ಚಿಕ್ಕಮಗಳೂರು | ಕಾಡಾನೆ ದಾಳಿಗೆ ಬಲಿಯಾದ ಮಹಿಳೆಯ ಕುಟುಂಬದ ಮೇಲೆ ದೌರ್ಜನ್ಯವಾಯಿತೇ?

Date:

ಮಲೆನಾಡು ಭಾಗದಲ್ಲಿ ವರ್ಷಗಳಿಂದ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಅತಿರೇಕದ ಹಂತ ತಲುಪಿದೆ. ಕಾಡಾನೆ ಹಾಗೂ ಕಾಡುಕೋಣಗಳ ಹಾವಳಿಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಕಳೆದ ಒಂದು ವರ್ಷದಲ್ಲೇ 10ಕ್ಕೂ ಹೆಚ್ಚು ಮಂದಿ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಇದರಿಂದ ರೈತರು, ಕೂಲಿ ಕಾರ್ಮಿಕರು ಮತ್ತು ತೋಟದ ಮಾಲಿಕರು, ಸ್ಥಳೀಯ ನಿವಾಸಿಗಳು ಭಯದ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ, ಕೊಪ್ಪ ಭಾಗಗಳಲ್ಲಿ ಕಾಡಾನೆಗಳು ಕಾಫಿ ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿರುವುದರ ಜೊತೆಗೆ ಮಾನವ ಜೀವಹಾನಿಗೂ ಕಾರಣವಾಗಿವೆ. ಫೆಬ್ರವರಿ ತಿಂಗಳಲ್ಲಿ ನಡೆದ ಕಾಡಾನೆ ದಾಳಿಗಳು ರಾಜ್ಯಾದ್ಯಂತ ಗಮನ ಸೆಳೆದಿದ್ದವು.

ಫೆಬ್ರವರಿ 23ರಂದು ಹುಣಸೆಹಳ್ಳಿ ಗ್ರಾಮ ಸಮೀಪದ ಪುರ ಗ್ರಾಮದ ವ್ಯಾಪ್ತಿಯಲ್ಲಿರುವ ನಾಗೇಶ್ ಎಂಬವರ ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳಿದ್ದ ಹೊಸಪೇಟೆ ಮೂಲದ ಬೋರಮ್ಮ (34) ಕಾಡಾನೆ ದಾಳಿಯಿಂದ ಸ್ಥಳದಲ್ಲೇ ಮೃತಪಟ್ಟರು. ಈ ಘಟನೆ ಮಲೆನಾಡಿನ ಜನತೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೃತ ಮಹಿಳೆಯ ಶವವನ್ನು ನರಸಿಂಹರಾಜಪುರ ತಾಲೂಕಿನ ಕಡಬಗೆರೆಯಲ್ಲಿ ಇರಿಸಿ ಮಲೆನಾಡಿನ ಜನರು ಭಾರೀ ಪ್ರತಿಭಟನೆ ನಡೆಸಿದರು. ಚಿಕ್ಕಮಗಳೂರು-ದಕ್ಷಿಣ ಕನ್ನಡ-ಉಡುಪಿ ಸಂಪರ್ಕಿಸುವ ಪ್ರಮುಖ ಹೆದ್ದಾರಿಯನ್ನು ಬೆಳಗ್ಗೆ 9 ಗಂಟೆಯಿಂದ ಸಂಜೆವರೆಗೆ ತಡೆದು ನಿರಂತರ ಪ್ರತಿಭಟನೆ ನಡೆಸಿದ ಪರಿಣಾಮ, ಸಾವಿರಾರು ವಾಹನಗಳು ರಸ್ತೆ ಮಧ್ಯದಲ್ಲೇ ಸಿಲುಕಿದವು. ಪ್ರವಾಸಿಗರು, ಆಸ್ಪತ್ರೆಗೆ ತೆರಳುತ್ತಿದ್ದವರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸಿದರು ಎಂದು ಆ ದಿನ ಸಿಲುಕಿದ್ದ ನಾಗರಿಕರು ತಿಳಿಸಿದ್ದಾರೆ.

ಕಾಡಾನೆ ಸೆರೆಯಾದರೂ ಮುಗಿಯದ ಹೋರಾಟ:

ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲೇ, ಕಾರ್ಮಿಕ ಮಹಿಳೆಯನ್ನು ಕೊಂದ ಕಾಡಾನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಚಿಕ್ಕಮಗಳೂರು ತಾಲೂಕಿನ ಬೆರಣಗೋಡು ಸಮೀಪ ಸೆರೆ ಹಿಡಿದರು. ಆದರೆ ಪ್ರತಿಭಟನಾಕಾರರು ಶಾಶ್ವತ ಪರಿಹಾರ, 50 ಲಕ್ಷ ರೂ. ಪರಿಹಾರ ಹಾಗೂ ಅರಣ್ಯ ಸಚಿವರ ಸ್ಥಳ ಭೇಟಿ ಎಂಬ ಬೇಡಿಕೆಯನ್ನು ಮುಂದುವರೆಸಿ ಹೋರಾಟವನ್ನು ತೀವ್ರಗೊಳಿಸಿದರು.

ಹೋರಾಟಕ್ಕೆ ರಾಜಕೀಯ ತಿರುವು:

ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿತು. ಮಾಜಿ ಶಾಸಕ ಡಿ.ಎನ್. ಜೀವರಾಜು, ರಾಜ್ಯ ಜೆಡಿಎಸ್ ವಕ್ತಾರ ಸುಧಾಕರ್ ಶೆಟ್ಟಿ ಹಾಗೂ ಅವರ ಬೆಂಬಲಿಗರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೃತ ಮಹಿಳೆಯ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರದ ಚೆಕ್ ವಿತರಿಸುವ ಸಂದರ್ಭದಲ್ಲೂ ಅವಹೇಳನಕಾರಿ ಪದ ಬಳಕೆ, ಗದ್ದಲ ಎಬ್ಬಿಸಿದರು.

Screenshot 2026 02 25 16 11 12 82 680d03679600f7af0b4c700c6b270fe7

ಕುಟುಂಬಸ್ಥರ ಮೇಲಿನ ವರ್ತನೆಗೆ ತೀವ್ರ ಆಕ್ಷೇಪ:

ಮೃತ ಮಹಿಳೆಯ ಕುಟುಂಬಸ್ಥರು ಬಳ್ಳಾರಿಯಿಂದ ಸ್ಥಳಕ್ಕೆ ಬಂದಾಗ, ಹೋರಾಟ ನಡೆಸುತ್ತಿದ್ದ ಕೆಲ ರಾಜಕೀಯ ಮುಖಂಡರು ಕುಟುಂಬಸ್ಥರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾರೆ, ಅವಾಚ್ಯ ಶಬ್ದ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶವ ಸಾಗಿಸಲು ಬಂದ ಆಂಬುಲೆನ್ಸ್‌ನ ಕೀ ಕಿತ್ತುಕೊಳ್ಳಲಾಗಿದೆ. ಪೊಲೀಸ್ ವಾಹನವನ್ನು ಎತ್ತಿ ಬಿಸಾಡಲು ಯತ್ನ ನಡೆದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾದ ಅನಿವಾರ್ಯ ಎದುರಾಯಿತು ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.

ಶಾಸಕರ ಪ್ರತಿಕ್ರಿಯೆ..

ಪ್ರತಿಭಟನೆ ವೇಳೆ ಮಾತುಕತೆಗೆ ಅವಕಾಶ ನೀಡಲಿಲ್ಲ, ಅರಣ್ಯ ಸಚಿವರೊಂದಿಗೆ ದೂರವಾಣಿ ಮೂಲಕ ಮಾತಾಡಿಸಲು ಯತ್ನಿಸಿದಾಗಲೂ ಗಲಭೆ ಸೃಷ್ಟಿಸಲಾಯಿತು. ಹೋರಾಟದ ನೆಪದಲ್ಲಿ ಮೃತ ಮಹಿಳೆಯ ಶವವನ್ನು ರಾಜಕೀಯ ಅಸ್ತ್ರವಾಗಿ ಬಳಸಲಾಗಿದೆ. ನನ್ನ ಮೇಲಷ್ಟೇ ಅಲ್ಲ, ಕುಟುಂಬಸ್ಥರ ಮೇಲೂ ಹಲ್ಲೆ ಯತ್ನ ನಡೆದಿದೆ. ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಕಲ್ಲು ತೂರಾಟ ನಡೆದಿದ್ದು ಗಂಭೀರ ವಿಚಾರ ಎಂದು ಶಾಸಕರು ಪ್ರತಿಕ್ರಿಯಿಸಿದ್ದಾರೆ.

“ಮೃತ ಕುಟುಂಬದವರು ಶವ ಕೇಳುವ ಸಂದರ್ಭದಲ್ಲೇ ಹೋರಾಟವನ್ನು ಅಸ್ತ್ರ ಮಾಡಿಕೊಂಡು ದೌರ್ಜನ್ಯ ನಡೆಸಲಾಗಿದೆ. ಜಿಲ್ಲಾಧಿಕಾರಿ, ಎಸ್‌ಪಿಯವರ ಮೇಲೆ ಅವಾಚ್ಯ ವರ್ತನೆ ಯಾಕೆ?” ಎಂದು ಬಹುಜನ ಸಮಾಜ ಪಕ್ಷದ ಆನಂದ್ ಬಿಳಗುಳ ಪ್ರಶ್ನಿಸಿದರು.

“ಮಲೆನಾಡಿಗರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಅರಣ್ಯ ಕಾಯ್ದೆಗಳ ವಿರುದ್ಧ ಹೋರಾಟ ಮಾಡಬೇಕಿತ್ತು. ಮಹಿಳಾ ಪೊಲೀಸ್ ಮೇಲೆ ಕಲ್ಲು ತೂರಾಟ ನಡೆದಿದ್ದರೆ ಅದರ ಹೊಣೆ ಯಾರು?” ಎಂದು ಕರ್ನಾಟಕ ಜನಶಕ್ತಿ ಮುಖಂಡ ಕೌಳಿ ರಾಮು ಪ್ರಶ್ನಿಸಿದರು.

ಹೋರಾಟಗಾರರು ಪ್ರತಿಭಟಿಸುವ ವೇಳೆ ಸ್ಥಳಕ್ಕೆ ಭೇಟಿ ನೀಡಿದಾಗ ಏಕಾಏಕಿ ಗಲಭೆ ಸೃಷ್ಟಿಸಿ ಮಾತಾಡಲು ಸರಿಯಾದ ಅವಕಾಶ ಕಲ್ಪಿಸಿಕೊಡಲಿಲ್ಲ. ಅರಣ್ಯ ಸಚಿವರೊಂದಿಗೆ ಫೋನ್ ಮೂಲಕ ಮಾತಾಡಲು ಪ್ರಯತ್ನಿಸಿದಾಗ ಸಚಿವರ ಮಾತನ್ನು ಕೇಳದೆ ಕ್ಷುಲ್ಲಕ ಕಾರಣದಿಂದ ಮುತ್ತಿಗೆ ಹಾಕಲು ಯತ್ನಿಸಿದರು. ಒಬ್ಬ ಕ್ಷೇತ್ರದ ಶಾಸಕ ಎನ್ನದೆ, ಅದ್ರಲ್ಲೂ ಒಬ್ಬ ನಾಗರಿಕ ಎನ್ನದೆ ಕೆಟ್ಟ ಪದಗಳಿಂದ ನಿಂದಿಸಿದರು. ಇಲ್ಲಿ ನಿಜವಾಗಿ ಹೋರಾಟ ಮಾಡುತ್ತಿದ್ದ ರೈತ, ಕಾರ್ಮಿಕರ ದಿಕ್ಕು ತಪ್ಪಿಸುತ್ತ ಮೃತ ಮಹಿಳೆಯ ಶವ ಹಿಟ್ಟುಕೊಂಡು ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಮುಂದಾದರು. ಬಿಟ್ಟರೆ ನಿಜವಾಗಿಯೂ ಮಲೆನಾಡಿನ ಜನ ಪರವಾಗಿ ಹೋರಾಟ ಮಾಡಲು ಬಂದಿದ್ದರೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂದುವರೆಯಬೇಕಿತ್ತು. ನನ್ನ ಮೇಲೆ ಅಲ್ಲದೆ ಮೃತ ಮಹಿಳೆ ಕುಟುಂಬಸ್ಥರ ಮೇಲೆ ನಾವು ಶವ ಕೊಡೊಲ್ಲ ಎಂದು ಹೇಳಿಕೊಂಡು ಹಲ್ಲೆಗೂ ಯತ್ನಿಸುತ್ತಾರೆ. ಪೊಲೀಸ್ ಇಲಾಖೆಯ ಮಹಿಳಾ ಅಧಿಕಾರಿ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಒಂದು ಕಡೆ ಮೃತ ಮಹಿಳೆ ಶವ, ಇನ್ನೊಂದು ಕಡೆ ಇನ್ನೊಬ್ಬರ ಮಹಿಳಾ ಶವ ನೋಡುವ ಪರಿಸ್ಥಿತಿಯನ್ನು ಹೋರಾಟದ ನೆಪದಲ್ಲಿ ರಾಜಕೀಯ ವ್ಯಕ್ತಿಗಳು ಮಾಡುತ್ತಿದ್ದರು. ಮಲೆನಾಡಿನ ಸಮಸ್ಯೆ ಕುರಿತು ಸರ್ಕಾರದ ಸಂಬಂಧ ಪಟ್ಟ ಸಚಿವರೊಂದಿಗೆ ತಿಳಿಸಿದ್ದೇನೆ” ಎಂದು ಶಾಸಕರು ಪ್ರತಿಕ್ರಿಯಿಸಿದ್ದಾರೆ.

ಮಲೆನಾಡಿನ ಸಮಸ್ಯೆ ಕೇವಲ ರಾಜ್ಯ ಸರ್ಕಾರದ ಹೊಣೆಯಲ್ಲ ಕೇಂದ್ರ ಸರ್ಕಾರಕ್ಕೂ ಅನ್ವಯವಾಗುತ್ತೆ. ಜೊತೆಗೆ ಸತ್ಯ ಬಿತ್ತುವ ಮಾಧ್ಯಮಗಳು ಸತ್ಯವನ್ನು ಮರೆ ಮಾಚುವ ಕೆಲಸ ಮಾಡುತ್ತಿವೆ. ಸುಳ್ಳು ಸುದ್ದಿ ಬಿತ್ತುವ ಮೂಲಕ ಕ್ಷೇತ್ರ, ರಾಜ್ಯದ ಜನತೆಗೆ ತಪ್ಪು ಸಂದೇಶವನ್ನು ಕೆಲ ಮಾಧ್ಯಮಗಳು ನೀಡುತ್ತಿವೆ. ಕಾಡಾನೆ ಕುರಿತು ಅರಣ್ಯ ಇಲಾಖೆ ಮೂಲಕ ಘಟನೆ ನಡೆಯುವ ಒಂದು ವಾರದ ಹಿಂದೆಯೇ ಮುನ್ನೆಚ್ಚರಿಕೆ ಕ್ರಮ ಜರುಗಿಸಲಾಗಿತ್ತು. ಆದರೆ ಅಚಾತುರ್ಯವಾಗಿ ಮಹಿಳೆ ಮೃತಪಟ್ಟಿದ್ದಾರೆ. ವಾರದ ಹಿಂದೆ ವ್ಯಕ್ತಿ ಸಾವನಪ್ಪಿದ ಕೂಡಲೇ ಅರಣ್ಯ ಸಚಿವರ ಗಮನಕ್ಕೆ ತಂದು ಆನೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಸಜ್ಜಾಗಿತ್ತು. ನಿರಂತರವಾಗಿ ಅರಣ್ಯ ಇಲಾಖೆ ಶ್ರಮಿಸಿದೆ. ಮಹಿಳೆಯನ್ನು ಕೊಂದು ತಪ್ಪಿಸಿಕೊಂಡಿದ್ದ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ ಎಂದು ಈದಿನ.ಕಾಂ ಜೊತೆ ಮಾತಾಡಿದರು.

ಕಾಡಾನೆ ದಾಳಿಗೆ ಮೃತ ಮಹಿಳೆ ಪರವಾಗಿ, ಅರಣ್ಯ ನೀತಿ, ಕಾಯ್ದೆ, ಕಾನೂನುಳ ವಿರುದ್ಧ, ಮಲೆನಾಡಿನಲ್ಲಿ ಕಾಡು ಪ್ರಾಣಿಗಳಿಂದ ಹೆಚ್ಚಿತ್ತಿರುವ ಘಟನೆ, ಪರ್ಯಾಯ ಕಂಡುಕೊಡುವಲ್ಲಿ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ, ಹಾಗೂ ಇನ್ನೂ ಅನೇಕ ಸಮಸ್ಯೆ ಬಗ್ಗೆ ಮಲೆನಾಡಿನ ಪ್ರತಿ ಯೊಬ್ಬರು ಹೋರಾಟ ಮಾಡಬೇಕು. ಅದು ಬಿಟ್ಟು ಭಾನುವಾರ ನಡೆದ ಹೋರಾಟದಲ್ಲಿ ಪ್ರತಿಭಟಿಸುತ್ತೇವೆಂದು ಸಂಪರ್ಕ ರಸ್ತೆ ತಡೆ ಹಿಡಿದು ಸಾರ್ವಜನಿಕರಿಗೆ, ಅನಾರೋಗ್ಯ ಪೀಡಿತರಿಗೆ, ಹಾಗೂ ಇನ್ನೂ ಅನೇಕರಿಗೆ ತೊಂದರೆ ಕೊಟ್ಟು ಹೋರಾಟ ಮಾಡಿದರೆ ಅದು ಹೋರಾಟವಲ್ಲ, ನಮ್ನ ಹೋರಾಟ ಅಧಿಕಾರಿಗಳಿಗೆ, ಸರ್ಕಾರಕ್ಕೆ ಮುಟ್ಟುವಂತಿರಬೇಕು ಎಂದು ಹಿರಿಯ ರೈತ ಸಂಘದ ನಾಯಕರಾದ ನಂಜುಂಡಸ್ವಾಮಿ ಅವರು ಹೇಳುತ್ತಾರೆಂದು ಮಲೆನಾಡು ಜನಪರ ಒಕ್ಕೂಟ ಮುಖಂಡರಾದ ಅನಿಲ್ ಹೊಸಕೊಪ್ಪ ಹೇಳಿದರು.

“ಹೋರಾಟದ ನೆಪದಲ್ಲಿ ದ್ವೇಷದ ರಾಜಕಾರಣವನ್ನು ಮಾಡಲು ಕೆಲವು ಕಿಡಿಗೇಡಿಗಳು ಬಂದಿದ್ದರು, ಬಿಜೆಪಿ ಪಕ್ಷದಿಂದ ಇದೆ ಕ್ಷೇತ್ರಕ್ಕೆ ಶಾಸಕರಾದ ಡಿ. ಎನ್ ಜೀವರಾಜ್ ಹಾಗೂ ಜೆಡಿಎಸ್ ಪಕ್ಷದಿಂದ ಸ್ಪರ್ದಿಸಿದ್ದ ಸುಧಾಕರ್ ಶೆಟ್ಟಿ ಹಾಗೂ ಅವರ ಬಳಗದವರು ಕ್ಷೇತ್ರದ ಶಾಸಕರಿಗೆ ಕೆಟ್ಟ ಪದಗಳನ್ನು ಬಳಸಿ ಹೀನಮಾನವಾಗಿ ಅವರ ವೃತ್ತಿ ಗೌರವವನ್ನು ಕೂಡ ಕೊಡದೆ ತಳ್ಳಡಿದ್ದು ಸರಿಯೇ”! ಜೀವರಾಜ್ ಕೂಡ ಒಬ್ಬ ಮಾಜಿ ಶಾಸಕ ಎಂಬುದನ್ನು ಮರೆತು ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಮುಂದಾದರೆ ಹೇಗೆ? ಎಂದು ರೈತ ಸಂಘದ ಮುಖಂಡ ನವೀನ್ ಕರ್ವೇನ್ ತಿಳಿಸಿದರು.

“ಪ್ರತಿಭಟನೆ ದಿನ ಪೊಲೀಸ್ ಹಾಗೂ ಆಂಬುಲೆನ್ಸ್ ವಾಹನವನ್ನು ಬೀಳಿಸಲು ಮುಂದಾಗಿ, ಎರಡನೇ ದಿನಕ್ಕೆ ವಾಹನಗಳಿಗೆ ಹೂ ಹಾಕೋದಕ್ಕೆ ಅದೇನು ದೇವಸ್ಥಾನದಲ್ಲಿ ಎಳೆಯುವ ತೇರಾ! ಇದು ನಗೆ ಪಾಟಾಗಿದೆ. ಜಿಲ್ಲೆಯ ಅಧಿಕಾರಿಗಳು ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕಿತ್ತು, ಮಹಿಳೆಯ ಕುಟುಂಬದವರಿಗೆ ಧಮ್ಕಿ ಹಾಕುತ್ತಾರೆ. ಹಾಗೆಯೇ ಸರಿಯಾದ ಹೋರಾಟವನ್ನು ದಿಕ್ಕು ತಪ್ಪಿಸಿ,  ಗಲಭೆ, ಕಲ್ಲು ತೂರಾಟ ನಡೆಸಲು ಉತ್ತೇಜನ ಕೊಟ್ಟ ಮಾಜಿ ಶಾಸಕ ಡಿ. ಎನ್ ಜೀವರಾಜ್, ರಾಜ್ಯ ಜೆಡಿಎಸ್ ವಕ್ತಾರ ಸುಧಾಕರ್ ಶೆಟ್ಟಿ ಮೊದಲು ಇವರ ವಿರುದ್ಧ ಪ್ರಕರಣ ದಾಖಲಿಸಬೇಕು. ಅದು ಬಿಟ್ಟು ಬಡ ಕುಟುಂಬದವರ ಮೇಲಲ್ಲ. “ಇಲ್ಲಿ ಒಬ್ಬರೇನಾ ಶಾಸಕರು, ಈ ಕ್ಷೇತ್ರದ  ಎಂಪಿ ಕೋಟ ಶ್ರೀನಿವಾಸ್ ಪೂಜಾರಿ, ಎಲ್ಲಾ ತಾಲೂಕಿನ ಶಾಸಕರು, ಎಂ ಎಲ್ ಸಿ ಪ್ರಾಣೇಶ್ ಇದ್ದಾರೆ. ಈ ಕ್ಷೇತ್ರದ ಎಂ. ಪಿ ಕೋಟ ಶ್ರೀನಿವಾಸ್ ಪೂಜಾರಿ ಘಟನೆಗಳು ಸಂಬಂಧಿಸಿದಂತೆ ಇಂತಹ ಪ್ರಕರಣಕ್ಕೆ ಬಂದಿಲ್ಲ. ಅದು ಬಿಟ್ಟು ಅವರದ್ದೇ ಪಕ್ಷದ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆಂದು ಓಡೋಡಿ ಬರುತ್ತಾರೆ. ಇದೇನಾ ಅವರ ನೈತಿಕತೆ. ಬಿಜೆಪಿ ಭಾಷೆಯಲ್ಲಿ ಹೇಳೋದಾದರೆ ಧಮ್ ಇದ್ರೆ, ಕೇಂದ್ರದಿಂದ ಮೃತ ಮಹಿಳೆಗೆ ಪರಿಹಾರ ಕೊಡಿಸಲಿ ಎಂದು ಸುಧೀರ್ ಕುಮಾರ್ ಮುರಳಿ ಆಕ್ರೋಶ ವ್ಯಕ್ತಪಡಿಸಿದರು. 

“ಮಲೆನಾಡಿನ ಭಾಗದಲ್ಲಿ ಮಾನವ ಹಾಗೂ ಪ್ರಾಣಿ ಸಂಘರ್ಷದಿಂದ ಇಲ್ಲಿಯವರೆಗೂ ಮೃತಪಟ್ಟಿರುವವರ ಸಂಖ್ಯೆ 10ಕ್ಕೇರಿದೆ.ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷವೇ ಇದಕ್ಕೆ ಕಾರಣ. ನಮಗೆ ರಾಜಕೀಯ ಬೇಳೆ ಬೇಯಿಸುವುದು ಬೇಕಾಗಿಲ್ಲ. ನಿಜವಾದ ಹೋರಾಟಕ್ಕೆ ಜಯ ಸಿಗಬೇಕಾಗಿದೆ. ಮೃತಪಟ್ಟವರ ಕುಟುಂಬದವರ ಮನೆಗೆ ಒಂದಿನವಾದರೂ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದೆನಿಸಿಕೊಂಡ ಶ್ರೀನಿವಾಸ್ ಪೂಜಾರಿ ಇಲ್ಲಿಯವರೆಗೂ ಭೇಟಿ ಕೊಟ್ಟಿಲ್ಲ. ಲಾಠಿ ಪ್ರಹಾರ ಮಾಡಿದ್ದಾರೆಂಬ ಕಾರಣಕ್ಕೆ ತಕ್ಷಣ ಶೃಂಗೇರಿ ಕ್ಷೇತ್ರವನ್ನು ಜೆಡಿಎಸ್ ಹಾಗೂ ಬಿಜೆಪಿಯಿಂದ ಸಂಪೂರ್ಣ ಒಪ್ಪಿಗೆ ಇದೆ ಎಂದು ಹೇಳುತ್ತಾರೆ. ಆದರೆ, ಮಲೆನಾಡಿಗರ ಮೇಲೆ ಕಿಂಚಿತ್ತು ಕಾಳಜಿ ಇದ್ದಿದ್ದರೆ ಅರಣ್ಯ ಕಾಯ್ದೆಗಳನ್ನ ವಿರೋಧಿಸಿ ಪ್ರತಿಭಟಿಸಬೇಕಾಗಿತ್ತು. ಹಾಗೆಯೇ ಮಹಿಳಾ ಪೊಲೀಸ್ ಪೇದೆಯ ಮೇಲೆ ಕಲ್ಲು ತೂರಿದ್ದಾರೆ ಇದರಿಂದ ಜೀವ ಹೋಗಿದ್ದರೆ ಯಾರು ಹೊಣೆ! ಪ್ರತಿಭಟನಕಾರರ ದಿಕ್ಕು ತಪ್ಪಿಸಿರುವ ಇವರು ಯಾವ ನೈತಿಕ ಹೊಣೆ ಹೊತ್ತಿದ್ದಾರೆ. ಹಿಂದೂ, ಮುಸ್ಲಿಂ ಎಂಬ ಧರ್ಮದ ಬಗ್ಗೆ ಮಾತಾಡುವವರು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ ಅವರು ಎಲ್ಲೋಗಿದ್ರು? ಈ ಘಟನೆ ಬಗ್ಗೆ ಯಾಕೆ ಧ್ವನಿ ಎತ್ತಲಿಲ್ಲ, ಹೋರಾಟಗಾರರ ಪರ ಯಾಕೆ ನಿಲ್ಲಲಿಲ್ಲ ಎಂಬ ಪ್ರಶ್ನೆ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.

ಘಟನೆ ಕುರಿತು ಎಸ್‌.ಪಿ. ಮಾತನಾಡಿ, “ಶವ ಸಾಗಿಸುವ ವೇಳೆ ಗಲಭೆ ಉಂಟಾದ ಕಾರಣ ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ. ಕಲ್ಲು ತೂರಾಟ ಮತ್ತು ಗಲಭೆಗೆ ಕಾರಣರಾದವರ ವಿರುದ್ಧ ಸಾಕ್ಷ್ಯಾಧಾರಗಳ ಮೇರೆಗೆ ಪ್ರಕರಣ ದಾಖಲಿಸಲಾಗಿದೆ” ಎಂದರು.

ಜಿಲ್ಲಾಧಿಕಾರಿ ನಾಗರಾಜ್ ಮಾತನಾಡಿ, “ಬೆಳಗ್ಗೆಯಿಂದಲೇ ಇಲಾಖೆ ಸ್ಪಂದಿಸಿದೆ. ಮುಖ್ಯ ರಸ್ತೆ ಬಂದ್ ಆಗಿ ಸಾವಿರಾರು ವಾಹನಗಳು ಸಿಲುಕಿದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಗಲಭೆ ನಿಯಂತ್ರಿಸಲಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಫೆ. 26ಕ್ಕೆ ರೈತ, ಕಾರ್ಮಿಕರಿಂದ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ; ಕರ್ನಾಟಕ ಜನಶಕ್ತಿ 

ಈ ಘಟನೆ ನಡೆಯುವ ಎರಡು ದಿನ ಮೊದಲೇ ಚಿಕ್ಕಮಗಳೂರಿನ ನಗರದಲ್ಲಿ ಕಿಡಿಗೇಡಿಗಳು ಕೋಮು ದ್ವೇಷದ ಬಣ್ಣ ಬಳಿದಿದ್ದರು. ಇದು ಅಧಿಕಾರಿಗಳಿಗೆ ಮುನ್ನೆಚ್ಚರಿಕೆಯಾಗಿತ್ತು. ಆದರೆ, ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ. ಭದ್ರತೆ ಕೊಡುವಲ್ಲಿ ವಿಫಲರಾಗಿದ್ದಾರೆ. ಯಾವುದೇ ಘಟನೆಗಳ ಬಗ್ಗೆ ಮುಂಚೆಯೇ ಅಧಿಕಾರಿಗಳಿಗೆ ಗೊತ್ತಿರುತ್ತದೆ. ಆದರೆ ಸಾರ್ವಜನಿಕರು ಹಾಗೂ ಪ್ರತಿಭಟನಕಾರರ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ, ಗಲಭೆ ಸೃಷ್ಟಿಸಿದ ವ್ಯಕ್ತಿಗಳು ಮೊದಲ ಆರೋಪಿಗಳಾಗಿರುತ್ತಾರೆ. ಅವರನ್ನು ಬಿಟ್ಟು ಹೋರಾಟಕ್ಕೆ ಮುನ್ನುಗ್ಗಿದವರ ಮೇಲೆ ಪ್ರಕರಣ ದಾಖಲಿಸಿರುವುದು ಸರಿಯೇ ಎಂಬ ಪ್ರಶ್ನೆ ಮೂಡುತ್ತದೆ. ಮಲೆನಾಡಿನಲ್ಲಿ ಅದೆಷ್ಟೋ ಸಮಸ್ಯೆಗಳಿಂದ ಬದುಕು ಕಟ್ಟಿಕೊಂಡಿರುವ ಜನರು ಪರದಾಡುತ್ತಿದ್ದಾರೆ, ಕಾಡು ಪ್ರಾಣಿಗಳಿಂದ ಪ್ರಾಣ ಹಾನಿಗಳಾಗುತ್ತಿವೆ ಜೊತೆಗೆ ಅರಣ್ಯ ಕಾಯ್ದೆ ಕಾನೂನುಗಳ ಚೌಕಟ್ಟಿನಲ್ಲಿ ಮಲೆನಾಡಿನ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕುರಿತು ಅದೆಷ್ಟೋ ಹೋರಾಟಗಳು ಕೂಡ ನಡೆಯುತ್ತಿದೆ. ಆದರೆ ಇಂತಹ ಹೀನ ಕೃತ್ಯ ನಡೆದಿರಲಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಿರಬಹುದು ಎನ್ನುವುದು ಹಲವರ ಅಭಿಪ್ರಾಯ. ಪ್ರವಾಸಿಗರ ತಾಣವಾಗಿರುವ ಮಲೆನಾಡು ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಮುಂದುವರೆಯಬೇಕಾಗಿದೆ.

WhatsApp Image 2024 10 24 at 12.02.30
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...