನು ಎಂಬುದನ್ನು ಜನತೆಗೆ ತಿಳಿಸಬೇಕಿದೆ, ಇತ್ತಿಚಿಗೆ ಹಾಸನದಲ್ಲಿ ಸರಣಿ ಸಮಾವೇಶ ಸರ್ಕಾರಿ ಕಾರ್ಯಕ್ರಮಗಳನ್ನು ಮಾಡಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಬದಲಾಗಿ ಕೇವಲ ದೇವೇಗೌಡರ ಕುಟುಂಬವನ್ನು ದೋಷಿಸುವ ಮೂಲಕ ಅದಕಷ್ಟೇ ಕಾರ್ಯಕ್ರಮ ಸೀಮಿತ ಮಾಡಿಕೊಂಡಿರುವುದು ಕಾಂಗ್ರೆಸ್ ಕೊಡುಗೆ ಶೂನ್ಯ ಎಂಬುದನ್ನು ಸಾಬೀತು ಮಾಡಿದೆ. ಕರ್ನಾಟಕ ರಾಜ್ಯ ಪಾಪಿಗಳ ಕೈ ಸೇರಿದೆ ಜನರ ಹಿತ ಕಾಯುವ ನಾಯಕನ ಅಗತ್ಯವಿದೆ, ಅದರಿಂದ ಈ ರಾಜ್ಯಕ್ಕೆ ಸಾಕಷ್ಟು ಸೇವೆಯ ಅಗತ್ಯವಿದೆ. ಆದುದರಿಂದ ಮುಂದಿನ ಚುನಾವಣೆಯಲ್ಲಿ ಮತ್ತೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ರಾಜ್ಯವನ್ನು ಕಾಪಾಡುವ ಅಗತ್ಯ ಇದೆ ಎಂದು ರಾಜ್ಯದ ಜನರು ತನಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | 2028ರ ಚುನಾವಣೆ: ಎನ್ ಡಿಎ ಸರ್ಕಾರ ಅಧಿಕಾರಕ್ಕೇರುವುದು ಶತಸಿದ್ಧ; ಸೂರಜ್ ರೇವಣ್ಣ
ಕುಮಾರಸ್ವಾಮಿ ಅವರು ಮುಂದಿನ 2028 ರ ಚುನಾವಣೆಯಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಇಡೀ ರಾಜ್ಯಕ್ಕೆ ನೀಡಿರುವ ಕೊಡಿಗೆ ಅಪಾರವಾಗಿದೆ. ಶತಾಯುಷಿ ದೇವೇಗೌಡರು ಬದುಕಿರುವಾಗಲೇ ಮತ್ತೆ ಕುಮಾರಸ್ವಾಮಿ ಅವರನ್ನು ಈ ರಾಜ್ಯದ ಮುಖ್ಯಮಂತ್ರಿ ಮಾಡಿ ಇನ್ನಸ್ಟು ಜನಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಈ ಸಲುವಾಗಿ ಈ ರಾಜ್ಯದ ಜನರ ಬೆಂಬಲ ಜೆಡಿಎಸ್ ಪಕ್ಷಕ್ಕೆ ಬೇಕಾಗಿದೆ. ಈ ಸಮಾವೇಶದಲ್ಲಿ ಸೇರಿರುವ ಜನಸಾಗರ ಜೆಡಿಎಸ್ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ ಮುಂದಿನ ದಿನಗಳಲ್ಲಿ ಕೂಡ ಇದೇ ರೀತಿ ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.





