ವಂದೇ ಮಾತರಂ | ಲೋಕಸಭೆಯ ಬಿಜೆಪಿ ನಿಲುವಿನಿಂದ ಅಂತರ ಕಾಯ್ದುಕೊಂಡ ಜೆಡಿಯು!

Date:

‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬಿದ ನೆಪದಲ್ಲಿ ಲೋಕಸಭೆಯಲ್ಲಿ ವಂದೇ ಮಾತರಂ ಕುರಿತಾಗಿ ಡಿಸೆಂಬರ್ 8ರಂದು ವಿಶೇಷ ಚರ್ಚೆ ನಡೆಯಿತು. ಚರ್ಚೆಯು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಯಿತು. ವಿಪಕ್ಷಗಳು ಈ ಚರ್ಚೆಯು ಜನರ ಗಮನವನ್ನು ವಾಸ್ತವ ವಿಷಯಗಳಿಂದ ಬೇರೆಡೆ ಸೆಳೆಯುವ ಪ್ರಯತ್ನ ಎಂದು ಆರೋಪಿಸಿತು. ಎನ್‌ಡಿಎ ಒಕ್ಕೂಟದ ಇತರೆ ಪಕ್ಷಗಳು ಬಿಜೆಪಿ ಪರವಾಗಿಯೇ ‘ಬ್ಯಾಟಿಂಗ್’ ಮಾಡಿದರೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮಾತ್ರ ಬಿಜೆಪಿ ನಿಲುವಿನಿಂದ ಅಂತರ ಕಾಯ್ದುಕೊಂಡು ಅಚ್ಚರಿ ಮೂಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಎಂದಿನಂತೆ ವಂದೇ ಮಾತರಂ ಚರ್ಚೆಯ ವೇಳೆಯೂ ಕಾಂಗ್ರೆಸ್ ವಿರುದ್ಧವಾಗಿ ಆರೋಪಗಳನ್ನು ಮಾಡಿದರೆ, ಕಾಂಗ್ರೆಸ್ ನಾಯಕರು ಮತ್ತು ವಿಪಕ್ಷಗಳು ಮೋದಿ ಭಾಷಣದಲ್ಲಿನ ತಪ್ಪು ಹೇಳಿಕೆಗಳನ್ನು ತಿದ್ದಿ ಮೋದಿಯನ್ನು ಮುಜುಗರಕ್ಕೀಡು ಮಾಡಿದರು. ವಂದೇ ಮಾತರಂನ ವಿವಾದಾತ್ಮಕವಾದ ಕೆಲವು ಭಾಗಗಳನ್ನು ತೆಗೆದುಹಾಕಿದ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಇದು ‘ಅಲ್ಪಸಂಖ್ಯಾತರ ಓಲೈಕೆ’ ಎಂದು ಆರೋಪಿಸಿದರು. ಆದರೆ ಕೇಂದ್ರ ಮತ್ತು ಬಿಹಾರದಲ್ಲಿ ಬಿಜೆಪಿಯ ಪ್ರಮುಖ ಮಿತ್ರಪಕ್ಷವಾದ ಜೆಡಿಯು ಮಾತ್ರ ಈ ವಿವಾದದಿಂದ ದೂರ ಸರಿದಿತ್ತು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ʼವಂದೇ ಮಾತರಂ’ವಿವಾದ; ಪರಿವಾರ- ಪ್ರಧಾನಿ ಪೋಣಿಸಿದ ಸುಳ್ಳುಗಳ ಬೊಂತೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದಕ್ಕೆ ವ್ಯತಿರಿಕ್ತವಾಗಿ, ಇತರ ಎರಡು ಪ್ರಮುಖ ಮಿತ್ರಪಕ್ಷಗಳಾದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ) ಬಿಜೆಪಿಗೆ ಬೆಂಬಲ ನೀಡಿತು. ಎಂದಿನಂತೆ ಜವಾಹರಲಾಲ್ ನೆಹರೂ ಅವರನ್ನು ದೂಷಿಸಿತು. 1937ರಲ್ಲಿ ನೆಹರೂ ಅವರ ಆಜ್ಞೆಯಂತೆ ಸುಭಾಷ್ ಚಂದ್ರ ಬೋಸ್ ಅವರ ಇಚ್ಛೆಗೆ ವಿರುದ್ಧವಾಗಿ ವಂದೇ ಮಾತರಂನ ಕೆಲವು ಚರಣಗಳನ್ನು ತೆಗೆದುಹಾಕಲಾಗಿದೆ ಎಂದು ಬಿಜೆಪಿ ಮತ್ತು ಮಿತ್ರಪಕ್ಷಗಳು ದೂರಿದರೆ. ಜೆಡಿಯು ನಾಯಕರು ಮಾತ್ರ ವಂದೇ ಮಾತರಂ ಗೀತೆಯ ಶ್ರೇಷ್ಠತೆ ಬಗ್ಗೆ ಮಾತ್ರ ಮಾತನಾಡಿದರು.

ಜೆಡಿಯು ಸಂಸದ ದೇವೇಶ್ ಚಂದ್ರ ಠಾಕೂರ್, “ದೀರ್ಘ ಚರ್ಚೆಯ ನಂತರ ಸಂವಿಧಾನ ಸಭೆಯು ವಂದೇ ಮಾತರಂ ಅನ್ನು ರಾಷ್ಟ್ರೀಯ ಗೀತೆ ಎಂದು ಘೋಷಿಸಿತು. ಜನಗಣ ಮನಕ್ಕೆ ರಾಷ್ಟ್ರಗೀತೆಯ ಸ್ಥಾನಮಾನ ದೊರೆಯಿತು. ಸಂವಿಧಾನ ಸಭೆಯಲ್ಲಿ, ಡಾ ರಾಜೇಂದ್ರ ಪ್ರಸಾದ್ ಅವರು ವಂದೇ ಮಾತರಂಗೆ ರಾಷ್ಟ್ರಗೀತೆಯಂತೆಯೇ ಗೌರವ ಸಿಗುತ್ತದೆ ಎಂದು ಘೋಷಿಸಿದರು. ಈ ಹಾಡನ್ನು ಇಂದಿಗೂ ಹೆಚ್ಚು ಪ್ರಸ್ತುತ. ನಮ್ಮ ವೈವಿಧ್ಯತೆಯೇ ನಮ್ಮ ನಿಜವಾದ ಶಕ್ತಿ ಎಂದು ಇದು ನಮಗೆ ಕಲಿಸುತ್ತದೆ” ಎಂಬಿತ್ಯಾದಿಯಾಗಿ ಹಾಡಿನ ಗುಣಗಾನ ಮಾಡಿದರು.

ಲೋಕಸಭೆಯಲ್ಲಿ 240 ಸಂಸದರನ್ನು ಹೊಂದಿರುವ ಬಿಜೆಪಿ ಸ್ವತಂತ್ರವಾಗಿ ಸರ್ಕಾರವನ್ನು ರಚಿಸಲು ಸಾಧ್ಯವಾಗದೆ ಇದ್ದಾಗ ಒಟ್ಟು 35 ಸಂಸದರನ್ನು ಹೊಂದಿರುವ ಜೆಡಿಯು, ಟಿಡಿಪಿ, ಎಲ್‌ಜೆಪಿ(ಆರ್‌ವಿ) ಬೆಂಬಲದೊಂದಿಗೆ ಸರ್ಕಾರ ರಚಿಸಿಕೊಂಡಿದೆ. ಕೆಳಮನೆಯಲ್ಲಿ 12 ಸಂಸದರು, ಬಿಹಾರ ವಿಧಾನಸಭೆಯಲ್ಲಿ 85 ಶಾಸಕರನ್ನು ಹೊಂದಿರುವ ಜೆಡಿಯು ಬಿಜೆಪಿಯ ಅತಿದೊಡ್ಡ ಮಿತ್ರಪಕ್ಷಗಳಲ್ಲಿ ಒಂದಾಗಿದೆ. ಬಿಜೆಪಿಗಿಂತ ಭಿನ್ನವಾದ ಸಿದ್ಧಾಂತವನ್ನು ಹೊಂದಿರುವ ನಿತೀಶ್ ಕುಮಾರ್ ನೇತೃತ್ವದ ಪಕ್ಷವು ಕೋಮು ರಾಜಕೀಯದಿಂದ ಕೊಂಚ ದೂರ ಉಳಿಯುವ ಯತ್ನ ಮಾಡಿದೆ. ಇತ್ತೀಚೆಗೆ ಎನ್‌ಡಿಎ ಟಿಕೆಟ್‌ನಲ್ಲಿ ಗೆದ್ದ ಏಕೈಕ ಮುಸ್ಲಿಂ ಅಭ್ಯರ್ಥಿ ಜೆಡಿಯುಗೆ ಸೇರಿದವರು. ಆದರೂ ವಕ್ಫ್ ಮಸೂದೆಯ ವಿಚಾರದಲ್ಲಿ ನಿತೀಶ್ ಪಕ್ಷದ ನಿಲುವು ಹಲವು ಮುಸ್ಲಿಂ ಮುಖಂಡರು ದೂರ ಸರಿಯಲು ಕಾರಣವಾಗಿತ್ತು.

ಇದನ್ನು ಓದಿದ್ದೀರಾ? ‘ವಂದೇ ಮಾತರಂ’ ಇತಿಹಾಸ ಬೇರೆಯೇ ಹೇಳುತ್ತದೆ; ಆದರೆ, ಬಿಜೆಪಿ ಅಜೆಂಡಾಗೆ ಸರಿ ಹೊಂದುತ್ತದೆ!

ಇವೆಲ್ಲವುದರ ನಡುವೆ ಬಿಜೆಪಿ ನಿಲುವನ್ನು ವಿಪಕ್ಷಗಳು ಕಟುವಾಗಿ ಟೀಕಿಸಿದೆ. ಡಿಎಂಕೆ ಸಂಸದ ಎ. ರಾಜಾ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಮೋದಿ ಭಾಷಣಕ್ಕೆ ಪ್ರತ್ಯುತ್ತರ ನೀಡಿದರು. ವಂದೇ ಮಾತರಂ ಕೇವಲ ಬ್ರಿಟಿಷರ ವಿರುದ್ಧವಾಗಿರಲಿಲ್ಲ, ಮುಸ್ಲಿಮರ ವಿರೋಧಿಯೂ ಆಗಿತ್ತು ಎಂದು ವಾದಿಸಿದ ಎ ರಾಜಾ, “ಈ ವಿವಾದವನ್ನು ಮುಸ್ಲಿಂ ಸಮುದಾಯವು ಸೃಷ್ಟಿಸಿಲ್ಲ. ಬದಲಿಗೆ ಈ ಗೀತೆಯನ್ನು ‘ಹಿಂದುಗಳಿಗೆ ಮಾತ್ರ’ ಎಂಬಂತೆ ಬಿಂಬಿಸಿದವರು ಸೃಷ್ಟಿಸಿದ್ದಾರೆ ಎಂದು ಪ್ರತಿಪಾದಿಸಿದರು. ವಂದೇ ಮಾತರಂನಲ್ಲಿ ವಿಭಜನೆ ಮಾಡಿದ್ದು ಯಾರು? ಎಂಬ ಪ್ರಧಾನಿ ಮೋದಿ ಅವರ ಪ್ರಶ್ನೆಗೆ ಉತ್ತರಿಸುತ್ತಾ, “ವಿಭಜನೆಯನ್ನು ಮಾಡಿದ್ದು ನಿಮ್ಮ ಪೂರ್ವಜರು, ಮುಸ್ಲಿಮರಲ್ಲ” ಎಂದು ನೇರವಾಗಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ಜವಾಹರಲಾಲ್ ನೆಹರು ಮತ್ತು ಸುಭಾಷ್ ಚಂದ್ರ ಬೋಸ್ ನಡುವೆ ವಂದೇ ಮಾತರಂ ಕುರಿತಾಗಿ ನಡೆದ ಚರ್ಚೆಯನ್ನು ಮುಂದಿಟ್ಟುಕೊಂಡು ಮೋದಿ ಹೇಳಿಕೆಗೆ ವಿಪಕ್ಷಗಳು ತಿರುಗೇಟು ನೀಡುತ್ತಾ, ರವೀಂದ್ರನಾಥ ಟ್ಯಾಗೋರ್ ಅವರು ಸ್ವತಃ ನೆಹರು ಅವರಿಗೆ ಪತ್ರ ಬರೆದ ವಿಚಾರವನ್ನು ಪ್ರಸ್ತಾಪಿಸಿ ಇತಿಹಾಸವನ್ನು ಹೇಗೆ ಬಿಜೆಪಿ ತಿರುಚುತ್ತಿದೆ ಎಂಬುದನ್ನು ವಿಪಕ್ಷಗಳು ವಿವರಿಸಿದೆ. ನೆಹರು ಅವರು ಜಿನ್ನಾ ಅವರ ಭಾವನೆಗಳಿಗೆ ಮಣಿದು, ರಾಷ್ಟ್ರೀಯ ಗೀತೆಯನ್ನು ವಿಭಜಿಸಲು ಮುಂದಾದರು ಎಂಬ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ನಾಯಕರು ಇತಿಹಾಸ ಮೆಲುಕು ಹಾಕಿದರು. ಈ ಗೀತೆ ರಚಿಸಿದ ರವೀಂದ್ರನಾಥ ಟ್ಯಾಗೋರ್ ಅವರೇ ಸ್ವತಃ ನೆಹರು ಅವರಿಗೆ ಪತ್ರ ಬರೆದು, ಹಾಡಿನ ಮೊದಲ ಎರಡು ಸಾಲುಗಳು ಮಾತ್ರ ವಿವಾದದಿಂದ ಮುಕ್ತವಾಗಿವೆ ಮತ್ತು ಅವುಗಳನ್ನು ಮಾತ್ರ ಬಳಸಬೇಕೆಂದು ಸಲಹೆ ನೀಡಿದ್ದರು ಎಂಬ ಪ್ರಸ್ತಾಪವನ್ನು ಮಾಡಿದರು.

ಇವೆಲ್ಲವುದಕ್ಕೂ ಮುಖ್ಯವಾಗಿ ವಾಸ್ತವ ವಿಚಾರ, ಸಮಸ್ಯೆಗಳ ಬಗ್ಗೆ ಚರ್ಚಿಸುವ ಬದಲಾಗಿ ಇತಿಹಾಸದ ಬಗ್ಗೆ ಚರ್ಚಿಸಿ ಜನರ ಗಮನವನ್ನು ಬೇರೆಡೆ ಸೆಳೆಯುವ ಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂಬುದನ್ನು ಮಹುವಾ ಸೇರಿದಂತೆ ಹಲವು ವಿಪಕ್ಷ ನಾಯಕರು ಹೇಳಿದರು. ಇದು ನಿಜವೂ ಹೌದು. ಸದ್ಯ ಇಂಡಿಗೋ ಬಿಕ್ಕಟ್ಟು, ಎಸ್‌ಐಆರ್‌ ಒತ್ತಡದಿಂದಾಗಿ ಹಲವು ಬಿಎಲ್‌ಒಗಳ ಆತ್ಮಹತ್ಯೆ-ಸಾವು ಸೇರಿದಂತೆ ಹಲವು ಗಂಭೀರ ವಿಚಾರಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ಆದರೆ ಸರ್ಕಾರ ಮಾತ್ರ ಗತವನ್ನೇ ಹೇಳಿಕೊಳ್ಳುತ್ತಿದೆ. ಅದನ್ನೂ ತಿರುಚಿ ಹೇಳಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಸ್ಪಷ್ಟ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...