ರಜತ ಮಹೋತ್ಸವದಲ್ಲಿ ಹೆಚ್. ಡಿ ರೇವಣ್ಣ ಮಾತಾಡಿ ‘ಜಿಲ್ಲೆಗೆ ಜೆಡಿಎಸ್ ಕೊಡಿಗೆ ಏನು ಎಂಬುದು ಮನೆ ಮಾತಾಾಗಿದೆ, ಆರೋಗ್ಯ, ಶಿಕ್ಷಣ, ನೀರಾವರಿ, ಕೃಷಿ, ಕೈಗಾರಿಗೆ, ಸಾರಿಗೆ , ರಸ್ತೆ, ವಿಮಾನ ನಿಲ್ದಾಣ, ಹೈನುಗಾರಿಕೆಗೆ ಎಲ್ಲಾ ಕ್ಷೇತ್ರಗಳಿಗೆ ಎಚ್. ಡಿ ದೇವೇಗೌಡರು ಪ್ರಧಾನಿಯಾದಾಗ, ಎಚ್.ಡಿ ಕುಮಾರಸ್ವಾಮಿ ಮುಖ್ಯಂತ್ರಿಯಾದಾಗ ನೀಡಿರುವ ಕೊಡುಗೆಗಳು ದಾಖಲೆಯ ಪುಟ ಸೇರಿವೆ, ಆದರೆ ಇತ್ತೀಚಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಅಭಿವದ್ಧಿ ಕಾರ್ಯಗಳು ನಿಂತು ಹೋಗಿದ್ದು ಅಭಿವೃದ್ದಿಗೆ ಅಡ್ಡಿ ಮಾಡುತ್ತಿದೆ. ದೇವೇಗೌಡರ ಕುಟುಂಬವನ್ನು ಹೆದರಿಸುವ ಭಾವನೆ ಯಾರಾದರೂ ಇಟ್ಟುಕೊಂಡಿದ್ದರೆ ಅದನ್ನು ಇಲ್ಲಿಗೆ ಬಿಟ್ಟುಬಿಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಿಂದಲೂ ಜೆಡಿಎಸ್ ಮೇಲೆ ರಾಜಕೀಯ ದ್ವೇಷ ಸಾಧಿಸುವ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಬೆದರಿಕೆಗೆ ನಾವು ಜಗ್ಗುವುದಿಲ್ಲ, ಜೆಡಿಎಸ್ ವಿರುದ್ಧ ನಡೆಯುವ ಯಾವುದೇ ನಿಮ್ಮ ಷಡ್ಯಂತ್ರಗಳಿಗೆ ಮುಂದಿನ ದಿನಗಳಲ್ಲಿ ಜನರೆ ಉತ್ತರ ನೀಡಲಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ?ಹಾಸನ | 2028ರ ಚುನಾವಣೆ: ಎನ್ ಡಿಎ ಸರ್ಕಾರ ಅಧಿಕಾರಕ್ಕೇರುವುದು ಶತಸಿದ್ಧ; ಸೂರಜ್ ರೇವಣ್ಣ
ಹಾಸನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಡಬ್ಬಲ್ ಗೇಮ್ ಅಡಿವೆ, ಎರಡೂ ರಾಷ್ಟೀಯ ಪಕ್ಷಗಳು ಹಾಸನ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗಿವೆ. ಜಿಲ್ಲೆಯಲ್ಲಿ ನಾವು ಬೆಳೆಸಿದ ವ್ಯಕ್ತಿಯೊಬ್ಬ ಈಗ ದೇವೇಗೌಡರ ಕಣ್ಣೀರು ಹಾಕಿಸುವ ಕೆಲಸ ಮಾಡಿದ್ದಾನೆ ಆತನಿಗೆ ದೇವೇಗೌಡರ ಕಣ್ಣೀರಿನ ಶಾಪ ತಟ್ಟದೇ ಬಿಡದು. ಜಿಲ್ಲೆಯ ಪ್ರತಿಯೊಂದು ಕಟ್ಟಡಗಳು, ರಸ್ತೆಗಳು, ದೇವೇಗೌಡರ ಹಾಗೂ ಕುಮಾರಸ್ವಾಮಿಯವರ ಹೆಸರು ಹೇಳುತ್ತವೆ. ಜನರ ಮುಂದೆ ಗಮಕವಸ್ತೆಗೆ ಭಾಷಣ ಮಾಡುವ ಮೂಲಕ ಈ ರಾಜ್ಯದ ಜನತೆಗೆ ವಂಚನೆ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಜನ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಕಿಡಿಕಾರಿದ್ದರು.





