ಮೋದಿ-ಶಾ ಜೋಡಿಗೆ ತಲೆನೋವು; ‘ಎನ್‌ಡಿಎ’ಯಲ್ಲಿ ಖಾತೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

Date:

2024ರ ಚುನಾವಣೆಯೂ ಸೇರಿದಂತೆ ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಸ್ವಂತವಾಗಿ ಲೋಕಸಭೆಯಲ್ಲಿ ಬಹುಮತ ಗಳಿಸುವಲ್ಲಿ ವಿಫಲವಾಗಿದೆ. ಸರ್ಕಾರ ರಚಿಸುವ ಕನಿಷ್ಠ 272 ಸ್ಥಾನಗಳು ಬೇಕಿರುವ ಲೋಕಸಭೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಮಾತ್ರವೇ ಗಳಿಸಿದೆ. ಹೀಗಾಗಿ, ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲು, ಬಿಜೆಪಿ ಮತ್ತೆ ಸರ್ಕಾರ ರಚಿಸಲು ಎನ್‌ಡಿಎ ಪಾಲುದಾರರ ಸಹಕಾರ ಅತ್ಯಗತ್ಯವಾಗಿದೆ.

ಕಳೆದ ಎರಡು ಅವಧಿಯ ಸರ್ಕಾರದಲ್ಲಿ ತಮ್ಮನ್ನು ಮೌನವಾಗಿರಿಸಿದ್ದ ಬಿಜೆಪಿಗೆ ಈಗ ಎನ್‌ಡಿಎ ಮಿತ್ರಪಕ್ಷಗಳು ತಲೆನೋವು ಕೊಡಲು ಆರಂಭಿಸಿವೆ. ಸರ್ಕಾರ ರಚನೆಗೆ ಬೆಂಬಲ ನೀಡಬೇಕೆಂದರೆ ಸರ್ಕಾರದಲ್ಲಿ ತಮಗೆ ಪಾಲುದಾರಿಗೆ ಬೇಕೆಂದು ತಮ್ಮ ಬೇಡಿಕೆಗಳನ್ನು ಬಿಜೆಪಿಯ ಮುಂದಿಡುತ್ತಿವೆ. ಹೀಗಾಗಿ, ಎನ್‌ಡಿಎ ಕೂಟದೊಳಗೆ ಕೇಂದ್ರ ಸಚಿವ ಸಂಪುಟದಲ್ಲಿ ಖಾತೆಗಳಿಗೆ ಭಾರೀ ಡಿಮ್ಯಾಂಡ್‌ ಶುರುವಾಗಿದೆ.

ಈ ನಡುವೆ, ಎನ್‌ಡಿಎ ಭಾಗವಾಗಿರುವ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಚಂದ್ರ ಬಾಬು ನಾಯ್ಡು ಅವರ ಟಿಡಿಪಿಯನ್ನು ತಮ್ಮನ್ನ ಸೆಳೆಯಲು ‘ಇಂಡಿಯಾ’ ಕೂಟದ ನಾಯಕರು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ, ಪ್ರತಿಯೊಬ್ಬರನ್ನ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವುದು ಮೋದಿ-ಶಾ ಜೋಡಿಗೆ ತಲೆನೋವಾಗಿ ಪರಿಣಮಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಟಿಡಿಪಿ ಮೋದಿ ನೇತೃತ್ವದ ಎನ್‌ಡಿಎ ಜೊತೆಗೆ ಇರುತ್ತದೆ ಎಂದು ನಾಯ್ಡು ಹೇಳಿದ್ದರೂ, ಮೋದಿ-ಶಾ ಎದುರು ನಾನಾ ಬೇಡಿಕೆಗಳನ್ನು ಇಟ್ಟಿದ್ದಾರೆ. ಆ ಬೇಡಿಕೆಗಳಿಗೆ ಮೋ-ಶಾ ಜೋಡಿ ಒಪ್ಪದಿದ್ದರೆ, ಅವರೂ ‘ಇಂಡಿಯಾ’ದತ್ತ ವಾಲಬಹುದು. ಇನ್ನು, ಜೆಡಿಯು ನಡೆ ನಿಗೂಡವಾಗಿದೆ.

ಎನ್‌ಡಿಎ ಸರ್ಕಾರದಲ್ಲಿ ಸ್ಪೀಕರ್ ಹುದ್ದೆ ಸೇರಿದಂತೆ 10 ಸಚಿವ ಸ್ಥಾನಗಳಿಗೆ ಟಿಡಿಪಿ ಬೇಡಿಕೆ ಇಟ್ಟಿದೆ. ಅದೇ ರೀತಿ, ಮೂರು ಕೇಂದ್ರ ಸಚಿವ ಮತ್ತು ಎರಡು ಕೇಂದ್ರ ರಾಜ್ಯ ಸಚಿವ ಖಾತೆಗಳಿಗೆ ಜೆಡಿಯು ಬೇಡಿಕೆ ಇಟ್ಟಿದೆ.

ಇನ್ನು, ಮಹಾರಾಷ್ಟ್ರ ಶಿವಸೇನೆಯ ಶಿಂಧೆ ಬಣ, ಒಂದು ಸಚಿವ, ಎರಡು ಕೇಂದ್ರ ರಾಜ್ಯ ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದರೆ, ಬಿಹಾರದ ಎಲ್‌ಜೆಪಿ ಒಂದು ಸಚಿವ, ಎರಡು ಕೇಂಧ್ರ ರಾಜ್ಯ ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ಎಚ್‌ಎಎಂ ಪಕ್ಷವೂ ಒಂದು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ.

ಈ ಎಲ್ಲರೂ ಈಗ ಎನ್‌ಡಿಎ ಒಳಗೆ ಕಿಂಗ್‌ಮೇಕರ್‌ಗಳಾಗಿದ್ದಾರೆ. ತಮ್ಮ ಬೇಡಿಕೆ ಈಡೇರದಿದ್ದರೆ, ಈ ಪಕ್ಷಗಳು ಎನ್‌ಡಿಎ ತೊರೆಯುವುದು ಖಚಿತವಾಗಿದೆ. ಈವರೆಗೆ, ಮೈತ್ರಿ ಸರ್ಕಾರವನ್ನು ನಿಭಾಯಿಸಿ ಅನುಭವವೇ ಇಲ್ಲದ ಮೋದಿ-ಶಾ ಜೋಡಿಗೆ ಇದು ಅಕ್ಷರಶಃ ತಲೆನೋವಾಗಿದೆ. ಯಾವ ರೀತಿಯಲ್ಲಿ ಎಲ್ಲ ಮಿತ್ರ ಪಕ್ಷಗಳನ್ನು ನಿಭಾಯಿಸಬೇಕು ಎಂಬುದು ತೋಚದಂತಾಗಿದೆ. ಎಲ್ಲ ಮಿತ್ರರಿಗೂ ಸಚಿವ ಸ್ಥಾನ ಕೊಟ್ಟರೆ, ಸರ್ಕಾರದಲ್ಲಿ ತಮ್ಮದೇನೂ ಹಿಡಿತ ಇರುವುದಿಲ್ಲ. ತಮ್ಮ ಆಟ ನಡೆಯುವುದಿಲ್ಲ ಎಂಬ ಸತ್ಯದ ಅರಿವೂ ಕೂಡ ಮೋ-ಶಾ ಜೋಡಿಗೆ ಸ್ಪಷ್ಟವಾಗಿ ಗೊತ್ತಾಗಿದೆ.

 

ಬುಧವಾರ ಸಂಜೆ ನಾಲ್ಕು ಗಂಟೆಗೆ ಎನ್‌ಡಿಎ ಸಭೆ ನಡೆಯಲಿದ್ದು, ಯಾರು ಸರ್ಕಾರ ರಚಿಸಲು ಬಿಜೆಪಿ ಜೊತೆ ಇರುತ್ತಾರೆ. ಯಾರು ಬಂಡಾಯ ಎದ್ದು ಹೊರ ನಡೆಯುತ್ತಾರೆ ಎಂದು ಸಂಜೆಯೊಳಗೆ ಗೊತ್ತಾಗಲಿದೆ.

ಇದೆಲ್ಲವನ್ನೂ, ಇಂಡಿಯಾ ಮೈತ್ರಿಕೂಟ ಗಮನಿಸುತ್ತಿದ್ದಾರೆ. ಎನ್‌ಡಿಎ ಸಭೆಯಲ್ಲಾಗುವ ವಿದ್ಯಮಾನಗಳನ್ನು ಗಮನಿಸಿ, ತಮ್ಮ ನಿರ್ಧಾರಗಳನ್ನು ಮಾರ್ಪಡಿಸಲು ‘ಇಂಡಿಯಾ’ ನಾಯಕರು ಕಾಯುತ್ತಿದ್ದಾರೆ. ಈ ನಡುವೆ, ಬಿಹಾರದಿಂದ ದೆಹಲಿಗೆ ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜೊತೆಯಾಗಿ ಪ್ರಯಾಣಿಸಿದ್ದಾರೆ. ಹೀಗಾಗಿ, ನಿತೀಶ್ ‘ಇಂಡಿಯಾ’ ಎಡೆಗೆ ಬರಬಹುದು ಎನ್ನಲಾಗುತ್ತಿದೆ.

ಇನ್ನು, ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆಯನ್ನೂ ಟಿಡಿಪಿಗೆ ಇಂಡಿಯಾ ನಾಯಕರು ನೀಡಿದ್ದಾರೆ. ಹೀಗಾಗಿ, ಎನ್‌ಡಿಎ ಸಭೆಯಲ್ಲಿ ತಮ್ಮ ಬೇಡಿಕೆಗಳಿಗೆ ಮನ್ನಣೆ ಸಿಗದಿದ್ದರೆ, ನಾಯ್ಡು ಕೂಡ ಇಂಡಿಯಾ ಜೊತೆಗೂಡುವ ಸಾಧ್ಯತೆಗಳಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...