ಚುನಾವಣಾ ಅಕ್ರಮ: ಬಂಧನಕ್ಕೊಳಗಾಗಿ 20 ನಿಮಿಷದ ಬಳಿಕ ಡೊನಾಲ್ಡ್ ಟ್ರಂಪ್ ಬಿಡುಗಡೆ

Date:

  • ‘ಮಗ್ ಶಾಟ್’ ಫೋಟೋ ಬಿಡುಗಡೆ: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್
  • ಮಾಜಿ ಅಧ್ಯಕ್ಷರ ಬಂಧನ; ಅಮೆರಿಕದ ಇತಿಹಾಸದಲ್ಲೇ ಮೊದಲ ಪ್ರಕರಣ

2020ರ ಅಧ್ಯಕ್ಷೀಯ ಚುನಾವಣೆ ವೇಳೆ ಅಕ್ರಮ ಎಸಗಿದ ಆರೋಪದ ಮೇಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರುವಾರ ಜಾರ್ಜಿಯಾ ಜೈಲಿನಲ್ಲಿ ಬಂಧಿಸಿ, ಕೂಡಲೇ ಬಿಡುಗಡೆ ಮಾಡಲಾಗಿದೆ.

ಇದು ಅಮೆರಿಕದ ಇತಿಹಾಸದಲ್ಲೇ ಮೊದಲ ಪ್ರಕರಣವಾಗಿದ್ದು, ಬಂಧನದ ಅರ್ಧ ಗಂಟೆಯ ಬಳಿಕ 200,000 ಡಾಲರ್ ಬಾಂಡ್ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ.

ಅಮೆರಿಕದ 2020ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಲೆಕೆಳಗಾಗಿಸಲು ಇತರೆ 18 ಮಂದಿ ಜತೆ ಸೇರಿಕೊಂಡು ಪಿತೂರಿ ನಡೆಸಿದ್ದರು ಎಂಬ ಆರೋಪ ಟ್ರಂಪ್ ಮೇಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಟ್ರಂಪ್ ಅವರು ಬಂಧನದ ಬಳಿಕ ಅಟ್ಲಾಂಟಾದ ಫುಲ್ಟೋನ್ ಕೌಂಟಿ ಜೈಲಿನಲ್ಲಿ ಸರಿಸುಮಾರು 20 ನಿಮಿಷ ಕಳೆದರು. ಬಳಿಕ ಬಿಡುಗಡೆಯಾಗಿ ಬೆಂಗಾವಲು ವಾಹನದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದರು.

ಈ ಪ್ರಕರಣದಲ್ಲಿ ಉಳಿದ ಆರೋಪಿಗಳಂತೆಯೇ ಶರಣಾಗತರಾದ 77 ವರ್ಷದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಂಧನ ಪ್ರಕ್ರಿಯೆ ವೇಳೆ ‘ಮಗ್ ಶಾಟ್’ (ಭುಜದ ಮೇಲಿನ ಮುಖದ ಚಿತ್ರ) ಫೋಟೋ ತೆಗೆಸಿಕೊಳ್ಳುವಂತಾಗಿದೆ. ಅಮೆರಿಕದ ಇತಿಹಾಸದಲ್ಲಿ ಹಾಲಿ ಅಥವಾ ಯಾವುದೇ ಮಾಜಿ ಅಧ್ಯಕ್ಷರು ಈ ರೀತಿ ಜೈಲಿಗೆ ಹೋಗಿದ್ದು ಹಾಗೂ ಮಗ್ ಶಾಟ್ ಫೋಟೋ ತೆಗೆದಿರುವುದು ಮೊದಲ ಪ್ರಕರಣವಾಗಿದೆ.

‘ಮಗ್ ಶಾಟ್’ ಫೋಟೋವನ್ನು ನಿಯಮಾನುಸಾರ ಪೊಲೀಸರು ಬಿಡುಗಡೆ ಮಾಡಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಅಲ್ಲದೇ, ಸುದೀರ್ಘ ಸಮಯದ ಬಳಿಕ ತನ್ನದೇ ಟ್ವಿಟರ್‌ ಖಾತೆಯಲ್ಲಿ ಮೊದಲ ಟ್ವೀಟ್ ಮಾಡಿರುವ ಟ್ರಂಪ್ ‘ಮಗ್ ಶಾಟ್’ ಫೋಟೋವನ್ನು ಹಂಚಿಕೊಂಡಿದ್ದಾರೆ. ‘ಚುನಾವಣಾ ಹಸ್ತಕ್ಷೇಪ! ಎಂದಿಗೂ ಶರಣಾಗಬೇಡಿ!’ ಎಂದು ಒಕ್ಕಣೆ ಕೂಡ ಹಾಕಿದ್ದಾರೆ.

‘ಮಗ್ ಶಾಟ್’ ಫೋಟೋದಲ್ಲಿ ಟ್ರಂಪ್ ಅವರು, ಕಡು ನೀಲಿ ಸೂಟ್, ಬಿಳಿ ಅಂಗಿ ಮತ್ತು ಕೆಂಪು ಟೈ ತೊಟ್ಟಿದ್ದು, ಕ್ಯಾಮೆರಾ ಕಡೆ ಮುಖ ಗಂಟಿಕ್ಕಿಕೊಂಡು ನೋಡುತ್ತಿರುವುದು ಸೆರೆಯಾಗಿದೆ.

ಫುಲ್ಟೋನ್ ಕೌಂಟಿ ಜೈಲಿನಲ್ಲಿ ಟ್ರಂಪ್ ಅವರಿಗೆ ಕೈದಿ ಸಂಖ್ಯೆ ‘PO1135809’ ನೀಡಲಾಗಿತ್ತು. ಅವರ ಎತ್ತರ 6.3 ಅಡಿ, ತೂಕ 97 ಕೆಜಿ ಎಂದು ನಮೂದಿಸಲಾಗಿದ್ದು, ಅವರ ಕೂದಲಿನ ಬಣ್ಣವನ್ನು ಹೊಂಬಣ್ಣ ಅಥವಾ ‘ಸ್ಟ್ರಾಬೆರ್ರಿ’ ಎಂದು ಪೊಲೀಸರು ಉಲ್ಲೇಖಿಸಿದ್ದರು.

ಬಂಧನಗೊಂಡು ಬಿಡುಗಡೆಯಾದ ಬಳಿಕ ಮಾತನಾಡಿದ ಡೊನಾಲ್ಡ್ ಟ್ರಂಪ್, ‘ಇದು ಅಮೆರಿಕಕ್ಕೆ ದುಃಖದ ದಿನ. ಇಲ್ಲಿ ನಡೆದಿರುವುದು ನ್ಯಾಯದ ಅಣಕ. ನಾನು ಯಾವ ತಪ್ಪೂ ಮಾಡಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಚುನಾವಣಾ ವಂಚನೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಫುಲ್ಟೋನ್ ಕೌಂಟಿ ಜಿಲ್ಲಾ ಅಟಾರ್ನಿ ಫಾನಿ ವಿಲ್ಲಿಸ್ ಅವರು ಕೋರ್ಟ್‌ಗೆ ಶರಣಾಗಲು ಟ್ರಂಪ್ ಹಾಗೂ ಇತರೆ 18 ಮಂದಿಗೆ ಶುಕ್ರವಾರ ಮಧ್ಯಾಹ್ನದ ಗಡುವು ನೀಡಿದ್ದರು. ಈವರೆಗೆ ಟ್ರಂಪ್ ಮತ್ತು ಇತರ 11 ಮಂದಿ ಶರಣಾಗಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

RSS, BJP ವಿರುದ್ಧ ಹೋರಾಡುವ ದೇಶದ ಏಕೈಕ ನಾಯಕ ರಾಹುಲ್‌ ಗಾಂಧಿ : RS MP ಕ್ರಿಸ್ಟೋಫರ್ ತಿಲಕ್

ಸೋನಿಯಾ ಗಾಂಧಿ ಅವರು ಕಂಡ ರಾಜಕೀಯದ ಪರಿಸ್ಥಿತಿಯೇ ಬೇರೆ, ರಾಹುಲ್‌ ಗಾಂಧಿ...

ಅಮೆರಿಕ ವಿಮಾನ ನಿಲ್ದಾಣ: ಏರ್ ಕೆನಡಾ ವಿಮಾನಕ್ಕೆ ಅಪ್ಪಳಿಸಿದ ಟ್ರಕ್

ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಜನನಿಬಿಡ ಲಾ ಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಏರ್ ಕೆನಡಾ...

UAPA ದುರ್ಬಳಕೆ; ವಿಕಸಿತ ಭಾರತಕ್ಕೆ ಶೋಭೆ ತರಲ್ಲ: ಮೋಶಾ ಆಡಳಿತಕ್ಕೆ ಸುಪ್ರೀಂ ನ್ಯಾಯಮೂರ್ತಿ ತಪರಾಕಿ

"2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಮಾಡುವ ರಾಜಕೀಯ ಮುಖಂಡರ ಗುರಿಯಲ್ಲಿ...