ಚುನಾವಣಾ ಟ್ರಸ್ಟ್‌ಗಳಿಂದ BJPಗೆ ಭಾರೀ ದೇಣಿಗೆ; ದಾನಿಗಳ ಹೆಸರು-ವಿಳಾಸವೇ ಇಲ್ಲ!

Date:

2024-25ರ ಹಣಕಾಸು ವರ್ಷದಲ್ಲಿ ನಾನಾ ರೀತಿಯ ಕಾರ್ಪೊರೇಟ್‌ ಕಂಪನಿಗಳಿಂದ ರಾಜಕೀಯ ಪಕ್ಷಗಳಿಗೆ ಬಂದ ದೇಣಿಗೆಗಳ ಮೊತ್ತವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿವೆ. 2024ರಲ್ಲಿ ಚುನಾವಣಾ ಬಾಂಡ್‌ಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ನಂತರ ಹಲವು ಕಂಪನಿಗಳು ಟ್ರಸ್ಟ್‌ಗಳ ಮೂಲಕ ಪಕ್ಷಗಳಿಗೆ ದೇಣಿಗೆ ಕೊಡಲು ಆರಂಭಿಸಿವೆ. ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಶುಕ್ರವಾರ (ಫೆ.13) ಬಿಡುಗಡೆ ಮಾಡಿದ ವರದಿ ಪ್ರಕಾರ, ಒಟ್ಟು 20 ನೋಂದಾಯಿತ ಚುನಾವಣಾ ಟ್ರಸ್ಟ್‌ಗಳಲ್ಲಿ 10 ಮಾತ್ರ ದೇಣಿಗೆಗಳನ್ನು ವರದಿ ಮಾಡಿವೆ. ಇವುಗಳು 3,826.34 ಕೋಟಿ ರೂ. ದೇಣಿಗೆಗಳನ್ನು ಸ್ವೀಕರಿಸಿ, 3,826.35 ಕೋಟಿ ರೂ.ಗಳನ್ನು (ಕನಿಷ್ಠ 95%) ರಾಜಕೀಯ ಪಕ್ಷಗಳಿಗೆ ವಿತರಿಸಿವೆ. 2023-24ರಲ್ಲಿ ಇದು ಕೇವಲ 1,218 ಕೋಟಿ ರೂ. ಮಾತ್ರವೇ ಆಗಿತ್ತು. ಕಳೆದ ವರ್ಷ ಟ್ರಸ್ಟ್‌ಗಳ ಮೂಲಕ ರವಾನೆಯಾದ ಹಣದ ಮೊತ್ತವು ಮೂರು ಪಟ್ಟಿಗಿಂತ ಹೆಚ್ಚು ಏರಿಕೆಯಾಗಿದೆ.

ಎಡಿಆರ್‌ ವಿವರಿಸಿರುವಂತೆ; ಉತ್ಪಾದನಾ ವಲಯವು ಟ್ರಸ್ಟ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಅತೀ ಹೆಚ್ಚು ದೇಣಿಗೆ ನೀಡಿದೆ. ಇದು 1,063.13 ಕೋಟಿ ರೂ. (ಒಟ್ಟು ದೇಣಿಗೆಗಳ ಶೇ.27.78) ನೀಡಿದೆ. ನಂತರದ ಸ್ಥಾನದಲ್ಲಿ, ರಿಯಲ್ ಎಸ್ಟೇಟ್ ವಲಯವಿದ್ದು, ಈ ವಲಯವು 629.17 ಕೋಟಿ ರೂ. (ಶೇ.16.44) ದೇಣಿಗೆ ನೀಡಿದ್ದರೆ, ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ/ಟೆಲಿಕಾಂ ವಲಯವು 451.86 ಕೋಟಿ ರೂ. (ಶೇ.11.81) ಹಣವನ್ನು ದೇಣಿಗೆಯಾಗಿ ಕೊಟ್ಟಿದೆ. ಇತರ ವಲಯಗಳಲ್ಲಿ ಫೈನಾನ್ಸ್, ಮೈನಿಂಗ್, ಇನ್‌ಫ್ರಾಸ್ಟ್ರಕ್ಚರ್ ಮುಂತಾದವು ಸೇರಿವೆ.

ಒಟ್ಟು 228 ಕಾರ್ಪೊರೇಟ್/ವ್ಯಾಪಾರ ಸಂಸ್ಥೆಗಳು ಒಟ್ಟಾರೆಯಾಗಿ 3,636.82 ಕೋಟಿ ರೂ. ಹಣ ನೀಡಿದ್ದರೆ, 99 ವ್ಯಕ್ತಿಗಳು 187.62 ಕೋಟಿ ರೂ.ಗಳನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ. ದೇಣಿಗೆ ನೀಡಿರುವ ಒಟ್ಟು 228 ಸಂಸ್ಥೆಗಳ ಪೈಕಿ 10 ಸಂಸ್ಥೆಗಳೇ ಸುಮಾರು ಅರ್ಧದಷ್ಟು, ಅಂದರೆ, 1,908.86 ಕೋಟಿ ರೂ. ಕೊಟ್ಟಿದ್ದಾರೆ. ಅವರಲ್ಲಿ, Elevated Avenue Realty LLP (L&T ಗ್ರೂಪ್) 500 ಕೋಟಿ ರೂ., Tata Sons 308.13 ಕೋಟಿ ರೂ., TCS 217.62 ಕೋಟಿ ರೂ. ಹಾಗೂ Megha Engineering 175 ಕೋಟಿ ರೂ. ನೀಡಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಂಸ್ಥೆಗಳಿಂದ ರಾಜಕೀಯ ಪಕ್ಷಗಳಿಗೆ ಹಣ ಹಸ್ತಾಂತರಿಸಿದ ಚುನಾವಣಾ ಟ್ರಸ್ಟ್‌ಗಳಲ್ಲಿ ‘Prudent Electoral Trust’ ಮೊದಲ ಸ್ಥಾನದಲ್ಲಿದೆ. ಇದು 2,668.46 ಕೋಟಿ ರೂ.ವನ್ನು ಪಕ್ಷಗಳಿಗೆ ಹಂಚಿಕೆ ಮಾಡಿದೆ. ಅದರಲ್ಲಿ, ಬಹುಪಾಲು ಹಣವನ್ನು ಬಿಜೆಪಿಯೇ ಪಡೆದುಕೊಂಡಿದ್ದು, ಪ್ರಮುಖ ಪಾಲುದಾರ ಪಕ್ಷವಾಗಿದೆ. ಇನ್ನು, ಟಾಟಾ ಗ್ರೂಪ್‌ಗೆ ಸಂಬಂಧಿಸಿದ Progressive Electoral Trust ಒಟ್ಟು 914.97 ಕೋಟಿ ರೂ.ಗಳನ್ನು ವಿತರಣೆ ಮಾಡಿದೆ. ಅಲ್ಲದೆ, ಬಹುಪಾಲು ದೇಣಿಗೆಗಳು ಮಹಾರಾಷ್ಟ್ರ, ತೆಲಂಗಾಣ ಹಾಗೂ ಹರಿಯಾಣ ರಾಜ್ಯಗಳಿಂದ ಬಂದಿವೆ.

ಆದಾಗ್ಯೂ, ದೇಣಿಗೆಯ ವಿತರಣೆಯಲ್ಲಿ ಭಾರೀ ಅಂತರದ ಅಸಮಾನತೆ ಕಂಡುಬಂದಿದೆ. ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಬರೋಬ್ಬರಿ 3,157.65 ಕೋಟಿ ರೂ. (ಶೇ.82.52) ಪಡೆದುಕೊಂಡಿದೆ. 2ನೇ ಸ್ಥಾನದಲ್ಲಿ ಪ್ರಮುಖ ವಿಪಕ್ಷ ಕಾಂಗ್ರೆಸ್‌ ಇದ್ದು, 298.78 ಕೋಟಿ ರೂ. (ಶೇ.7.81) ಪಡೆದಿದೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್‌ ಪಡೆದ ದೇಣಿಗೆಯ ನಡುವಿನ ಅಂತರವು ಅಜಗಜಾಂತರವಿದೆ. ಇನ್ನು, ಟಿಎಂಸಿ 102 ಕೋಟಿ ರೂ. (ಶೇ.2.67) ಪಡೆದಿದ್ದರೆ, ಉಳಿದ 19 ಪಕ್ಷಗಳು ಒಟ್ಟು 267.92 ಕೋಟಿ ರೂ. ಹಂಚಿಕೊಂಡಿವೆ.

ಈ ಲೇಖನ ಓದಿದ್ದೀರಾ?: ಬಂಗಾಳ SIR | ವಿಚಾರಣೆಗೆ ಒಳಗಾಗುತ್ತಿರುವ ಮತದಾರರಲ್ಲಿ ಅಲ್ಪಸಂಖ್ಯಾತರೇ ಹೆಚ್ಚು!

ಎಡಿಆರ್‌ ಗಮನಿಸಿರುವಂತೆ; ಒಟ್ಟು ಮೊತ್ತದಲ್ಲಿ ಸುಮಾರು 1,065.20 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿರುವ ದಾನಿಗಳು ಮತ್ತು ಅವರ ವಿಳಾಸವನ್ನು ಬಹಿರಂಗಪಡಿಸಲಾಗಿಲ್ಲ. ಜೊತೆಗೆ, ಅಂತಿಮ ಗಡುವು ಮುಗಿದ ನಂತರವೂ ಕೆಲವು ಟ್ರಸ್ಟ್‌ಗಳ ವರದಿಗಳು ಇನ್ನೂ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ.

ಈ ಎಲ್ಲ ತೊಡಕುಗಳನ್ನು ಗಮನಿಸಿರುವ ಎಡಿಎಆರ್‌, ರಾಜಕೀಯ ಹಣಕಾಸು ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಕೆಲವು ಶಿಫಾರಸುಗಳನ್ನು ಮಾಡಿದೆ.

  1. ಚುನಾವಣಾ ಟ್ರಸ್ಟ್ ಯೋಜನೆ ಕ್ಲಾಜ್ 8(1) ಅನ್ವಯ CBDTಯಿಂದ ಅನುಮೋದನೆ ಹಿಂಪಡೆಯಬೇಕು: ಯಾವುದೇ ಟ್ರಸ್ಟ್ ತನ್ನ ಕಾರ್ಯಕಲಾಪಗಳನ್ನು ನಿಲ್ಲಿಸಿದ್ದರೆ, ನಿಜವಾದ ಕೊಡುಗೆಗಳನ್ನು ಪಡೆದಿಲ್ಲದಿದ್ದರೆ ಅಥವಾ ಯೋಜನೆಯ ಷರತ್ತುಗಳನ್ನು ಪಾಲಿಸದಿದ್ದರೆ, ಆ ಟ್ರಸ್ಟ್‌ಗೆ ನೀಡಿದ ಅನುಮೋದನೆಯನ್ನು CBDT (Central Board of Direct Taxes -ಕೇಂದ್ರೀಯ ನೇರ ತೆರಿಗೆ ಮಂಡಳಿ) ಹಿಂಪಡೆಯಬೇಕು. ಉದಾಹರಣೆಗೆ, JaiHind Electoral Trust ರಿಜಿಸ್ಟರ್ ಆದ ನಂತರ ಯಾವುದೇ ಕೊಡುಗೆ ಪಡೆದಿಲ್ಲದ ಕಾರಣ ಅದರ ಅನುಮೋದನೆಯನ್ನು ತಕ್ಷಣ ಹಿಂಪಡೆಯಬೇಕು. ಇದೇ ರೀತಿ ಇತರ ನಿಷ್ಕ್ರಿಯ ಟ್ರಸ್ಟ್‌ಗಳಿಗೂ ಅನ್ವಯಿಸಬೇಕು.
  2. ಟ್ರಸ್ಟ್‌ಗಳ ವಿತರಣಾ ಮಾನದಂಡಗಳು ಮತ್ತು ಆಂತರಿಕ ನಿಯಮಗಳ ಬಹಿರಂಗ: ಚುನಾವಣಾ ಟ್ರಸ್ಟ್‌ಗಳು ತಮ್ಮ ಆಂತರಿಕ ನಿಯಮಗಳು ಯಾವುವು ಮತ್ತು ಕೊಡುಗೆಗಳನ್ನು ಯಾವ ಮಾನದಂಡದ ಆಧಾರದಲ್ಲಿ ವಿತರಿಸುತ್ತವೆ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಇದರಿಂದ ಟ್ರಸ್ಟ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಹಣ ಹರಿಯುವುದರಲ್ಲಿ ಪಾರದರ್ಶಕತೆ ಹೆಚ್ಚಾಗುತ್ತದೆ.
  3. ದಾನಿಗಳ ವಿವರಗಳ ಪೂರ್ಣ ಬಹಿರಂಗ: ಟ್ರಸ್ಟ್‌ಗಳು ಪಡೆದ ಕೊಡುಗೆಗಳಲ್ಲಿ ದಾನಿಗಳ ವಿಳಾಸಗಳು ಅಥವಾ ಪೂರ್ಣ ವಿವರಗಳನ್ನು ಬಹಿರಂಗಪಡಿಸಬೇಕು. ಕಳೆದ ವರ್ಷ ಬಂದ 1,065 ಕೋಟಿ ರೂ. ದೇಣಿಗೆಗಳಿಗೆ ವಿಳಾಸಗಳೇ ಇಲ್ಲ. ಇದು, ಪಾರದರ್ಶಕತೆಯನ್ನು ಉಲ್ಲಂಘಿಸುತ್ತದೆ. ಹೀಗಾಗಿ, ದೇಣಿಗೆ ಕೊಟ್ಟವರ ವಿಳಾಸ ಬಹಿರಂಗಗೊಳಿಸುವುದನ್ನು ಕಡ್ಡಾಯಗೊಳಿಸಬೇಕು..
  4. ಚುನಾವಣಾ ಆಯೋಗದ ಮಾರ್ಗಸೂಚಿಗಳ ಕಟ್ಟುನಿಟ್ಟಾದ ಅನುಷ್ಠಾನ ಮತ್ತು ದಂಡ: ಚುನಾವಣಾ ಆಯೋಗದಿಂದ ನಿಗದಿ ಮಾಡಲಾದ ಮಾರ್ಗಸೂಚಿಗಳನ್ನು ಅನುಸರಿಸದ ಟ್ರಸ್ಟ್‌ಗಳಿಗೆ ಸೂಚನೆಯಲ್ಲಿ ಉಲ್ಲೇಖಿಸಿರುವಂತೆ ಭಾರಿ ದಂಡ ವಿಧಿಸಬೇಕು. ಅಲ್ಲದೆ, ವರದಿಗಳು ಡೆಡ್‌ಲೈನ್ ನಂತರವೂ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು.
  5. ಕಾರ್ಪೊರೇಟ್ ಕೊಡುಗೆಗಳ ಮಿತಿ ಮತ್ತು ನಿಯಂತ್ರಣ: ಕಾರ್ಪೊರೇಟ್ ದೇಣಿಗೆಗಳಿಗೆ ಮಿತಿ ಹಾಕಬೇಕು (ಉದಾ: ಜರ್ಮನಿ ಅಥವಾ ಇತರ ದೇಶಗಳ ಮಾದರಿಯಂತೆ). ಇದರಿಂದ ಒಂದೇ ವಲಯ ಅಥವಾ ಕಂಪನಿಗಳು ರಾಜಕೀಯ ಪಕ್ಷಗಳ ಮೇಲೆ ಅತಿಯಾದ ಪ್ರಭಾವ ಬೀರುವುದನ್ನು ತಡೆಯಬಹುದು.
  6. ರಾಜಕೀಯ ಹಣಕಾಸು ವ್ಯವಸ್ಥೆಯಲ್ಲಿ ಸಮಾನ ಅವಕಾಶ ಮತ್ತು ಸಮತೋಲನ: ಟ್ರಸ್ಟ್‌ಗಳ ಮೂಲಕ ಹಣದ ಹರಿವು ಒಂದೇ ಪಕ್ಷಕ್ಕೆ (ಉದಾ: BJPಗೆ 82%+) ಅಸಮಾನವಾಗಿ ಹರಿಯುತ್ತಿರುವುದನ್ನು ಗಮನಿಸಿ, ಎಲ್ಲ ಪಕ್ಷಗಳಿಗೆ ಸಮಾನ ಅವಕಾಶ ಒದಗಿಸುವಂತಹ ನಿಯಮಗಳನ್ನು ಜಾರಿಗೊಳಿಸಬೇಕು. ಇದು ರಾಜಕೀಯ ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತತೆಯನ್ನು ಖಾತರಿಪಡಿಸುತ್ತದೆ.
WhatsApp Image 2023 06 13 at 1.10.34 PM e1686642227658
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...